Viral Video: ಬೆಂಕಿ ರೂಪದಲ್ಲಿ ಕಂಡ ಮಿಂಚು; ವೈರಲ್ ಆಯ್ತು ವಿಡಿಯೋ

Man Captures Fiery Lightning Strike: ವಿಡಿಯೋ ಕ್ಲಿಪ್ ಆನ್‍ಲೈನ್‍ನಲ್ಲಿ ಹಂಚಿಕೊಂಡಾಗಿನಿಂದ, ಹಲವಾರು ಬಳಕೆದಾರರು ಕಾಮೆಂಟ್ ಮಾಡಿದರು. ಈ ವಿಡಿಯೋವನ್ನು ಸುಮಾರು 9,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಪ್ರತಿಕ್ರಿಯಿಸಿದ್ದಾರೆ

Viral Video

Viral Video

  • Share this:
    Viral Video Today: ಏಕಾಏಕಿ ಬೆಂಕಿಯ ರೀತಿಯ ಮಿಂಚು ಕಂಡು ನೆಟ್ಟಿಜನ್‍ಗಳು ಆಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆತಂಕಗೊಂಡಿದ್ದಾರೆ. ಹೌದು ಮಹಾರಾಷ್ಟ್ರದ ಕೊಲ್ಹಾಪುರದ ಸಮೀಪ ಬೆಂಕಿ ರೂಪದ ಮಿಂಚು ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.ಇದೇ ವರ್ಷದ ಮೇ ತಿಂಗಳಲ್ಲಿ ಕಾಣಿಸಿಕೊಂಡ ಈ ಮಿಂಚಿನ ವಿಡಿಯೊವನ್ನು ಮೊದಲು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿತ್ತು. ತಡವಾಗಿ ಈ ವಿಡಿಯೊ ವೈರಲ್ ಆಗಿದ್ದು, ಈ ವಿಡಿಯೋ ನೋಡಿದವರು ಒಂದೆರಡು ನಿಮಿಷಗಳ ಕಾಲ ದಂಗಾಗಿರುವುದು ಮಾತ್ರ ಸತ್ಯ.

    ಈ ವಿಡಿಯೋ ಮಾಡಿದ ವ್ಯಕ್ತಿಯ ಹೆಸರು ರಾಕೇಶ್ ರಾವುತ್ . ಈತನ ಮನೆಯಿಂದ ಸುಮಾರು 200 ಮೀಟರ್ ಅಂತರದಲ್ಲಿ ಈ ಆಶ್ಚರ್ಯಕರ ಘಟನೆ ನಡೆದಿದೆ. ಮಿಂಚು ಎಷ್ಟು ಪ್ರಬಲವಾಗಿತ್ತೆಂದರೆ ಆ ಸ್ಥಳದಲ್ಲಿ ಬಾಂಬ್ ಸ್ಪೋಟಗೊಂಡ ಬರುವ ಬೆಂಕಿಯಂತೆ ಕಾಣಿಸಿತು. ತಕ್ಷಣವೇ ದಟ್ಟವಾದ ಹೊಗೆಯು ಸುತ್ತಮುತ್ತಲು ಆವರಿಸಿತು. ತದನಂತರ ಭಾರೀ ಗುಡುಗುಗಳು ಸಂಭವಿಸಿದವು.

    ರಾಕೇಶ್ ರಾವುತ್ ಹೇಳುವುದೇನು?:

    ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವ ಸಲುವಾಗಿ ಮಲಗಿದ್ದೆ. ಆಗ ಬಿರುಗಾಳಿ ರೀತಿಯಲ್ಲಿ ಗಾಳಿ ಬೀಸಲಾರಂಭಿಸಿತು. ನಂತರ ಎದ್ದು ಏನಾಗುತ್ತಿರಬಹುದೆಂದು ನೋಡಿ ಮೊಬೈಲ್ ತೆಗೆದುಕೊಂಡು ವಿಡಿಯೋ ಮಾಡುತ್ತಿದ್ದ ವೇಳೆ ಸ್ವಲ್ಪ ದೂರದಲ್ಲಿಯೇ ಬೆಂಕಿ ರೂಪದ ಮಿಂಚು ಕಾಣಿಸಿಕೊಂಡಿತು. ತದನಂತರ ಜೋರಾಗಿ ಗುಡುಗುಗಳು ಸಹ ಸಂಭವಿಸಿದವು. ಈ ವಿಡಿಯೋ 18 ಸೆಕೆಂಡುಗಳಿದ್ದು, ಭಾರೀ ಪ್ರಮಾಣದ ಮಿಂಚು ಸಂಭವಿಸಿದ ಕೆಲವು ಸೆಕೆಂಡುಗಳ ನಂತರ ಹಕ್ಕಿಗಳ ಹಿಂಡು ಹಾರಿಹೋಗುತ್ತಿರುವುದನ್ನು ಕಾಣಬಹುದು. ರಾವುತ್ ಅವರ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ವಿದ್ಯುತ್ ಸರಬರಾಜು ಲೈನ್ ಬಳಿ ಮಿಂಚು ಸಂಭವಿಸಿತು. ಹಾಗಾಗಿ ಇದನ್ನು ಚಿತ್ರೀಕರಿಸಲು ಸಾಧ್ಯವಾಯಿತು.

    ಇದನ್ನೂ ಓದಿ: ನಿಮ್ಮ ಪ್ರವಾಸದ ಕನಸು ನನಸಾಗಲು ಫ್ಲಿಪ್​​ಕಾರ್ಟ್​​ ₹1 ಲಕ್ಷ ನೀಡುತ್ತಿದೆ.. ನೀವೂ ಗೆಲ್ಲಿ

    ರಾವುತ್ ಹೇಳುವಂತೆ ಮಿಂಚು ಸ್ವಲ್ಪ ದೂರದಲ್ಲಿ ಸಂಭವಿಸಿತು, ಅದು ತುಂಬಾ ಹತ್ತಿರದಲ್ಲಿಯೇ ನನಗೆ ಕಾಣಿಸಿತು. ಈ ದೊಡ್ಡ ಗಾತ್ರದ ಮಿಂಚು ಜನರನ್ನು ಒಮ್ಮೆಲೆ ಹೆದರಿಸಿದಂತೂ ಸತ್ಯ ಮತ್ತು ಈ ಮಿಂಚಿನ ಶಬ್ದಕ್ಕೆ ಜನರು ಭಯದಿಂದ ಕಿರುಚಲಾರಂಭಿಸಿದರು ಎಂದು ಅವರು ಹೇಳಿದರು. ಮಿಂಚಿನ ನಂತರ ಜನರು ಸುರಕ್ಷಿತ ಸ್ಥಳಕ್ಕೆ ಓಡಿದರು ಮತ್ತು ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.



    ಈ ವಿಡಿಯೋ ಕ್ಲಿಪ್ ಆನ್‍ಲೈನ್‍ನಲ್ಲಿ ಹಂಚಿಕೊಂಡಾಗಿನಿಂದ, ಹಲವಾರು ಬಳಕೆದಾರರು ಕಾಮೆಂಟ್ ಮಾಡಿದರು. ಈ ವಿಡಿಯೋವನ್ನು ಸುಮಾರು 9,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಪ್ರತಿಕ್ರಿಯಿಸಿದ್ದಾರೆ. ವೀಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರು, ಮಿಂಚಿನ ನಂತರ 'ಅಕ್ಷರಶಃ' ಹೊಗೆಯ ಪದರವು ಮಿಂಚಿನ ಗಾಢತೆಯನ್ನು ತೋರಿಸಿದೆ ಎಂದು ಹೇಳಿದರು. ಮತ್ತೊಬ್ಬರು ಕಮೆಂಟ್ ಮಾಡಿ, ಘಟನೆಯಲ್ಲಿ ಯಾರಿಗೂ ಗಾಯವಾಗದಿರುವುದು ಅತ್ಯಂತ ಅದೃಷ್ಟ ಎಂದರು. ಶಬ್ದಕ್ಕಿಂತ ಬೆಳಕಿನ ವೇಗ ಹೆಚ್ಚು ಎಂದು ಮಕ್ಕಳಿಗೆ ತೋರಿಸಬಹುದು ಎಂದಿದ್ದಾರೆ. ಈ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಕಂಡ ದೇವರು ನಂತರ ತನ್ನ ಆಲೋಚನೆಯನ್ನು ಬದಲಿಸಿದನು ಎಂದು ಕಮೆಂಟ್ ಮಾಡಿದ್ದಾರೆ. ಮಿಂಚು ಸಂಭವಿಸುವ ವೇಳೆ ಮರಗಳು ಅಥವಾ ಬಯಲು ಪ್ರದೇಶಗಳಲ್ಲಿ ನಿಂತುಕೊಳ್ಳಬೇಡಿ. ಏಕೆಂದರೆ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸಲಹೆ ನೀಡಿದ್ದಾರೆ.
    Published by:Sharath Sharma Kalagaru
    First published: