Viral News: ರಹಸ್ಯವಾಗಿ ವೀರ್ಯ ಮಾರಾಟ ಮಾಡ್ತಿದ್ದ ಪತಿ; ವಿಷಯ ತಿಳಿದಾಗ ಪತ್ನಿಯ ವರ್ತನೆ ಹೇಗಿತ್ತು ಅಂತ ವಿವರಿಸಿದ ಪತಿ

ಕೆಲವು ವರ್ಷಗಳಿ ಹಿಂದೆ ಹಣ ಸಂಪಾದಿಸಲು ತನ್ನ ವೀರ್ಯವನ್ನು ಮಾರಾಟ ಮಾಡುವ ಕೆಲಸವನ್ನು ಮಾಡಿದ್ದೇನೆ ಎಂದು  ವ್ಯಕ್ತಿ ಹೇಳಿಕೊಂಡಿದ್ದಾನೆ. ಅದು ನನ್ನ ಜೀವನದ ಕಷ್ಟದ ಸಮಯವಾಗಿತ್ತು. ಇದರ ಮೂಲಕವೇ ಸಾವಿರಾರು ರೂ. ಹಣ ಗಳಿಸಿ ಆರ್ಥಿಕವಾಗಿ ಸಬಲನಾಗಿದ್ದೇನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಿನನಿತ್ಯದ ಜೀವನ (Real life) ಮತ್ತು ಸಿನಿಮಾ (Cinema) ಎರಡೂ ಭಿನ್ನ ಅಂತ ಹಲವರು ಹೇಳುತ್ತಾರೆ. ಆದ್ರೆ ಯಾರದ್ದೋ ಕಥೆಯ ಪ್ರೇರಣೆಯಿಂದ ಸಿದ್ಧವಾದ ಸಿನಿಮಾಗಳು ಬಾಕ್ಸ್ ಆಫೀಸ್ (Box Office) ನಲ್ಲಿ ಸಂಚಲನ ಸೃಷ್ಟಿಸಿವೆ. ಸಿನಿಮಾಗಳು  ಜನರ ಜೀವನದ ಒಂದು ಭಾಗವಾಗಿರುತ್ತವೆ. ಚಿತ್ರದ ಯಾವುದೋ ಒಂದು ದೃಶ್ಯ (Scene) ಅಥವಾ ಪಾತ್ರ (Play) ಇನ್ಯಾರಿಗೋ ಹತ್ತಿರವಾಗಿರುತ್ತದೆ. ಅಂತಹ ವಿಶೇಷ ಕಥೆಯೊಂದು ತೆರೆ ಕಂಡ ಬಾಲಿವುಡ್ ಚಿತ್ರ ವಿಕ್ಕಿ ಡೋನರ್ (Vicky Donor). ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ (Ayushmann Khurrana), ವೀರ್ಯ ದಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2012ರಲ್ಲಿ ಬಿಡುಗಡೆಗೊಂಡ ಈ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ಪಾತ್ರದಲ್ಲಿ ಇದ್ದಂತೆ ವ್ಯಕ್ತಿಯೋರ್ವ ತನ್ನ ವೀರ್ಯವನ್ನು ಮಾರಾಟ ಮಾಡುತ್ತಿದ್ದನು. ಆದ್ರೆ ಈ ವಿಷಯ ಪತ್ನಿಗೆ ಗೊತ್ತಾದಾಗ ಆಕೆ ಹೇಗೆ ಪ್ರತಿಕ್ರಿಯಿಸಿದಳು ಎಂಬುದನ್ನು ಪತಿ ಸೋಶಿಯಲ್ ಮೀಡಿ(Social media)ಯಾದಲ್ಲಿ ಹೇಳಿಕೊಂಡಿದ್ದಾನೆ.

ರೆಡ್ಡಿಟ್ ನಲ್ಲಿ ಈ ವ್ಯಕ್ತಿ ತನ್ನ ಕಥೆಯನ್ನು ಹೇಳಿಕೊಂಡಿದ್ದಾನೆ. ಕಷ್ಟದ ದಿನಗಳಲ್ಲಿ ಈ  ವ್ಯಕ್ತಿಗೆ ವೀರ್ಯ ಮಾರಾಟ ಮಾಡೋದು ಅನಿವಾರ್ಯವಾಗಿತ್ತು. ಇದರಿಂದ ಸಾವಿರಾರು ರೂಪಾಯಿ ಹಣ ಸಹ ತನ್ನದಾಗಿಸಿಕೊಂಡಿದ್ದನು. ಆದ್ರೆ ಈ ವಿಷಯವನ್ನು ಪತ್ನಿಗೆ ಹೇಳಿರಲಿಲ್ಲ.

ಉಗ್ರ ರೂಪ ತಾಳಿದ ಪತ್ನಿ

ಒಮ್ಮೆ ಸ್ನೇಹಿತರ ಜೊತೆ ಮಾತನಾಡುತ್ತಾ ಕುಳಿತಾಗ, ತಾನು ವೀರ್ಯ ಮಾರಾಟ ಮಾಡಿರುವ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಈ ವೇಳೆ ಆತನ ಪತ್ನಿಯೂ ಅಲ್ಲೇ ಇದ್ದಳು. ತನ್ನ ಪತಿ ವೀರ್ಯ ಮಾರಾಟ ಮಾಡುತ್ತಿದ್ದವ ವಿಷಯ ಕೇಳಿ ಪತ್ನಿ ಉಗ್ರರೂಪವನ್ನು ತಾಳಿದ್ದಾಳೆ.

ಇದನ್ನೂ ಓದಿ:  Viral Video: ಈತನ ಸೆಲ್ಫಿ ವಿಡಿಯೋದಲ್ಲಿ ಕಾಣಿಸಿದ್ದು ಏನು ಗೊತ್ತಾ? ನೀವೂ ಒಮ್ಮೆ ನೋಡಿ

ಆರ್ಥಿಕ ಸಂಕಷ್ಟದಲ್ಲಿದ್ದಾಗ ವೀರ್ಯ ಮಾರಾಟ

ಕೆಲವು ವರ್ಷಗಳಿ ಹಿಂದೆ ಹಣ ಸಂಪಾದಿಸಲು ತನ್ನ ವೀರ್ಯವನ್ನು ಮಾರಾಟ ಮಾಡುವ ಕೆಲಸವನ್ನು ಮಾಡಿದ್ದೇನೆ ಎಂದು  ವ್ಯಕ್ತಿ ಹೇಳಿಕೊಂಡಿದ್ದಾನೆ. ಅದು ನನ್ನ ಜೀವನದ ಕಷ್ಟದ ಸಮಯವಾಗಿತ್ತು. ಇದರ ಮೂಲಕವೇ ಸಾವಿರಾರು ರೂ. ಹಣ ಗಳಿಸಿ ಆರ್ಥಿಕವಾಗಿ ಸಬಲನಾಗಿದ್ದೇನೆ.

ಇದು ಕೇವಲ ಹಣ ಸಂಪಾದನೆಯ ಮಾರ್ಗವಾಗಿತ್ತು. ಈ ವಿಷಯವನ್ನು ಪತ್ನಿಗೆ ಹೇಳಬಾರದಿತ್ತು. ಆದ್ರೆ ಸ್ನೇಹಿತರ ಜೊತೆಗೆ ಮಾತುಕತೆ ವೇಳೆ ಈ ವಿಷಯ ಬಹಿರಂಗಪಡಿಸದಿದ್ರೆ, ಆಕೆಗೆ ವಿಷಯ ಗೊತ್ತಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ನನ್ನ ಕಾಲೇಜಿನ ಕೊನೆಯ ವರ್ಷದಲ್ಲಿ ಪತ್ನಿಯನ್ನು ಭೇಟಿಯಾದೆ. ಇಬ್ಬರ ನಡುವೆ ಪ್ರೀತಿಯ ಮೊಗ್ಗ ಅರಳಿತು. ಆರು ವರ್ಷದ ಹಿಂದೆ ಇಬ್ಬರೂ ಮದುವೆ ಆಗಿದ್ದೇಬೆ. ನಮಗೆ ಮಕ್ಕಳು ಸಹ ಇವೆ. ಆದರೆ ಒಂದು ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ವೇಳೆ ನನಗೆ ಸಹಾಯ ಮಾಡಿದ್ದು ವೀರ್ಯ ಮಾರಾಟದ ಕೆಲಸ. ಅಂದು ನಾನು ಸುಮಾರು 12 ಸಾವಿರ ರೂ. ಹಣ ಸಂಪಾದಿಸಿದ್ದೆ. ಆದ್ರೆ ಈ ವಿಷಯ ಪತ್ನಿಗೆ ತಿಳಿದಾಗ ಅದು ಇಷ್ಟು ದೊಡ್ಡ ಮಟ್ಟದ ಗಲಾಟೆಗೆ ಕಾರಣ ಆಗುತ್ತೆ ಅತ ತಿಳಿದಿರಲಿಲ್ಲ.

ಇದನ್ನೂ ಓದಿ:  OMG: 12 ವರ್ಷಗಳಿಂದ ಕಲ್ಲು ತಿನ್ನುತ್ತಿರುವ ವ್ಯಕ್ತಿ: ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ!

ಪತಿಯಿಂದ ಮೋಸ ಎಂದು ಮಹಿಳೆ ಆಕ್ರೋಶ

ಇನ್ನೂ ವೀರ್ಯ ಮಾರಾಟದ ವಿಷಯ ತಿಳಿಯುತ್ತಲೇ ಪತಿ ತನಗೆ ಮೋಸ ಮಾಡಿದ್ದಾನೆ ಎಂದು ಪತ್ನಿ ಹೇಳುತ್ತಿದ್ದಾಳೆ. ಆದ್ರೆ ನನಗೆ ಇದರಲ್ಲಿ ಪತ್ನಿಗೆ ಯಾವುದೇ ರೀತಿಯ ಮೋಸ ಮಾಡುವ ಭಾವನೆ ಇರಲಿಲ್ಲ ಎಂದು  ವ್ಯಕ್ತಿ ಹೇಳಿಕೊಂಡಿದ್ದಾನೆ.

ವೀರ್ಯ ದಾನದ ಬಗ್ಗೆ ನೆಟ್ಟಿಗರು ಹೇಳಿದ್ದೇನು?

ಇನ್ನೂ ಈ ಪೋಸ್ಟ್ ಓದಿದ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಗತ್ತು ಬದಲಾಗಿದೆ. ವೀರ್ಯ ದಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ವೈದ್ಯರು ದಾನಿಗಳ ಹೆಸರನ್ನು ರಹಸ್ಯವಾಗಿ ಇರಿಸುತ್ತಾರೆ  ಎಂದು ಹೇಳಿದ್ದಾರೆ. ಓರ್ವ ಮಹಿಳೆ ಕಮೆಂಟ್ ಮಾಡಿ, ನಿಮ್ಮ ಪತ್ನಿಯದ್ದು ಸಹಜ ವರ್ತನೆ. ಇಂತಹ ಸುದ್ದಿ ಕೇಳಿದಾಗ ಶಾಕ್ ಆಗೋದು ನಿಜ. ಮುಂದೊಂದು ದಿನ ಯಾರಾದ್ರೂ ತನ್ನ ಜೈವಿಕ ತಂದೆಯಂತೆ ನಿಮ್ಮನ್ನು ಹುಡುಕಿಕೊಂಡು ಬಂದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
Published by:Mahmadrafik K
First published: