ಪ್ರತಿನಿತ್ಯ ಸಾಕ್ಸ್​ ಮೂಸುತ್ತಿದ್ದ ಭೂಪನಿಗೆ ಏನಾಯ್ತು ಗೊತ್ತಾ?

ಈ ಹಿಂದೆ ಭಾರತದಲ್ಲೂ ಸಾಕ್ಸ್​ ಮೂಲಕ ಪ್ರಕಾಶ್ ಕುಮಾರ್​ ಎಂಬ ವ್ಯಕ್ತಿ ಸುದ್ದಿಯಾಗಿದ್ದರು. ಗಬ್ಬು ವಾಸನೆ ಬರುತ್ತಿದ್ದ ಸಾಕ್ಸ್ ಧರಿಸಿ ಬಂದಿದ್ದ ಬಸ್ ಪ್ರಕಾಶ್​ರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

zahir | news18
Updated:December 17, 2018, 5:35 PM IST
ಪ್ರತಿನಿತ್ಯ ಸಾಕ್ಸ್​ ಮೂಸುತ್ತಿದ್ದ ಭೂಪನಿಗೆ ಏನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
zahir | news18
Updated: December 17, 2018, 5:35 PM IST
ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ತಾವು ಧರಿಸಿದ ಸಾಕ್ಸ್​ನ್ನು ಮೂಸಿ ನೋಡಿರುತ್ತಾರಂತೆ. ಆದರೆ ಅದುವೇ ಒಂದು ಚಟವಾದರೆ ಏನಾಗಬಹುದು? ಇಂತಹದೊಂದು ಪ್ರಶ್ನೆಗೆ ಇದೀಗ ಚೀನಾದಿಂದ ಉತ್ತರ ಸಿಕ್ಕಿದೆ.

ಶಾಂಘೈ ನಗರದ ಫ್ಯೂಜಿಯನ್​ ನಿವಾಸಿಯೊಬ್ಬರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಾಕ್ಸ್​ ಮೂಸಿರುದಂತೆ. ಇತ್ತೀಚೆಗೆ ಶ್ವಾಸಕೋಶದ ತೊಂದರೆಯಿಂದ ಫ್ಯೂಜಿಯನ್​ನ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ  ಪರೀಕ್ಷಿಸಿದಾಗ ಶ್ವಾಸಕೋಶದ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಆದರೆ  ಅಸಾಮಾನ್ಯವಾದ ಪ್ರಕರಣವಾಗಿದ್ದರಿಂದ ಡಾಕ್ಟರ್​ ರೋಗಿಯನ್ನು ಮತ್ತಷ್ಟು ವಿಚಾರಿಸಿದ್ದಾರೆ. ಈ ವೇಳೆ ತಾನು ಪ್ರತಿನಿತ್ಯ ದುರ್ವಾಸನೆಯ ಸಾಕ್ಸ್​ನ್ನು ಮೂಸಿ ನೋಡುತ್ತೇನೆ ಎಂಬ ನಗ್ನ ಸತ್ಯ ಬಾಯಿ ಬಿಟ್ಟಿದ್ದಾನೆ. ಇದನ್ನು ಕೇಳಿದ ವೈದ್ಯರು ಮೂರ್ಛೆ ಹೋಗುವುದೊಂದೇ ಬಾಕಿ.

ಚೀನಾದ ಈ ವ್ಯಕ್ತಿ ಪ್ರತಿ ದಿನದ ಕೆಲಸದ ನಂತರ ಸಾಕ್ಸ್​ನ ದುರ್ಗಂಧವನ್ನು ಆಸ್ವಾದಿಸಿಕೊಳ್ಳುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದನು. ಈ ವೇಳೆ ಕಾಲಿನಲ್ಲಿದ್ದ ಬೆವರಿನ ಕಣಗಳು ಸಾಕ್ಸ್​ನಲ್ಲಿ ಆವರಿಸಿಕೊಂಡಿತ್ತು. ಹೀಗೆ ಕೆಟ್ಟ ವಾಸನೆಯನ್ನು ಗ್ರಹಿಸುತ್ತಿದ್ದರಿಂದ ರೋಗಾಣುಗಳು ಶ್ವಾಸಕೋಶಕ್ಕೆ ಸೇರಿಕೊಂಡಿದೆ. ಇದರಿಂದ ಇಮ್ಯುನ್ ಸಿಸ್ಟಂನಲ್ಲಿ ತೊಂದರೆಗಳು ಕಾಣಿಸಿಕೊಂಡಿದ್ದು, ಇದರಿಂದ ಶ್ವಾಸಕೋಶದಲ್ಲಿ ಸಮಸ್ಯೆಗಳು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಸಿಗುವ ಒಡ್ರಸ್​ ಸಾಕ್ಸ್​ ಧರಿಸಿದರೆ ಗಬ್ಬು ವಾಸನೆ ಹೆಚ್ಚಾಗಿ ಬರುತ್ತದೆ. ಇಂಗ್ಲೆಂಡ್​ನ ಬ್ರೈಟಾನ್​ ಜೈಲಿನಲ್ಲಿ ಖೈದಿಗಳ ಸಾಕ್ಸ್​ ಇಡಲೆಂದೇ ಒಂದು ಲಾಕರ್ ನೀಡಲಾಗುತ್ತದೆ. ಏಕೆಂದರೆ ಜೈಲು ಅಧಿಕಾರಿಗಳು ಸಾಕ್ಸ್​ನ ದುರ್ವಾಸನೆಯಿಂದ ಜೈಲಿನ ಒಳಗೆ ಪ್ರವೇಶಿಸಲಾಗುವುದಿಲ್ಲವಂತೆ. ಅದಕ್ಕಾಗಿ ಪ್ರತಿ ಜೈಲು ಕೊಠಡಿಯಲ್ಲೂ ವಿಶೇಷ ಲಾಕರ್​ ಅಳವಡಿಸಲಾಗಿದೆ.

ಇದನ್ನೂ ಓದಿ: ಭರ್ಜರಿ ಆಫರ್: 13 ಸಾವಿರ ಬೆಲೆಯ ಸ್ಮಾರ್ಟ್​ಫೋನ್​ಗೆ ಕೇವಲ 999 ರೂ..!

ಈ ಹಿಂದೆ ಭಾರತದಲ್ಲೂ ಸಾಕ್ಸ್​ ಮೂಲಕ ಪ್ರಕಾಶ್ ಕುಮಾರ್​ ಎಂಬ ವ್ಯಕ್ತಿ ಸುದ್ದಿಯಾಗಿದ್ದರು. ಗಬ್ಬು ವಾಸನೆ ಬರುತ್ತಿದ್ದ ಸಾಕ್ಸ್ ಧರಿಸಿ ಬಂದಿದ್ದ ಬಸ್ ಪ್ರಕಾಶ್​ರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಆರೋಪದಡಿ  ಪ್ರಕರಣ ದಾಖಲಿಸಲಾಗಿತ್ತು. ಈತ ಬಸ್ ನಲ್ಲಿ ಕುಳಿತಿದ್ದ ವೇಳೆ ತನ್ನ ಸಾಕ್ಸ್ ಹಾಗೂ ಬೂಟನ್ನು ಬಿಚ್ಚಿದ್ದರು. ಇದರಿಂದ ಬರುತ್ತಿದ್ದ ದುರ್ವಾಸನೆ ಬಸ್​ ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡಿತ್ತು. ಈ ಬಗ್ಗೆ ಪ್ರಯಾಣಿಕರು ಹೇಳಿದಾಗ, ಪ್ರಕಾಶ್​ ಜಗಳಕ್ಕಿಳಿದಿದ್ದರು. ಇದರಿಂದ ಬಸ್​ನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: ಪಿಕ್ಚರ್ ಇನ್ ಪಿಕ್ಚರ್: ವಾಟ್ಸ್​ಆ್ಯಪ್​​ನಲ್ಲಿದೆ ಬೊಂಬಾಟ್ ಫೀಚರ್
Loading...

First published:December 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ