2 Rupees Coin Saving Story: 2 ರೂಪಾಯಿ, 6 ವರ್ಷ; 1.5 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ವ್ಯಕ್ತಿ

ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ ಆರು ವರ್ಷಗಳಿಂದ ಎರಡು ರೂಪಾಯಿಗಳನ್ನು ಸಂಗ್ರಹಿಸಿ 1.5 ಲಕ್ಷ ರೂಪಾಯಿಯ ಬೈಕನ್ನು ಖರೀದಿಸಿದ್ದಾರೆ. ನಾಣ್ಯಗಳನ್ನು ಲೆಕ್ಕ ಹಾಕಲು ಶೋರೂಮ್ನ ಸಿಬ್ಬಂದಿಗಳು ಮೂರು ದಿನ ತೆಗೆದುಕೊಂಡರು.

ನಾಣ್ಯ ಲೆಕ್ಕ ಹಾಕುತ್ತಿರುವ ಶೋರೂಮ್ ಸಿಬ್ಬಂದಿಗಳು

ನಾಣ್ಯ ಲೆಕ್ಕ ಹಾಕುತ್ತಿರುವ ಶೋರೂಮ್ ಸಿಬ್ಬಂದಿಗಳು

  • Share this:
 ಹನಿ ಹನಿ ಸೇರಿ ಹಳ್ಳ, ತೆನೆ ತೆನೆ ಗೂಡಿ ಬಳ್ಳ ಎಂಬ ಗಾದೆ ಮಾತೊಂದಿದೆ. ಹಾಗೆಯೇ ಜನರು ಸಣ್ಣ ಮಟ್ಟದಲ್ಲಿ ಉಳಿತಾಯ (Savings) ಮಾಡುವ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕನಸು ಕಾಣುತ್ತಾರೆ ಮತ್ತು ತಮ್ಮ ಕನಸನ್ನು (Dreams) ನನಸಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಇವರಲ್ಲಿ ಅನೇಕ ಮಂದಿ ತಮ್ಮ ಕನಸುಗಳನ್ನು ನನಸು ಮಾಡಲು ಸಾಧ್ಯವಾಗದೇ ಅರ್ಧದಲ್ಲಿ ಬಿಟ್ಟು ಬಿಡುವವರು ಇದ್ದಾರೆ. ಇವರ ನಡುವೆ ತಮ್ಮ ಕನಸುಗಳನ್ನು ನನಸಾಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಅನೇಕರಿದ್ದಾರೆ. ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ (West Bengal) ವ್ಯಕ್ತಿಯೊಬ್ಬರು ಆರು ವರ್ಷಗಳಿಂದ (Six Years) ಕೂಡಿಟ್ಟ ಎರಡು ರೂಪಾಯಿಗಳ (Two Rupees Coin) ಸಂಗ್ರಹದಿಂದ ಬೈಕ್ (Bike) ಖರೀದಿಸಿದ್ದಾರೆ. ಇದು ವ್ಯಕ್ತಿಯ ತಾಳ್ಮೆಯ ಜೊತೆಗೆ ಜಾಣ್ಮೆಯನ್ನು ಪ್ರತಿನಿಧಿಸುತ್ತದೆ. ಮತ್ತು ತಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗದೆ ಕುಗ್ಗಿ ಹೋದವರಿಗೆ ಪ್ರೇರಣೆಯಾಗಿದೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಘಟನೆ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 46 ವರ್ಷದ ಸುಬ್ರತಾ ಸರ್ಕಾರ್ ಎಂಬ ಬೀಡಿ ಕಾರ್ಮಿಕರೊಬ್ಬರು ಬೀಡಿಗಳನ್ನು ತಯಾರಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಇವರು ಎರಡೂ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ಬೈಕ್ ಖರೀದಿಸಿದ್ದಾರೆ.

ಸತತ ಆರು ತಿಂಗಳುಗಳಿಂದ ನಾಣ್ಯಗಳ ಸಂಗ್ರಹ

2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧಿಸಿದ ನಂತರ, ನೋಟುಗಳ ಕೊರತೆಯಿಂದಾಗಿ ಅಂಗಡಿ ಮಾಲೀಕರು ಅವರಿಗೆ ನಾಣ್ಯಗಳನ್ನು ಪಾವತಿಸುತ್ತಿದ್ದರು.

ಭವಿಷ್ಯದ ಬಳಕೆಗಾಗಿ ಅವರು ಕೆಲವು ನಾಣ್ಯಗಳನ್ನು ಉಳಿಸಲು ಪ್ರಾರಂಭಿಸಿದರು. ನಾಣ್ಯಗಳನ್ನು ಕವರ್‌ಗಳಲ್ಲಿ ಪ್ಯಾಕ್ ಮಾಡಿದ್ದು, ಅದರಲ್ಲಿ 2 ರೂಪಾಯಿ ಹೆಚ್ಚು ನಾಣ್ಯಗಳಿವೆ. ಆರು ವರ್ಷಗಳಲ್ಲಿ 1.8 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳನ್ನು ಉಳಿಸಿದ್ದಾರೆ.

ಇದನ್ನೂ ಓದಿ: Diamond Ring: ಒಂದೇ ಉಂಗುರದಲ್ಲಿ 24 ಸಾವಿರಕ್ಕೂ ಹೆಚ್ಚು ವಜ್ರ! ಗಿನ್ನಿಸ್ ದಾಖಲೆ ಬರೆದ ಡೈಮಂಡ್ ರಿಂಗ್

ಶೋರೂಂ ಬಳಿ ಸಾಗುವಾಗ ಬೈಕ್ ಖರೀದಿಸುವಿಕೆಯ ಯೋಚನೆ

ಕಳೆದ ತಿಂಗಳು ಸುಬ್ರತಾ ಸರ್ಕಾರ್ ಬೈಕ್ ಶೋರೂಮ್ ಬಳಿ ಹೋಗುತ್ತಿದ್ದಾಗ, ತಾನು ಸಂಗ್ರಹಿಸಿಟ್ಟ ನಾಣ್ಯಗಳಿರುವ ಬೈಕ್ ಅನ್ನು ಏಕೆ ಖರೀದಿಸಬಾರದು ಎಂದು ಯೋಚಿಸಿದರು.

17 ವರ್ಷದ ಮಗ ಶೇಖರ್ ಗೆ ಈ ವಿಷಯ ತಿಳಿಸಿದ್ದಾರೆ. ಮತ್ತು ಶೇಖರ್ ತನ್ನ ತಂದೆ ಐದಾರು ವರ್ಷಗಳಿಂದ ಸಂಗ್ರಹವಾದ ನಾಣ್ಯಗಳನ್ನು ಎಣಿಸಿದಾಗ 1.8ಲಕ್ಷ ರೂಪಾಯಿ ಒಟ್ಟಾಗಿದೆ. ನಾಣ್ಯಗಳಿಂದ ಬೈಕ್ ಖರೀದಿಸುವುದಾಗಿ ಶೋರೂಮ್ ಮಾಲಕರಿಗೆ ತಿಳಿಸಿದಾಗ ಇದಕ್ಕೆ ಮಾಲೀಕರು ಒಪ್ಪಿದರು.

ನಾಣ್ಯ ಎಣಿಸಲು ಮೂರು ದಿನ ತೆಗೆದುಕೊಂಡ ಸಿಬ್ಬಂದಿಗಳು

ಸುಬ್ರತಾ ಸರ್ಕಾರ್ ಮಂಗಳವಾರ ಚಿಲ್ಲರೆ ಚೀಲಗಳನ್ನು ಆಟೋದಲ್ಲಿ ಬೈಕ್ ಶೋರೂಂಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಶೋರೂಮ್ ನಲ್ಲಿ ಚಿಲ್ಲರೆ ಎಣಿಸಲು ಐವರು ಸಿಬ್ಬಂದಿಗೆ ಮೂರು ದಿನ ಬೇಕಾಯಿತು. ಶುಕ್ರವಾರ ಮತ ಎಣಿಕೆ ಪೂರ್ಣಗೊಂಡಿದೆ.

1.5 ಲಕ್ಷ ರೂ.ಗಳನ್ನು ನಾಣ್ಯ ರೂಪದಲ್ಲಿ ಪಾವತಿಸಿ ಬೈಕ್ ಅನ್ನು ಖರೀದಿಸಿದ್ದಾರೆ. 1.5ಲಕ್ಷಗಳನ್ನು ಪಡೆದು ಬೈಕ್ ಕೀ ಮತ್ತು ದಾಖಲೆಗಳನ್ನು ಸುಬ್ರಾತ್ ಸರ್ಕಾರ್ ಗೆ ಹಸ್ತಾಂತರಿಸಲಾಗಿದೆ ಎಂದು ಶೋರೂಂ ವ್ಯವಸ್ಥಾಪಕ ಪ್ರಬೀರ್ ಬಿಸ್ವಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!

ಹೀಗೆ ಎರಡು ರೂಪಾಯಿಗಳನ್ನು ಆರು ವರ್ಷಗಳಿಂದ ಸಂಗ್ರಹಿಸಿ ಲಕ್ಷ ಲಕ್ಷದ ಬೈಕನ್ನು ಖರಿದಿಸಿದ ಈ ವ್ಯಕ್ತಿಯ ಕಥೆ ಚಿಲ್ಲರೆಯಲ್ಲಿ ಏನು ಮಾಡಲು ಸಾಧ್ಯ ಎನ್ನುವವರಿಗೆ ಉತ್ತರ ನೀಡಿದೆ. ಮತ್ತು ಕೂಡಿಡುವಿಕೆಯ ಮಹತ್ವವನ್ನು ಜನತೆಗೆ ತಿಳಿಸಿದೆ.
Published by:Nalini Suvarna
First published: