Viral Video: ಕೆಲ್ಸಕ್ಕೆ ಬರ್ಬೇಡಾ ಅಂದಿದ್ದಕ್ಕೆ ಬಾಸ್ ಮನೆಯೇ ಉಡೀಸ್! ಹೀಗಾ ಸೇಡು ತೀರಿಸಿಕೊಳ್ಳೋದು?

ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಮತ್ತು ಯಾವುದೇ ಕಾರಣ ನೀಡದೆ ಅವರನ್ನು ‘ನಾಳೆಯಿಂದ ಕೆಲಸಕ್ಕೆ ಬರಬೇಡಿ’ ಅಂತ ನಿಷ್ಠುರವಾಗಿ ಹೇಳಿ ಕೆಲಸದಿಂದ ತೆಗೆದು ಹಾಕುವುದು ಬಹುತೇಕರಿಗೆ ತುಂಬಾನೇ ಕೋಪವನ್ನು ತರಿಸುತ್ತದೆ ಎಂದು ಹೇಳಬಹುದು. ಇಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕ್ಕಿದ್ದಕ್ಕೆ ತನ್ನ ಉದ್ಯೋಗದಾತನ ಮೇಲೆ ಕೋಪ ಮಾಡಿಕೊಂಡು ಎಂತಹ ಕೆಲಸ ಮಾಡಿ ಹೋಗಿದ್ದಾನೆ ನೋಡಿ. 

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನೆ ನಾಶ ಮಾಡಿದ ವ್ಯಕ್ತಿ

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನೆ ನಾಶ ಮಾಡಿದ ವ್ಯಕ್ತಿ

  • Share this:
ಕೆಲವೊಮ್ಮೆ ಹೊಟ್ಟೆ ಪಾಡಿಗಾಗಿ ಯಾವುದೋ ಚಿಕ್ಕ ಪುಟ್ಟ ಕೆಲಸಗಳನ್ನು (Work) ಮಾಡುತ್ತಾ, ಅದರಿಂದ ಬರುವ ಅಷ್ಟೋ ಇಷ್ಟೋ ಸಂಬಳದಿಂದ (Salary) ಮನೆ ನಡೆಯುತ್ತಿರುತ್ತದೆ. ಆದರೆ ಅದಕ್ಕೂ ಕಲ್ಲು ಹಾಕುವ ಜನರು ಈಗಂತೂ ತುಂಬಾನೇ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಇದ್ದಕ್ಕಿದ್ದಂತೆ ಉದ್ಯೋಗಿಗಳನ್ನು (Employees) ಕೆಲಸದಿಂದ ತೆಗೆದು ಹಾಕುವುದು ಮತ್ತು ಯಾವುದೇ ಕಾರಣ ನೀಡದೆ ಅವರನ್ನು ‘ನಾಳೆಯಿಂದ ಕೆಲಸಕ್ಕೆ ಬರಬೇಡಿ’ ಅಂತ ನಿಷ್ಠುರವಾಗಿ ಹೇಳಿ ಕೆಲಸದಿಂದ ತೆಗೆದು ಹಾಕುವುದು ಬಹುತೇಕರಿಗೆ ತುಂಬಾನೇ ಕೋಪವನ್ನು ತರಿಸುತ್ತದೆ ಎಂದು ಹೇಳಬಹುದು. ಇಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕ್ಕಿದ್ದಕ್ಕೆ ತನ್ನ ಉದ್ಯೋಗದಾತನ ಮೇಲೆ ಕೋಪ ಮಾಡಿಕೊಂಡು ಎಂತಹ ಕೆಲಸ ಮಾಡಿ ಹೋಗಿದ್ದಾನೆ ನೋಡಿ.

ಕೆಲಸದಿಂದ ತೆಗೆದು ಹಾಕಿದ ನಂತರ ಆ ವ್ಯಕ್ತಿಯು ಒಂದು  ಬುಲ್ಡೋಜರ್ ಅನ್ನು ಬಳಸಿ ಅಲ್ಲೇ ಇರುವಂತಹ ಒಂದು ಐಷಾರಾಮಿ ಮನೆಯನ್ನು ನಾಶಪಡಿಸಿದ್ದಾನೆ.

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಐಷಾರಾಮಿ ಮನೆಯನ್ನು ನಾಶಪಡಿಸಿದ ವ್ಯಕ್ತಿ
ಇಷ್ಟೇ ಅಲ್ಲದೆ ಈ ನಾಶಪಡಿಸುವುದನ್ನು ಚಿತ್ರೀಕರಿಸಲಾಗಿದೆ. ನಂತರ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಅತೃಪ್ತ ಮಾಜಿ ಉದ್ಯೋಗಿಯು ಈ ಬುಲ್ಡೋಜರ್ ನ ಚಾಲಕನ ಆಸನದಲ್ಲಿ ಕೂತು ಅದನ್ನು ನಿಯಂತ್ರಿಸುವುದನ್ನು ಮತ್ತು ಕೆನಡಾದ ಕ್ಯಾಲ್ಗರಿಯ ನದಿಯ ದಡದಲ್ಲಿರುವ ಐಷಾರಾಮಿ ಮನೆಗಳನ್ನು ಧ್ವಂಸಗೊಳಿಸುವುದನ್ನು ನೋಡಬಹುದಾಗಿದೆ.

ಇದನ್ನೂ ಓದಿ: SBI Assistant Manager: ಕಸ ಗುಡಿಸುವಾಕೆ SBI ಅಸಿಸ್ಟೆಂಟ್ ಮ್ಯಾನೇಜರ್ ಆದ ಕಥೆ!

ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಮೊದಲು ಆಘಾತಕ್ಕೊಳಗಾದ ಪ್ರೇಕ್ಷಕರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಟ್ವಿಟರ್ ಪೋಸ್ಟ್ ನ ಶೀರ್ಷಿಕೆಯಲ್ಲಿ "ನೀವು ಇದನ್ನು ಮಾಡಲು ಸಾಧ್ಯವಿಲ್ಲ. ನಮ್ಮ ಸರೋವರದ ಮನೆಗಳನ್ನು ಒಬ್ಬ ಅತೃಪ್ತ ಮತ್ತು ಕೆಲಸದಿಂದ ತೆಗೆದು ಹಾಕಲ್ಪಟ್ಟ ಉದ್ಯೋಗಿಯು ಉತ್ಖನನ ಯಂತ್ರದಿಂದ ಇಡೀ ಮನೆಯನ್ನು ನಾಶಪಡಿಸಿದನು" ಎಂದು ಬರೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮನೆ ನಾಶ ಮಾಡುವ ವಿಡಿಯೋ
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗಿನಿಂದಲೂ ಈ ವಿಡಿಯೋ ಇಂಟರ್ನೆಟ್ ನಲ್ಲಿ ತುಂಬಾನೇ ವೈರಲ್ ಆಗಿದೆ. ಇದು 2,74,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಹಲವಾರು ಇಂಟರ್ನೆಟ್ ಬಳಕೆದಾರರು ತಮ್ಮ ಆಲೋಚನೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ."ಅಂತಿಮವಾಗಿ ದುಡಿಯುವ ವರ್ಗದ ಜನರು ತಮ್ಮ ಕೋಪವನ್ನು ಬಹಿರಂಗಪಡಿಸಲು ಪ್ರಾರಂಭಿಸಿದ್ದಾರೆ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ತಮಾಷೆಯಾಗಿ "ಈ ವ್ಯಕ್ತಿಯ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನಿಮ್ಮಲ್ಲಿದ್ದರೆ, ಅದರಿಂದ ನೀವು ಏನು ಮಾಡುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

ವ್ಯಕ್ತಿಯನ್ನು ಬಂಧಿಸಿದ ಪೊಲೀಸರು 
ಏತನ್ಮಧ್ಯೆ, ಡೈಲಿ ಸ್ಟಾರ್ ಪ್ರಕಾರ, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ 59 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯ ವಿರುದ್ಧ 3,906 ಡಾಲರ್ ಗೂ ಹೆಚ್ಚು ಮೊತ್ತದ ಆಸ್ತಿ ನಾಶ ಪಡಿಸಿದ ಆರೋಪವನ್ನು ಹೊರಿಸಲಾಗಿದೆ. ಈ ಘಟನೆಯ ಬಗ್ಗೆ ತನಗೆ ತಿಳಿದಿದೆ ಮತ್ತು ಒಂದಕ್ಕಿಂತ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮನೆಯ ಮಾಲೀಕ ಜಿಯೋರ್ಡಿ ನ್ಯೂಲ್ಯಾಂಡ್ಸ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:  Russia Ukraine War: ಉಕ್ರೇನ್ ಕೃಷಿ ಭೂಮಿ ಸುಟ್ಟುಹಾಕಿದ ರಷ್ಯಾ! ಬೆಂಕಿ ನಂದಿಸಲು ರೈತರ ಪರದಾಟ

ಪ್ರತ್ಯೇಕವಾಗಿ, ಸ್ಥಳೀಯ ಮಾಧ್ಯಮ ಸಂಸ್ಥೆ ಕ್ಯಾಲ್ಗರಿ ಹೆರಾಲ್ಡ್ ನೊಂದಿಗೆ ಮಾತನಾಡಿದ ಜಿಯೋರ್ಡಿ ಅವರು "ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಇದು ಒಳ್ಳೆಯ ವಿಷಯ. ಏನಾಯಿತು ಎಂಬುದು ಬಹುತೇಕ ಅತಿ ವಾಸ್ತವಿಕವಾಗಿತ್ತು. ಇದು ಒಂದು ಕಾಲ್ಪನಿಕ ಕಥೆಯಂತಿದೆ" ಎಂದು ಹೇಳಿದರು.

ಜಿಯೋರ್ಡಿ ಅವರು ಇದೊಂದು ಆಘಾತಕಾರಿ ಘಟನೆ ಎಂದು ಹೇಳಿದರು ಮತ್ತು ಈಗಾಗಲೇ ನಾಶಪಡಿಸಿದ ಮನೆಯ ರಿಪೇರಿ ಕೆಲಸಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಿದರು. 59 ವರ್ಷದ ಮಾಜಿ ಉದ್ಯೋಗಿ ಈಗ ನಂತರದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಔಟ್ಲೆಟ್ ವರದಿ ಮಾಡಿದೆ.
Published by:Ashwini Prabhu
First published: