ಒಂದು ಗ್ಲಾಸ್​ ಬಿಯರ್​ಗೆ 49 ಲಕ್ಷ ಕೊಟ್ಟ..! ಬ್ಯಾಂಕ್​ ಎಕೌಂಟ್​ ನೋಡಿದ ಮೇಲೆ ತಲೆಕೆಡಿಸಿಕೊಂಡ

ಪೀಟರ್​ ಲಾಹೋರ್​ ಎನ್ನುವ ವ್ಯಕ್ತಿ ಮಾಲ್ಮೈಸನ್​​ ಹೋಟೆಲ್​ಗೆ ಬಿಯರ್​ ಕುಡಿಯಲು ಹೋಗಿದ್ದಾರೆ. ಬಿಯರ್​ ಕುಡಿದ ನಂತರ ಬಿಲ್​ ಪಾವತಿಸಲು ಮುಂದಾಗಿದ್ದಾರೆ.

news18-kannada
Updated:September 9, 2019, 12:36 PM IST
ಒಂದು ಗ್ಲಾಸ್​ ಬಿಯರ್​ಗೆ 49 ಲಕ್ಷ ಕೊಟ್ಟ..! ಬ್ಯಾಂಕ್​ ಎಕೌಂಟ್​ ನೋಡಿದ ಮೇಲೆ ತಲೆಕೆಡಿಸಿಕೊಂಡ
ಸಾಂದರ್ಭಿಕ ಚಿತ್ರ
  • Share this:
ಯಾರೇ ಆಗಲಿ ಅತಿ ಹೆಚ್ಚು ಮಧ್ಯಪಾನ ಮಾಡಿದ ಮೇಲೆ ಎನಾದರೊಂದು ಎಡವಟ್ಟು ಮಾಡೇ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಎಣ್ಣೆ ಅಮಲಿನಲ್ಲಿ ಜೀವಕ್ಕೆ ಹಾನಿಯಾಗುವ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತಾರೆ, ಇನ್ನು ಕೆಲವೊಮ್ಮೆ ಹಾಸ್ಯಸ್ಪದ ಸನ್ನಿವೇಷ ಎದುರಾಗುತ್ತದೆ. ಇಂತಹದೇ ಸನ್ನಿವೇಷವೊಂದು ಮ್ಯಾಂಚೆಸ್ಟರ್​ ಬಾರ್​ವೊಂದರಲ್ಲಿ ನಡೆದಿದ್ದು, ಮಧ್ಯಪ್ರಿಯರೊಬ್ಬರು ಬಿಯರ್​ ಕುಡಿಯಲು ಬರೋಬ್ಬರಿ 49 ಲಕ್ಷ ರೂ. ವ್ಯಯಿಸಿದ ಸನ್ನಿವೇಷ ಕಂಡುಬಂದಿದೆ.

ಪೀಟರ್​ ಲಾಹೋರ್​ ಎನ್ನುವ ವ್ಯಕ್ತಿ ಮಾಲ್ಮೈಸನ್​​ ಹೋಟೆಲ್​ಗೆ ಬಿಯರ್​ ಕುಡಿಯಲು ಹೋಗಿದ್ದಾರೆ. ಬಿಯರ್​ ಕುಡಿದ ನಂತರ ಬಿಲ್​ ಪಾವತಿಸಲು ಮುಂದಾಗಿದ್ದಾರೆ. ಈ ವೇಳೆ ಪೀಟರ್​ ಕನ್ನಡಕವನ್ನು ಬಿಟ್ಟು ಹೋಗಿದ್ದಾರೆ. ಅದೇ ಸಮಯದಲ್ಲಿ ಬಿಲ್​ ಪಾವತಿಸುವ ಯಂತ್ರ ಹಾಳಾಗಿತ್ತು. ಬಿಲ್​ನಲ್ಲಿ 49 ಲಕ್ಷ ರೂ. ಎಂದು ನಮೂದಿತವಾಗಿರುತ್ತದೆ. ಕನ್ನಡಕ ಹಾಕದೇ ಇದ್ದ ಪೀಟರ್​ಗೆ ಬಿಲ್​ನಲ್ಲಿ ನಮೂದಿಸಿರುವ ಬೆಲೆಯನ್ನು ಸರಿಯಾಗಿ ಕಾಣಲಿಲ್ಲ. ಈ ವೇಳೆ ಪೀಟರ್​ ತಮ್ಮ ಕಾರ್ಡ್​ ಕೊಟ್ಟು ಬಿಲ್​ ಪಾವತಿಸಿದ್ದಾರೆ.

 
 

ಪೀಟರ್​ ಮನೆಗೆ ಬಂದ ತಕ್ಷಣ ಖಾತೆಯಿಂದ ಇಂತಿಷ್ಟು ಹಣವನ್ನು ತೆಗೆಯಲಾಗಿದೆ ಎಂದು ಕಾಲ್​ ಬರುತ್ತದೆ. ನಂತರ ಪುನಃ ಮಾಲ್ಮೈಸನ್​​ ಹೋಟೆಲ್​ಗೆ ಬಂದ ಪೀಟರ್​ ಕ್ಯಾಶ್​ ಕೌಂಟರ್​ನಲ್ಲಿ ನಮೂದಿಸಲಾದ ಬಿಲ್​ ಪಾವತಿಗೆ ಬಗೆಗೆ ಕೇಳಿದ್ದಾರೆ. ಮೊದಲಿಗೆ ಕ್ಯಾಶ್​ ಕೌಂಟರಿನಲ್ಲಿ ಕೆಲಸದವನು ಪೀಟರ್ಗೆ​ ನಮೂದಿಸಿದ ಹಣವನ್ನು ಹೇಳಲು ನಿರಾಕರಿಸಿದ. ನಂತರ 49 ಲಕ್ಷ ರೂ. ಎಂದು ಹೇಳಿದ್ದಾರೆ. ಇದರಿಂದ ಪೀಟರ್​ ಶಾಕ್​ ಆಗಿದ್ದಾರೆ.

ಇದನ್ನೂ ಓದಿ: ಚಾಲಕನಿಂದ ಹಣ ವಸೂಲಿ ಮಾಡಿದ ಹೋಮ್​ಗಾರ್ಡ್​: ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ವೈರಲ್​

ಪೀಟರ್​ ಈ ಘಟನೆಯನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಯರ್​ ಬಾಟಲಿಯ ಫೋಟೋವನ್ನು ಶೇರ್​ ಮಾಡುವ ಮೂಲಕ ಅತ್ಯಂತ ದುಬಾರಿ ಎಂದು ನಡೆದ ಸಂಗತಿಯನ್ನು ಬರೆದುಕೊಂಡಿದ್ದಾರೆ.

ಇನ್ನೂ ಈ ಘಟನೆಯಿಂದಾಗಿ ಬಾರ್​ ಮಾಲೀಕ ತಮ್ಮ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿದ್ದು, 49 ಲಕ್ಷ ರೂಪಾಯಿಯಲ್ಲಿ ಸ್ವಲ್ಪ ಹಣವನ್ನು ವಾಪಸ್​ ನೀಡಿದ್ದಾರೆ. ಇನ್ನು ಉಳಿದ ಹಣವನ್ನು ಒಂಬತ್ತು ದಿನಗಳ ಒಳಗಾಗಿ ನೀಡುತ್ತೇವೆಂದು ಹೇಳಿದ್ದಾರೆ
First published:September 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading