• Home
  • »
  • News
  • »
  • trend
  • »
  • Lion Fish:ಈ ಮೀನು ಅದೆಷ್ಟು ವಿಷಕಾರಿ ಎಂದರೆ ಅದನ್ನು ಮುಟ್ಟಿದರೂ ಜೀವಕ್ಕೆ ಅಪಾಯ ತಪ್ಪಿದ್ದಲ್ಲ

Lion Fish:ಈ ಮೀನು ಅದೆಷ್ಟು ವಿಷಕಾರಿ ಎಂದರೆ ಅದನ್ನು ಮುಟ್ಟಿದರೂ ಜೀವಕ್ಕೆ ಅಪಾಯ ತಪ್ಪಿದ್ದಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Man Catches Lion Fish: ಈ ಲಯನ್ ಫಿಶ್, ದಕ್ಷಿಣ ಫೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಸ್ಥಳಿಯ ಪ್ರಭೇದವಾಗಿದೆ. ಹಾಗಾಗಿ, ಬಹುಶ: ಅಫ್ರೋನ್ ಹಿಡಿದ ಈ ಮೀನು ಇಟಲಿಯಿಂದ ಬ್ರಿಟನ್‍ಗೆ ಪ್ರಯಾಣಿಸಿರಬಹುದು ಎಂದು ಸಮುದ್ರ ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • Share this:

ಕೆಲವು ಸಮುದ್ರ ಜೀವಿಗಳು(Sea Creatures) ವಿಚಿತ್ರವಾಗಿರುತ್ತವೆ. ಕೆಲವಂತೂ ಹೆದರಿಕೆ ಹುಟ್ಟಿಸುವಂತೆ ಇರುತ್ತವೆ. ಆದರೆ ಇನ್ನು ಕೆಲವು ಸಮುದ್ರ ಜೀವಿಗಳು ನಿಜಕ್ಕೂ ಪ್ರಾಣಘಾತಕವಾಗಿರುತ್ತವೆ. ಇದು ಅಂತದ್ದೇ ಪ್ರಾಣಘಾತಕ ಸಮುದ್ರ ಜೀವಿಗೆ ಸಂಬಂಧಿಸಿದ ವರದಿ ಇದು. ಆ ಸಮುದ್ರ ಜೀವಿ ಲಯನ್ ಫಿಶ್(Lion Fish). ಯುಕೆಯ ಡಾರ್ಸೆಟ್ ತೀರದಲ್ಲಿ , ಬಹುಶ: ಮೊತ್ತ ಮೊದಲ ಬಾರಿಗೆ ಈ ಮೀನನ್ನು ಹಿಡಿಯಲಾಗಿದೆ. ಚೇಸಿಲ್ ಸಮುದ್ರ (Chesil Beach)ತೀರದಲ್ಲಿ, ಸೆಪ್ಟೆಂಬರ್ 30ರಂದು 39 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಮೀನು ಹಿಡಿಯುತ್ತಿದ್ದಾಗ ಈ ಮೀನು ಅವರ ಬಲೆಗೆ ಬಿದ್ದಿದೆ. ಇದು ಆರು ಇಂಚು ಉದ್ದದ ಮೀನು.


ಅರ್ಫೋನ್ ಸಮ್ಮರ್ಸ್ ಎಂಬ ವ್ಯಕ್ತಿ ತನ್ನ ತಂದೆ ಬಿಲ್ ಜೊತೆಗೆ ಆರಾಮವಾಗಿ ಮೀನುಗಾರಿಕೆಯ ಖುಷಿಯನ್ನು ಅಹ್ಲಾದಿಸುತ್ತಿದ್ದ, ಆದರೆ ತಾನು ಹಿಡಿದಿರುವುದು ಜಗತ್ತಿನ ಅತ್ಯಂತ ಮಾರಣಾಂತಿಕ ಮೀನು ಎಂಬುವುದು ಅವನಿಗೆ ಗೊತ್ತಿರಲಿಲ್ಲ.


ಇಂಡೋ ಫೆಸಿಫಿಕ್ ಸಾಗರದಲ್ಲಿ ಕಂಡು ಬರುವ ಈ ವಿಷಕಾರಿ ಲಯನ್ ಫಿಶ್ ಅನ್ನು ಟೆರೋಯಿಸ್ ಎಂದು ಕೂಡ ಕರೆಯುತ್ತಾರೆ. ಆ ಮೀನಿಗೆ ಜೀಬ್ರಾ ಮೀನು, ಫೈರ್‌ಫಿಶ್‌ , ಟರ್ಕಿ ಮೀನು ಅಥವಾ ಬಟರ್‌ ಫ್ಲೈ ಅಥವಾ ಕಾಡ್ ಮುಂತಾದ ಹೆಸರುಗಳು ಕೂಡ ಇವೆ.


ಇದನ್ನೂ ಓದಿ: ಬಾಟಲಿಯೊಳಗೆ ವ್ಯಕ್ತಿಯ ಖಾಸಗಿ ಅಂಗ, ಎರಡು ತಿಂಗಳು ಯಾರಿಗೂ ಹೇಳ್ಲೇ ಇಲ್ಲ...ಕೊನೆಗೆ ವೈದ್ಯರೇ ಬರ್ಬೇಕಾಯ್ತು


ಲಯನ್ ಮೀನು ಕೆಂಪು, ಬಿಳಿ ಮತ್ತು ಕೆನೆ ಕಪ್ಪು ಬಣ್ಣದ ಪಟ್ಟಿಗಳು, ಪೆಕ್ಟೋರಲ್‌ ರೆಕ್ಕೆಗಳು ಮತ್ತು ಚೂಪಾದ ಮುಳ್ಳುಗಳನ್ನು ಹೊಂದಿರುತ್ತವೆ. ಮನುಷ್ಯರು ಆ ಮುಳ್ಳುಗಳನ್ನು ಸ್ಪರ್ಶಿಸಿದರೆ ಸಾಕು, ತೀವ್ರವಾದ ನೋವು ಉಂಟಾಗುವುದು ಮಾತ್ರವಲ್ಲ, ಅದರಿಂದ ಪಾರ್ಶ್ವವಾಯು ಕೂಡ ಉಂಟಾಗಬಹುದು. ಮನುಷ್ಯರು ಲಯನ್ ಮೀನನ್ನು ಸ್ಪರ್ಶಿಸಿ ಸಾವಿಗೆ ತುತ್ತಾದ ಪ್ರಕರಣಗಳು ಕೂಡ ಇವೆ. ಆದರೆ, ಅವುಗಳು ಸಾಮಾನ್ಯವಾಗಿ ಸಣ್ಣ ಮೀನುಗಳನ್ನು, ಮೃದ್ವಂಗಿಗಳು ಮತ್ತು ಅಕಶೇರುಖಗಳನ್ನು ಬೇಟೆಯಾಡಿ ಬದುಕುತ್ತವೆ.


ತಾನು ಹಿಡಿದ ಮೀನನ್ನು ತಪ್ಪಿಸಿಕೊಳ್ಳಲು ಬಿಡಲಿಲ್ಲ, ಏಕೆಂದರೆ ಅವುಗಳು ‘ಆಕ್ರಮಣಕಾರಿ ಪ್ರಬೇಧಗಳು’ ಎಂದು ಅಫ್ರೋನ್,   ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆ ಮೀನು ತನ್ನ ಮಗನಿಗೆ ಕಚ್ಚಲಿಲ್ಲ ಎಂದು ಅಫ್ರೋನ್ ತಂದೆ ಸಂತಸ ಪಟ್ಟಿದ್ದಾರೆ. “ ಆ ಮೀನು ಅವನಿಗೆ ಕುಟುಕಲಿಲ್ಲ ಎಂದು ನನಗೆ ಸಂತೋಷವಾಗಿದೆ. ಅದನ್ನು ಬೇರೆ ಯಾರೂ ಹಿಡಿದಿಲ್ಲ ಎಂದಾದರೆ, ಅದು  ದಾಖಲೆ  ಮಾಡಿದಂತೆ  ಬಿಲ್ ಹೇಳಿದ್ದಾರೆ.


ಈ ಲಯನ್ ಫಿಶ್, ದಕ್ಷಿಣ ಫೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಸ್ಥಳಿಯ ಪ್ರಭೇದವಾಗಿದೆ. ಹಾಗಾಗಿ, ಬಹುಶ: ಅಫ್ರೋನ್ ಹಿಡಿದ ಈ ಮೀನು ಇಟಲಿಯಿಂದ ಬ್ರಿಟನ್‍ಗೆ ಪ್ರಯಾಣಿಸಿರಬಹುದು ಎಂದು ಸಮುದ್ರ ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಈ ಮೀನನ್ನು ಅಕ್ವೇರಿಯಂನಲ್ಲಿ ಇರಿಸಿದ ಬಳಿಕ, ಅದನ್ನು ಸಮುದ್ರಕ್ಕೆ ಎಸೆದಿರುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಈ ಪರಭಕ್ಷಕಗಳು ಕೆಟ್ಟದಾಗಿ ಚುಚ್ಚಬಹುದು ಮತ್ತು ಪ್ರಾಣ ತೆಗೆಯಬಲ್ಲವು. ನೀವು ಈಜುವಾಗ ಅಥವಾ ಸ್ನೊರ್ಕಿಲಿಂಗ್ ಮಾಡುವಾಗ ಸುಲಭವಾಗಿ ಅದರಿಂದ ಚುಚ್ಚಿಸಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: 21 ದಿನಗಳ ಕಾಲ ಬೆತ್ತಲಾಗಿ ಕಾಡಿನಲ್ಲಿ ಸುತ್ತಾಡುತ್ತಾರೆ ಜೋಡಿಗಳು! ಈ ರಿಯಾಲಿಟಿ ಶೋ ನೋಡಿದ್ದೀರಾ?


ಅದರ ಸಮೀಪಕ್ಕೆ ಹೋದರೆ ಮುಳ್ಳುಗಳನ್ನು ಮುಳ್ಳು ಹಂದಿಯಂತೆ ಹೊರ ಹಾಕುತ್ತದೆ ಮತ್ತು ಅವು ಗುಂಪಿನಲ್ಲಿ ಇದ್ದಾಗ ಜೊತೆಯಾಇ ಆಕ್ರಮಣ ಮಾಡುತ್ತವೆ” ಎಂದು ಪ್ಲಿಮೌತ್ ವಿಶ್ವವಿದ್ಯಾನಿಲಯದ ಲಯನ್ ಫಿಶ್ ತಜ್ಞ ಜಾಸನ್ ಹಾಲ್ - ಸ್ಪೆನ್ಸರ್ ಹೇಳಿದ್ದಾರೆ.

First published: