Eid ಹಬ್ಬದ ಪಾರ್ಟಿಯಲ್ಲಿ 1.45 ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ನುಂಗಿದ! ಕಪಾಟಿನಲ್ಲಿದ್ದ ಚಿನ್ನ ಮಾಯ, ಆಮೇಲೆ?

Eid Party: ಮಂಗಳವಾರದಂದು ಔತಣಕ್ಕೆ ಆಹ್ವಾನಿಸಿದ ಮನೆಯಲ್ಲಿ ನುಂಗಿದ ಆಭರಣಗಳನ್ನು ಹಿಂಪಡೆಯಲು 32 ವರ್ಷದ ವ್ಯಕ್ತಿಗೆ ವೈದ್ಯರು ಎನಿಮಾವನ್ನು ನೀಡಿದ್ದಾರೆ.

ಚಿನ್ನ

ಚಿನ್ನ

  • Share this:
ಚೆನ್ನೈ(ಮೇ.06): ವಿಲಕ್ಷಣ ಘಟನೆಯೊಂದರಲ್ಲಿ, 32 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಔತಣಕ್ಕೆ (Lunch) ಆಹ್ವಾನಿಸಿದ ಗೆಳೆಯನ (Friend) ಮನೆಯಲ್ಲಿ ಆಭರಣವನ್ನೂ ನುಂಗಿದ್ದಾರೆ. ನುಂಗಿದ ಆಭರಣಗಳನ್ನು ಪಡೆಯಲು ವೈದ್ಯರು ಎನಿಮಾವನ್ನು ನೀಡಿದ್ದಾರೆ. ಸಾಲಿಗ್ರಾಮದ ಫಾತಿಮಾ (Fathima) ತನ್ನ ಸ್ನೇಹಿತರನ್ನು ಈದ್ ಹಬ್ಬಕ್ಕೆ ಆಹ್ವಾನಿಸಿದ್ದಳು. ಸ್ನೇಹಿತನ ಗೆಳೆಯನೊಬ್ಬ ಭರ್ಜರಿ ಬಿರಿಯಾನಿ ತಿಂದಿದ್ದಲ್ಲದೆ, 1.45 ಲಕ್ಷ ಮೌಲ್ಯದ ಚಿನ್ನಾಭರಣ (Gold Jewellery) ನುಂಗಿ ಪರಾರಿಯಾಗಿದ್ದಾನೆ. ಫಾತಿಮಾ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. ಅವಳು ತನ್ನ ಸ್ನೇಹಿತೆ ರೋಸಿ ಮತ್ತು ಗೆಳೆಯ ಅಬ್ದುಲ್ಲಾ ಅವರನ್ನು ಊಟಕ್ಕೆ ಆಹ್ವಾನಿಸಿದ್ದಳು.

ಅತಿಥಿಗಳು ಹೋದ ನಂತರ, ಫಾತಿಮಾ ಅವರು ಕಬೋರ್ಡ್‌ನಿಂದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದರು.

ಶಂಕೆಯ ಮೇಲೆ ತನಿಖೆ

ಇತರ ಅತಿಥಿಗಳೊಂದಿಗೆ ವಿಚಾರಣೆ ನಡೆಸಿದ ನಂತರ, ಫಾತಿಮಾ ಅಬ್ದುಲ್ಲಾ ಆಭರಣಗಳನ್ನು ಕದ್ದಿದ್ದಾನೆ ಎಂದು ಶಂಕಿಸಿ ವಿರುಗಂಬಾಕ್ಕಂ ಪೊಲೀಸರಿಗೆ ದೂರು ನೀಡಿದ್ದಾಳೆ.

ಬೆಲೆ ಬಾಳುವ ಆಭರಣವನ್ನೆಲ್ಲ ತಿಂದ

ಬುಧವಾರ ನಡೆದ ವಿಚಾರಣೆ ವೇಳೆ ಶಂಕಿತ ಆರೋಪಿ ಬೆಲೆಬಾಳುವ ವಸ್ತುಗಳನ್ನು ನುಂಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅವರ ಹೊಟ್ಟೆಯ ಸ್ಕ್ಯಾನ್ ಆಭರಣಗಳ ಉಪಸ್ಥಿತಿಯನ್ನು ದೃಢಪಡಿಸಿತು.

ತೊಂಡಿಮುತಲುಂ ದೃಕ್ಷಾಕ್ಷಿಯುಂ ಸಿನಿಮಾದಂತೆಯೇ ಇದೆ ಕಥೆ

ಮಲಯಾಳಂನ ತೊಂಡಿಮುತಲುಂ ದೃಕ್ಷಾಕ್ಷಿಯುಂ ಸಿನಿಮಾ ನೋಡಿದವರಿಗೆ ಮುಂದೆ ಏನಾಗಲಿದೆ ಎಂಬುದು ಗೊತ್ತಿದೆ. ವೈದ್ಯರು ಅಬ್ದುಲ್ಲಾಗೆ ಎನಿಮಾ ನೀಡಿದ್ದು, ಗುರುವಾರ 95 ಸಾವಿರ ಮೌಲ್ಯದ ನೆಕ್ಲೇಸ್ ಹಾಗೂ 25 ಸಾವಿರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಪ್ರಕರಣವನ್ನು ಮುಂದುವರಿಸಲು ಫಾತಿಮಾ ಬಯಸಲಿಲ್ಲ ಮತ್ತು ದೂರನ್ನು ಹಿಂಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೆಂಡೆಂಟ್ ಇನ್ನೂ ಅವನ ಹೊಟ್ಟೆಯಲ್ಲಿದೆ ಮತ್ತು ಅದನ್ನು ಹಿಂಪಡೆಯಲು ವೈದ್ಯರು ಅವನಿಗೆ ವಿರೇಚಕಗಳನ್ನು ನೀಡಿದರು.

ಇದನ್ನೂ ಓದಿ: Viral Video: ಪ್ರತಿದಿನ ಈ ನಾಯಿ ಇಲ್ಲೇ ಬಂದು ಕೂರುತ್ತಂತೆ! ಯಾಕೆ ಅಂತ ತಿಳಿದರೆ ನಿಮ್ಮ ಮುಖದಲ್ಲೂ ನಗು ಮೂಡುತ್ತೆ

ಆರೋಪಿಯು 2020 ರವರೆಗೆ ದುಬೈನಲ್ಲಿ ಕೆಲಸ ಮಾಡಿದ್ದಾನೆ, ಆದರೆ ಈಗ ನಿರುದ್ಯೋಗಿ. ಈ ಕೃತ್ಯ ಎಸಗುವಾಗ ಆತ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

50 ರೂಪಾಯಿಗೆ ಹೊಟ್ಟೆ ತುಂಬಾ ಊಟ

ವೃದ್ಧ ದಂಪತಿಯ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಕೇವಲ 50 ರೂಪಾಯಿಗಳಿಗೆ ಅನಿಯಮಿತ ಊಟವನ್ನು ಉಣ ಬಡಿಸುವ ಉಡುಪಿ ಜಿಲ್ಲೆಯ ಮಣಿಪಾಲದ ವೃದ್ಧ ದಂಪತಿಗಳ ವಿಡಿಯೋ ಅದು.

ಈ ಅಪರೂಪದ ಶ್ರಮಿಕ ವೃದ್ಧ ದಂಪತಿಯ ವಿಡಿಯೋವನ್ನು ಬ್ಲಾಗರ್ ಜೋಡಿಗಳಾದ @rakshithraiy ಮತ್ತು @_mr.swashbuckler_ ಅವರು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಮೂರೇ ಮೂರು ದಿನದ ಒಳಗೆ ಅದು 4 ಮಿಲಿಯನ್‍ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ ಮತ್ತು 6 ಲಕ್ಷಕ್ಕೂ ಅಧಿಕ ಮೆಚ್ಚುಗೆಗಳನ್ನು ಪಡೆದಿದೆ.

ಇದನ್ನೂ ಓದಿ: Viral News: ಎಣ್ಣೆ ಮತ್ತಲ್ಲಿ ಮೆಟ್ಟಿಲುಗಳ ಮೇಲೆ ಕಾರಿಳಿಸಿದ ಮಹಿಳೆ; ಕಡೆಗೆ ಜಿಪಿಎಸ್​ ಕಾರಣ ಎಂದ್ಲು

ಈ ವೃದ್ಧ ದಂಪತಿಗಳು ನಡೆಸುತ್ತಿರುವ ಊಟದ ಮನೆಯ ಹೆಸರು, ಹೋಟೆಲ್ ಗಣೇಶ್ ಪ್ರಸಾದ್. ಸ್ಥಳೀಯರು ಇದನ್ನು ಪ್ರೀತಿಯಿಂದ ‘ಅಜ್ಜ ಅಜ್ಜಿ ಮನೆ’ ಎಂದು ಕರೆಯುತ್ತಾರೆ. ಈ ಹೊಟೇಲ್ ಮಣಿಪಾಲದ ರಾಜ್‍ಗೋಪಾಲ್ ನಗರ ರಸ್ತೆಯಲ್ಲಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬ್ಲಾಗರ್‌ಗಳು ಹೇಳುವ ಪ್ರಕಾರ, 1951 ರಿಂದ ಈ ದಂಪತಿ , ಹೋಟೆಲ್ ಗಣೇಶ್ ಪ್ರಸಾದ್ ಅನ್ನು ನಡೆಸಿಕೊಂಡು ಬರುತ್ತಿದ್ದಾರಂತೆ. ನಿತ್ಯವೂ ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ಹೋಟೇಲ್ ಗಣೇಶ್ ಪ್ರಸಾದ್‍ನಲ್ಲಿ ಊಟ ಲಭ್ಯವಿರುತ್ತದೆ. ನೀವಲ್ಲಿ ಹೊಟ್ಟೆ ತೃಪ್ತಿ ಆಗುವಷ್ಟು ಊಟವನ್ನು ಸವಿಯಬಹುದು. ಅದಕ್ಕಾಗಿ ನೀವು ಪಾವತಿಸಬೇಕಾದ ದುಡ್ಡು ಕೇವಲ 50 ರೂಪಾಯಿ ಮಾತ್ರ.
Published by:Divya D
First published: