ಕೊರೊನಾ (Corona Virus) ಕಾಣಿಸಿಕೊಂಡ ಕ್ಷಣದಿಂದ ಜನರು ಹೊರಗಿನ ಆಹಾರ (Food) ಸೇವಿಸೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಪಸರಿಸುವಿಕೆ ಪ್ರಮಾಣ ತಗ್ಗಿ ದೇಶ ಸಹಜ ಸ್ಥಿತಿಗೆ ಮರಳಿದ್ರೂ, ಎಷ್ಟೋ ಜನ ಹೊರಗಿನ ತಿಂಡಿ ಸೇವಿಸಲು ಒಂದು ಕ್ಷಣ ಯೋಚನೆ ಮಾಡುತ್ತಾರೆ. ಇನ್ನು ಕೆಲ ಆಹಾರ ಪ್ರಿಯರ ಸ್ವಚ್ಛತೆ ಇರೋ ಹೋಟೆಲ್ (hotel) ಗಳನ್ನು ಹುಡುಕಿಕೊಂಡು ಹೋಗುತ್ತಾರೆ.ಇದಾಗಿಯೂ ಕೆಲವರು ರಸ್ತೆ ಬದಿಯ ಪಾನಿಪುರಿ (Panipuri) ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಆ ಸಮಸ್ಯೆಗೂ ಮಾರಾಟಗಾರರು ಪರಿಹಾರ ಕಂಡು ಕೊಂಡಿದ್ದಾರೆ. ಅದಕ್ಕಾಗಿಯೇ ಹೊಸ ಮಷೀನ್ ಸಹ ತಂದಿದ್ದಾರೆ. ಈ ಮಷಿನ್ ಜೊತೆಗೆ ರೊಬೋಟ್ ಸಹ ಇದೆ. ಸದ್ಯ ಈ ಪಾನಿಪುರಿ ಯಂತ್ರದ ವಿಡಿಯೋ ವೈರಲ್ ಆಗುತ್ತಿದೆ.
ಈಶಾನ್ಯ ಭಾರತದಲ್ಲಿ ಈ ಪಾನಿಪುರಿ ಯಂತ್ರ ಫೇಮಸ್ ಆಗಿದೆ. ರಸ್ತೆಬದಿಯ ಪಾನಿಪುರಿ ಇಷ್ಟಪಡುವವರು ಇಲ್ಲಿಗೆ ಬರಬಹುದು. ಮೂರನೇ ವ್ಯಕ್ತಿಯ ಸಂಪರ್ಕವಿಲ್ಲದೇ ನೀವು ಪಾನಿಪುರಿ ಪಡೆದುಕೊಳ್ಳಬಹುದು. ಉತ್ತರ ಭಾರತದ ಗೋವಿಂದ್ ಎಂಬವರು ಈ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ, ಈ ಯಂತ್ರದ ಪಕ್ಕದಲ್ಲಿರುವ ರೋಬೋಟ್ ನಿಮಗೆ ನಿರ್ದೇಶನಗಳನ್ನು ನೀಡುತ್ತದೆ.
ಗ್ರಾಹಕರು ಪಾನಿಪುರಿ ಖರೀದಿ ಮಾಡೋದು ಹೇಗೆ?
ಮೊದಲಿಗೆ ನೀವು ಅಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ 20 ರೂಪಾಯಿ ಪಾವತಿಸಬೇಕು. ಹಣ ಕಡಿತಗೊಳ್ಳುತ್ತಿದ್ದಂತೆ ರೋಬೋಟ್ ನೀವು ಪಾನಿಪುರಿ ಖರೀದಿ ಮಾಡಿದ್ದು, ಮುಂಭಾಗದ ಕೌಂಟರ್ ನಲ್ಲಿ ನಿಮ್ಮ ಆರ್ಡರ್ ಸಿಗಲಿದೆ ಎಂದು ಹೇಳುತ್ತದೆ. ಕೆಲವೇ ಕ್ಷಣಗಳಲ್ಲಿ ಬಾಕ್ಸ್ ನಲ್ಲಿ ಪುರಿ ಮತ್ತು ಆಲೂ ಮಸಾಲಾ ಬರುತ್ತದೆ.
ಇದನ್ನೂ ಓದಿ: Holiday: ತನ್ನ ಸಿಬ್ಬಂದಿಗೆ ವಾರದಲ್ಲಿ ಮೂರು ದಿನ ರಜೆ ನೀಡಿದ ಬ್ಯಾಂಕ್: ಕೆಲಸದ ಅವಧಿಯಲ್ಲೂ ಕಡಿತ
ಇದೇ ಬಾಕ್ಸ್ ನಲ್ಲಿ ಗ್ಲಾಸ್ ಸಹ ಇರುತ್ತದೆ. ಈ ಗ್ಲಾಸ್ ಸರಿಪಡಿಸಿಕೊಂಡು ಮಷೀನ್ ಮೇಲ್ಭಾಗದಲ್ಲಿ ನಾಲ್ಕು ಬಗೆಯ ಪಾನಿ ಬರುವ ವ್ಯವಸ್ಥೆ ಮಾಡಲಾಗಿದೆ. ನಿಮ್ಮಿಷ್ಗದ ಪಾನಿಯನ್ನು ಇಲ್ಲಿ ಪಡೆಯಬಹುದಾಗಿದೆ. ಇಲ್ಲಿ ನಿಮ್ಮ ಪಾನಿಪುರಿ ತಯಾರಕನಿಂದ ನೇರವಾಗಿ ನಿಮ್ಮ ಕೈಗೆ ಪಾನಿಪುರಿ ಲಭ್ಯವಾಗುತ್ತದೆ. ಇನ್ನು ವಿಶೇಷ ಅಂದ್ರೆ ಇಲ್ಲಿ 21 ರೂಪಾಯಿ ಪಾವತಿಸಿದ್ರೆ ರುಚಿಯಾದ ವಡಾ ಪಾವ್ ಸಹ ಸಿಗುತ್ತದೆ.
Foody Vishal ಯು ಟ್ಯೂಬ್ ಪೇಜ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನವೆಂಬರ್ 9ರಂದು ಅಪ್ಲೋಡ್ ಅಗಿರೂ ವಿಡಿಯೋ 7.5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಏಳು ನೂರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.
ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಇನ್ನೂ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಕೊರೊನಾ ಬಂದ ನಂತರ ಎಲ್ಲವೂ ಬದಲಾಗುತ್ತಿದೆ. ಒಳ್ಳೆಯ ಆವಿಷ್ಕಾರ ಎಂಬ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ದಿನ ನಿತ್ಯ ಐದರಿಂದ ಏಳು ನೂರು ಸಂಪಾದಿಸುವ ಪಾನಿಪುರಿವಾಲಾಗಳಿಗೆ ಈ ಮಷೀನ್ ಖರೀದಿಸಲು ಆಗುತ್ತಾ ಎಂದು ಪ್ರಶ್ನೆ ಸಹ ಮಾಡಿದ್ದಾರೆ.
ಬಾಹುಬಲಿ ಪಾನಿಪುರಿ ನೋಡಿದ್ದೀರಾ?
ಜನಪ್ರಿಯ ಫುಡ್ ಬ್ಲೊಗರ್ ಲಕ್ಷ್ಯ ದದ್ವಾನಿ (food blogger Laksh Dadwani) ಅವರು ಯ್ಯೂಟ್ಯೂಬ್ನಲ್ಲಿ (youtube) ಪೋಸ್ಟ್ ಮಾಡಿರುವ ಬಾಹುಬಲಿ ಪಾನಿಪುರಿಯ (bahubali Panipuri) ವಿಡಿಯೋ ಸುಮಾರು 40 ಮಿಲಿಯನ್ ವೀಕ್ಷಣೆಗಳನ್ನುಕಂಡಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬೀದಿ ಬದಿ ವ್ಯಾಪಾರಿ ಚಿರಾಗ್ ಕ ಚಸ್ಕಾ. ಅವರು ನಾಗಪುರದ ಪ್ರತಾಪ್ ನಗರದವರು. ಅವರು ತಮ್ಮ ವಿಶೇಷ ಮತ್ತು ಆಸಕ್ತಿದಾಯಕ ಪಾನಿಪುರಿಯ ಕಾರಣದಿಂದಾಗಿ ಅನೇಕ ಬಾರಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: Healthy Food : ಪ್ರತಿದಿನ ಈ ಬೀಜಗಳನ್ನು ಮರೆಯದೇ ತಿನ್ನಿ.. ರೋಗರುಜಿನಗಳಿಗೆ ಹೇಳಿ ಟಾಟಾ ಬೈ ಬೈ..!
ನಾಗಪುರದ ಬಾಹುಬಲಿ ಪಾನಿಪುರಿಯ ತಯಾರಿ ನೋಡುವುದೇ ಒಂಥರಾ ಮಜವಾಗಿದೆ. ಒಂದು ದೊಡ್ಡ ಪಾನಿಪುರಿಯಲ್ಲಿ ವಿಭಿನ್ನ ಬಗೆಯ ಚಟ್ನಿ ಮತ್ತು ಪಾನಿಗಳನ್ನು ತುಂಬಲಾಗಿರುತ್ತದೆ.
ಹುಣಸೇ ಹಣ್ಣಿನ ಚಟ್ನಿ, ಅದಾದ ಬಳಿಕ ಸಾಮಾನ್ಯವಾಗಿ ಬಳಸುವ ಪಾನಿ, ಬಳಿಕ ಕಿತ್ತಳೆ ಹಣ್ಣಿನ ಸ್ವಾದವುಳ್ಳ ಪಾನಿ (ಬೇಸಿಗೆಯಲ್ಲಿ ಮಾವಿನಹಣ್ಣಿನ ಸ್ವಾದದ ಪಾನಿ ಇರುತ್ತದೆ), ಜೀರಿಗೆ ಪಾನಿ ಮತ್ತು ಬೆಳ್ಳುಳ್ಳಿ ಪಾನಿ. ಬಳಿಕ ಸಾಮಾನ್ಯವಾಗಿ ಪಾನಿ ಪುರಿ ಒಳಗೆ ತುಂಬಿಸುವ ಬೇಯಿಸಿದ ಆಲೂಗಡ್ಡೆ ಮಸಾಲೆಯನ್ನು ಇಲ್ಲಿ ಕೊಂಚ ಭಿನ್ನ ರೀತಿಯಲ್ಲಿ ತುಂಬಿಸಲಾಗುತ್ತದೆ. ಅಂದರೆ, ಪೂರಿಯ ಮೇಲೆ ಸಿಲಿಂಡರ್ ಟವರ್ನ ಆಕೃತಿಯಲ್ಲಿ ಇಡಲಾಗುತ್ತದೆ. ಆ ನಂತರ ಅದರ ಮೇಲೆ ಮೊಸರು, ಬೂಂದಿ, ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಕಾಳುಗಳನ್ನು ಹಾಕಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ