ನೀರು ಎಂದು ಮೇಣದ ನೀರನ್ನು ಕುಡಿದ ವ್ಯಕ್ತಿಯ ಸ್ಥಿತಿ ಏನಾಯಿತು ಗೊತ್ತೇ?

ಇಲ್ಲಿ ನಡೆದ ಒಂದು ಘಟನೆಯಲ್ಲಿಯೂ ಸಹ ವ್ಯಕ್ತಿಯು ತನಗೆ ಮಧ್ಯರಾತ್ರಿ ನಿದ್ದೆಯಿಂದ ಎದ್ದು ಬಾಯಾರಿಕೆಯಾಗಿದೆ ಎಂದು ಮೇಣದ ನೀರನ್ನು ನೀರು ಎಂದುಕೊಂಡು ತಪ್ಪಾಗಿ ಗ್ರಹಿಸಿ ಅದನ್ನು ಕುಡಿದಿದ್ದಾರೆ.

ನೀರು

ನೀರು

  • Share this:

ಸಾಮಾನ್ಯವಾಗಿ ನಾವು ಮಧ್ಯರಾತ್ರಿ ನಿದ್ರೆಯಿಂದ ಎದ್ದು ನೀರು ಕುಡಿದು ಮತ್ತೆ ಮಲಗುತ್ತೇವೆ. ಆದರೆ ಒಮ್ಮೊಮ್ಮೆ ನಿದ್ದೆ ಮಂಪರಿನಲ್ಲಿ ನಾವು ತುಂಬಿಸಿಟ್ಟ ನೀರಿನಲ್ಲಿ ಏನಾದರೂ ಬಿದ್ದಿದಿಯೇ ಅಂತಾನೂ ನೋಡಲ್ಲ ಹಾಗೆ ಕುಡಿದು ಬಿಡುತ್ತೇವೆ.


ಇಲ್ಲಿ ನಡೆದ ಒಂದು ಘಟನೆಯಲ್ಲಿಯೂ ಸಹ ವ್ಯಕ್ತಿಯು ತನಗೆ ಮಧ್ಯರಾತ್ರಿ ನಿದ್ದೆಯಿಂದ ಎದ್ದು ಬಾಯಾರಿಕೆಯಾಗಿದೆ ಎಂದು ಮೇಣದ ನೀರನ್ನು ನೀರು ಎಂದುಕೊಂಡು ತಪ್ಪಾಗಿ ಗ್ರಹಿಸಿ ಅದನ್ನು ಕುಡಿದಿದ್ದಾರೆ. ನಂತರ ಅದು ಮೇಣದ ಬತ್ತಿಯಲ್ಲಿರುವ ಬಿಸಿ ಮೇಣ ಎಂದು ಅರಿತು ಬೆಚ್ಚಿ ಬಿದ್ದಿದ್ದಾರೆ.


ಈ ಘಟನೆಯ ಬಗ್ಗೆ ಆ ವ್ಯಕ್ತಿಯು ಮುಜುಗರದ ಪ್ರಮಾದವನ್ನು ರೆಡ್ಡಿಟ್‌ನಲ್ಲಿ ಅನಾಮಧೇಯವಾಗಿ ಹಂಚಿಕೊಂಡಿದ್ದಾರೆ. ಆ ವ್ಯಕ್ತಿಯ ಹಲ್ಲು ಮತ್ತು ಬಾಯಿಯ ಮೇಲ್ಭಾಗಕ್ಕೆ ಮೇಣ ಅಂಟಿಕೊಂಡಿದೆ.


"ಈ ಘಟನೆಯು ನಾನು ನನ್ನ ಜೀವನದಲ್ಲಿಅನುಭವಿಸಿದ ವಿಚಿತ್ರವಾದ ಸಂಗತಿಗಳಲ್ಲಿ ಒಂದಾಗಿದೆ ಆದರೆ ಇದು ಎಷ್ಟು ಹಾಸ್ಯಾಸ್ಪದವಾಗಿದೆ ಎಂದು ನನಗೆ ಊಹಿಸಲು ಸಹ ಸಾಧ್ಯವಾಗುತ್ತಿಲ್ಲ.


ಮಧ್ಯರಾತ್ರಿಯಲ್ಲಿ ನಾನು ತುಂಬಾ ಗಲಿಬಿಲಿಗೊಂಡು ತುಂಬಾ ಬಾಯಾರಿಕೆಯಿಂದ ಎಚ್ಚರಗೊಂಡೆ, ಕತ್ತಲೆಯಲ್ಲಿ ನಾನು ಇಟ್ಟ ನೀರಿಗಾಗಿ ನನ್ನ ಹಾಸಿಗೆಯ ಪಕ್ಕದಲ್ಲಿರುವ ಟೇಬಲ್ ಬಳಿ ಹೋದೆ.


ನಾನು ನೀರನ್ನು ನನ್ನ ಹಾಸಿಗೆಯ ಪಕ್ಕದಲ್ಲಿ ನೆಲದ ಮೇಲೆ ಇಡುತ್ತೇನೆ ಎನ್ನುವುದು ಸಹ ನನಗೆ ಮಧ್ಯರಾತ್ರಿ ಮರೆತು ಹೋಗಿರುವುದು ನಿಜಕ್ಕೂ ವಿಚಿತ್ರ ಅನ್ನಿಸುತ್ತಿದೆ", ಎಂದು ಬರೆದುಕೊಂಡಿದ್ದಾರೆ.


"ನನಗೆ ಮೊದಲು ಕೈಗೆ ಸಿಕ್ಕಿದ್ದು ದುಂಡು ಆಕಾರದ ಮೇಣದ ಬತ್ತಿ ಮತ್ತು ಅದರಲ್ಲಿ ಬಿಸಿ ಮೇಣ ಇತ್ತು. ನನ್ನ ಅದನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಂಡಾಗ ಬಾಯಿಯಲ್ಲಿ ಬೆಚ್ಚಗಿನ ಸಿಹಿಯಾದ ವೆನಿಲ್ಲಾ ಮೇಣದ ಬತ್ತಿಯ ಮೇಣವನ್ನು ನಾನು ಬಾಯಿಗೆ ಹಾಕಿಕೊಂಡಿರುವುದು ನನ್ನ ಅರಿವಿಗೆ ಬಂದಿಲ್ಲ," ಎಂದು ವ್ಯಕ್ತಿ ಬರೆದಿದ್ದಾರೆ.


"ನಾನು ಅದನ್ನುತಕ್ಷಣವೇ ಹೊರಕ್ಕೆ ಉಗುಳಿದೆ, ಆದರೆ ಅದು ನನ್ನ ಹಲ್ಲುಗಳಿಗೆ ಮತ್ತು ನನ್ನ ಬಾಯಿಯ ಮೇಲ್ಭಾಗಕ್ಕೆ ಅಂಟಿಕೊಂಡಿತ್ತು. ಅದನ್ನೆಲ್ಲಾ ಕಿತ್ತುಹಾಕುವುದು ತುಂಬಾ ಕಿರಿಕಿರಿ ಅನ್ನಿಸಿತು", ಎಂದು ಬರೆದಿದ್ದಾರೆ.


"ನನಗೆ ನಿದ್ದೆ ಮಂಪರಿನಲ್ಲಿ ಏನಾಗುತ್ತಿದೆ ಎಂದು ನನಗೆ ನಿಖರವಾಗಿ ತಿಳಿದಿರಲಿಲ್ಲ, ಆದರೆ ಮೇಣವನ್ನು ಕುಡಿಯುವುದನ್ನು ನಾನು ನೋಡಬೇಕಿತ್ತು ಎಂದು ನಾನು ಬಯಸುತ್ತೇನೆ ಏಕೆಂದರೆ ನನಗೆ ಇದು ಇನ್ನೂ ಅರ್ಥವಾಗುತ್ತಿಲ್ಲ", ಎಂದು ಬರೆದುಕೊಂಡಿದ್ದಾರೆ.


ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವಾರು ಪ್ರತಿಕ್ರಿಯೆಗಳನ್ನು ಇದು ಪಡೆಯುತ್ತಿದೆ.


ಒಬ್ಬ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮಾಷೆ ಮಾಡಿ, "ನಿಮ್ಮ ಬಾಯಿ ಈಗ ಜಲನಿರೋಧಕವಾಗಿರಬೇಕು ನೀವು ಈಗ ನೀರನ್ನು ತುಂಬಾ ವೇಗವಾಗಿ ಕುಡಿಯಬಹುದು" ಎಂದು ಹೇಳಿದರೆ, ಇನ್ನೊಬ್ಬರು "ಓಹ್... ಇದನ್ನು ಓದಿದ ನಂತರ ನಾನು ಇನ್ನೂ ಆಶ್ಚರ್ಯಗೊಂಡಿದ್ದೇನೆ", ಎಂದು ಪ್ರತಿಕ್ರಿಯಿಸಿದ್ದಾರೆ.


ಇನ್ನೊಬ್ಬರು "ಸಿಂಪ್ಸನ್‌ನಿಂದ ಹೋಮರ್ ನಿಮಗೆ ನೆನಪಿದೆಯೇ? ಅವನು ಸಹ ಮೇಣದ ಬತ್ತಿ ಮೇಣವನ್ನು ಕುಡಿದಿದ್ದಾನೆಯೇ?"ಎಂದು ಪ್ರತಿಕ್ರಿಯೆ ನೀಡಿದ್ದಾರೆ.


First published: