• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ತಾನೇ ತಯಾರಿಸಿದ ಹೆಲಿಕಾಪ್ಟರ್ ರೆಕ್ಕೆ ಬಡಿದು ಸಾವನ್ನಪ್ಪಿದ, ದುರಾದೃಷ್ಟ ಅಂದ್ರೆ ಇದೇ !

ತಾನೇ ತಯಾರಿಸಿದ ಹೆಲಿಕಾಪ್ಟರ್ ರೆಕ್ಕೆ ಬಡಿದು ಸಾವನ್ನಪ್ಪಿದ, ದುರಾದೃಷ್ಟ ಅಂದ್ರೆ ಇದೇ !

ಹೆಲಿಕಾಪ್ಟರ್

ಹೆಲಿಕಾಪ್ಟರ್

ಮಹಾರಾಷ್ಟ್ರದ ಮಹಗಾಂವ್ ತಾಲೂಕಿನ ಫುಲ್‍ಸಾವಂಗಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತನ ಹೆಸರು ಶೇಖ್ ಇಬ್ರಾಹಿಂ ಮತ್ತು ಆತನ ವಯಸ್ಸು 24 ವರ್ಷ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಶೇಖ್ ಇಬ್ರಾಹಿಂ ತನ್ನ ವರ್ಕ್‍ಶಾಪ್‍ನಲ್ಲಿ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ ಬ್ಲೇಡ್ ತಲೆಯ ಮೇಲೆ ಬಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಇದು ಯಾವುದೋ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸ್ಟಂಟ್ ಮ್ಯಾನ್ ಜೊತೆ ಸಂಭವಿಸಿದ ಘಟನೆಯಲ್ಲ ಅಥವಾ ಯಾವುದೋ ಹಾಳಾಗಿರುವ ಹೆಲಿಕಾಪ್ಟರ್ ಕೆಳಗೆ ನಿಂತಾಗ ಆಗಿರುವ ಘಟನೆಯೂ ಇದಲ್ಲ. ದುರಾದೃಷ್ಟವಶಾತ್, ಆ ವ್ಯಕ್ತಿ ಸಾವನ್ನಪ್ಪಿರುವುದು ತಾನೇ ನಿರ್ಮಿಸಿರುವ ಹೆಲಿಕಾಪ್ಟರ್ ಬ್ಲೇಡ್ ತಲೆ ಮೇಲೆ ಬಿದ್ದ ಕಾರಣದಿಂದ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ಹೆಲಿಕಾಪ್ಟರ್‌ನಲ್ಲಿನ ದೋಷ ಪರೀಕ್ಷಿಸಲು ಪ್ರಯತ್ನ ನಡೆಸುತ್ತಿದ್ದಾಗ ದುರಂತ ಸಂಭವಿಸಿದೆ.


ಮಹಾರಾಷ್ಟ್ರದ ಮಹಗಾಂವ್ ತಾಲೂಕಿನ ಫುಲ್‍ಸಾವಂಗಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತನ ಹೆಸರು ಶೇಖ್ ಇಬ್ರಾಹಿಂ ಮತ್ತು ಆತನ ವಯಸ್ಸು 24 ವರ್ಷ. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಶೇಖ್ ಇಬ್ರಾಹಿಂ ತನ್ನ ವರ್ಕ್‍ಶಾಪ್‍ನಲ್ಲಿ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಮೃತ ಶೇಖ್ ಇಬ್ರಾಹಿಂ, ಕಳೆದ ಎರಡು ವರ್ಷಗಳಿಂದ ತಾನೇ ಸ್ವತಃ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿತ್ತಿದ್ದನು. ಬುದ್ಧಿವಂತನಾಗಿದ್ದ , ಗ್ರಾಮದಲ್ಲಿ ಸ್ವಂತ ಹೆಲಿಕಾಪ್ಟರ್ ನಿರ್ಮಾಣಕ್ಕೆ ಕೈ ಹಾಕಿದ್ದ ಕಾರಣಕ್ಕೆ ಆತನನ್ನು ಕೆಲವರು ಫುಲ್‍ಸಾವಂಗಿ ಗ್ರಾಮದ ರಾಂಚೋ ಎಂದು ಕರೆಯುತ್ತಿದ್ದರು. ಹೆಲಿಕಾಪ್ಟರ್‌ನ ಎಂಜಿನ್ 750 ಎಎಂಪಿಎಸ್ ಇತ್ತು. ಈ ಮೊದಲು 8 ಬಾರಿ ಹೆಲಿಕಾಪ್ಟರ್‌ ಚಾಲನೆ ಪ್ರಯೋಗ ಮಾಡಿದ್ದರೂ, ಅದು ವಿಫಲವಾಗಿತ್ತು.


ಇದೇ ಆಗಸ್ಟ್ 15ಕ್ಕೆ ಹೆಲಿಕಾಪ್ಟರ್ ಹಾರಿಸಬೇಕು ಎಂಬುವುದು ಆತನ ಉದ್ದೇಶವಾಗಿತ್ತು, ಆ ಕಾರಣದಿಂದ ಆಗಸ್ಟ್ 10ಕ್ಕೆ ಅದರ ಟೆಸ್ಟಿಂಗ್ ನಡೆಸಲು ಹೊರಟಿದ್ದ ಎನ್ನಲಾಗುತ್ತಿದೆ. ಸದ್ಯಕ್ಕೆ ದೊರಕಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಶೇಖ್ ಇಬ್ರಾಹಿಂ ಮೆಶಿನ್‍ನ ಟೆಸ್ಟಿಂಗ್ ನಡೆಸುತ್ತಿದ್ದ. ಹೆಲಿಕಾಪ್ಟರನ್ನು ಹಾರಿಸಲು ಚಾಲನೆ ಮಾಡುತ್ತಿದ್ದಂತೆ, ಅದರಲ್ಲಿ ಏನೋ ಒಂದು ದೋಷ ಕಂಡು ಬಂತು ಹಾಗು ತಿರುಗುತ್ತಿದ್ದ ಹೆಲಿಕಾಪ್ಟರ್‌ನ ಫ್ಯಾನ್ ತುಂಡಾಯಿತು. ಆಗ ಬ್ಲೇಡ್ ಮುರಿದು ಹಾರಿ ಬಂದು ಅವನ ತಲೆಯ ಮೇಲೆ ಬಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಹೆಲಿಕಾಫ್ಟರ್ ಬ್ಲೇಡ್ ತಲೆಯ ಮೇಲೆ ಬಿದ್ದ ಪರಿಣಾಮವಾಗಿ ಶೇಕ್ ಇಬ್ರಾಹಿಂ ಅತ್ಯಂತ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆ ನಡೆದಾಗ ಸ್ಥಳದಲ್ಲಿ ಇದ್ದವರು ಕೂಡಲೇ ಶೇಖ್ ಇಬ್ರಾಹಿಂನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೆ ಶೇಖ್ ಇಬ್ರಾಹಿಂ ಸಾವನ್ನಪ್ಪಿದ್ದಾನೆ, ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೇಖ್ ಇಬ್ರಾಹಿಂ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದ. ಆ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲೂ ಸುದ್ದಿ ಮಾಡುತ್ತಿದ್ದು, ಹ್ರದಯವಿದ್ರಾವಕವಾಗಿದೆ.

First published: