ಹಿಂದೂ ಧರ್ಮದವನಲ್ಲ ಎಂದು ಆರ್ಡರ್​ ಕ್ಯಾನ್ಸಲ್​ ಮಾಡಿದ ಗ್ರಾಹಕ; ಝೊಮೆಟೋ ಮಾಡಿದ್ದೇನು ಗೊತ್ತಾ?

ಆ ವ್ಯಕ್ತಿಯ ಬಗೆಗೆ ಝೊಮೆಟೋ ಪ್ರತಿಕ್ರಿಯಿಸಿದ್ದು, ಡೆಲಿವರಿಬಾಯ್​ ಅನ್ನು ಬದಲಾವಣೆ ಮಾಡಲು ಆಗುವುದಿಲ್ಲ, ಬೆಲೆಯನ್ನು ​ರಿಫಂಡ್​ ಮಾಡಲಾಗುವುದಿಲ್ಲ ಎಂದು ಹೇಳಿದೆ. ಅಂತೆಯೇ, ಆಹಾರಕ್ಕೆ ಧರ್ಮ ಎಂಬುದಿಲ್ಲ, ಆಹಾರವೇ ಒಂದು ಧರ್ಮ ಎಂಬು ಹೇಳಿಕೆ ನೀಡಿದೆ.

news18
Updated:July 31, 2019, 5:54 PM IST
ಹಿಂದೂ ಧರ್ಮದವನಲ್ಲ ಎಂದು ಆರ್ಡರ್​ ಕ್ಯಾನ್ಸಲ್​ ಮಾಡಿದ ಗ್ರಾಹಕ; ಝೊಮೆಟೋ ಮಾಡಿದ್ದೇನು ಗೊತ್ತಾ?
ಝೊಮೆಟೋ ಡೆಲಿವರಿಬಾಯ್
  • News18
  • Last Updated: July 31, 2019, 5:54 PM IST
  • Share this:
ಝೊಮೆಟೋ ಡೆಲಿವರಿಬಾಯ್​ ಹಿಂದೂ ಧರ್ಮದವನಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಆರ್ಡರ್​ ಅನ್ನು ಕಾನ್ಸಲ್​ ಮಾಡಿದ ಘಟನೆ ಇದೀಗ ಭಾರಿ ಸುದ್ದಿಯಾಗುತ್ತಿದೆ.

ಝೊಮೆಟೋದಲ್ಲಿ ಆರ್ಡರ್​ ಮಾಡಿದ ಊಟವನ್ನು ತರುತ್ತಿದ್ದ ವ್ಯಕ್ತಿ ಹಿಂದೂವಲ್ಲ ಎಂಬ ಕಾರಣಕ್ಕೆ ಆರ್ಡರ್​ ಕ್ಯಾನ್ಸಲ್​​ ಮಾಡಿದ್ದೇನೆ ಎಂದು ಕಾರಣ ನೀಡಿದ್ದಾನೆ. ಅಂತೆಯೇ, ಈ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಾಕಿಕೊಂಡಿದ್ದಾನೆ.

ಆ ವ್ಯಕ್ತಿಯ ಬಗೆಗೆ ಝೊಮೆಟೋ ಪ್ರತಿಕ್ರಿಯಿಸಿದ್ದು, ‘ಡೆಲಿವರಿಬಾಯ್​ ಅನ್ನು ಬದಲಾವಣೆ ಮಾಡಲು ಆಗುವುದಿಲ್ಲ, ಬೆಲೆಯನ್ನು ​ರಿಫಂಡ್​ ಮಾಡಲಾಗುವುದಿಲ್ಲ ಎಂದು ಹೇಳಿದೆ. ಅಂತೆಯೇ, ಆಹಾರಕ್ಕೆ ಧರ್ಮ ಎಂಬುದಿಲ್ಲ, ಆಹಾರವೇ ಒಂದು ಧರ್ಮ‘ ಎಂಬ ಹೇಳಿಕೆ ನೀಡಿದೆ.Loading...


ವ್ಯಕ್ತಿ 237 ರೂ.ವಿನ ಆಹಾರವನ್ನು ಆರ್ಡರ್​ ಮಾಡಿದ್ದಾನೆ. ಆದರೆ ಆರ್ಡರ್​ ಮಾಡಿದ ವ್ಯಕ್ತಿಯ ಬೇರೆ ಧರ್ಮದವನೆಂಬ ಕಾರಣಕ್ಕೆ ಆರ್ಡರ್​ ಕ್ಯಾನ್ಸಲ್​ ಮಾಡಿ ಹೆಲ್​ಡೆಸ್ಕ್​ನಲ್ಲಿ ದೂರು ನೀಡಿದ್ದಾನೆ. ಈ ಕುರಿತಾಗಿ ಝೊಮೆಟೋ ಆ ವ್ಯಕ್ಕಿಗೆ ಫುಡ್​ ಆರ್ಡರ್​ ಆಯ್ಕೆಯನ್ನು ಕ್ಯಾನ್ಸಲ್​ ಮಾಡಿದೆ ಎಂದು ಆರೋಪ ಮಾಡಿದ್ದಾನೆ. ಮೊಬೈಲ್​ನಿಂದ ಆ್ಯಪ್​ ಅನ್ನು ಡಿಲೀಟ್​ ಮಾಡಿ ಕಾನೂನುಪರ ಹೋರಾಟ ನಡೆಸುತ್ತೇನೆಂದು ತನ್ನ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
First published:July 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...