ಕೇವಲ ನಾಲ್ಕು ನಿಮಿಷಗಳಲ್ಲಿ 20,000 ಕ್ಯಾಲೋರಿಯುಳ್ಳ ದೈತ್ಯಾಕಾರದ ಬರ್ಗರ್‌ ತಿಂದ ವ್ಯಕ್ತಿ

Viral Video: ಮ್ಯಾಕ್‌ ಸ್ಟೋನಿ ತಮ್ಮ ಯೂಟ್ಯೂಬ್‌ ಛಾನೆಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದನ್ನು 8 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಸುಮಾರು 4 ಲಕ್ಷ ಜನ ಈ ವಿಡಿಯೋಗೆ ಲೈಕ್‌ ನೀಡಿದ್ದಾರೆ.

ಬರ್ಗರ್ ತಿಂದ ವ್ಯಕ್ತಿ

ಬರ್ಗರ್ ತಿಂದ ವ್ಯಕ್ತಿ

  • Share this:

ಇಂಟರ್ನೆಟ್‌ನಲ್ಲಿ ಆಗಾಗ್ಗೆ ಕೆಲವು ನಂಬಲು ಸಾಧ್ಯವಾಗದಂತಹ ವಿಡಿಯೋಗಳು ಅಪ್ಲೋಡ್‌ ಆಗುತ್ತಿರುತ್ತವೆ. ಅದನ್ನು ನಂಬಲೆಂದೇ ಆ ವಿಡಿಯೋವನ್ನು ನೋಡಬೇಕಾಗಿದೆ. ಒಂದೇ ವಿಡಿಯೋವನ್ನು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಲಾಗುತ್ತಿರುತ್ತದೆ ಹಾಗೂ ಅವುಗಳಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿರುತ್ತದೆ. ಇದೇ ರೀತಿ, ದೈತ್ಯಾಕಾರದ ಬರ್ಗರ್ ಅನ್ನು ಕೆಲವೇ ನಿಮಿಷಗಳಲ್ಲಿಸಂಪೂರ್ಣವಾಗಿ ತಿನ್ನುವ ವ್ಯಕ್ತಿಯೊಬ್ಬರ ಈ ಯೂಟ್ಯೂಬ್‌ ವಿಡಿಯೋ ಅಂತಹ ವಿಡಿಯೋಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ವಿಡಿಯೋವನ್ನು ಮ್ಯಾಟ್‌ ಸ್ಟೋನಿ ಎಂಬುವರು ಶೇರ್‌ ಮಾಡಿಕೊಂಡಿದ್ದು, ನೀವು ಈ ವಿಡಿಯೋವನ್ನು ಬಾಯಿ ಬಿಟ್ಟುಕೊಂಡು ನೋಡುವಂತಾಗುತ್ತದೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಹಲವು ಮಿಲಿಯನ್‌ಗಟ್ಟಲೆ ನೆಟ್ಟಿಗರು ವೀಕ್ಷಿಸಿದ್ದಾರೆ.


ಸ್ಟೋನಿ ತಾವು ಪೂರ್ಣಗೊಳಿಸಲು ಹೊರಟಿದ್ದ ಆಹಾರ ಸವಾಲನ್ನು ವಿವರಿಸುವುದರೊಂದಿಗೆ ವಿಡಿಯೋದ ರೆಕಾರ್ಡಿಂಗ್‌ ಆರಂಭವಾಗುತ್ತದೆ. "ಲಾಸ್ ವೇಗಾಸ್‌ನ ಐಕಾನಿಕ್ ಫುಡ್ ಚಾಲೆಂಜ್‌ನಲ್ಲಿ ಸಾಧಿಸಬೇಕಿತ್ತು. ಹಾರ್ಟ್ ಅಟ್ಯಾಕ್ ಗ್ರಿಲ್‌ನಲ್ಲಿ ಆಕ್ಟ್ಯುಪಲ್ ಬೈಪಾಸ್ ಚಾಲೆಂಜ್ !! - 8 1/2lb ಪ್ಯಾಟೀಸ್ - 16 ಚೀಸ್ ಸ್ಲೈಸ್‌ಗಳು - ಒಂದು ಸಂಪೂರ್ಣ ಕೆಂಪು ಈರುಳ್ಳಿ - 2 ಟೊಮ್ಯಾಟೋಗಳು - ಮೆಣಸಿನಕಾಯಿ- 40 ಬೇಕನ್ ತುಂಡುಗಳು - 2 ಹ್ಯಾಂಬರ್ಗರ್ ಬನ್‌ಗಳು..!! ಮಿಕಿ ಸುಡೊ 7:42 ಸಮಯದಲ್ಲಿ ವಿಶ್ವ ದಾಖಲೆ ಮಾಡಿದ್ದರು, ನಾನು ಅದಕ್ಕಿಂತ ಕಡಿಮೆ ಸಮಯದಲ್ಲಿ ಈ ಬರ್ಗರ್‌ ಅನ್ನು ತಿನ್ನಬಹುದೇ'' ಎಂದು ಈ ವಿಡಿಯೋದ ಕ್ಯಾಪ್ಷನ್‌ ಹೇಳುತ್ತದೆ. ಇದು ಆ ದೈತ್ಯಾಕಾರದ ಬರ್ಗರ್‌ನಲ್ಲಿರುವ ವಿವಿಧ ಪದಾರ್ಥಗಳನ್ನು ತಿಳಿಸುತ್ತದೆ.


ಇನ್ನು


, ಈ ಸವಾಲನ್ನು ಸ್ವೀಕರಿಸಿದ ಇವರು, ದೈತ್ಯಾಕಾರದ ಬರ್ಗರ್‌ ಅನ್ನು ಕೇವಲ 4 ನಿಮಿಷ 10.18 ಸೆಕೆಂಡ್‌ಗಳಲ್ಲಿ ತಿಂದು ಮುಗಿಸಿದ್ದಾರೆ.

ನೀವೂ ಒಮ್ಮೆ ಈ ವಿಡಿಯೋ ನೋಡಿ ಮತ್ತು ಆಶ್ಚರ್ಯಚಕಿತರಾಗಲು ಸಿದ್ಧರಾಗಿರಿ:ಮ್ಯಾಕ್‌ ಸ್ಟೋನಿ ತಮ್ಮ ಯೂಟ್ಯೂಬ್‌ ಛಾನೆಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದನ್ನು 8 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದು, ಸುಮಾರು 4 ಲಕ್ಷ ಜನ ಈ ವಿಡಿಯೋಗೆ ಲೈಕ್‌ ನೀಡಿದ್ದಾರೆ. ಇನ್ನು 20 ಸಾವಿರಕ್ಕೂ ಅಧಿಕ ನೆಟ್ಟಿಗರು ಕಮೆಂಟ್‌  ಮಾಡಿದ್ದಾರೆ. ಜನರು ಈ ಸಾಧನೆಯನ್ನು ನೋಡಿ ಬೆರಗಾಗಿದ್ದು, ಎಷ್ಟು ದೈತ್ಯದ ಬರ್ಗರ್‌ ಎಂದು ಉದ್ಘರಿಸಿದರು. ಹಾಗೂ, ಈ ದೊಡ್ಡ ಬರ್ಗರ್‌ನ ಅರ್ಧವನ್ನೂ ನಾವು ತಿನ್ನಲು ಸಾಧ್ಯವಿಲ್ಲ ಎಂದೂ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


"ಈ ವಿಡಿಯೋ ಮೂಲಕ ಆತನ ನೋವನ್ನು ನಾನು ಅನುಭವಿಸಬಹುದು" ಎಂದು ಯೂಟ್ಯೂಬ್ ಬಳಕೆದಾರರು ಬರೆದಿದ್ದಾರೆ. "ನಾನು ಇದರಿಂದ ಅಸಹ್ಯಪಟ್ಟೆ ಮತ್ತು ಪ್ರಭಾವಿತನಾಗಿದ್ದೇನೆ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಈ ವ್ಯಕ್ತಿ ಒಂದು ದಂತಕಥೆ" ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಮ್ಯಾಕ್‌ ಸ್ಟೋನಿ ಯೂ ಟ್ಯೂಬ್‌ ಛಾನೆಲ್‌ನಲ್ಲಿ 14.6 ಮಿಲಿಯನ್‌ಗೂ ಅಧಿಕ ಜನ ಸಬ್‌ಸ್ಕ್ರೈಬರ್ಸ್‌ಗಳು ಇದ್ದಾರೆ.

ಈ ವಿಡಿಯೋಗೆ ನಿಮ್ಮ ಪ್ರತಿಕ್ರಿಯೆ ಏನು..? ನೀವು ಈ ಚಾಲೆಂಜ್‌ ಅನ್ನು ಟ್ರೈ ಮಾಡ್ತೀರಾ..?

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: