Love Story: ದವಡೆಯಿಲ್ಲದ ಶಿಕಾಗೊ ವ್ಯಕ್ತಿಗೆ ಸಿಕ್ಕ ನಿಜವಾದ ಪ್ರೀತಿ ಇದು!

ಚಿಕಾಗೋದಲ್ಲಿರುವಂತಹ ಒಬ್ಬ ವ್ಯಕ್ತಿಗೆ ತನ್ನ ಮುಖದಲ್ಲಿ ಬಾಯಿಯ ಕೆಳಗೆ ದವಡೆಯೆ ಇಲ್ಲ, ಈ ಸ್ಥಿತಿಯನ್ನು ಅರಿತುಕೊಂಡು ಒಬ್ಬ ಯುವತಿ ಆತನನ್ನು ತುಂಬಾನೇ ಪ್ರೀತಿಸಿ ಇಷ್ಟಪಟ್ಟಿರುವ ಘಟನೆ ಇದು. ಇವರಿಬ್ಬರ ಪ್ರೇಮ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು.

ದವಡೆಯಿಲ್ಲದ ವ್ಯಕ್ತಿ

ದವಡೆಯಿಲ್ಲದ ವ್ಯಕ್ತಿ

  • Share this:
ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿ (Love) ಮಾಡುವುದಕ್ಕೆ ಅವರ ಆ ಎರಡು ಮುಗ್ದ ಹೃದಯಗಳಲ್ಲಿ (Heart) ಪರಸ್ಪರರ ಬಗ್ಗೆ ಪ್ರೀತಿ ಮತ್ತು ಗೌರವವಿದ್ದರೆ (Respect) ಸಾಕಲ್ಲವೇ, ಇದಕ್ಕಿಂತ ಹೆಚ್ಚು ಏನು ಬೇಕು ನೀವೇ ಹೇಳಿ? ಇಲ್ಲಿಯೂ ಇಂತಹದೇ ಒಂದು ನೈಜವಾದ ಘಟನೆಯೊಂದು ನಡೆದಿದೆ ನೋಡಿ. ಶಿಕಾಗೊದಲ್ಲಿರುವಂತಹ (Chicago) ಒಬ್ಬ ವ್ಯಕ್ತಿಗೆ ತನ್ನ ಮುಖದಲ್ಲಿ ಬಾಯಿಯ ಕೆಳಗೆ ದವಡೆಯೆ (Jaw) ಇಲ್ಲ, ಈ ಸ್ಥಿತಿಯನ್ನು ಅರಿತುಕೊಂಡು ಒಬ್ಬ ಯುವತಿ ಆತನನ್ನು ತುಂಬಾನೇ ಪ್ರೀತಿಸಿ ಇಷ್ಟಪಟ್ಟಿರುವ ಘಟನೆ ಇದು. ಇವರಿಬ್ಬರ ಪ್ರೇಮ ಕಥೆ (Love story) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral) ಆಗಿದೆ ಎಂದು ಹೇಳಬಹುದು.

ಅಪರೂಪದ ಜನ್ಮಜಾತ ಅಸ್ವಸ್ಥತೆ ಒಟೋಫೇಸಿಯಲ್ ಸಿಂಡ್ರೋಮ್
ಹೌದು.. ಆ ವ್ಯಕ್ತಿಯ ಹೆಸರು ಜೋಸೆಫ್ ವಿಲಿಯಮ್ಸ್ ಅಂತ, 41 ವರ್ಷದ ಶಿಕಾಗೊದ ವ್ಯಕ್ತಿ ಅಪರೂಪದ ಜನ್ಮಜಾತ ಅಸ್ವಸ್ಥತೆಯಾದ ಒಟೋಫೇಸಿಯಲ್ ಸಿಂಡ್ರೋಮ್ ನೊಂದಿಗೆ ಜನಿಸಿದನು. ಇದು ಬಹುತೇಕರಲ್ಲಿ ವಂಶವಾಹಿಯಿಂದ ಉಂಟಾಗುತ್ತದೆ. ಜೋಸೆಫ್ ಅವರ ಬಾಯಿಯ ಕೆಳಗಡೆ ದವಡೆಯಿಲ್ಲದೆ ಜನಿಸಿದರು. ಈ ಅಪರೂಪದ ಸ್ಥಿತಿಯು ಅವನಿಗೆ ಯಾರೊಂದಿಗೂ ತನ್ನ ಬಾಯಿಯಿಂದ ಮಾತನಾಡಲು ಮತ್ತು ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಾಗದಂತೆ ಮಾಡಿತು.

ಜೋಸೆಫ್ ಅವರ ಬಾಳಲ್ಲಿ ನಡೆದ ಖುಷಿಯ ವಿಚಾರ
ಆದಾಗ್ಯೂ, ಜೋಸೆಫ್ ತನ್ನ ಬಾಳಿನಲ್ಲಿ ನಿಜವಾದ ಪ್ರೀತಿಯನ್ನು ಕಂಡು ಕೊಂಡಿರುವುದರಿಂದ, ಅಂತಿಮವಾಗಿ ಅವರ ಬದುಕಿನಲ್ಲಿ ಖುಷಿಯ ವಿಚಾರವೊಂದು ನಡೆದಿದೆ ಎಂದು ಹೇಳಬಹುದು. ಹಲವು ವರ್ಷಗಳಿಂದ "ನಿಷ್ಪ್ರಯೋಜಕ" ಎಂದು ಭಾವಿಸಿರುವ 41 ವರ್ಷದ ಈ ವ್ಯಕ್ತಿ, ತನ್ನಂತೆಯೇ ಹೆಣಗಾಡುತ್ತಿರುವ ಜನರಿಗೆ ಒಂದು ಸಂದೇಶವನ್ನು ನೀಡಿದ್ದಾರೆ ನೋಡಿ.

ಇದನ್ನೂ ಓದಿ:  Bride Catches Fish: ಫಸ್ಟ್​ ನೈಟ್​ನಲ್ಲಿ ಮದುವೆ ಗೌನ್​ನಲ್ಲಿ ಬೃಹತ್ ಮೀನು ಹಿಡಿದ ವಧು! ಖುಷಿಯೋ ಖುಷಿ

ಜೋಸೆಫ್ ಅವರು ಯಾರೊಂದಿಗಾದರೂ ಮಾತನಾಡಬೇಕೆಂದರೆ ಸನ್ನೆಯ ಭಾಷೆಯನ್ನು ಬಳಸುತ್ತಾರೆ ಮತ್ತು ಅವರು ಆಹಾರ ಸೇವನೆಗೆ ತನ್ನ ಫೀಡಿಂಗ್ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ ಎಂದು ಹೇಳಬಹುದು. ತನ್ನನ್ನು ಸಹ ಪ್ರೀತಿಸುವ ಒಂದು ಹೆಣ್ಣು ತನ್ನ ಜೀವನದಲ್ಲಿ ಒಂದು ದಿನ ಬರುತ್ತಾಳೆ ಎಂದು ಬಹುಶಃ ಅವರು ಎಂದಿಗೂ ಯೋಚಿಸಿರಲಿಲ್ಲ ಅಂತ ಅನ್ನಿಸುತ್ತೆ. ಅವರು ಶಾಶ್ವತವಾಗಿ ಒಂಟಿಯಾಗಿಯೇ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಭಾವಿಸಿದ್ದರಂತೆ. ಆದರೆ ದೇವರು ಅವರಿಗಾಗಿ ಬೇರೆಯ ವಿಭಿನ್ನ ಯೋಜನೆಯನ್ನೇ ಹೊಂದಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರೀತಿಯ ಬಗ್ಗೆ ಜೋಸೆಫ್ ಹೇಳಿದ್ದು ಹೀಗೆ
"ಡೇಟಿಂಗ್ ನನಗೆ ಕಷ್ಟಕರವಾಗಿತ್ತು, ಏಕೆಂದರೆ ನನ್ನ ಈ ಸ್ಥಿತಿಯಿಂದ ಆತ್ಮಗೌರವ ಕುಗ್ಗಿ ಹೋಗಿತ್ತು ಮತ್ತು ನಾನೊಬ್ಬ ನಿಷ್ಪ್ರಯೋಜಕ ಎಂದು ಭಾವಿಸಿದೆ. ಆದರೆ ನಾನು ನನ್ನಲ್ಲಿ ನಂಬಿಕೆಯಿಡಲು ಪ್ರಾರಂಭಿಸಿದಾಗ ಮತ್ತು ನಾನು ಹೆಚ್ಚು ಯೋಗ್ಯನಾಗಿದ್ದೇನೆ ಎಂದು ಅರಿತು ಕೊಂಡಾಗ, ನಾನು ನನ್ನ ಬಾಳ ಸಂಗಾತಿಯನ್ನು ಹುಡುಕಲು ಶುರು ಮಾಡಿದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಅವರು 2019 ರಲ್ಲಿ ವಾನಿಯಾ ಎಂಬ ಯುವತಿಯನ್ನು ಅವರು ಭೇಟಿಯಾದರು. "ನಾವು ಮೊದಲು ಒಳ್ಳೆಯ ಸ್ನೇಹಿತರಾಗಿದ್ದೆವು, ಆದರೆ ಅಂತಿಮವಾಗಿ ನಾವು ಡೇಟಿಂಗ್ ಮಾಡಲು ಪ್ರಾರಂಭಿಸಿದೆವು ಮತ್ತು ಪ್ರೀತಿಯಲ್ಲಿ ಬಿದ್ದೆವು" ಎಂದು ಅವರು ತಿಳಿಸಿದರು. "ನಾವು 2020 ರಲ್ಲಿ ವಿವಾಹವಾದೆವು, ನಾನು ಮದುವೆಯಾಗುತ್ತೇನೆಂದು ಜನರು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ನನಗೆ ಖಾತ್ರಿಯಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಮದುವೆಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ:  Helicopter: ಆನ್​ಲೈನ್​ನಲ್ಲಿ ಹಳೆಯ ಹೆಲಿಕಾಪ್ಟರ್​ ಖರೀದಿಸಿ, ಕ್ಯಾಂಪ್​ ಹೌಸನ್ನಾಗಿ ಮಾರ್ಪಡಿಸಿದ ದಂಪತಿ!

"ನಾನು ವಿಭಿನ್ನವಾಗಿದ್ದೇನೆ ಮತ್ತು ನಾನು ಕುರೂಪಿ ಎಂದು ಕೆಲವರು ಭಾವಿಸುತ್ತಾರೆ ಮತ್ತು ನನ್ನನ್ನು ಸ್ವೀಕರಿಸುವುದಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ನನ್ನಲ್ಲೂ ಹೃದಯ, ಭಾವನೆಗಳು ಮತ್ತು ಮೆದುಳು ಇವೆ, ನಾನು ಒಬ್ಬ ಮನುಷ್ಯ. ನನ್ನನ್ನು ಸಹ ಜನರು ಬೇರೆಯವರಂತೆ ಗೌರವದಿಂದ ಕಾಣಬೇಕು. ಜನರು ನನ್ನ ಕಡೆಗೆ ಬೆರಳು ತೋರಿಸುವುದಕ್ಕಿಂತಲೂ ಮತ್ತು ನೋಡುವುದಕ್ಕಿಂತಲೂ ನನ್ನ ಬಳಿಗೆ ಬಂದು ಮಾತನಾಡಿಸಲಿ ಎಂದು ನಾನು ಬಯಸುತ್ತೇನೆ" ಎಂದು ಜೋಸೆಫ್ ಹೇಳಿದರು.
Published by:Ashwini Prabhu
First published: