Viral News: ನಿಜ ಕಣ್ರೀ, 'ಕಸದ ಬುಟ್ಟಿ' ಮಾರಿ ಈತ ಗಳಿಸಿದ್ದು ಕೋಟಿ-ಕೋಟಿ ರೂಪಾಯಿ! ಡೌಟ್ ಇದ್ರೆ ಈ ಸುದ್ದಿ ಓದಿ

ಹಿಂದೆ 1917ರಲ್ಲಿ ಮಾರ್ಸೆಲ್ ಡುಚಾಂಪ್ ಎಂಬ ಕಲಾವಿದ ಪ್ರತಿಷ್ಠಿತ ಕಲಾ ಪ್ರದರ್ಶನದಲ್ಲಿ ಮೂತ್ರ ಪಾತ್ರೆಯ ಮಾದರಿಯನ್ನು ತಯಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಇದು ಸಾಕಷ್ಟು ವಿವಾದವನ್ನೂ ಸಹ ಉಂಟು ಮಾಡಿತ್ತು. ಆದರೆ, ಆ ಘಟನೆ ನಡೆದು ಒಂದು ಶತಕದ ತರುವಾಯ ಅದೇ ರೀತಿಯ ಇನ್ನೊಂದು ಪ್ರಸಂಗ ನಡೆದಿರುವುದು ಮತ್ತೆ ಜನರಲ್ಲಿ ಕುತೂಹಲ ಉಂಟಾಗುವಂತೆ ಮಾಡಿದೆ.

ಮಾರಾಟವಾದ ಚಿತ್ರದೊಂದಿಗೆ ಕಲಾವಿದ

ಮಾರಾಟವಾದ ಚಿತ್ರದೊಂದಿಗೆ ಕಲಾವಿದ

 • Share this:
  ಇಂದಿನ ಡಿಜಿಟಲ್ (Digital) ಯುಗದಲ್ಲಿ ತರೆಹೇವಾರಿ ಬದಲಾವಣೆಗಳಾಗುತ್ತಿವೆ. ಚಿತ್ರ-ವಿಚಿತ್ರ ಎನ್ನಬಹುದಾದ ಕಲೆಗಳು (Arts), ವಿನ್ಯಾಸಗಳಿಗೆ ಆನ್ಲೈನ್ (Onlne) ವೇದಿಕೆಗಳಲ್ಲಿ ಊಹಿಸಲು ಸಾಧ್ಯವಾಗದಂತಹ ಬೆಲೆ (Price) ಕಟ್ಟಲಾಗುತ್ತಿದೆ. ಇದು ಅಚ್ಚರಿ ಮೂಡಿಸುವಂತಹ ವಿಷಯವಾದರೂ ಸತ್ಯ. ಹಿಂದೆ 1917ರಲ್ಲಿ ಮಾರ್ಸೆಲ್ ಡುಚಾಂಪ್ ಎಂಬ ಕಲಾವಿದ ಪ್ರತಿಷ್ಠಿತ ಕಲಾ ಪ್ರದರ್ಶನದಲ್ಲಿ (Art Exhibition) ಮೂತ್ರ ಪಾತ್ರೆಯ ಮಾದರಿಯನ್ನು ತಯಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಇದು ಸಾಕಷ್ಟು ವಿವಾದವನ್ನೂ ಸಹ ಉಂಟು ಮಾಡಿತ್ತು. ಆದರೆ, ಆ ಘಟನೆ ನಡೆದು ಒಂದು ಶತಕದ ತರುವಾಯ ಅದೇ ರೀತಿಯ ಇನ್ನೊಂದು ಪ್ರಸಂಗ ನಡೆದಿರುವುದು ಮತ್ತೆ ಜನರಲ್ಲಿ ಕುತೂಹಲ ಉಂಟಾಗುವಂತೆ ಮಾಡಿದೆ.

  ‘ಕಸದಬುಟ್ಟಿ’ ತಯಾರಿಸಿದ ಕಲಾವಿದ!

  ಅಮೆರಿಕ ಮೂಲದ ಕಲಾವಿದನಾದ ರಾಬ್ನೆಸ್ ಎಂಬಾತ ಕಸದ ಬುಟ್ಟಿ ಎಂಬರ್ಥ ಬರುವ ಟ್ರ್ಯಾಶ್ ಕ್ಯಾನ್ ಅನ್ನು ಡಿಜಿಟಲ್ ರೂಪದಲ್ಲಿ ತಯಾರಿಸಿ ಅದನ್ನು ಎನ್.ಎಫ್.ಟಿ (ನಾನ್ ಫಂಜಿಬಲ್ ಟೋಕನ್) ಯಲ್ಲಿ ಪರಿವರ್ತಿಸಿದ್ದು ಅದೀಗ ಆನ್ಲೈನ್‌ನಲ್ಲಿ 252,000 ಅಮೆರಿಕನ್ ಡಾಲರ್ ಮೊತ್ತಕ್ಕೆ ಮಾರಾಟ ಮಾಡಿ ಎಲ್ಲರ ಗಮನ ಸೆಳೆದಿರುವ ಘಟನೆ ನಡೆದಿದೆ.

  38ರ ಪ್ರಾಯದ ಲಾಸ್ ಎಂಜಲೀಸ್ ಮೂಲದ ಈ ಕಲಾವಿದ ಮಾಧಮವೊಂದಕ್ಕೆ ಈ ರೀತಿಯಾಗಿ ಹೇಳುತ್ತಾನೆ, "ನನಗೆ ಈ ಚಿತ್ರ ಎಲ್ಲಿಂದ ಬಂತೆಂದು ಗೊತ್ತಿಲ್ಲ, ಬಹುಶಃ ಇದು ಗೂಗಲ್ ಇಮೇಜ್ ಆಗಿತ್ತೆಂದು ಅನಿಸುತ್ತದೆ". ಇದರಿಂದ ಎನ್.ಎಫ್.ಟಿ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಹಣಗಳಿಸಿದ್ದಾನೆ ರಾಬ್ನೆಸ್. ಕಲಾ ಜಗತ್ತಿನಲ್ಲಿ ಎನ್.ಎಫ್.ಟಿ ಒಂದು ವಿಶಿಷ್ಟವಾದ ಕಲೆಯಾಗಿದೆ. ಈ ಕಲೆಗೆ ಪ್ರಸ್ತುತ ಜಗತ್ತಿನಾದ್ಯಂತ ಅಪಾರವಾದ ಬೇಡಿಕೆಯಿದೆ.

  '64 ಗ್ಯಾಲನ್ ಟೊಟರ್' ಎಂಬ ಶೀರ್ಷಿಕೆ

  ರಾಬ್ನೆಸ್ ಮಾಡಿರುವ ಎನ್.ಎಫ್.ಟಿ ಕಲೆಯು '64 ಗ್ಯಾಲನ್ ಟೊಟರ್' ಎಂದು ಶೀರ್ಷಿಕೆ ಹೊಂದಿದ್ದು ಆ ಚಿತ್ರವು ಹೊಳಪನ್ನು ಹೊಂದಿದೆ. ಈ ಕಲಾಕೃತಿಯು ಒಂದು ರೀತಿಯ ವಿಕೃತ ಮನೋಸ್ಥಿತಿಯನ್ನು ಅನಾವರಣಗೊಳಿಸುವಂತಿದ್ದು ಹೆಚ್ಚಿನ ಬೆಲೆಗೆ ಹರಾಜುಗೊಂಡಿರುವುದಾಗಿ ತಿಳಿದುಬಂದಿದೆ.

  ವಿಶ್ಲೇಷಣೆ ನಡೆಸುವ ಚೈನಾಲಿಸಿಸ್ ಸಂಸ್ಥೆಯ ಪ್ರಕಾರ, ಕಳೆದ ವರ್ಷ ಜಗತ್ತಿನಾದ್ಯಂತ ಎನ್.ಎಫ್.ಟಿ ಜಗತ್ತಿನಲ್ಲಿ ನಡೆದ ವ್ಯವಹಾರದ ಮೌಲ್ಯ 40 ಬಿಲಿಯನ್ ಡಾಲರ್ ಅಂದರೆ ಇದಕ್ಕಿರುವ ಮಹತ್ವ ಏನೆಂಬುದನ್ನು ಅರಿಯಬಹುದು.

  ಇದನ್ನೂ ಓದಿ: Buddha Idol: ಇಟಲಿಯಲ್ಲಿ ಪತ್ತೆಯಾಯ್ತು ಕಳುವಾಗಿದ್ದ 1,200 ವರ್ಷಗಳ ಹಳೆಯ ಬುದ್ದನ ವಿಗ್ರಹ

  ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದ ಸಂಸ್ಥೆ

  ಡುಚಾಂಪ್ ರೀತಿಯಲ್ಲೇ ರಾಬ್ನೆಸ್ ತನ್ನ ಈ ಕಲಾಕೃತಿಯನ್ನು ವೆಬ್ ವೇದಿಕೆಯಲ್ಲಿ ಪ್ರಕಟಿಸಿದ ನಂತರ ಅದು ಕುಖ್ಯಾತಿ ಗಳಿಸಿತು. ಡಿಜಿಟಲ್ ಮಾರುಕಟ್ಟೆಯಲ್ಲಿ ಇದರ ಗಂಭೀರತೆಯನ್ನರಿತ ಸೂಪರ್ ರೇರ್ ಈ ಕಲಾಕೃತಿಯನ್ನು ತಕ್ಷಣ ತೆಗೆ ಹಾಕಿತ್ತು. ಅಷ್ಟೆ ಅಲ್ಲ, ಈ ರೀತಿಯ ಕಲಾಕೃತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಬ್ನೆಸ್ ವಿರುದ್ಧ ಕಾನೂನು ಪ್ರಕರಣ ದಾಖಲಿಸುವುದಾಗಿ ಸೂಪರ್ ರೇರ್ ಸಂಸ್ಥೆ ಹೇಳಿತ್ತೆಂದು ರಾಬ್ನೆಸ್ ನಗುತ್ತ ನುಡಿಯುತ್ತಾರೆ.

  ಬಳಿಕ ವೈರಲ್ ಆಯ್ತು ಈ ಚಿತ್ರ

  ತದನಂತರ ಈ ಕುರಿತು ಸಾಕಷ್ಟು ಚರ್ಚೆಗಳು, ವಿಚಾರ-ವಿನಿಮಯಗಳು ನಡೆದಿದ್ದು ಈಗ ಈ ರೀತಿಯ ಮಾದರಿಯನ್ನು ಕಲೆಯ ಒಂದು ಭಾಗ ಎಂದು ನ್ಯಾಯಸಮ್ಮತವಾಗಿ ಒಪ್ಪಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿರುವ ಸೂಪರ್ ರೇರ್ ರಾಬ್ನೆಸ್ ಅವರ ಕಲಾಕೃತಿಯನ್ನು ಮತ್ತೆ ಪ್ರದರ್ಶಿಸಿದೆ.

  ಇದನ್ನೂ ಓದಿ: Viral Video: ಆನೆಯ ಜೊತೆ ತುಂಟಾಟ ಮಾಡುವ ಅಸ್ಸಾಂನ ಪೋರಿ

  ಹಲವು ಕಲಾಕೃತಿ ರಚನೆಗೆ ಸ್ಫೂರ್ತಿಯಾಯಿತಂತೆ

  ಈ ಟ್ರ್ಯಾಶ್ ಬಿನ್ ಕಲಾಕೃತಿಯು ನೂರಾರು ಈ ರೀತಿಯ ಮಾದರಿಯ ಕಲಾಕೃತಿಗಳು ನಿರ್ಮಾಣವಾಗುವಂತೆ ಪ್ರೇರೇಪಿಸಿದೆ. ಸಂಗ್ರಹಕಾರರು ಈ ಕಲಾಕೃತಿಗಳಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. "ಅಲ್ಲಿರುವ ಮೂರು ಮಾದರಿಗಳ ಪೈಕಿ ಈಗ ಮಾರಿರುವ ಕಲಾಕೃತಿ ಒಂದು ಮಾದರಿಯಾಗಿದೆ. ಸಂಗ್ರಹಕಾರ ಇದರ ಹಿಂದಿರುವ ಕಥೆಯನ್ನು ಕೇಳಲು ಉತ್ಸುಕನಾಗಿದ್ದ ಹಾಗೂ ನನಗೆ ಕರೆ ಮಾಡಿ ವಿಚಾರಿಸಿದ.

  ಈ ಬಗ್ಗೆ ನಾನು ಅವರಿಗೆ ಇದರ ರೋಚಕವಾದ ಹಾಸ್ಯಮಯ ಹಿನ್ನೆಲೆ ವಿವರಿಸಿದೆ. ಅವರು ಆ ಕಥೆಯನ್ನು ಚೆನ್ನಾಗಿ ಆಸ್ವಾದಿಸಿ ನನ್ನ ಕಲೆಯ ಬೆಲೆ ಕೇಳುವಂತೆ ಹೇಳಿದರು. ಅದಕ್ಕೆ ನಾನು ಬೆಲೆ ಹೇಳಿದಾಗ ಅದಕ್ಕವರೊಪ್ಪಿದರು" ಎಂದು ರಾಬ್ನೆಸ್ ಪ್ರತಿಕ್ರಯಿಸುತ್ತಾರೆ.
  Published by:Annappa Achari
  First published: