Kanwar Yatra: ಕನ್ವರ್ ಯಾತ್ರೆಯಲ್ಲಿ ಆಧುನಿಕ ಶ್ರವಣ ಕುಮಾರ! ವೈರಲ್ ವೀಡಿಯೋ ನೋಡಿ

ಶ್ರಾವಣ ಮಾಸದಲ್ಲಿ ಶಿವ ಭಕ್ತರು ಪವಿತ್ರ ತೀರ್ಥಸ್ಥಳಗಳಿಗೆ ಕನ್ವರ್ ಯಾತ್ರೆ ಮಾಡುತ್ತಾರೆ. ಜಾರ್ಖಂಡಿನ ದಿಯೋಘರ್ ದೇವಾಲಯದ ಕನ್ವರ್ ಯಾತ್ರೆಯಲ್ಲಿ ವ್ಯಕ್ತಿಯೊಬ್ಬ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಭುಜದಲ್ಲಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ತುಂಬಾನೇ ವೈರಲ್ ಆಗುತ್ತಿದೆ.

ತಂದೆ ತಾಯಿಯನ್ನು ಭುಜದಲ್ಲಿ ಎತ್ತಿಕೊಂಡಿರುವ ವ್ಯಕ್ತಿ

ತಂದೆ ತಾಯಿಯನ್ನು ಭುಜದಲ್ಲಿ ಎತ್ತಿಕೊಂಡಿರುವ ವ್ಯಕ್ತಿ

  • Share this:
ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರುಗಳೆಂದರೆ ಅದು ತಂದೆ ತಾಯಿ (Parents). ಪ್ರತಿ ತಂದೆ ತಾಯಿಯೂ ತಮ್ಮ ಸಂತೋಷಗಳನ್ನು ಬದಿಗಿಟ್ಟು ಮಕ್ಕಳ ಖುಷಿಗಾಗಿ, ಅವರ ಕನಸುಗಳ (Dreams) ಈಡೇರಿಕಾಗಿ ಬದುಕುತ್ತಾರೆ. ಅಂತಹ ತಂದೆ ತಾಯಿಯನ್ನು ಅಷ್ಟೇ ಕಾಳಜಿಯಿಂದ ಅವರ ವೃದ್ದಾಪ್ಯದಲ್ಲಿ (Old age) ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿರುತ್ತದೆ. ಆದರೆ ಪ್ರಸ್ತುತ ಕೆಲವರು ತಮ್ಮ ವಯಸ್ಸಾದ ತಂದೆ ತಾಯಿಯನ್ನು ಮನೆಯಿಂದ ಹೊರಹಾಕುವುದನ್ನು ಹೆಚ್ಚಾಗಿ ಕಾಣುತ್ತೇವೆ. ಇಂತಹವರ ನಡುವೆ ಕನ್ವರ್ ಯಾತ್ರೆಗೆ (Kanwar Yatra) ತಂದೆ ತಾಯಿಯನ್ನು ತನ್ನ ಭುಜಗಳಲ್ಲಿ ತಕ್ಕಡಿಯ (Scale) ಮೂಲಕ ಕರೆದುಹೋಗುತ್ತಿರುವ ವ್ಯಕ್ತಿ ಎಲ್ಲರ ಗಮನ ಸೆಳೆದಿದ್ದಾರೆ.

ಆಧುನಿಕತೆಯ ಹುಚ್ಚಿಗೆ ಒಳಗಾಗಿ ಇಂದು ಅನೇಕ ಮಂದಿ ತಮ್ಮ ವಯಸ್ಸಾದ ತಂದೆ ತಾಯಿಯನ್ನು ಮನೆಯಿಂದ ಹೊರಹಾಕುವುದು, ವೃದ್ಧಾಶ್ರಮಕ್ಕೆ ಸೇರಿಸುವುದು ಅಥವಾ ಅವರನ್ನು ಎಲ್ಲಿಯಾದರೂ ಬಿಟ್ಟು ಬರುವುದನ್ನು ಹೆಚ್ಚಾಗಿ ಕಾಣುತ್ತೇವೆ. ಅವರ ನಡುವೆ ತಂದೆ ತಾಯಿಯನ್ನು ಕನ್ವರ್ ಯಾತ್ರೆಗೆ ತನ್ನ ಭುಜದಲ್ಲಿ ಎತ್ತಿಕೊಂಡು ಹೋಗುತ್ತಿರುವ ಈ ವ್ಯಕ್ತಿಯೊಬ್ಬ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Viral Video: ಮಗನ ಮೃತ ದೇಹ ಪಡೆಯಲು ಪೋಷಕರು ಪಡುವ ಕಷ್ಟ ನೋಡಿ; ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ

ತಕ್ಕಡಿಯಲ್ಲಿ ಕೂರಿಸಿ ತಂದೆ ತಾಯಿಯನ್ನು ಭುಜದಲ್ಲಿ ಎತ್ತಿಕೊಂಡ ವ್ಯಕ್ತಿ
ಶ್ರಾವಣ ಮಾಸದಲ್ಲಿ ಶಿವ ಭಕ್ತರು ಹೆಚ್ಚಾಗಿ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಪ್ರತಿ ವರ್ಷ ಬರಿಗಾಲಿನಲ್ಲಿ ನಡೆಯುವ ಕನ್ವರಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಆದರೆ ಈ ಬಾರಿ ಜಾರ್ಖಂಡಿನ ಶಿವನ ನಗರವಾದ ದಿಯೋಘರ್ ಯಾತ್ರೆಯಲ್ಲಿ ವ್ಯಕ್ತಿಯೊಬ್ಬ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ತನ್ನ ಭುಜದಲ್ಲಿ ಹೊತ್ತುಕೊಂಡು ಬರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.





ವ್ಯಕ್ತಿಯನ್ನು ಆಧುನಿಕ ಶ್ರವಣ ಕುಮಾರ ಎಂದ ಐಪಿಎಸ್ ಅಧಿಕಾರಿ
ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಪೋಷಕರನ್ನು ತಿರಸ್ಕರಿಸುತ್ತಾರೆ ಮತ್ತು ಅವರನ್ನು ಮನೆಯಿಂದ ಹೊರಹಾಕುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದ ದೃಶ್ಯವೊಂದು ಕಂಡುಬಂದಿದೆ. ಪಲ್ಲಕ್ಕಿಯಲ್ಲಿ ತನ್ನ ವೃದ್ಧ ತಂದೆ-ತಾಯಿಯೊಂದಿಗೆ ಕನ್ವರ್ ಯಾತ್ರೆಗೆ ಬಂದ ಲಕ್ಷಾಂತರ ಶಿವಭಕ್ತರಲ್ಲಿ ಒಬ್ಬ ಶ್ರವಣಕುಮಾರನಿದ್ದಾನೆ. ಅವನಿಗೆ ನನ್ನ ನಮನಳು!" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕನ್ನರ್ ಯಾತ್ರೆಯ ವಿಶೇಷತೆ
ಕನ್ವರ್ ಯಾತ್ರೆಯು ವಿವಿಧ ರಾಜ್ಯಗಳಲ್ಲಿ ನಡೆಸಲಾಗುವ ಆಚರಣೆಗಳಲ್ಲಿ ಒಂದಾಗಿದೆ, ಇಲ್ಲಿ ಭಕ್ತರು ಗಂಗಾ ನದಿಯ ಪವಿತ್ರ ನೀರನ್ನು ತರಲು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ಆ ನೀರನ್ನು ತಮ್ಮ ಊರಿನ ದೇವಸ್ಥಾನಕ್ಕೆ ಕೊಂಡು ಹೋಗುತ್ತಾರೆ.

ಈ ಯಾತ್ರೆಯಲ್ಲಿ ಭಕ್ತರು ಸಾಮಾನ್ಯವಾಗಿ ಒಬ್ಬರಿಗೊಬ್ಬರು ಭೋಲೆ ಎಂದು ಕರೆಯುತ್ತಾರೆ. ಭೋಲೆನಾಥ ಎಂಬುದು ಶಿವನ ಹೆಸರಾಗಿದೆ. ಆದ್ದರಿಂದ ಅವನ ಆರಾಧನೆಗಾಗಿ ಮಾಡುವ ಕನ್ವರ್ ಯಾತ್ರೆಯಲ್ಲಿ ಅವನ ಭಕ್ತರು ಒಬ್ಬರಿಗೊಬ್ಬರು ಭೋಲೆ ಎಂದು ಕರೆದುಕೊಳ್ಳುತ್ತಾರೆ. ಅಲ್ಲದೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಶಿವ ಭಕ್ತರನ್ನು ಕನ್ವರಿಗಳು ಎಂದು ಕರೆಯುತ್ತಾರೆ.

ಹೆಚ್ಚಾಗಿ ಯಾತ್ರೆ ಕೈಗೊಳ್ಳುವ ಪವಿತ್ರ ಸ್ಥಳಗಳು
ಗಂಗಾನದಿಯ ಪವಿತ್ರ ಜಲವನ್ನು ತರಲು ಭಕ್ತರು ಹಿಂದೂ ಯಾತ್ರಾ ಸ್ಥಳಗಳಾದ ಹರಿದ್ವಾರ, ಗೌಮುಖ ಮತ್ತು ಉತ್ತರಾಖಂಡದ ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ಗೆ ಹೆಚ್ಚಾಗಿ ತೀರ್ಥಯಾತ್ರೆ ಕೈಗೊಳ್ಳತ್ತಾರೆ.

ಇದನ್ನೂ ಓದಿ: Children: ಅಪ್ಪ-ಅಮ್ಮನಲ್ಲಿ ಹೊಂದಾಣಿಕೆ ಸರಿ ಇದ್ದರೆ ಮಕ್ಕಳು ಖಂಡಿತಾ ಯಶಸ್ಸು ಕಾಣುತ್ತಾರಂತೆ!

ಕನ್ವರ್ ಯಾತ್ರೆಗಾಗಿ ಹೆಚ್ಚಿಸಿದ ಭದ್ರತೆ
ಕನ್ವರ್ ಯಾತ್ರೆಗಾಗಿ ಈ ವರ್ಷ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಳೆದ ವಾರ, ಆಡಳಿತವು ಸಂಪೂರ್ಣ ಗಾಜಿಯಾಬಾದ್ ಜಿಲ್ಲೆಯನ್ನು ಅದರ ಸುಗಮ ನಡವಳಿಕೆಗಾಗಿ ಭದ್ರತಾ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ವಲಯಗಳು, ಮತ್ತು ಉಪವಿಭಾಗಗಳಾಗಿ ವಿಂಗಡಿಸಿದೆ.
Published by:Nalini Suvarna
First published: