• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Bungee Jump: ಡೋನಟ್ ಚಹಾದಲ್ಲಿ ಮುಳುಗಿಸಲು 198 ಎತ್ತರದಿಂದ ಜಿಗಿದ ವ್ಯಕ್ತಿ! ನೋಡುಗರೇ ಹೆದರಿಕೊಂಡಿದ್ರು

Bungee Jump: ಡೋನಟ್ ಚಹಾದಲ್ಲಿ ಮುಳುಗಿಸಲು 198 ಎತ್ತರದಿಂದ ಜಿಗಿದ ವ್ಯಕ್ತಿ! ನೋಡುಗರೇ ಹೆದರಿಕೊಂಡಿದ್ರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಎಷ್ಟು ಎತ್ತರದಿಂದ ಆ ಡೋನಟ್ ಅನ್ನು ಕಾಫಿಯಲ್ಲಿ ಅದ್ದಲು ಪ್ರಯತ್ನಿಸಬಹುದು ಒಮ್ಮೆ ಹೇಳಿ? ಅಬ್ಬಬ್ಬಾ ಎಂದರೆ ನೀವು ಎದ್ದು ನಿಂತು ನಿಮ್ಮ ಕೈಯನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ ಅಲ್ಲಿಂದ ಅದನ್ನು ನೇರವಾಗಿ ಕಾಫಿ ಕಪ್ ನಲ್ಲಿ ಅದ್ದಿ ತಿನ್ನಬಹುದು, ಅಲ್ಲವೆ. ಆದರೆ, ಈ ವಿಡಿಯೋದಲ್ಲಿ ನೀವು ಒಬ್ಬಾತ ಈ ಸಾಹಸವನ್ನು 198 ಅಡಿ 8 ಇಂಚುಗಳಷ್ಟು ಎತ್ತರದಿಂದ ಡೋನಟ್ ಅನ್ನು ಕಾಫಿ ಕಪ್ ವರೆಗೆ ತಂದು ಅದ್ದಿದ್ದಾನೆ.

ಮುಂದೆ ಓದಿ ...
  • Share this:

ಈ ಜಗತ್ತಿನಲ್ಲಿ ಕೆಲವರಿಗೆ ಏನಾದರೊಂದು ವಿಶೇಷತೆ ಮಾಡಲೇಬೇಕೆಂದಿರುತ್ತದೆ. ಅದಕ್ಕಾಗಿ ಅವರು ಏನಾದರೂ ಮಾಡುತ್ತಲೇ ಇರುತ್ತಾರೆ, ಒಟ್ಟಿನಲ್ಲಿ ಅವರಿಗೆ ದಾಖಲೆಗಳ (Record) ನಿರ್ಮಾಣ ಮಾಡುವುದೇ ಹೆಬ್ಬಯಕೆಯಾಗಿರುತ್ತದೆ ಹಾಗೂ ಅದಕ್ಕಾಗಿ ಅವರು ಎಂತಹ ಅಪಾಯದ ಸಂದರ್ಭವನ್ನೂ ಸಹ ಎದುರಿಸಲು ಸಿದ್ಧರಿರುತ್ತಾರೆ. ಅದರಲ್ಲೂ ವಿಶೇಷವಾಗಿ ಗಿನ್ನೆಸ್ ವಿಶ್ವದಾಖಲೆಗೇ (Guinness Record) ಸೇರುವುದೆಂದರೆ ಸಾಮಾನ್ಯವೆ..? ಇತ್ತೀಚೆಗೆ ಗಿನ್ನೆಸ್ ವಿಶ್ವದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram Page) ಅದು ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು ಈಗ ಆ ಪೋಸ್ಟಿನಲ್ಲಿರುವ ವಿಡಿಯೋ ಸಖತ್ ವೈರಲ್ (Viral) ಆಗುತ್ತಿದೆ. ಅಸಲಿಗೆ ಅಲ್ಲಿ ಒಂದು ದಾಖಲೆಯನ್ನು ಕಾಣಬಹುದಾಗಿದೆ ಹಾಗೂ ಅದನ್ನು ಒಬ್ಬಾತ ಮಾಡುವುದನ್ನು ನೋಡುವಾಗ ಒಂದು ಕ್ಷಣ ನಿಮ್ಮ ಹೃದಯ ಬಡಿತ ಡಬ-ಡಬ ಅಂತ ಇನ್ನಷ್ಟು ಜೋರಾಗಿ ಬಡಿದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.


ಅತಿ ಎತ್ತರಿಂದ ಡೋನಟ್ ಅನ್ನು ಕಾಫಿ ಕಪ್ ವರೆಗೆ ತಂದು ಅದ್ದಿದ ವ್ಯಕ್ತಿ
ನಾವು ಸಾಮಾನ್ಯವಾಗಿ ಡೋನಟ್ ಅನ್ನು ಕಾಫಿಯಲ್ಲೋ ಅಥವಾ ಚಹಾದಲ್ಲೋ ಅದ್ದಿ ತಿನ್ನುವುದನ್ನು ನೋಡಿರುತ್ತೇವೆ. ಹಾಗೆ ನೀವು ಎಷ್ಟು ಎತ್ತರದಿಂದ ಆ ಡೋನಟ್ ಅನ್ನು ಕಾಫಿಯಲ್ಲಿ ಅದ್ದಲು ಪ್ರಯತ್ನಿಸಬಹುದು ಒಮ್ಮೆ ಹೇಳಿ? ಅಬ್ಬಬ್ಬಾ ಎಂದರೆ ನೀವು ಎದ್ದು ನಿಂತು ನಿಮ್ಮ ಕೈಯನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ ಅಲ್ಲಿಂದ ಅದನ್ನು ನೇರವಾಗಿ ಕಾಫಿ ಕಪ್ ನಲ್ಲಿ ಅದ್ದಿ ತಿನ್ನಬಹುದು, ಅಲ್ಲವೆ. ಆದರೆ, ಈ ವಿಡಿಯೋದಲ್ಲಿ ನೀವು ಒಬ್ಬಾತ ಈ ಸಾಹಸವನ್ನು 198 ಅಡಿ 8 ಇಂಚುಗಳಷ್ಟು ಎತ್ತರದಿಂದ ಡೋನಟ್ ಅನ್ನು ಕಾಫಿ ಕಪ್ ವರೆಗೆ ತಂದು ಅದ್ದಿದ್ದಾನೆ.


ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ
"ರೋನ್ ಜೋನ್ಸ್ ಅವರಿಂದ ಡೋನಟ್ ಬನ್ನಿನ ಅತಿ ಎತ್ತರದಿಂದ ಅದ್ದುವಿಕೆ (ಬಂಜೀ ನೆಗೆತ) (60.553 ಮೀ. ಅಥವಾ 198 ಅಡಿಗಳು 8 ಇಂಚುಗಳ ಎತ್ತರ)" ಎಂದು ಶಿರ್ಷಿಕೆ ನೀಡಿ ಈ ವಿಡಿಯೋ ಅನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಅಂದರೆ, ರೋನ್ ಜೋನ್ಸ್ ಅವರು ಇದಕ್ಕಾಗಿ ಬಂಜೀ ನೆಗೆತವನ್ನು ಮಾಡಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Viral Video: ಹುಲಿ ವೇಷದಲ್ಲಿ ಎವರೆಸ್ಟ್‌ ಮ್ಯಾರಥಾನ್! ಏನಪ್ಪಾ ರೀಸನ್?


ಹಾಗೇ ನೋಡಿದರೆ ಈ ದಾಖಲೆಯೇ ಅಂತಿಮ ಎನ್ನುವಂತಿಲ್ಲ. ಈಗಾಗಲೇ ಈ ದಾಖಲೆಯನ್ನೂ ಸಹ ಮುರಿಯಲಾಗಿದೆ. ಅಷ್ಟಕ್ಕೂ ರೋನ್ ಜೋನ್ಸ್ ಅವರ ಬಂಜೀ ನೆಗೆತದ ಮೂಲಕ ಅತಿ ಎತ್ತರದಿಂದ ಡೋನಟ್ ಅನ್ನು ಕಾಫಿ ಕಪ್ ನಲ್ಲಿ ಅದ್ದುವ ಈ ದಾಖಲೆ 2013 ರಲ್ಲಿ ಮಾಡಲಾಗಿತ್ತು. ರೋನ್ ಅವರು ಅಷ್ಟು ಎತ್ತರದಿಂದ ಬಂಜೀ ನೆಗೆತದ ಮೂಲಕ ಮೂರುವರೆ ಇಂಚುಗಳಷ್ಟು ವ್ಯಾಸವಿದ್ದ ಕಪ್ ಒಳಗಿದ್ದ ಕಾಫಿಯಲ್ಲಿ ಡೋನಟ್ ಅನ್ನು ಅದ್ದಿದ್ದರು.


ತದನಂತರ 2016 ರಲ್ಲಿ ಈ ದಾಖಲೆಯನ್ನು ಮುರಿಯಲಾಯಿತು. ಸಿಮೋನ್ ಬೆರಿ ಎಂಬ ಯುಕೆ ವ್ಯಕ್ತಿಯೊಬ್ಬರು ಬಿಸ್ಕಟ್ ಅನ್ನು 73.41 ಮೀ. (240 ಅಡಿಗಳು 10 ಇಂಚುಗಳು) ಎತ್ತರದ ಬಂಜೀ ನೆಗೆತದ ಮೂಲಕ ಕಪ್ ನಲ್ಲಿ ಅದ್ದಿದ್ದರು. ಸದ್ಯ ಈ ದಾಖಲೆಯೇ ಈಗ ಅಂತಿಮ ದಾಖಲೆಯಾಗಿದ್ದು ಮುಂದೆ ಇದನ್ನು ಸಹ ಮುರಿಯಲಾದಿತೇ ಅಥವಾ ಯಾರು ಮುರಿಯಬಹುದು ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.


ವಿಡಿಯೋದಲ್ಲೇನಿದೆ
ವೇದಿಕೆಯ ಮೇಲೆ ರೋನ್ ಅವರು ಸುರಕ್ಷತಾ ಕ್ರಮಗಳೆಲ್ಲವನ್ನು ಕೈಗೊಂಡು ಬಂಜೀ ನೆಗೆತ ಹಾಕಲು ಸಿದ್ಧರಾಗಿರುತ್ತಾರೆ. ತದಂತರ ಅವರು ಡೋನಟ್ ಅನ್ನು ತಮ್ಮ ಒಂದು ಕೈಯಲ್ಲಿ ಹಿಡಿದು ನೇರವಾಗಿ ಕೆಳಗೆ ಭೂಮಿಯ ಮೇಲೆ ಟೇಬಲ್/ಸ್ಟೂಲ್ ಒಂದರ ಮೇಲೆ ಇರಿಸಲಾಗಿರುವ ಕಾಫಿ ಕಪ್ ನತ್ತ ನೆಗೆಯುತ್ತಾರೆ ಹಾಗೂ ಅಂದುಕೊಂಡಂತೆಯೇ ಅವರು ಆ ಗುರಿ ತಲುಪಿ ಡೋನಟ್ ಅನ್ನು ಕಾಫಿಯಲ್ಲಿ ಅದ್ದುವಲ್ಲಿ ಯಶಸ್ವಿಯಾಗುತ್ತಾರೆ.


ಇದನ್ನೂ ಓದಿ:  Paper Plane: ಇದು ಅಂತಿಂತ ವಿಮಾನ ಅಲ್ಲ! ಗಿನ್ನೆಸ್ ವಿಶ್ವ ದಾಖಲೆ ಬರೆದ ಪೇಪರ್ ಪ್ಲೇನ್!


ಈ ವಿಡಿಯೋ ಅನ್ನು ಗಿನ್ನೆಸ್ ಸಂಸ್ಥೆ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡ ಕೇವಲ ಎಂಟು ಗಂಟಗಳಲ್ಲೇ 46,000ಕ್ಕೂ ಅಧಿಕ ಮೆಚ್ಚುಗೆಗಳನ್ನು ಗಳಿಸುವಲ್ಲಿ ಸಮರ್ಥವಾಗಿದ್ದು ಆ ಸಂಖ್ಯೆ ಈಗಲೂ ಏರುತ್ತಲೇ ಇದೆ. ಈ ವಿಡಿಯೋ ಮೆಚ್ಚುಗೆಗಳ ಜೊತೆ ಅಪಾರ ಪ್ರಮಾಣದಲ್ಲಿ ಪ್ರತಿಕ್ರಿಯೆಗಳನ್ನೂ ಸಹ ಗಳಿಸುತ್ತಿದೆ. ಹಲವರು ಈ ಸಾಧನೆಯನ್ನು ಕೊಂಡಾಡಿದರೆ ಇನ್ನೂ ಹಲವರು ಇಂತಹ ದಾಖಲೆಯ ಹಿಂದಿನ ಉದ್ದೇಶವಾದರೂ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

top videos
    First published: