ವ್ಯಕ್ತಿಯ ಕಿವಿಯನ್ನೇ ಮನೆ ಮಾಡಿಕೊಂಡ ಜಿರಳೆ; 10ಕ್ಕೂ ಹೆಚ್ಚು ಮರಿಗಳನ್ನು ನೋಡಿ ವೈದ್ಯರು ಶಾಕ್​..!

ವ್ಯಕ್ತಿಯ ಕಿವಿಗೆ ಜಿರಳೆ ನುಗ್ಗಲು ಕಾರಣ, ಆತ ಜಂಕ್​ಫುಡ್​​ಗಳನ್ನು ಅರ್ಧಂಬರ್ಧಂ ತಿಂದು ತನ್ನ ತಲೆ ಬಳಿಯೇ ಇಟ್ಟು ಮಲಗುತ್ತಿದ್ದ. ಹೀಗಾಗಿ ಜಿರಳೆ ಆತನ ಕಿವಿಗೆ ನುಗ್ಗಿ, ಸಂಸಾರವನ್ನೇ ಶುರು ಮಾಡಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

Latha CG | news18-kannada
Updated:November 8, 2019, 11:49 AM IST
ವ್ಯಕ್ತಿಯ ಕಿವಿಯನ್ನೇ ಮನೆ ಮಾಡಿಕೊಂಡ ಜಿರಳೆ; 10ಕ್ಕೂ ಹೆಚ್ಚು ಮರಿಗಳನ್ನು ನೋಡಿ ವೈದ್ಯರು ಶಾಕ್​..!
ಜಿರಳೆ
  • Share this:
ಕಿವಿಯೊಳಗೆ ಒಂದು ಸಣ್ಣ ಕೀಟ ನುಗ್ಗಿದರೂ ಅದನ್ನು ಹೊರಗೆ ತೆಗೆಯುವವರೆಗೆ ಸಮಾಧಾನ ಇರುವುದಿಲ್ಲ. ವಿಚಿತ್ರ ರೀತಿಯ ಹಿಂಸೆಯಾಗುತ್ತಿರುತ್ತದೆ. ಸಣ್ಣ ಇರುವೆ ಇದ್ದರೂ ದೊಡ್ಡ ಕೀಟ ನುಗ್ಗಿರುವಂತೆ ಭಾಸವಾಗುತ್ತಿರುತ್ತದೆ. ಆ ಕೀಟ ಕಿವಿಯೊಳಗೆ ಹರಿದಾಡುವಾಗ ತಲೆ ಹುಚ್ಚು ಹಿಡಿದಂತೆ ಆಗುತ್ತದೆ. ಇಂತಹದ್ದೇ ಒಂದು ಅನುಭವ ಚೀನಾದ ಎಲ್​​ವಿ ಎಂಬ ವ್ಯಕ್ತಿಗೆ ಆಗಿದೆ.

ಪ್ರತಿದಿನ ಕಿವಿ ನೋವು, ಕಿವಿಯೊಳಗೆ ಏನೋ ಹರಿದಾಡಿದ ಅನುಭವ. ಹಲವು ದಿನಗಳಿಂದ ಇದೇ ನೋವು ಅನುಭವಿಸುತ್ತಿದ್ದ ಆತ ಈ ಭಾದೆ ತಾಳಲಾರದೇ ವೈದ್ಯರ ಬಳಿ ಹೋಗಿದ್ದ. ನನ್ನ ಕಿವಿಯೊಳಗೆ ಯಾರೋ ಪರಚಿದಂತೆ ಆಗುತ್ತಿದೆ. ಕಿವಿಯೊಳಗೆ ಏನೋ ಹರಿದಾಡಿದಂತೆ ಆಗುತ್ತಿದೆ. ಇದು ನನಗೆ ತೀವ್ರ ತೆರನಾದ ಹಿಂಸೆ ಕೊಡುತ್ತಿದೆ ಎಂದು ವೈದ್ಯರ ಬಳಿ ಹೇಳಿದ್ದ.

ಅಚ್ಚರಿಯಾದರೂ ಇದು ಸತ್ಯ: ಕುಡಿದ ಮತ್ತಿನಲ್ಲಿ ಆತ ನಡೆದದ್ದು ಬರೋಬ್ಬರಿ 800 ಕಿ.ಮೀ..!

ತಪಾಸಣೆ ಮಾಡಿದ ವೈದ್ಯರು ಎಲ್​​ವಿ ಕಿವಿ ನೋಡಿ ಬೆಚ್ಚಿ ಬಿದ್ದಿದ್ದರು. ಆತನ ಕಿವಿಯೊಳಗೆ ಜಿರಳೆ ಇದ್ದಿದ್ದು ಬೆಳಕಿಗೆ ಬಂದಿತ್ತು. ಅದು ಕೇವಲ ಒಂದು ಜಿರಳೆ ಅಲ್ಲ. ತಾಯಿ ಜಿರಳೆಯ ಜೊತೆ 10ಕ್ಕೂ ಹೆಚ್ಚು ಜಿರಳೆ ಮರಿಗಳು ವಾಸಿಸುತ್ತಿದ್ದವು. ಒಂದು ಜಿರಳೆಯ ಸಂಸಾರವೇ ಆತನ ಕಿವಿಯನ್ನು ಮನೆ ಮಾಡಿಕೊಂಡಿದ್ದವು.

ಈ ವಿಷಯವನ್ನು ಎಲ್​​ವಿಗೆ ತಿಳಿಸಿದಾಗ ಆತನೂ ಗಾಬರಿಯಾಗಿದ್ದ. ತಕ್ಷಣ ವೈದ್ಯರು ಎಲ್​ವಿ ಕಿವಿಯೊಳಗಿದ್ದ 10ಕ್ಕೂ ಜಿರಳೆ ಮರಿಗಳನ್ನು ಹೊರ ತೆಗೆದಿದ್ದರು. ಎಲ್​ವಿ ಅನುಭವಿಸುತ್ತಿದ್ದ ನೋವು ಕಡಿಮೆಯಾಗಿತ್ತು. ಸದ್ಯ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಎಲ್​ವಿ ಈಗ ಚೇತರಿಸಿಕೊಳ್ಳುತ್ತಿದ್ದಾನೆ.

ವ್ಯಕ್ತಿಯ ಕಿವಿಗೆ ಜಿರಳೆ ನುಗ್ಗಲು ಕಾರಣ, ಆತ ಜಂಕ್​ಫುಡ್​​ಗಳನ್ನು ಅರ್ಧಂಬರ್ಧಂ ತಿಂದು ತನ್ನ ತಲೆ ಬಳಿಯೇ ಇಟ್ಟು ಮಲಗುತ್ತಿದ್ದ. ಹೀಗಾಗಿ ಜಿರಳೆ ಆತನ ಕಿವಿಗೆ ನುಗ್ಗಿ, ಸಂಸಾರವನ್ನೇ ಶುರು ಮಾಡಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

ಆಕಸ್ಮಿಕವಾಗಿ ಹೈಜಾಕ್ ಅಲಾರಂ ಒತ್ತಿದ ಪೈಲಟ್​; ಬಳಿಕ ಆಗಿದ್ದೇನು?
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ