ನಾವು ಪ್ರವಾಸಕ್ಕೆ (Travel) ಅಂತ ಹೋದರೆ ಪ್ರತಿಬಾರಿಯೂ, ಪ್ರಕೃತಿಯಲ್ಲಿನ (Nature) ಒಂದು ಹೊಸದಾದ ಅಥವಾ ನಮಗೆ ಹೊಸತು ಎನಿಸುವ ಸ್ಥಳಗಳಿಗೆ (Places) ಹೋಗಲು ನಾವು ಪ್ರಯತ್ನಿಸುತ್ತೇವೆ. ಕೆಲವರಿಗೆ ಪ್ರವಾಸ ಹೋದಾಗ ಅಲ್ಲಿನ ಬೆಟ್ಟಗುಡ್ಡಗಳನ್ನು ಹತ್ತುವುದು ಎಂದರೆ ಟ್ರೆಕ್ಕಿಂಗ್ (Trekking) ಮಾಡುವುದು ತುಂಬಾ ಇಷ್ಟವಾದರೆ, ಇನ್ನೂ ಕೆಲವರಿಗೆ ನೀರಿನ ಮೂಲಗಳಾದ ನದಿಗಳು, ಸಮುದ್ರಗಳು ಮತ್ತು ಜಲಪಾತಗಳನ್ನು (Falls) ನೋಡುವುದು ಮತ್ತು ಅಲ್ಲಿ ಸಮಯ ಕಳೆಯುವುದು ತುಂಬಾನೇ ಇಷ್ಟವಾಗುತ್ತದೆ ಅಂತ ಹೇಳಬಹುದು. ಬಹುತೇಕರು ನೀರಿರುವ ಜಾಗಗಳಲ್ಲಿ ಹೋಗಿ ಮಜಾ ಮಾಡಲು ನೋಡುತ್ತಾರೆ, ಏಕೆಂದರೆ ಜಲಪಾತಗಳಲ್ಲಿ ಎಷ್ಟೋ ಅಡಿಗಳ ಮೇಲಿಂದ ಕೆಳಕ್ಕೆ ಧುಮ್ಮಿಕ್ಕುವ ಆ ನೀರಿನ ಭೋರ್ಗೆರೆತವನ್ನು ನೋಡುವುದು ಮತ್ತು ಆ ಎತ್ತರದಿಂದ ಕೆಳಕ್ಕೆ ಬೀಳುವ ನೀರಿಗೆ ತಮ್ಮ ದೇಹವನ್ನು ಕೊಟ್ಟು, ಸ್ನಾನ ಮಾಡುವುದೆಂದರೆ ತುಂಬಾನೇ ಸಂತಸ ಪಡುತ್ತಾರೆ ಅಂತ ಹೇಳಬಹುದು.
ಹಿಮಗಟ್ಟಿರುವ ಜಲಪಾತದ ವಿಡಿಯೋ ಮಾಡಿದ ಸಾಹಸಿ ಪ್ರವಾಸಿಗ
ನಾವು ಈ ಸುಂದರವಾದ ಜಲಪಾತಗಳ ಫೋಟೋಗಳನ್ನು ಮತ್ತು ವಿಡಿಯೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು. ಆದರೆ ಈಗ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ ನೀವು ಎಂದಿಗೂ ನೋಡದೆ ಇರುವಂತಹ ಜಲಪಾತದ ಒಳಗಿನ ವಿಹಂಗಮ ದೃಶ್ಯಗಳನ್ನು ನೋಡುತ್ತೀರಿ.
ಅರೇ ಜಲಪಾತದ ಫೋಟೋವನ್ನು ಅಥವಾ ವಿಡಿಯೋವನ್ನು ನಾವು ದೂರದಿಂದ ತೆಗೆಯಬಹುದು ಅಥವಾ ಚಿತ್ರೀಕರಿಸಬಹುದು. ಇದೇನಿದು ಜಲಪಾತದ ಒಳಗಿನ ದೃಶ್ಯವನ್ನು ಹೇಗೆ ವಿಡಿಯೋ ಮಾಡಿದ್ದಾರೆ ಅಂತ ನಿಮಗೆ ಪ್ರಶ್ನೆಯೊಂದು ಮೂಡಬಹುದು. ಇಲ್ಲಿ ಒಬ್ಬ ಪ್ರವಾಸಿಗ ಹಿಮಗಟ್ಟಿದ ಜಲಪಾತದ ಹತ್ತಿರವಿರುವ ಪರ್ವತದಲ್ಲಿ ನಿಂತು ಮೇಲಿಂದ ಕೆಳಗೆ ಧುಮ್ಮಿಕ್ಕುವ ಆ ನೀರಿನ ವಿಹಂಗಮ ನೋಟವನ್ನ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ ನೋಡಿ.
ಇದನ್ನೂ ಓದಿ: ಲೆಹೆಂಗಾದಲ್ಲಿ ಬಂದ ಅಮೆರಿಕದ ವಧು, ಅದ್ಭುತವಾಗಿತ್ತು ಅಪ್ಪನ ಪ್ರತಿಕ್ರಿಯೆ
ಅಬ್ಬಾ ಎಂತಹ ಸಾಹಸ ಈ ವ್ಯಕ್ತಿಯದ್ದು ನೋಡಿ
ರೆಡ್ಡಿಟ್ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಪ್ಲೆಂಟುಡಿಯೊಪುಲನ್ಸ್ ಎಂಬ ಹೆಸರಿನ ಪರ್ವತದ ಮೇಲೆ ಇರುವ ಹಿಮಗಟ್ಟಿದ ಜಲಪಾತವನ್ನು ಒಬ್ಬ ವ್ಯಕ್ತಿಯು ಹತ್ತಿರುವುದನ್ನು ನೀವು ನೋಡಬಹುದು. ನಂತರ ಆ ವ್ಯಕ್ತಿ ಪರ್ವತದ ಒಂದು ಬದಿಯಲ್ಲಿ ನಿಂತು ತನ್ನ ಕ್ಯಾಮೆರಾವನ್ನು ಜಲಪಾತದ ಒಳಗೆ ಮುಖಮಾಡಿಟ್ಟು ಆ ಹಿಮಗಟ್ಟಿದ ಜಲಪಾತವನ್ನು ತೋರಿಸುತ್ತಾನೆ. ಅದರ ಮಧ್ಯ ನೀರು ಕೆಳಗೆ ಧುಮ್ಮಿಕ್ಕುವುದನ್ನು ಸಹ ನಾವು ನೋಡಬಹುದು. ಆದರೆ, ಅಲ್ಲಿರುವ ಬಹುತೇಕ ನೀರಿನ ಭಾಗ ಒಂದು ಮಂಜುಗಡ್ಡೆಯ ರೀತಿಯಾಗಿರುವುದನ್ನು ಸಹ ನಾವು ನೋಡಬಹುದು.
27 ಸೆಕೆಂಡಿನ ಈ ವಿಡಿಯೋವನ್ನು ಒಂದು ದಿನದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಹಂಚಿಕೊಂಡಾಗಿನಿಂದ, ಇದು 9800 ಲೈಕ್ ಗಳನ್ನು ಮತ್ತು 136 ಕಾಮೆಂಟ್ ಗಳನ್ನು ಸಹ ಗಳಿಸಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ಗೊತ್ತೇ?
ರೆಡ್ಡಿಟ್ ನ ಬಳಕೆದಾರರೊಬ್ಬರು ಈ ವಿಡಿಯೋ ನೋಡಿದ ನಂತರ "ಈ ಮನುಷ್ಯನು ಇದರ ಬಗ್ಗೆ ಸಂಪೂರ್ಣವಾಗಿ ನಿಜವಾಗಿಯೂ ತಲೆಕೆಡಿಸಿಕೊಂಡಂತೆ ತೋರುತ್ತದೆ ಮತ್ತು ಅವನು ತನ್ನ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿರುವುದನ್ನು ನೋಡಿ ನನಗೆ ತುಂಬಾನೇ ಸಂತೋಷವಾಯಿತು" ಎಂದು ಹೇಳಿದರು.
ಇದನ್ನೂ ಓದಿ: ಪ್ರಪಂಚದ ಅತ್ಯಂತ ದುಬಾರಿ ತರಕಾರಿ, ಬಂಗಾರಕ್ಕಿಂತಲೂ ಕಾಸ್ಟ್ಲಿ
ಎರಡನೆಯ ಬಳಕೆದಾರರು "ಆಲ್ಪೈನ್ ಋತುವಿನ ಆರಂಭದಲ್ಲಿ ಜಲಪಾತಗಳು ಹೀಗೆ ಹಿಮಗಟ್ಟುತ್ತವೆ. ಆ ಮಂಜುಗಡ್ಡೆಯು ತುಂಬಾನೇ ಗಟ್ಟಿಯಾಗಿ ಕಾಣುತ್ತದೆ. ಈ ರೀತಿಯ ಒಂದನ್ನು ಈ ಹಿಂದೆ ಹತ್ತಿದ್ದು, ಅದು ನನ್ನ ಜೀವನದ ಹೆಚ್ಚು ಭಯಾನಕ ಅನುಭವಗಳಲ್ಲಿ ಒಂದಾಗಿತ್ತು. ತುಂಬಾನೇ ಸುಂದರವಾಗಿತ್ತು, ಆದರೆ ಇನ್ನೊಮ್ಮೆ ಅಂತಹ ಸಾಹಸಕ್ಕೆ ಕೈ ಮಾಡುವುದಿಲ್ಲ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ