Viral Story: ಮನುಷ್ಯರಂತೆ ಹಲ್ಲುಗಳಿರುವ ಭಯಾನಕ ಮೀನು ಪತ್ತೆ.. ಇದರ ಹಿಂದಿನ ರಹಸ್ಯವೇನು?

ಶೀಪ್ ಹೆಡ್ ಮೀನುಗಳ ಹಲ್ಲುಗಳು ಕೂಡ ಮನುಷ್ಯರಂತೆಯೇ ಇರುವುದರಿಂದ ಅವುಗಳು ಕೂಡ ಸರ್ವಭಕ್ಷಕಗಳು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮೀನುಗಳು ಸಾಮಾನ್ಯವಾಗಿ 5 ರಿಂದ 15 ಪೌಂಡ್ ತೂಗುತ್ತವೆ.

ಮನುಷ್ಯರಂತೆ ಹಲ್ಲುಗಳಿರುವ ಮೀನು

ಮನುಷ್ಯರಂತೆ ಹಲ್ಲುಗಳಿರುವ ಮೀನು

 • Share this:

  ಅಮೆರಿಕದ ಹೊರ ವಲಯದಲ್ಲಿ ಮೀನುಗಾರನೊಬ್ಬ ಹಿಡಿದಿರುವ ಮೀನನ್ನು ಕಂಡು ಜನ ದಂಗಾಗಿದ್ದಾರೆ. ಓಹೋ, ಅದು ಭಾರೀ ಗಾತ್ರದ ಮೀನಾಗಿರಬೇಕು ಅಥವಾ ಅದರ ಬಣ್ಣ ಮತ್ತು ಆಕಾರದಲ್ಲಿ ಭಿನ್ನತೆ ಇರಬೇಕು ಎಂದು ಊಹಿಸಿತೊಡಗಿದಿರಾ? ನಿಮ್ಮ ಊಹೆ ತಪ್ಪು. ಅದ್ಯಾವುದೂ ಅಲ್ಲ, ಆ ಮೀನು, ಮನುಷ್ಯರಿಗೆ ಇರುವಂತಹ  ಹಲ್ಲುಗಳನ್ನು ಹೊಂದಿದೆ. ಜೆನೆಟ್ಸ್ ಫೀರ್ ಎಂಬವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಈ ಕುರಿತ ಫೋಟೋಗಳನ್ನು ಹಂಚಿಕೊಂಡಿದ್ದು, ಮೀನುಗಾರ ನತನ್ ಮಾರ್ಟಿನ್‌ “ಸುಂದರ ಹಲ್ಲಿನ’ 9 ಪೌಂಡ್ ತೂಕದ ಶೀಪ್‍ಹೆಡ್ (ಕುರಿ ತಲೆ ಮೀನು) ಮೀನನ್ನು ಹಿಡಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ.


  ಶೀಪ್‍ಹೆಡ್ ಮೀನು ಸಾಮಾನ್ಯವಾಗಿ ಬಂಡೆಗಳು, ಜೆಟ್ಟಿಗಳು ಮತ್ತು ಸೇತುವೆಗಳ ಬಳಿ ಕಂಡು ಬರುತ್ತವೆ. ಅವುಗಳಿಗೆ ಕಪ್ಪು ಮತ್ತು ಬಿಳಿ ಪಟ್ಟಿಗಳಿರುವುದರಿಂದ ಅವನ್ನು ‘ಅಪರಾಧಿ ಮೀನು’ (ಕನ್ವಿಕ್ಟ್ ಫಿಶ್) ಎಂದು ಕರೆಯುತ್ತಾರೆ.
  ಅವರು ಪೋಸ್ಟ್ ಮಾಡಿರುವ ಒಂದು ಫೋಟೋದಲ್ಲಿ, ಶೀಪ್‍ಹೆಡ್ ಮೀನು ತನ್ನ ಬಿಳಿ ಮುತ್ತಿನಂತ ಮೇಲಿನ ಮತ್ತು ಕೆಳ ಹಲ್ಲುಗಳ ಪಂಕ್ತಿಗಳನ್ನು ತೋರಿಸುತ್ತಿರುವುದನ್ನು ಕಾಣಬಹುದು.


  ಶೀಪ್ ಹೆಡ್ ಮೀನುಗಳ ಹಲ್ಲುಗಳು ಕೂಡ ಮನುಷ್ಯರಂತೆಯೇ ಇರುವುದರಿಂದ ಅವುಗಳು ಕೂಡ ಸರ್ವಭಕ್ಷಕಗಳು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮೀನುಗಳು ಸಾಮಾನ್ಯವಾಗಿ 5 ರಿಂದ 15 ಪೌಂಡ್ ತೂಗುತ್ತವೆ. ಅವು ಹೆಚ್ಚಾಗಿ ಉತ್ತರ ಕೆರೋಲಿನಾದ ಕರಾವಳಿಯಲ್ಲಿ ಕಂಡು ಬರುತ್ತವೆ.


  ಶೀಪ್‍ಹೆಡ್ ಮೀನು ತನ್ನ ಬೇಟೆಯ ಚಿಪ್ಪನ್ನು ಪುಡಿ ಮಾಡಲು ಮುಂಭಾಗದ ಹಲ್ಲುಗಳನ್ನು ಬಳಸುತ್ತದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1,200ಕ್ಕೂ ಹೆಚ್ಚು ಮೆಚ್ಚುಗೆ ಮತ್ತು ನೂರಾರು ಪ್ರತಿಕ್ರಿಯೆಗಳನ್ನು ಪಡೆದಿದೆ. “ದಂತಕವಚಗಳು ಬಂದಿರುವುದು ಇಲ್ಲಿಂದಲೆ..?” ಎಂದು ಒಬ್ಬ ನೆಟ್ಟಿಗ ಪ್ರಶ್ನಿಸಿದ್ದರೆ, ಇನ್ನೊಬ್ಬರು, ”ಆ ಮೀನಿಗೆ ನನಗಿಂತ ಉತ್ತಮ ಹಲ್ಲುಗಳಿವೆ” ಎಂದು ಬರೆದಿದ್ದಾರೆ.


  ಇದನ್ನೂ ಓದಿ: Neelakurinji Flowers: ಮನುಷ್ಯರ ವಯಸ್ಸನ್ನು ಹೇಳುವ ನೀಲಿ ಹೂಗಳು.. ನಿಗೂಢಗಳ ಆಗರ ಈ ನೀಲಿ ಸುಂದರಿ!

  “ಅಂತಹ ಹಲ್ಲುಗಳನ್ನು ಬಯಸುವ ಜನರನ್ನು ನಾನು ಬಲ್ಲೆ” ಎಂದು ಒಬ್ಬರು ಹಾಸ್ಯ ಮಾಡಿದ್ದರೆ, ಮತ್ತೊಬ್ಬ ನೆಟ್ಟಿಗ “ಇದು ಭಯಾನಕವಾಗಿದೆ” ಎಂದು ಬರೆದಿದ್ದಾರೆ. ಶೀಪ್‍ಹೆಡ್ ಮೀನಿನ ಹಲ್ಲುಗಳನ್ನು ಕಂಡು ನೆಟ್ಟಿಗರು ದಂಗಾಗಿರುವುದು ಇದೇ ಮೊದಲಲ್ಲ. ಫೆಬ್ರವರಿ ತಿಂಗಳಲ್ಲಿ ಫ್ಲೋರಿಡಾದ ಮೆಲ್ಬರ್ನ್ ಸಮೀಪ ಪೌಲ್ ಲೋರ್ ಎಂಬ ಮೀನುಗಾರರೊಬ್ಬರು ಶೀಪ್‍ಹೆಡ್ ಮೀನನ್ನು ಹಿಡಿದಿದ್ದರು.


  “ಅದರ ಹಲ್ಲುಗಳನ್ನು ಮನುಷ್ಯರ ಹಲ್ಲುಗಳಂತೆ ಇದೆ ಎಂದು ವರ್ಣಿಸಬಹುದು, ಆದರೆ ಕೂಲಂಕುಶವಾಗಿ ಪರಿಶೀಲಿಸಿ ನೋಡಿದಾಗ ಅವು ಶಾರ್ಕ್ ಮೀನಿನ ಹಲ್ಲಿನ ಸಾಲುಗಳನ್ನು ಹೋಲುತ್ತವೆ ಎಂಬುವುದು ತಿಳಿಯುತ್ತದೆ. ಹೆಚ್ಚಿನವು 2 - 3 ಸಾಲುಗಳನ್ನು ಹೊಂದಿದ್ದು, ಅತ್ಯಂತ ಬಲಿಷ್ಟವಾಗಿವೆ. ನೀವು ಇನ್ನೆಂದೂ ಆ ಹಲ್ಲುಗಳ ಹತ್ತಿರ ಹೋಗದಂತೆ ಮಾಡಲು ಅಷ್ಟು ಶಕ್ತಿ ಸಾಕು” ಎನ್ನುತ್ತಾರೆ ಪೌಲ್.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: