ಕಾರು ಪರವಾನಗಿ ಇದ್ದವರು ಮಾತ್ರ ಕಾರು ಚಲಾಯಿಸಬೇಕು ಎಂಬ ನಿಯಮ ಭಾರತದಲ್ಲಿದೆ. ಆದರೆ ಕೆಲವರು ಕಾರು ಖರೀದಿಸಿದರು ಅವರಿಗೆ ಕಾರು ಚಲಾಯಿಸಲು ಬರುವುದಿಲ್ಲ. ಅದಕ್ಕಾಗಿ ಕಾರು ಚಾಲಕನನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಕಾರು(Car) ಚಲಾಯಿಸಲು ಬಂದರೂ ಪರವಾನಗಿ (License) ಪಡೆದಿರುವುದಿಲ್ಲ. ಆದರೆ ಇಲ್ಲೊಬ್ಬ ಕಾರು ಚಾಲಕ ಪೂರ್ಣ ಪ್ರಮಾಣದಲ್ಲಿ ಕಾರು ಚಲಾಯಿಸುವುದನ್ನು ಕಲಿತ್ತಿಲ್ಲ. ಏಕೆಂದರೆ ಆತ ಪಾರ್ಕಿಂಗ್ನಲ್ಲಿದ್ದ ಬೈಕ್ಗಳ (Bikes) ಮೇಲೆ ಕಾರು ಹತ್ತಿಸಿದ್ದಾನೆ. ಈ ವಿಡಿಯೋ ಸಿಸಿಕ್ಯಾಮೆರಾದಲ್ಲಿ (CCCamera) ಸೆರೆಯಾಗಿದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಶರೀಫ್ಚೋಕ್ರಾ ಎಂಬ ಟ್ವಿಟ್ಟರ್ ಬಳಕೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ವ್ಯಕ್ತಿಯೊಬ್ಬ ಹೊಸ ಕಾರಿನಲ್ಲಿ ಬಂದು ಹೌಸಿಂಗ್ ಸೊಸೈಟಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕ್ಗಳ ಮೇಲೆ ಕಾರು ಹತ್ತಿಸಿದ್ದಾನೆ. ಅಂದಹಾಗೆಯೇ ಈ ದೃಶ್ಯ ಕಂಡಾಗ ಆ ವ್ಯಕ್ತಿಗೆ ಸರಿಯಾಗಿ ಕಾರು ಚಲಾಯಿಸಲು ಬರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಅಂದಹಾಗೆಯೇ, ಈ ವಿಡಿಯೋ 46 ಸಾವಿರ ವೀಕ್ಷಣೆ ಮತ್ತು ಪ್ರತಿಕ್ರಿಯೆಯನ್ನು ಕಂಡಿದೆ. ಸರಿಯಾಗಿ ಕಾರು ಚಲಾಯಿಸಲು ಬಾರದೇ ಇದ್ದರೆ ಡ್ರೈವಿಂಗ್ ಮಾಡಬಾರದು ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಬರೆದಿದ್ದಾನೆ. ಮತ್ತೋರ್ವ ಕಾರು ರಿಪೇರಿಯ ಜೊತೆಗೆ ಬೈಕ್ಗಳನ್ನು ರಿಪೇರಿ ಮಾಡುವ ಖರ್ಚುಗಳನ್ನು ಬರಿಸಲಿ ಎಂದು ಕಾಮೆಂಟ್ ಮಾಡಿದ್ದಾನೆ.
ಇದನ್ನೂ ಓದಿ:Shopping Tips: ಈ ರೀತಿ ಮಾಡಿದ್ರೆ ಅನಗತ್ಯವಾಗಿ ಬಟ್ಟೆ ಖರೀದಿಸೋದು ತಪ್ಪಿಸಬಹುದು
ಕಾರು ಚಲಾಯಿಸುವ ಮೊದಲು ಪರವಾನಗಿ ಇದೆಯಾ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಪರವಾನಗಿ ಇಲ್ಲದೆ, ಅಪಘಾತವಾದರೆ ತೊಂದರೆ ಕಟ್ಟಿಟ್ಟಬುತ್ತಿ. ಅದಲ್ಲದೆ ಪರವಾನಗಿ ಇಲ್ಲದೆ ವಾಹನ ಚಲಯಿಸಿದರೂ ದಂಡ ಕಟ್ಟಬೇಕಾಗುತ್ತದೆ.
Dussehra New Purchase. pic.twitter.com/VAvnD8yVeE
— Pröfêssõr (@ShareefChokra) October 7, 2022
Ravan ki 10 motorcycles ka naash karte hue.
— Siddharth's Echelon (@SiddharthKG7) October 7, 2022
I mean why!! pic.twitter.com/PTYdO9Me7I
— Agent Chai (@1GingerTea) October 7, 2022
ಭಾರತದಲ್ಲಿ ವಾಹನ ಚಲಾಯಿಸಲು ಸರಿಯಾದ ನಿಯಮವಿದೆ. ಅದರ ಅನ್ವಯ ವಾಹನ ಚಲಾಯಿಸಬೇಕಿದೆ. ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ವಾಹನ ಚಲಾಯಿಸಿದರೆ ಕಾನೂನು ರೂಪದಲ್ಲಿ ಶಿಕ್ಷೆ ಖಂಡಿತಾ ಮತ್ತು ದಂಡವನ್ನು ಕಟ್ಟಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ