ಮಾಂಸಾಹಾರ (Non Veg) ಪ್ರಿಯರಿಗೆ ಇಷ್ಟವಾಗುವ ಮೊದಲ ಆಹಾರ ಎಂದರೆ ಚಿಕನ್. ಬೆಲೆ ಮತ್ತು ರುಚಿ ಎರಡೂ ವಿಚಾರದಲ್ಲಿ ಗ್ರಾಹಕರನ್ನು ತೃಪ್ತಿಗೊಳಿಸುವ ಚಿಕನ್ ಎಂದರೆ ಆಹಾರ (Food) ಪ್ರಿಯರಿಗೆ ಅದರಲ್ಲೂ ನಾನ್ ವೆಜಿಟೇರಿಯನ್‌ಗಳಿಗೆ ಸಖತ್ ಇಷ್ಟ. ಚಿಕನ್‌ನಲ್ಲಿ ಬಗೆಬಗೆಯ ಖಾದ್ಯಗಳನ್ನು ಮಾಡಿಕೊಂಡು ತಿನ್ನಬಹುದು. ಚಿಕನ್ ಬಿರಿಯಾನಿ, ಗ್ರೇವಿ, ಸಾರು, ಫ್ರೈ, ಕಬಾಬ್ ಅಬ್ಬಬ್ಬಾ ಈ ಪಟ್ಟಿ ಎಷ್ಟು ಹೇಳಿದರೂ ಮುಗಿಯುವಂತೆಯೇ ಇಲ್ಲ. ಅಷ್ಟೆಲ್ಲಾ ವಿಧದಲ್ಲಿ ನಾವು ಚಿಕನ್‌ನಲ್ಲಿ ತರಹೇವಾರಿ ಪಾಕಪದ್ಧತಿಗಳನ್ನು ಮಾಡಬಹುದು. ಸರಿಯಾಗಿ ಉಪ್ಪು, ಖಾರ, ಹುಳಿ ಬೆರೆಸಿ ನಮಗೆ ಬೇಕಾದ ಪಾಕಪದ್ಧತಿಯನ್ನು ಮಾಡಿಕೊಂಡು, ಬಾಯಿ ಚಪ್ಪರಿಸಿಕೊಂಡು ಚಿಕನ್ ತಿನ್ನುತ್ತಾ ಇದ್ದರೆ ಇದಕ್ಕಿಂತ ಬೇರೆ ರುಚಿ ಇಲ್ಲಾ ಅನ್ನಬಹುದು. ಚಿಕನ್ (Chicken) ಅನ್ನು ರುಚಿಗೆ ಮತ್ತು ಆರೋಗ್ಯದ ದೃಷ್ಟಿಯಿಂದ ಸರಿಯಾಗಿ ಬೇಯಿಸಿಯೇ ತಿನ್ನಬೇಕು.
ತಾಜಾ ಚಿಕನ್
ಅಂಗಡಿಗೆ ಚಿಕನ್ ತರಲು ಹೋದರೆ ಸಾಮಾನ್ಯವಾಗಿ ತಾಜಾ ಚಿಕನ್ ಅನ್ನೇ ಕೇಳುತ್ತೇವೆ. ಚಿಕನ್ ತಾಜಾವಾಗಿದ್ದರೆ ಅದರಿಂದ ಮಾಡುವ ಅಡುಗೆ ಕೂಡ ರುಚಿಯಾಗಿರುತ್ತದೆ. ತಾಜಾ ಚಿಕನ್ ಅನ್ನು ಎಲ್ಲರೂ ಇಷ್ಟಪಡುತ್ತಾರೆ ಸರಿ, ಆದರೆ ಇಲ್ಲೊಬ್ಬ ವ್ಯಕ್ತಿ ತಾಜಾ ಚಿಕನ್ ಅನ್ನು ಇಷ್ಟಪಟ್ಟಿರುವ ಲೆವೆಲ್ ಬೇರೆಯೇ ಎನ್ನಬಹುದು.
ಇದನ್ನೂ ಓದಿ: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು
ಸಾಮಾನ್ಯವಾಗಿ ಮಾಂಸವನ್ನು ಹಸಿಯಾಗಿ ತಿನ್ನಬಾರದು ಅಂತಾ ಹೇಳಲಾಗುತ್ತದೆ. ಮೊಟ್ಟೆಯನ್ನು ಕೆಲವರು ಹಸಿಯಾಗಿ ಸೇವಿಸುತ್ತಾರೆ. ಇದನ್ನು ಹಲವು ಅಧ್ಯಯನಗಳು ಸಹ ಒಪ್ಪಿಕೊಂಡಿವೆ. ಅದರೆ ಹಸಿಯಾದ ಚಿಕನ್ ತಿನ್ನುವುದು ಎಂದರೆ ಯಪ್ಪಾ, ಕೇಳಿದರೇನೆ ಹೊಟ್ಟೆಯಲ್ಲಾ ತೊಳೆಸುವಂತಾಗುತ್ತದೆ ಅಂತಹದರಲ್ಲಿ ತಿನ್ನುವುದು ಅಂದರೆ ಹೇಗೆ?
ಹಸಿಯಾದ ಚಿಕನ್ ತಿಂದು ವೈರಲ್ ಆದ ವ್ಯಕ್ತಿ
ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಹೀಗೆ ಹಸಿಯಾದ ಚಿಕನ್ ಅನ್ನು ತಿನ್ನುವ ಮೂಲಕ ವೈರಲ್ ಆಗಿದ್ದಾರೆ. ಹೌದು, ಮಾಲ್‌ನಲ್ಲಿ ಹಸಿ ಚಿಕನ್ ಡ್ರಮ್‌ಸ್ಟಿಕ್ ಫೀಸ್‌ಗಳನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿ ತಾಜಾ ಚಿಕನ್ ತಿನ್ನುತ್ತಿರುವ ಫೋಟೋಗಳು ವೈರಲ್ ಆಗಿವೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಬರಿಗಾಲಿನ ವ್ಯಕ್ತಿಯೊಬ್ಬರು ಶಾಪಿಂಗ್ ಮಾಲ್‌ನಲ್ಲಿ ಎಸ್ಕಲೇಟರ್‌ನಲ್ಲಿ ಹೋಗುವಾಗ ಪ್ಯಾಕೆಟ್ ಮಾಡಲಾದ ಚಿಕನ್ ಅನ್ನು ತೆಗೆದು ಅದರಲ್ಲಿನ ಕಚ್ಚಾ ಚಿಕನ್ ಡ್ರಮ್‌ಸ್ಟಿಕ್ ಪೀಸ್‌ಗಳನ್ನು ಹಸಿಯಾಗಿ ತಿಂದಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಬೇಸಿಗೆಯಲ್ಲೂ ಹಿಮ ಬೀಳುತ್ತಂತೆ ಇಲ್ಲಿ! ವ್ಹಾವ್ ಎಷ್ಟು ತಂಪು ಗೊತ್ತಾ?
ಹಾಗೆ ಹೋಗುತ್ತಿರುವಾಗ ವ್ಯಕ್ತಿ ಪ್ಯಾಕೆಟ್ ತೆರೆದು ಚಿಕನ್ ಪೀಸ್‌ಗಳನ್ನುತೆಗೆದು ಹಾಗೆ ಬರಿ ಬಾಯಲ್ಲೇ ಹಸಿಯಾಗಿ ತಿನ್ನುತ್ತಿದ್ದಾರೆ. ಈ ಫೋಟೋಗಳು ನೆಟ್ಟಿಗರನ್ನು ಅಚ್ಚರಿ ಪಡುವಂತೆ ಮಾಡಿವೆ.
ನೆಟ್ಟಿಗರಿಂದ ಬಗೆಬಗೆಯ ಕಾಮೆಂಟ್
ಈ ಫೋಟೋಗಳು ಈಗ ಇಂಟರ್‌ನೆಟ್ ತುಂಬಾ ವೈರಲ್ ಆಗಿವೆ. ಬಳಕೆದಾರರು ಈ ಫೋಟೋಗಳನ್ನು ನೋಡಿ ಹೌಹಾರಿದ್ದು, ವಿಚಿತ್ರ ವ್ಯಕ್ತಿ ಅಂತಾ ಕಾಮೆಂಟ್ ಮಾಡಿದ್ದಾರೆ. ಹಸಿಮಾಂಸ ತಿನ್ನುವುದು ಅಪಾಯಕಾರಿ ಅಂತಾನೂ ಸಲಹೆ ನೀಡಿದ್ದಾರೆ.
View this post on Instagram
ಕಚ್ಚಾ ತರಕಾರಿಗಳು, ಹಸಿ ಮೊಟ್ಟೆಗಳು, ಪಾಶ್ಚರೀಕರಿಸದ ಹಾಲು ಮತ್ತು ಹಸಿ ಮಾಂಸ ಮತ್ತು ಮೀನುಗಳನ್ನು ಸೇವಿಸುವ ಕಚ್ಚಾ ಆಹಾರದ ಆಹಾರವನ್ನು ಅನುಸರಿಸುವ ಜನರು ಪ್ರಪಂಚದಾದ್ಯಂತ ಇದ್ದಾರೆ.
ಅಂತಹ ಆಹಾರವು ವಿವಿಧ ಆರೋಗ್ಯ ಪ್ರಯೋಜನಗಳನ್ನು ತರುತ್ತದೆ ಎಂದು ಅವರು ನಂಬುತ್ತಾರೆ. ಆದರೆ ಮಾಂಸಗಳನ್ನೆಲ್ಲಾ ಸರಿಯಾಗಿ ಬೇಯಿಸಿ ತಿನ್ನಬೇಕು, ಹಸಿ ಮಾಂಸ ಹಲವು ಅನಾರೋಗ್ಯ ಸಮಸ್ಯೆ ಉಂಟು ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ