Viral video: ಅಂಗೈಯಲ್ಲಿಯೇ ಹಾವಿಗೆ ನೀರು ಕುಡಿಸಿದ ವ್ಯಕ್ತಿಯ ವಿಡಿಯೋ ನೋಡಿ

ಈ ವಿಡಿಯೋ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. 200ಕ್ಕೂ ಅಧಿಕ ಬಾರಿ ವಿಡಿಯೋ ರೀಟ್ವೀಟ್ ಆಗಿದ್ದು, 1500ಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ.

ಅಂಗೈಯಲ್ಲಿ ನೀರು ಕುಡಿಯುತ್ತಿರುವ ಹಾವು

ಅಂಗೈಯಲ್ಲಿ ನೀರು ಕುಡಿಯುತ್ತಿರುವ ಹಾವು

  • Share this:
ಬೇಸಿಗೆ (Summer) ಆರಂಭವಾಗಿದ್ದು, ಜಲಮೂಲಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಮೇಲೆ ಅಥವಾ ಆವರಣದಲ್ಲಿ ನೀರು (Water) ತುಂಬಿ ಇಡಿ. ಇದರಿಂದ ಪ್ರಾಣಿ ಪಕ್ಷಿಗಳ ದಾಹ ತೀರಲಿದೆ ಎಂಬ ಬರಹವುಳ್ಳ ಪೋಸ್ಟ್ ಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವ ಹಸಿರು ಬಣ್ಣದ ಹಾವಿಗೆ (Snake) ನೀರು ಕುಡಿಸುತ್ತಿರುವ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು, ಹಾವುಗಳ ಸಹ ಜೀವಿಗಳು. ಬೇಸಿಗೆಯಲ್ಲಿ ನೀರು ಮತ್ತು ಆಹಾರ (Food And Water) ಅರಸಿ ಜನ ವಸತಿ ಪ್ರದೇಶಗಳತ್ತ ಬರೋದು ಸಾಮಾನ್ಯ. ಹಾಗಾಗಿ ಅವುಗಳನ್ನು ಕೊಲ್ಲದೇ, ರಕ್ಷಿಸಿ ಅರಣ್ಯ ಪ್ರದೇಶಕ್ಕೆ (Forest) ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ (Indian Forest Service officer) ಸುಶಾಂತ್ ನಂದಾ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ಸಾಲುಗಳನ್ನು ಸಹ ಸುಶಾಂತ್ ನಂದಾ ಬರೆದುಕೊಂಡಿದ್ದಾರೆ.

ಬೇಸಿಗೆ ಸಮೀಪಿಸುತ್ತಿದೆ. ನೀವೂ ನೀಡುವ ಕೆಲವು ಹನಿಗಳು ಇನ್ನೊಬ್ಬರ ಜೀವವನ್ನು ಉಳಿಸಬಹುದು. ನಿಮ್ಮ ತೋಟದಲ್ಲಿ ಸ್ವಲ್ಪ ನೀರನ್ನು ಪಾತ್ರೆಯಲ್ಲಿ ಇರಿಸಿ. ಅದು ಅನೇಕ ಪ್ರಾಣಿಗಳಿಗೆ ಜೀವನ ಮತ್ತು ಸಾವಿನ ಪ್ರಶ್ನೆಯನ್ನ ನಿರ್ಧರಿಸುತ್ತದೆ ಎಂದು ಸುಶಾಂತ್ ನಂದಾ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ವ್ಯಕ್ತಿಯೋರ್ವ ತನ್ನ ಅಂಗೈಯಲ್ಲಿ ಬಾಟಲ್ ನಿಂದ ನಿಧಾನವಾಗಿ ನೀರು ಹಾಕಿಕೊಳ್ಳುತ್ತಿದ್ದಾರೆ. ಇತ್ತ ದಾಹದಿಂದ ದಣಿದ ಹಾವು ನಿಧಾನವಾಗಿ ನೀರು ಕುಡಿಯುತ್ತಿದೆ. ಈ ಹೃದಯಸ್ಪರ್ಧಿ ವಿಡಿಯೋ ವೈರಲ್ ಆಗಿದ್ದು, ಜನರು ನೀರು ಕುಡಿಸಿದ ವ್ಯಕ್ತಿಗೆ ಧನ್ಯವಾದವನ್ನು ಸಲ್ಲಿಸುತ್ತಿದ್ದಾರೆ.

ಈ ರೀತಿ ಪ್ರಯತ್ನಿಸಬೇಡಿ

ಈ ರೀತಿ ಯಾರೂ ಹಾವುಗಳಿಗೆ ನೀರು ಕುಡಿಸಲು ಪ್ರಯತ್ನಿಸಬೇಡಿ. ಇದು ತುಂಬಾ ಅಪಾಯಕಾರಿ ಪ್ರಯತ್ನ ಆಗಿರುತ್ತದೆ. ಬಹುಶಃ ಈ ವ್ಯಕ್ತಿಗೆ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ರೀತಿ ಹಾವುಗಳಿಗೆ ನೀರು ಕುಡಿಸಲು ಸೂಕ್ತ ತರಬೇತಿಯ ಅಗತ್ಯ ಇರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ:  Viral News: ಹೀಗೂ ಉಂಟೇ..? ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ

ಈ ವಿಡಿಯೋ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. 200ಕ್ಕೂ ಅಧಿಕ ಬಾರಿ ವಿಡಿಯೋ ರೀಟ್ವೀಟ್ ಆಗಿದ್ದು, 1500ಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ.



ದೈತ್ಯ ಹೆಬ್ಬಾವಿನ ಜೊತೆ ಬಾಲಕಿಯ ಆಟ

ಸುಮಾರು ಏಳರಿಂದ ಎಂಟು ವರ್ಷದ ಅರಿಯಾನಾ ಎಂಬ ಬಾಲಕಿ ಹೆಬ್ಬಾವಿನ (Carpet Python) ಜೊತೆ ಆಟವಾಡುತ್ತಿರುವ ವಿಡಿಯೋ ನೋಡುಗರ ಹೃದಯ ಬಡಿತವನ್ನು ಹೆಚ್ಚು ಮಾಡುತ್ತಿದೆ. ಹೆಬ್ಬಾವು ಮುಂದಕ್ಕೆ ಹೋಗ್ತಿದ್ದರೂ ಬಾಲಕಿ ಅದನ್ನು ಹಿಡಿದು ಎಳೆಯುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು snakemasterexotics ಎಂಬ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇನ್ನು ವಿಡಿಯೋ ನೋಡಿದ ನೆಟ್ಟಿಗರ ಆಶ್ಚರ್ಯ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ. ಬಾಲಕಿಯ ಧೈರ್ಯಕ್ಕೆ ನಮ್ಮದೊಂದು ಸಲಾಮ್. ಬಾಲಕಿಗೆ ಮನೆಯಲ್ಲಿ ಸರೀಸೃಪಗಳ ಬಗ್ಗೆ ಮಾಹಿತಿ ನೀಡಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಕೋಬ್ರಾ ವೈನ್, ಸ್ನೇಕ್ ಬಿರಿಯಾನಿ!

ಹಂಗ್​​ ರೆಸ್ಟೋರೆಂಟ್​​: ಹಾವುಗಳಿಂದ ಆಹಾರವನ್ನು ಸಿದ್ಧಪಡಿಸುವ ಈ ರೆಸ್ಟೋರೆಂಟ್​​ ಹೆಸರು ಹಂಗ್​. ಇದು ವಿಯೆಟ್ನಾಂ ಹನೋಯ್​​ನಿಂದ 5 ಕಿಲೋ ಮೀಟರ್​​​ ದೂರದಲಿರುವ ಲೇ ಮತ್​​ ಸ್ನೇಕ್​ ವಿಲೇಜ್​ನಲ್ಲಿದೆ.

ಇದನ್ನೂ ಓದಿ:  Viral News: ಒಂದು ಹಾವು ಭಾರತದಿಂದ ಇಂಗ್ಲೆಂಡ್​ಗೆ ಹಡಗಿನಲ್ಲಿ ಹೋಗಿಬಿಟ್ಟಿದೆ, ಅದ್ರ ಪ್ರಯಾಣದ ಕತೆಯೇ ರೋಚಕ!

ಹಲವಾರು ತಲೆಮಾರುಗಳಿಂದ ಲೇ ಮತ್​​ ಪಟ್ಟಣದಲ್ಲಿ ಹಾವು ಹಿಡಿಯುವುದು, ಹೊಡೆಯುವುದು, ಅದರಿಂದ ಆಹಾರ ತಯಾರಿಸುವುದು ಅಲ್ಲಿನ ಜನರು ರೂಢಿಸಿಕೊಂಡು ಬಂದಿದ್ದಾರೆ. ಇಲ್ಲಿ ಹಾವನ್ನು ಹುಡುಕಿ ಹಿಡಿಯುವುದು ಮಾತ್ರವಲ್ಲ, ಫಾರ್ಮ್​ನಲ್ಲಿ ಹಾವನ್ನು ಸಾಕುತ್ತಾರೆ.
Published by:Mahmadrafik K
First published: