ಪ್ರತಿಯೊಬ್ಬರ ಜೀವನದಲ್ಲಿ (Life) ವಿವಾಹವು ಬಹಳ ಮುಖ್ಯವಾದ ಮತ್ತು ಸಂತೋಷದ ಕ್ಷಣವಾಗಿದೆ. ಅದರಲ್ಲೂ ಪ್ರೀತಿಸಿ ಮದುವೆ ಆಗೋದು ಅಂದ್ರೆ ಅದೇನೋ ಒಂದು ರೀತಿಯ ಖುಷಿನೇ ಬಿಡಿ. ಯಾಕಂದ್ರೆ ಶೇಕಡ 90ರಷ್ಟು ಜನರು ಪ್ರೀತಿ ಮಾಡ್ತಾರೆ. ಆದ್ರೆ, ಎಲ್ಲರೂ ಅವರನ್ನೇ ಮದುವೆ ಆಗೋಲ್ಲ. ಹೀಗಾಗಾಗಿ ಪ್ರೀತಿಸಿ (Love) ಅವರನ್ನೇ ಮದುವೆ ಆಗೋದು ಅಂದ್ರೆ ಅದೇನೋ ಒಂದು ರೀತಿಯ ಸಂತೋಷ, ಸಡಗರವಿರುತ್ತದೆ. ಆದಾಗ್ಯೂ, ಕೆಲವೊಮ್ಮೆ ಮದುವೆಯ ಹೆಸರಿನಲ್ಲಿ ಜನರಿಗೆ ಏನಾದರೂ ಸಂಭವಿಸುತ್ತದೆ, ಅದು ಅವರನ್ನು ಆಘಾತಗೊಳಿಸುತ್ತದೆ (Accident). ಇಂತಹದೊಂದು ಘಟನೆ ಇದೀಗ ಹರಿದ್ವಾರದಿಂದ ಬೆಳಕಿಗೆ ಬಂದಿದೆ. ಪ್ರೇಮವಿವಾಹದ ನಂತರ ಪತಿ-ಪತ್ನಿ ಜಗಳ, ವಿವಾಹೇತರ ಸಂಬಂಧ ಮತ್ತಿತರ ಕಾರಣಗಳಿಂದ ದಾಂಪತ್ಯ ಮುರಿದು ಬೀಳುವುದನ್ನು ನೀವು ಆಗಾಗ ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ ಬೆಳಕಿಗೆ ಬಂದಿರುವ ಈ ಘಟನೆ ತೀರಾ ವಿಚಿತ್ರವಾಗಿದೆ.
ಮದುವೆ ಆದಮೇಲೆ ಅದೆಷ್ಟೋ ಸೀಕ್ರೇಟ್ಸ್ಗಳನ್ನು ಗಂಡ ಹೆಂಡತಿಯರು ಬಿಚ್ಚಿಡುತ್ತಾರೆ. ಆದರೆ ಇನ್ನೂ ಕೆಲವರು ಕೆಲವೊಂದಷ್ಟು ಸೀಕ್ರೇಟ್ಸ್ಗಳನ್ನು ಹಾಗೆಯೇ ನಿರ್ವಹಣೆ ಮಾಡುತ್ತಾರೆ. ಸಂಶೋಧನೆಯ ಪ್ರಕಾರ ಈ ರೀತಿಯಾಗಿ ಹಲವಾರು ಗಂಡಸರು ಸೀಕ್ರೇಟ್ಸ್ಗಳನ್ನು ಮೇಂಟೇನ್ ಮಾಡ್ತಾರೆ ಅಂತೆ. ಯಾಕಂದ್ರೆ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಈ ರೀತಿಯಾಗಿ ಮಾಡುತ್ತಾರೆ ಅಂತೆ. ಆದರೆ ಇಲ್ಲಿ ನಡೆದ ಘಟನೆ ಮಾತ್ರ ನಿಜಕ್ಕೂ ಶಾಕ್ ಆಗುವಂತದ್ದು.
ಏನಿದು ವಿಷಯ?
ಹರಿದ್ವಾರದ ಲಕ್ಸಾರ್ನಲ್ಲಿ ಪತಿ ತನ್ನ ಹೆಂಡತಿಯ ಲಿಂಗವನ್ನು ಕಂಡುಕೊಂಡ ತಕ್ಷಣ, ಅವರು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಆತ ಮದುವೆಯಾಗಿ ಮನೆಗೆ ಕರೆತಂದಿದ್ದ ಯುವತಿ ತೃತೀಯಲಿಂಗಿ ಎಂದು ತಿಳಿದುಬಂದಿದೆ. ದರ್ಗಾಪುರದ ಸುಖಲಾಲ್ ಎಂಬ 30 ವರ್ಷದ ಯುವಕ ಹರಿಯಾಣದ ಯುವತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆಸಿದ್ದ. ನಂತರ ಇಬ್ಬರೂ ಹೆಚ್ಚು ಮಾತನಾಡುತ್ತಿದ್ದರು. ಇದಾದ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಟೀ ಸಮೋಸಾಗೆ ಬಂತು ಭಾರಿ ಬಿಲ್! ನೆಟ್ಟಿಗರು ನೋಡಿ ಶಾಕ್
ಇವರಿಬ್ಬರೂ ಮನೆಯವರ ಅನುಮತಿ ಪಡೆದು ಲಕ್ಸಾರ್ನ ರಾಧಾಕೃಷ್ಣ ದೇವಸ್ಥಾನದಲ್ಲಿ ವಿವಾಹವಾದರು. ಆದರೆ ಮದುವೆಯ ಮೊದಲ ರಾತ್ರಿಯೇ ಯುವಕನಿಗೆ ತನ್ನ ಪತ್ನಿ ತೃತೀಯಲಿಂಗಿಯಾಗಿದ್ದು, ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾಳೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾನೆ. ತನ್ನ ಹೆಂಡತಿಯ ಬಗ್ಗೆ ಸತ್ಯವನ್ನು ತಿಳಿದುಕೊಂಡಾಗ ಅವನು ಆಘಾತಕ್ಕೊಳಗಾದನು. ಇದಾದ ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ತದನಂತರ ಪತ್ನಿ ಹಿಸಾರ್ನಲ್ಲಿರುವ ತನ್ನ ಮನೆಗೆ ಮರಳಿದ್ದಳು. ಅಬ್ಬಬ್ಬಾ ಈ ವಿಷಯವನ್ನು ಕೇಳ್ತಾ ಇದ್ರೆ, ಎಂಥವರಿಗಾದ್ರೂ ಶಾಕ್ ಆಗಿರುತ್ತೆ ಅಲ್ವಾ? ಇನ್ನೂ ಇದೆ ಸುದ್ದಿ ಓದಿ.
ಲಕ್ಸಾರ್ನಲ್ಲಿ ದೂರು ದಾಖಲಿಸುವಾಗ, ಯುವಕನು ತನ್ನ ಹೆಂಡತಿ ಆರುಷಿಯ ಹೆಸರು ಮೊದಲು ಆಶು ಮತ್ತು ಅವಳು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾಳೆ ಎಂದು ಹೇಳಿದರು. ವಿಚ್ಛೇದನಕ್ಕೆ ಪ್ರತಿಯಾಗಿ ಆರುಷಿ ಕುಟುಂಬದವರು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ. ಯುವಕನ ದೂರಿನ ಮೇರೆಗೆ ಆರುಷಿ ಮತ್ತು ಆಕೆಯ ಕುಟುಂಬದ ವಿರುದ್ಧ ಲಕ್ಸಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ವಿಭಾಗದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊತ್ವಾಲಿ ಪ್ರಭಾರಿ ಇನ್ಸ್ಪೆಕ್ಟರ್ ಅಮರ್ಜಿತ್ ಸಿಂಗ್ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಇಂತಹ ಸೀಕ್ರೇಟ್ಸ್ಗಳು ಯಾವತ್ತೂ ಎಂದಿಗೂ ಮಾಡಬಾರದು. ಅದು ಇನ್ನೊಬ್ಬರ ಭಾವನೆಗೆ ಧಕ್ಕೆ ತರುವಂತೆ ಆಗುತ್ತದೆ ಎಂಬ ಹಲವಾರು ಕಮೆಂಟ್ಗಳು ಈ ವೈರಲ್ ಆದ ಸುದ್ಧಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ