Viral Video: ಸೀಟ್​ ಸಿಗಲಿಲ್ಲ ಅಂತ ರೈಲಿನಲ್ಲಿ ಈ ಪ್ರಯಾಣಿಕ ಮಾಡಿದ್ದು ನೋಡಿದ್ರೆ ಆಶ್ಚರ್ಯವಾಗುತ್ತೆ

Man Creates Makeshift Bed: ಪ್ರಯಾಣಿಕರು ಓಡಾಡುವ ಆಸನಗಳ ಮಧ್ಯೆ ಇರುವಂತಹ ಜಾಗದಲ್ಲಿ ಎರಡು ತುದಿಗಳಲ್ಲಿರುವ ಆಸನಗಳ ಸರಪಳಿಗೆ ತನ್ನ ಕಂಬಳಿಯನ್ನು ಬಿಗಿಯಾಗಿ ಕಟ್ಟಿರುವುದನ್ನು ಕಾಣಬಹುದು. ಕ್ಲಿಪ್ ಮುಂದುವರಿಯುತ್ತಿದ್ದಂತೆ, ಒಬ್ಬ ವ್ಯಕ್ತಿಯು ಕಂಬಳಿಯಲ್ಲಿ ಹಾಗೆಯೇ ಇಳಿದು ಅಲ್ಲಿಯೇ ಮಲಗುವುದನ್ನು ನಾವು ನೋಡಬಹುದಾಗಿದೆ.

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

  • Share this:

ಸಾಲು ಸಾಲಾಗಿ ಸಿಗುವ ರಜೆಯ ದಿನಗಳು (Holidays), ದಸರಾ ಮತ್ತು ದೀಪಾವಳಿಯ ಹಬ್ಬದ (Festival) ಸಮಯದಲ್ಲಿ ಅಥವಾ ಬೇಸಿಗೆ ರಜೆ ಮುಗಿದಾಗ ಸಾಮಾನ್ಯವಾಗಿ ರೈಲುಗಳು (Indain Railways) ಜನರಿಂದ (Passengers) ಕಿಕ್ಕಿರಿದು ಹೋಗಿರುತ್ತವೆ. ಕೆಲವೊಮ್ಮೆ ಎಷ್ಟೋ ತಿಂಗಳುಗಳ ಮೊದಲೇ ಟಿಕೆಟ್ (Ticket Booking) ಮಾಡಿಸಿಟ್ಟರೂ ಕೊನೆಯ ಸಮಯದವರೆಗೆ ನಮ್ಮ ಟಿಕೆಟ್ ಇನ್ನೂ ವೇಟಿಂಗ್ ಲಿಸ್ಟ್‌ನಲ್ಲಿಯೇ (Waiting List) ಇರುತ್ತದೆ.ರೈಲು ನಿಲ್ದಾಣದಲ್ಲಿ (Railway Station) ಬಂದು ನಿಂತಾಗ ಸಹ ರೈಲಿನಲ್ಲಿರುವ ಟಿಕೆಟ್ ಕಲೆಕ್ಟರ್ ಹತ್ತಿರ ಹೋಗಿ ಒಂದು ಸೀಟು ಇದ್ದರೆ ನೋಡಿ ದಯವಿಟ್ಟು ಎಂದು ಕೇಳಿಕೊಳ್ಳುತ್ತೇವೆ. ಕೊನೆಗೂ ನಮಗೆ ಕುಳಿತುಕೊಳ್ಳಲು ಸೀಟು ದೊರಕದಿದ್ದಾಗ, ಅಲ್ಲೇ ಜಾಗವಿರುವ ಕಡೆ ಒಂದು ಪೇಪರ್ ಅನ್ನು ಅಥವಾ ಹಾಸಿಗೆಯನ್ನು ಹಾಸಿಕೊಂಡು ಕುಳಿತುಕೊಳ್ಳುತ್ತೇವೆ ಮತ್ತು ಮಲಗುತ್ತೇವೆ. ಹಾಗೋ ಹೀಗೋ ಮಾಡಿ ನಾವು ತಲುಪಬೇಕಾದ ಊರಿಗೆ ತಲುಪುತ್ತೇವೆ.


ನಿಮ್ಮ ಟಿಕೆಟ್ ಕೆಲವೊಮ್ಮೆ ಟಿಕೆಟ್ ರದ್ದತಿಯ ವಿರುದ್ಧ ಮೀಸಲಾತಿಗೆ (ಆರ್‌ಎಸಿ) ಅರ್ಹತೆ ಪಡೆದರೂ, ಕಿರಿದಾದ ಆಸನದಲ್ಲಿ ಇನ್ನೊಬ್ಬ ಪ್ರಯಾಣಿಕರೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ. ಇದು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ ಎಂದು ಹೇಳಬಹುದು. ಆದಾಗ್ಯೂ, ರೈಲಿನಲ್ಲಿ ದೃಢೀಕೃತ ಆಸನ ಪಡೆಯದೇ ಕೊನೆಗೆ ಅದಕ್ಕೆ ಒಂದು ಪರಿಹಾರ ಕಂಡು ಕೊಂಡಿದ್ದಾರೆ. ಹಾಗಾದರೆ ಬನ್ನಿ ಆ ವ್ಯಕ್ತಿಯ ವೈರಲ್ ವಿಡಿಯೋ ನೋಡೋಣ.


ನೀವು ಈ ದೃಶ್ಯವನ್ನು ನೋಡಿ, ಅರೆ ನಾವು ಹೀಗೆ ಮಾಡಬಹುದಿತ್ತಲ್ಲವೇ ಎಂದುಕೊಳ್ಳುತ್ತೀರಿ ಮತ್ತು ಇದನ್ನು ನೋಡಿದ ನಿಮಗೆ ನಗು ಬರುವುದಂತೂ ಗ್ಯಾರಂಟಿ.


ಸೀಟ್ ಸಿಗದಕ್ಕೆ ಪ್ರಯಾಣಿಕನ ಸೂಪರ್ ಪ್ಲಾನ್

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಮೀಮ್ಸ್ ಬಿಕೆಎಸ್ ಎಂಬ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಒಂದು ರೈಲಿನ ಕಂಪಾರ್ಟ್‌ಮೆಂಟ್‌ನ ಒಳಗೆ ಏನು ನಡೆದಿದೆ ಎನ್ನುವುದನ್ನು ತೋರಿಸುತ್ತದೆ. ಎಲ್ಲಾ ಆಸನಗಳು ಪ್ರಯಾಣಿಕರಿಂದ ತುಂಬಿತ್ತು. ಕುಳಿತುಕೊಳ್ಳಲು ಸಹ ಸ್ಥಳವಿರದೆ ಮತ್ತು ತನಗೆ ಸೀಟು ಸಿಗದ ಕಾರಣ ಒಬ್ಬ ಜಾಣ ಪ್ರಯಾಣಿಕ ಎಂತಹ ಯೋಜನೆ ಮಾಡಿದ್ದಾನೆ ನೀವೇ ನೋಡಿ.


ಉಯ್ಯಾಲೆ ಕಟ್ಟಿಕೊಂಡ ಪ್ರಯಾಣಿಕ

ಪ್ರಯಾಣಿಕರು ಓಡಾಡುವ ಆಸನಗಳ ಮಧ್ಯೆ ಇರುವಂತಹ ಜಾಗದಲ್ಲಿ ಎರಡು ತುದಿಗಳಲ್ಲಿರುವ ಆಸನಗಳ ಸರಪಳಿಗೆ ತನ್ನ ಕಂಬಳಿಯನ್ನು ಬಿಗಿಯಾಗಿ ಕಟ್ಟಿರುವುದನ್ನು ಕಾಣಬಹುದು. ಕ್ಲಿಪ್ ಮುಂದುವರಿಯುತ್ತಿದ್ದಂತೆ, ಒಬ್ಬ ವ್ಯಕ್ತಿಯು ಕಂಬಳಿಯಲ್ಲಿ ಹಾಗೆಯೇ ಇಳಿದು ಅಲ್ಲಿಯೇ ಮಲಗುವುದನ್ನು ನಾವು ನೋಡಬಹುದಾಗಿದೆ.


ಇದನ್ನೂ ಓದಿ: ಇನ್ಮುಂದೆ ದೋಸೆ ಮಾಡೋದು ಬಹಳ ಸುಲಭ..! ಹೇಗೆ ಅಂತೀರಾ..? ಈ ವಿಡಿಯೋ ನೋಡಿ..

ಈ ವಿಡಿಯೋವನ್ನು ಸುಮಾರು 73,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಮತ್ತು 6,900ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ಹಲವಾರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.







ನೆಟ್ಟಿಗರ ಕಮೆಂಟ್ 

ಕೆಲವರು ಈ ರೀತಿಯ ಜುಗಾಡ್ ಹೇಗೆ ಅತ್ಯಂತ ಆರಾಮದಾಯಕವಾಗಿದೆ ಮತ್ತು ಅವರು ಅದನ್ನು ಪ್ರಯತ್ನಿಸಿದ್ದಾರೆ ಎಂದು ಸೂಚಿಸಿದರೆ, ಇತರರು ಪ್ರತಿಕ್ರಿಯೆಯಾಗಿ ನಗುವ ಎಮೋಜಿ ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ “ಭಾರತದ ಜನರ ಬುದ್ದಿವಂತಿಕೆಗೆ ಯಾರು ಸರಿಸಾಟಿ ಇಲ್ಲ” ಎಂದು ಚಿಕ್ಕದಾಗಿ ಮತ್ತು ಚೊಕ್ಕದಾಗಿ ಶೀರ್ಷಿಕೆಯನ್ನು ಬರೆದಿದ್ದಾರೆ.


ನೀವು ಮುಂದಿನ ಬಾರಿ ಯಾವುದೋ ಊರಿಗೆ ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಟಿಕೆಟ್ ದೃಢೀಕೃತಗೊಂಡಿಲ್ಲ ಎಂದರೆ ನೀವು ಇದನ್ನು ಪ್ರಯತ್ನಿಸಬಹುದಾಗಿದೆ.


ಆನ್ಲೈನ್ನಲ್ಲಿ ಟಿಕೆಟ್​ ಬುಕ್ ಮಾಡುವುದು ಹೇಗೆ?

ಇದನ್ನೂ ಓದಿ: ಹೆಂಡತಿಯ ಹುಟ್ಟುಹಬ್ಬ ಮರೆತರೆ ಗಂಡಂದಿರು ಜೈಲು ಪಾಲಾಗೋದು ಖಂಡಿತ - ಸುಂದರ ದ್ವೀಪದಲ್ಲೊಂದು ವಿಚಿತ್ರ ಕಾನೂನು

ಐಆರ್‌ಸಿಟಿಸಿ ಭಾರತೀಯ ರೈಲ್ವೇ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸಬೇಕಾಗುತ್ತದೆ. ಲಾಗಿನ್ ಪಾಸ್‌ವರ್ಡ್ ಕ್ರಿಯೇಟ್​ ಮಾಡಲು, ಪ್ರಯಾಣಿಕರು ತಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನೀವು ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು.
Published by:Sandhya M
First published: