• Home
  • »
  • News
  • »
  • trend
  • »
  • YouTube ನೋಡಿ ಮನೆಯಲ್ಲೇ ಔಷಧಿ ಮಾಡ್ಕೋತೀರಾ? ಇಲ್ಲಿ ನೋಡಿ ವ್ಯಕ್ತಿಯೊಬ್ಬನ ಪ್ರಾಣನೇ ಹೋಯ್ತು!

YouTube ನೋಡಿ ಮನೆಯಲ್ಲೇ ಔಷಧಿ ಮಾಡ್ಕೋತೀರಾ? ಇಲ್ಲಿ ನೋಡಿ ವ್ಯಕ್ತಿಯೊಬ್ಬನ ಪ್ರಾಣನೇ ಹೋಯ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೂಟ್ಯೂಬ್ (YouTube) ನೋಡಿ, ತನಗೆ ತಾನೇ ಔಷದಿ ಮಾಡಿ ಕುಡಿದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಕೈ ನೋವು ನಿವಾರಣೆಗಾಗಿ ಸೋರೆಕಾಯಿಯ ಜ್ಯೂಸ್ (bottle gourd juice) ಕುಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ.

  • News18 Kannada
  • Last Updated :
  • Madhya Pradesh, India
  • Share this:

ಮಧ್ಯ ಪ್ರದೇಶ: ಏನಾದ್ರೂ ಆರೋಗ್ಯ ಸಮಸ್ಯೆ (health problem) ಆದ್ರೆ ಹಲವರು ಡಾಕ್ಟರ್ (Doctors) ಬಳಿಗೆ ಹೋಗದೇ, ತಾವೇ ಸ್ವಯಂ ವೈದ್ಯ (self-medicate) ಮಾಡಿಕೊಳ್ಳುತ್ತಾರೆ. ಹೀಗೆ ಯೂಟ್ಯೂಬ್ (YouTube) ನೋಡಿ, ತನಗೆ ತಾನೇ ಔಷದಿ ಮಾಡಿ ಕುಡಿದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಕೈ ನೋವು ನಿವಾರಣೆಗಾಗಿ ಸೋರೆಕಾಯಿಯ ಜ್ಯೂಸ್ (bottle gourd juice) ಕುಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ. ಅಪಘಾತದ (Accident) ಕಾರಣ ಅವರ ಕೈಯೊಂದರಲ್ಲಿ ನೋವು ಕಾಣಿಸಿಕೊಂಡು, ಅವರು ತೊಂದರೆಗೆ ಒಳಗಾಗಿದ್ದರು. ಇದರ ಔಷಧಿಗಾಗಿ ಯೂಟ್ಯೂಬ್‌ನಲ್ಲಿ ಹುಡುಕಿದರು, ನಂತರ ಅವರು ಸೋರೆಕಾಯಿ ಜ್ಯೂಸ್ ಕುಡಿದರೆ ನೋವು ಕಡಿಮೆ ಆಗುತ್ತದೆ ಎನ್ನುವ ಯೂಟ್ಯೂಬ್ ವಿಡಿಯೋ ನೋಡಿದ್ರು. ಬಳಿಕ ಅದನ್ನು ಸಂಗ್ರಹಿಸಿ ಅದರ ರಸವನ್ನು ಸೇವಿಸಿದರು. ಇದಾದ ಬಳಿಕ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.


ಅಪಘಾತದಿಂದ ನಿರಂತರ ಕೈ ನೋವು


ಮೃತನನ್ನು ಸ್ವರ್ಣಬಾಗ್ ಕಾಲೋನಿ ನಿವಾಸಿ, 30 ವರ್ಷದ ಧರ್ಮೇಂದ್ರ ಕೊರೋಲೆ ಎಂದು ಗುರುತಿಸಲಾಗಿದೆ. ಧರ್ಮೇಂದ್ರ ಖಾಂಡ್ವಾ ಮೂಲದವರಾಗಿದ್ದು, ನಗರದಲ್ಲಿ ಚಾಲಕರಾಗಿ ಉದ್ಯೋಗದಲ್ಲಿದ್ದರು. ಧರ್ಮೇಂದ್ರ ಕೆಲವು ವರ್ಷಗಳಿಂದ ನಗರದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಧರ್ಮೇಂದ್ರ ಅವರಿಗೆ ಆ್ಯಕ್ಸಿಡೆಂಟ್ ಆಗಿ, ಕೈ ನೋವಿನಿಂದ ಬಳಲುತ್ತಿದ್ದರು.


ಮೃತ ವ್ಯಕ್ತಿ


ಯೂಟ್ಯೂಬ್‌ನಲ್ಲಿ ಸೋರೆಕಾಯಿ ಜ್ಯೂಸ್‌ನ ವಿಡಿಯೋ ವೀಕ್ಷಣೆ


ಕೈ ನೋವಿಗೆ ವಿವಿಧೆಡೆ ಚಿಕಿತ್ಸೆ ಪಡೆದಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ನಂತರ ನೋವಿಗೆ ಸಾಧ್ಯವಿರುವ ಔಷಧಿಗಾಗಿ ಯೂಟ್ಯೂಬ್‌ನಲ್ಲಿ ಹುಡುಕಿದಾಗ ಕಾಡಿನಲ್ಲಿ ಬೆಳೆದ ಸೋರೆಕಾಯಿ ನೋವನ್ನು ಕಡಿಮೆ ಮಾಡುತ್ತದೆ ಎಂದು ವಿಡಿಯೋ ಒಂದರಿಂದ ತಿಳಿದುಕೊಂಡರು.


ಇದನ್ನೂ ಓದಿ: Boy Death: ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು 5 ವರ್ಷದ ಬಾಲಕ ಸಾವು! ಸಮಾರಂಭ ನಡೆಯುತ್ತಿದ್ದ ಮನೆಯಲ್ಲಿ ಸೂತಕ


ಸೋರೆಕಾಯಿ ಜ್ಯೂಸ್ ಮಾಡಿದ ವ್ಯಕ್ತಿ


ಬಳಿಕ ಕಾಡು ಸೋರೆಕಾಯಿ ಬಗ್ಗೆ ಮಾಹಿತಿ ಸಂಗ್ರಹಿಸಿ ಯಾವುದೋ ಮೂಲದಿಂದ ಅದನ್ನು ಸಂಗ್ರಹಿಸಿದರು. ಬಳಿಕ ಯೂಟ್ಯೂಬ್‌ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್ ಮಾಡುವುದನ್ನು ತಿಳಿದು, ಅದರಂತೆ ಮಾಡಿದ್ದಾರೆ.


ಜ್ಯೂಸ್ ಕುಡಿದ ಬಳಿಕ ವಿಪರೀತ ವಾಂತಿ


ಸೋರೆಕಾಯಿ ಜ್ಯೂಸ್ ಮಾಡಿಕೊಂಡು ಧರ್ಮೇಂದ್ರ ಕುಡಿದಿದ್ದಾರೆ ಎನ್ನಲಾಗಿದೆ. ಬಳಿಕ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲಾಗಲಿಲ್ಲ.


ಪೊಲೀಸರಿಂದ ತನಿಖೆ


ಧರ್ಮೇಂದ್ರ ಶವ ಪರೀಕ್ಷೆ ವರದಿ ಬಂದ ನಂತರವಷ್ಟೇ ಅವರ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.  ಅವರ ಕುಟುಂಬ ಸದಸ್ಯರ ಹೇಳಿಕೆಯನ್ನೂ ಪೊಲೀಸರು ಪಡೆದು, ತನಿಖೆ ಮುಂದುವರೆಸಿದ್ದಾರೆ.


 ಬಿಸಿ ಸಾಂಬಾರ್‌ ಪಾತ್ರೆಯಲ್ಲಿ ಬಿದ್ದು 5 ವರ್ಷದ ಬಾಲಕ ಸಾವು! 


ಉತ್ತರ ಪ್ರದೇಶದ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು (Incident) ನಡೆದಿದೆ. ಬಿಸಿ ದಾಲ್ (Hot Dal) ಇಡಲಾಗಿದ್ದ ಪಾತ್ರೆಗೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟ (Boy Death) ದಾರುಣ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಅಮ್ರೋಹಾದ ಕರನ್‌ ಪುರ್ ಸುತಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಸಮಾರಂಭದ ವೇಳೆಯೇ ಬಾಲಕ ಸಾವು!


ಮಂಗಳವಾರ ಬೆಳಗ್ಗೆ ಮುಂಡನ ಕಾರ್ಯಕ್ರಮದಲ್ಲಿ ಹುಡುಗ ಆಟವಾಡುತ್ತಾ ಓಡಾಡಿಕೊಂಡಿದ್ದ. ಆದರೆ ಕೆಲವೇ ಗಂಟೆಗಳಲ್ಲಿ ಬಾಲಕ ಶವವಾಗಿದ್ದಾನೆ. ಸುತ್ತಲೂ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಮಗ್ನರಾಗಿದ್ದವರಿಗೆ ಬಾಲಕನ ಸಾವು ಶೋಕದಲ್ಲಿ ಮುಳುಗಿಸಿದೆ. ಆಟವಾಡುತ್ತಾ ಬಂದಿದ್ದ ಬಾಲಕ ಆಕಸ್ಮಿಕವಾಗಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.


ಇದನ್ನೂ ಓದಿ: China Mosquitos: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


ಮೃತ ಬಾಲಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವನು ದಾರಿಯಲ್ಲಿ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ.

Published by:Annappa Achari
First published: