Dog Love: ಅದ್ಧೂರಿಯಾಗಿ ಶ್ವಾನದ ಬರ್ತ್ ಡೇ ಆಚರಿಸಿ 150 ಜನರಿಗೆ ಬಾಡೂಟ ಹಾಕಿಸಿದ ಯುವಕ

Viral News: ಸೈಬೀರಿಯನ್ ಹಸ್ಕಿ ತಳಿಯ ಶ್ವಾನವನ್ನು ಸಾಗುತ್ತಿರುವ ರಾಗಿಗುಡ್ಡದ ಮಹಮ್ಮದ್ ಅಯಾಜ್, ಅದಕ್ಕೆ ಟೈಸನ್ ಎಂದು ನಾಮಕರಣ ಮಾಡಿದ್ದಾರೆ.. ಜನವರಿ 13ರಂದು ಅದರ ಮೊದಲ ವರ್ಷದ ಹುಟ್ಟುಹಬ್ಬ ಇದ್ದ ಕಾರಣ ಮನೆಯ ಮುಂದೆ ಪೆಂಡಲ್ ಹಾಕಿಸಿ ಬಂಧುಮಿತ್ರರನ್ನು ಆಹ್ವಾನಿಸಿ ಕೇಕ್ ಕತ್ತರಿಸಿ ಬಾಡೂಟ ಹಾಕಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ

ಮಹಮ್ಮದ್ ಅಯಾಜ್

ಮಹಮ್ಮದ್ ಅಯಾಜ್

 • Share this:
  ಇತ್ತೀಚಿಗೆ ಸಾಕುಪ್ರಾಣಿಗಳ(Pet Animals) ಹುಟ್ಟುಹಬ್ಬ(Birthday) ಆಚರಣೆ ಮಾಡುವುದು ಒಂದು ಟ್ರೆಂಡ್(Trend) ಆಗಿದೆ.. ಮನುಷ್ಯರಿಗಿಂತ(Human) ಹೆಚ್ಚು ಆಪ್ತ ಒಡನಾಡಿ ಗಳಾಗಿರುವ ಸಾಕುಪ್ರಾಣಿಗಳನ್ನು ಮನುಷ್ಯ ತನ್ನದೇ ಸ್ವಂತ ಬಾಂಧವರು ಎನ್ನುವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾನೆ.. ಹೀಗಾಗಿಯೇ ಒಬ್ಬ ಮನುಷ್ಯನಿಗೆ ಏನೆಲ್ಲಾ ಕರ್ತವ್ಯಗಳನ್ನು(Responsibility) ಮಾಡುತ್ತಾರೋ ಎಲ್ಲಾ ಕರ್ತವ್ಯಗಳನ್ನು ಪ್ರಾಣಿಗಳಿಗೂ ಮಾಡಲು ಶುರು ಮಾಡಿದ್ದಾನೆ.. ಇದಕ್ಕೆ ಉದಾಹರಣೆ ಎಂದರೆ ಕೆಲವು ದಿನಗಳ ಹಿಂದಷ್ಟೇ ಸಾಕು ಕೋಳಿಯ ಹುಟ್ಟುಹಬ್ಬವನ್ನು(Birthday) ಮನೆಯವರು ಮಾಡಿದ್ದರು.. ಅಲ್ಲದೇ ಕೋತಿ ಹಸುಗಳಿಗೂ ಸೀಮಂತ ಹುಟ್ಟುಹಬ್ಬ ಆಚರಣೆ ಮಾಡಿ ಪ್ರಾಣಿಗಳ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು.. ಅದೇ ರೀತಿ ಈಗ ಶಿವಮೊಗ್ಗದಲ್ಲಿ ಯುವಕನೊಬ್ಬ ತನ್ನ ಮುದ್ದು ಶ್ವಾನದ ಮೇಲಿನ ಪ್ರೀತಿಯಿಂದ ಅದ್ದೂರಿಯಾಗಿ ಅದರ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾನೆ..

  ಅದ್ದೂರಿಯಾಗಿ ಶ್ವಾನದ ಹುಟ್ಟುಹಬ್ಬ ಆಚರಣೆ

  ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಯುವಕನೊಬ್ಬ ನೆಚ್ಚಿನ ಶ್ವಾನಕ್ಕೆ ಅದ್ದೂರಿಯಾಗಿ ಬರ್ತ್​ ಡೇ ಆಚರಿಸಿ, ದ್ದಾನೆ. ಇದಿಷ್ಟೇ ಅಲ್ಲದೆ ಪುಟ್ಟ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡಿದಾಗ ಕರೆದು ಊಟ ಹಾಕುವಂತೆ, ತನ್ನ ನಾಯಿಯ ಜನ್ಮದಿನ ಆಚರಣೆ ಮಾಡಿ 150ಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾನೆ.

  ಇದನ್ನೂ ಓದಿ: ದಂಪತಿಗಳು ವಿಚ್ಛೇದನ ಪಡೆದರೂ ತಮ್ಮ ಸಾಕು ಪ್ರಾಣಿಯ ಪಾಲನೆ ಮಾಡುವುದು ಕಡ್ಡಾಯ ಎಂದ ನ್ಯಾಯಾಲಯ

  ನಾಯಿಗಾಗಿ ಪ್ರತ್ಯೇಕ ಮನೆಮಾಡಿದ ಶ್ವಾನ ಪ್ರೇಮಿ

  ಸೈಬೀರಿಯನ್ ಹಸ್ಕಿ ತಳಿಯ ಶ್ವಾನವನ್ನು ಸಾಗುತ್ತಿರುವ ರಾಗಿಗುಡ್ಡದ ಮಹಮ್ಮದ್ ಅಯಾಜ್, ಅದಕ್ಕೆ ಟೈಸನ್ ಎಂದು ನಾಮಕರಣ ಮಾಡಿದ್ದಾರೆ.. ಜನವರಿ 13ರಂದು ಅದರ ಮೊದಲ ವರ್ಷದ ಹುಟ್ಟುಹಬ್ಬ ಇದ್ದ ಕಾರಣ ಮನೆಯ ಮುಂದೆ ಪೆಂಡಲ್ ಹಾಕಿಸಿ ಬಂಧುಮಿತ್ರರನ್ನು ಆಹ್ವಾನಿಸಿ ಕೇಕ್ ಕತ್ತರಿಸಿ ಬಾಡೂಟ ಹಾಕಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಅಲ್ಲದೆ ಟೈಸನ್‌ ಆರಾಮಾಗಿ ಮಲಗಲೆಂದು 13 ಸಾವಿರ ರೂ. ಮೌಲ್ಯದ ಹಾಸಿಗೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.

  ಇನ್ನು ಆಶ್ಚರ್ಯ ಅಂದ್ರೆ ಟೈಸನ್ ಸಾಕಲು ವಿರೋಧವನ್ನ ಮನೆಯವರು ವ್ಯಕ್ತಪಡಿಸಿದ ಕಾರಣ ಮೊಹಮ್ಮದ್ ರಾಗಿಗುಡ್ಡದ ಪ್ರತ್ಯೇಕವಾಗಿ ನಾಯಿಯನ್ನು ಸಾಗುತ್ತಿದ್ದಾರೆ. ಇನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲನಿಯಲ್ಲಿ ಅಯಾಜ್ ಅವರ ಅಪ್ಪ, ಅಮ್ಮ, ಅಣ್ಣ, ಅಕ್ಕಂದಿರು ವಾಸವಿದ್ದಾರೆ.

  ಶ್ವಾನಗಳ ಕೇರ್ ಸೆಂಟರ್​ಗೂ ಟೈಸನ್‌ ದಾಖಲು

  ಚನ್ನಗಿರಿಯಿಂದ ಶಿವಮೊಗ್ಗಕ್ಕೆ ವಾಪಸ್​ ಆದ ಅಯಾಜ್​, ಟೈಲ್ಸ್ ಕೆಲಸದ ಮೇಸ್ತ್ರಿಯಾಗಿದ್ದಾರೆ. ಕೆಲಸಕ್ಕೆ ಹೋಗುವಾಗ ಪ್ರೀತಿಯ ನಾಯಿ ಟೈಸನ್‌ನ್ನು ಬೊಮ್ಮನಕಟ್ಟೆಯಲ್ಲಿರುವ ಕೆನಾಲ್ನಲ್ಲಿ ಬಿಟ್ಟು ಹೋಗುತ್ತಾರೆ. ಸಂಜೆ ಬರುವಾಗ ಮನೆಗೆ ಕರೆದುಕೊಂಡು ಬರುತ್ತಾರೆ. ಟೈಸನ್ ಹುಟ್ಟುಹಬ್ಬದ ಹಿನ್ನೆಲೆ ಕೆಲಸಗಾರರಿಗೆ ರಜೆ ಕೊಟ್ಟು 150 ಜನರಿಗೆ ಬಿರಿಯಾನಿ ಊಟ ಹಾಕಿಸಿದ್ದಾರೆ.

  ಇದನ್ನೂ ಓದಿ: ನಿರ್ಗತಿಕ ವ್ಯಕ್ತಿಯನ್ನು ಅಪ್ಪಿಕೊಂಡು ಸಂತೈಸಿದ ನಾಯಿ, ಸಖತ್ ವೈರಲ್ ಆಗ್ತಿದೆ ವಿಡಿಯೋ

  ಮೊಹಮ್ಮದ್ ಗೆ ಶ್ವಾನ ಪ್ರೀತಿ ಬೆಳೆದಿದ್ದರು ಹೇಗೆ..?

  ಮಹಮ್ಮದ್ ಅಯಾಜ್ ಅವರು ಚನ್ನಗಿರಿಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆನೆದು ನಡುಗುತ್ತಿದ್ದ ನಾಯಿಯೊಂದಕ್ಕೆ ಹೋಟೆಲ್​ ಬಳಿ ಆಶ್ರಯ ನೀಡಿದ್ದರಂತೆ. ಆ ವೇಳೆ ಅಯಾಜ್​ಗೆ ಪ್ರತಿದಿನ 25 ರೂ. ಕೂಲಿ ಸಿಗುತ್ತಿತ್ತಂತೆ. ಆ ಹಣವನ್ನು ನಾಯಿಗೆ ಹಾಲು, ಊಟಕ್ಕೆ ಬಳಸುತ್ತಿದ್ದರಂತೆ. ತದನಂತರ ಆ ನಾಯಿ ಎರಡು ಮರಿಗಳನ್ನು ಹಾಕಿತ್ತು. ಅವುಗಳನ್ನು ಹೋಟೆಲ್​ಗೆ ಬಂದ ಗ್ರಾಹಕರು ಕೊಂಡೊಯ್ದಿದ್ದರು. ನಾಯಿ ಹೋದ ಮೇಲೆ ಅಯಾಜ್​ಗೆ ಏನೋ ಒಂಥರಾ ಕಳವಳ, ಮಿಸ್ಸಿಂಗ್​ ಆಗೋಕೆ ಶುರುವಾಯ್ತಂತೆ. ತಾನೂ ಒಂದು ನಾಯಿ ಮರಿ ಸಾಕಬೇಕು ಎಂದು ನಿರ್ಧರಿಸಿದಾಗ ಮನೆಯಲ್ಲಿ ಇದಕ್ಕೆ ವಿರೋಧ ಬಂತಂತೆ. ಆದರೂ ಶ್ವಾನದ ಮೇಲಿನ ಪ್ರೀತಿ ಅಯಾಜ್​ಗೆ ಹೆಚ್ಚುತ್ತಲೇ ಇದ್ದು, ಅದಕ್ಕಾಗಿಯೇ ಪ್ರತ್ಯೇಕ ಮನೆ ಮಾಡಿ ಸಾಕುತ್ತಿದ್ದಾರೆ.
  Published by:ranjumbkgowda1 ranjumbkgowda1
  First published: