ವೈರಲ್​ ಆದ ಲೈವ್​ ಸೂಸೈಡ್​ ವಿಡಿಯೋ


Updated:June 19, 2018, 5:25 PM IST
ವೈರಲ್​ ಆದ ಲೈವ್​ ಸೂಸೈಡ್​ ವಿಡಿಯೋ

Updated: June 19, 2018, 5:25 PM IST
ಮುಂಬೈ: ನಗರದ ಮಲಾಡ್​ ರೈಲ್ವೇ ಸ್ಟೇಷನ್​ನಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿಗೆ ಹಾರಿ ಆತ್ಮಹತ್ಯೆ ನಡೆಸಿದ ಲೈವ್​ ವಿಡಿಯೋ ವೈರಲ್​ ಆಗಿದೆ.

ಸಿಸಿಟಿವಿ ವಿಡಿಯೋ ಪ್ರಕಾರ ರೈಲ್ವೇ ಬ್ರಿಡ್ಜ್​ನಿಂದ ಕೆಳಕ್ಕಿಳಿದ ಯುವಕ ನೇರವಾಗಿ ರೈಲು ಬರುತ್ತಿದ್ದ ಪ್ಲಾಟ್​ಫಾರ್ಮ್​ ಕಡೆ ನುಗ್ಗಿದ್ದಾನೆ. ರೈಲು ತನ್ನ ಹಿಂದೆ ಬರುತ್ತಿದೆ ಎಂದು ಮನವರಿಕೆ ಮಾಡಿಕೊಂಡ ಯುವಕ ಎಲ್ಲರೂ ನೋಡು ನೋಡುತ್ತಿದ್ದಂತೆಯೇ ವೇಗವಾಗಿ ಬರುತ್ತಿದ್ದ ರೈಲಿನ ಎದುರು ಧುಮುಕಿದ್ದಾನೆ.ಈ ರೈಲು ಚರ್ಚ್​ಗೇಟ್​ ಸ್ಟೇಶನ್​ ಕಡೆ ತೆರಳುತ್ತಿದ್ದು, ಇದು ಮಲಾಡ್​ ಸ್ಟೇಶನ್​ನಲ್ಲಿ ನಿಲುಗಡೆಯಾಗುವುದಿಲ್ಲ. ಹೀಗಾಗಿ ರೈಲು ತನ್ನ ಮಾಮೂಲಿ ವೇಗದಲ್ಲೇ ಚಲಿಸುತ್ತಿತ್ತು. ವ್ಯಕ್ತಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ