ಮಗನೆಂದುಕೊಂಡಿದ್ದವನು ಚಿಕ್ಕಪ್ಪನಾಗಬೇಕು: ಪತ್ನಿ-ಅಜ್ಜನ ರಹಸ್ಯ DNA ಪರೀಕ್ಷೆಯಲ್ಲಿ ಬಯಲು!

ಡಿಎನ್‌ಎ ಪರೀಕ್ಷೆಯ ನಂತರ, ಈಗ ಸತ್ಯವು ಹೊರಬಂದಿದೆ. ತಾನು ಎಂದಿಗೂ ತನ್ನ ಮಗನನ್ನು ಮೊದಲಿನ ರೀತಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

ಫೈಲ್​ ಫೋಟೋ

ಫೈಲ್​ ಫೋಟೋ

 • Share this:

  ಹುಟ್ಟಿದಾಗಿನಿಂದ ಸಾಕಿ, ಬೆಳೆಸಿದ ಮಗುವಿನ ನಿಜವಾದ ತಂದೆ ತಾನಲ್ಲ ಎಂಬ ಕಹಿ ಸತ್ಯ ಗೊತ್ತಾದರೆ ಒಬ್ಬ ವ್ಯಕ್ತಿಗೆ ಹೇಗಾಗುತ್ತದೆ ಅಲ್ಲವೇ..? ಇದೇ ರೀತಿ ಇಲ್ಲೊಬ್ಬ ವ್ಯಕ್ತಿಗೂ ಆಗಿದೆ. ಈ ಸುದ್ದಿ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆಯಲ್ಲದೇ,   ಸಂಬಂಧಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವ ವಿಲಕ್ಷಣ ಕಥೆ ಇದು. ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ  ವ್ಯಕ್ತಿ,  ತನ್ನ ಜೀವನದಲ್ಲಿ ನಡೆದಿರುವ ಅತ್ಯಂತ ಭೀಕರ ಕಹಿ ಸತ್ಯವನ್ನು ಬಹಿರಂಗಪಡಿಸಿ ದು:ಖವನ್ನು ತೋಡಿಕೊಂಡಿದ್ದಾರೆ. ಇಷ್ಟು ವರ್ಷಗಳಿಂದ ತಾನು ತನ್ನ ಮಗನೆಂದು ನಂಬಿದ್ದ ಹುಡುಗ ತನಗೆ ಚಿಕ್ಕಪ್ಪನಾಗಬೇಕು ಎಂಬುದನ್ನು ಆತ ಕಂಡುಕೊಂಡಿರುವ ಬಗ್ಗೆ ತನ್ನ ನೋವು ಹೊರಹಾಕಿದ್ದಾನೆ.


  ಪ್ರಶ್ನಾರ್ಹ ವ್ಯಕ್ತಿಯ ಹೆಸರು ಗೊತ್ತಿಲ್ಲ. ಆದರೆ, @stacks1400 ಎಂಬ ಟಿಕ್‌ಟಾಕ್‌ ಯೂಸರ್‌ ಹ್ಯಾಂಡಲ್‌ ಅನ್ನು ಹೊಂದಿದ್ದಾನೆ. ಈ ವಿಡಿಯೋದಲ್ಲಿ ಆತ ಅಳುತ್ತಿದ್ದು, ಮತ್ತು ತನ್ನ ಗೆಳತಿ ತನ್ನ ಅಜ್ಜನೊಂದಿಗೆ ಹೇಗೆ ಸಂಬಂಧ ಹೊಂದಿದ್ದಳು ಮತ್ತು ಗರ್ಭಿಣಿಯಾದಳು ಎಂದು ತನ್ನ ವೀಕ್ಷಕರಿಗೆ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ಹೇಳಿಕೊಂಡಂತೆ, ತನಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಡಿಎನ್‌ಎ ಪರೀಕ್ಷೆಯ ನಂತರ, ಈಗ ಸತ್ಯವು ಹೊರಬಂದಿದೆ. ತಾನು ಎಂದಿಗೂ ತನ್ನ ಮಗನನ್ನು ಮೊದಲಿನ ರೀತಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.


  ಇನ್ನು, ಈ ವಿಡಿಯೋ ಅಪ್ಲೋಡ್‌ ಆದ ಬಳಿಕ ವೈರಲ್‌ ಆಗಿದ್ದು, ಬಳಕೆದಾರರು ಆತನ ಟಿಕ್‌ಟಾಕ್‌ ಖಾತೆಯಲ್ಲಿ ಆತನನ್ನು ಸಮಾಧಾನಪಡಿಸಿದ್ದಾರೆ. ಪ್ರತಿ ಸುರಂಗದ ಕೊನೆಯಲ್ಲಿ ಬೆಳಕು ಇರುವುದರಿಂದ ಧೈರ್ಯವನ್ನು ಕಳೆದುಕೊಳ್ಳದಂತೆ ಕೆಲವರು ಈ ವ್ಯಕ್ತಿಗೆ ಸಲಹೆ ನೀಡಿದ್ದು, ಅಂತಹ ಗೆಳತಿ ಪಡೆಯಲು ನೀವು ಅರ್ಹರಲ್ಲ ಎಂದು ಹಲವರು ಹೇಳಿದ್ದಾರೆ.


  ಇದನ್ನೂ ಓದಿ: 30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?

  ಈ ವಿಡಿಯೋದ ಕತೆ ಇಷ್ಟಾದರೆ, ಇದಾದ ನಂತರ, ಅದೇ ವ್ಯಕ್ತಿ ಮತ್ತೊಂದು ವಿಡಿಯೋ ಅಪ್ಲೋಡ್‌ ಮಾಡಿದ್ದಾನೆ. ತನ್ನ ಗೆಳತಿಯ ಮೋಸಕ್ಕಾಗಿ ಮಗುವಿಗೆ ಎಂದಿಗೂ ಶಿಕ್ಷೆ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಈ ವಿಡಿಯೋದ ಮೂಲಕ ತೆಗೆದುಕೊಂಡಿದ್ದಾನೆ. ಮಗುವಿನ ಯಾವುದೇ ತಪ್ಪಿಲ್ಲದ ಕಾರಣ, ಆ ಮಗುವನ್ನು ಅದೇ ಪ್ರೀತಿ ಮತ್ತು ಕಾಳಜಿಯಿಂದ ಚಿಕಿತ್ಸೆ ನೀಡಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋಗೆ ಹಲವರು ಬೆಂಬಲಿಸುವ ಕಮೆಂಟ್‌ಗಳನ್ನು ಮಾಡಿದ್ದು, ಆತನಿಗೆ ದೃಢವಾಗಿರಲು ಮತ್ತು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಹೇಳಿದರು.

  ತಾಯಿ ಮತ್ತು ಗಂಡನ ನಡುವೆ ಅಕ್ರಮ ಸಂಬಂಧ..!
  ಈ ಮೇಲಿನ ಕತೆ ಕೇಳಿದ್ರಲ್ಲ, ಇದು ಸಹ ನಿಕಟ ರಕ್ತಸಂಬಂಧಿ ಗುಂಪಿನ ನಡುವಿನ ಅಕ್ರಮ ಸಂಬಂಧದ ಮತ್ತೊಂದು ಪ್ರಕರಣ. ಅಳಿಯನೊಂದಿಗೆ ಮಹಿಳೆಯ ಅಕ್ರಮ ಸಂಬಂಧವನ್ನು ಅದೇ ಮಹಿಳೆಯ ಮೊಮ್ಮಗ ಬಹಿರಂಗಪಡಿಸಿದ್ದಾನೆ. ಜಿಮಿ ಹೆಸರಿನ ಟಿಕ್‌ಟಾಕ್‌ ಸೆಲೆಬ್ರಿಟಿ ತನ್ನ ತಾಯಿ ಮತ್ತು ಗಂಡನ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾಳೆ. ಕಳೆದ ಐದು ವರ್ಷಗಳಿಂದ ತನ್ನ ತಾಯಿ ರಹಸ್ಯವಾಗಿ ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಜನಪ್ರಿಯ ಟಿಕ್‌ಟಾಕ್‌ ಸ್ಟಾರ್‌ ಹೇಳಿಕೊಂಡಿದ್ದಾಳೆ. ಅಲ್ಲದೆ, 2017 ರಲ್ಲಿ ತಾನು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತನ್ನ ಪತಿ ಹೇಳಿದ ಬಳಿಕ ತಾನು ಆತನಿಗೆ ವಿಚ್ಛೇದನ ನೀಡಿದೆ. ಆದರೆ, ಆ ಮಹಿಳೆ ತನ್ನ ಸ್ವಂತ ತಾಯಿ ಎಂಬ ಯಾವುದೇ ಅರಿವು ತನಗಿರಲಿಲ್ಲ ಎಂದು ಈ ಟಿಕ್‌ಟಾಕ್‌ ಸೆಲೆಬ್ರಿಟಿ ಬೇಸರ ವ್ಯಕ್ತಪಡಿಸಿದ್ದಾಳೆ.
  Published by:Kavya V
  First published: