• Home
  • »
  • News
  • »
  • trend
  • »
  • Viral Video: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ರೈಲಿನಲ್ಲಿ ಲಾಕ್ ಆದ ಆಂಧ್ರ ವ್ಯಕ್ತಿ! ಮುಂದೇನಾಗಿದೆ ನೋಡಿ

Viral Video: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ರೈಲಿನಲ್ಲಿ ಲಾಕ್ ಆದ ಆಂಧ್ರ ವ್ಯಕ್ತಿ! ಮುಂದೇನಾಗಿದೆ ನೋಡಿ

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಇಲ್ಲೊಂದು ಘಟನೆ ನಡೆದಿದೆ ನೋಡಿ. ಇದನ್ನು ಕೇಳಿದರೆ ನಗುವುದೊ ಅಥವಾ ನೋವು ಪಡುವುದೋ ಅಂತ ಬೇಗನೆ ಅರ್ಥವಾಗುವುದಿಲ್ಲ.

  • Trending Desk
  • 3-MIN READ
  • Last Updated :
  • Share this:

ಕೆಲವೊಮ್ಮೆ ನಮ್ಮ ಅತಿಯಾದ ಉತ್ಸಾಹವೇ ನಮಗೆ ಕಷ್ಟದ ಪರಿಸ್ಥಿತಿಗಳಲ್ಲಿ ಸಿಲುಕಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅತೀ ಉತ್ಸಾಹ ಎಲ್ಲಿ ತೋರಿಸಬೇಕು ಅನ್ನೋದು ನಮಗೆ ತಿಳಿದಿದ್ದರೆ ಒಳ್ಳೆಯದು ಅಂತ ಹೇಳಬಹುದು. ಈಗಂತೂ ಅನೇಕ ಯುವಕ, ಯುವತಿಯರಿಗೆ ಈ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಒಂದು ಅಭ್ಯಾಸ ತುಂಬಾನೇ ಹೆಚ್ಚಾಗಿದೆ ಅಂತ ಹೇಳಬಹುದು. ಕೆಲವೊಮ್ಮೆ ಈ ಅಭ್ಯಾಸ ಅವರನ್ನು ಅನೇಕ ಅವಾಂತರಗಳಲ್ಲಿಯೂ ಸಿಲುಕಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಸೆಲ್ಫಿ (Selfi) ಕ್ಲಿಕ್ಕಿಸಿಕೊಳ್ಳಬೇಕೆಂದು ಬೆಟ್ಟ ಹತ್ತೋದು, ನದಿಯ ಅಥವಾ ಸಮುದ್ರದ ಸ್ವಲ್ಪ ಒಳಗೆ ಹೋಗುವುದು, ಎತ್ತರದ ಪ್ರದೇಶಗಳಲ್ಲಿ ಹೋಗುವುದು, ಕೋಟೆಯನ್ನ ಅಥವಾ ಯಾವುದೋ ಒಂದು ಕಟ್ಟಡವನ್ನ ಹತ್ತಿ ಕೊನೆಗೆ ಹೋಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳನ್ನು (Situation) ನಾವು ತುಂಬಾನೇ ನೋಡಿರುತ್ತೇವೆ.


ಇದೆಲ್ಲದರ ಬಗ್ಗೆ ನಾವು ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು.. ಇಲ್ಲೊಂದು ಘಟನೆ ನಡೆದಿದೆ ನೋಡಿ. ಇದನ್ನು ಕೇಳಿದರೆ ನಗುವುದೊ ಅಥವಾ ನೋವು ಪಡುವುದೋ ಅಂತ ಬೇಗನೆ ಅರ್ಥವಾಗುವುದಿಲ್ಲ.


ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಅವಾಂತರ ಸೃಷ್ಟಿಸಿಕೊಂಡ ವ್ಯಕ್ತಿ


ಇಲ್ಲೊಬ್ಬ ವ್ಯಕ್ತಿ ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಎಂತಹ ಅವಾಂತರವನ್ನು ಸೃಷ್ಟಿಸಿಕೊಂಡಿದ್ದಾನೆ ನೀವೇ ನೋಡಿ. ನೀವೆಲ್ಲಾ ಹೊಸದಾಗಿ ಶುರು ಮಾಡಿದ ವಂದೇ ಭಾರತ್ ರೈಲಿನ ಬಗ್ಗೆ ಕೇಳಿಯೇ ಇರುತ್ತೀರಿ.


ಸೆಲ್ಫಿ ತೆಗೆಸಿಕೊಳ್ಳಲು ರೈಲು ಹತ್ತಿ ತಾನು ಅದೇ ರೈಲಿನೊಳಗೆ ಲಾಕ್ ಆಗಿದ್ದು, ಮುಂದಿನ ನಿಲ್ದಾಣಕ್ಕೆ ಪ್ರಯಾಣಿಸಬೇಕಾಯಿತು ನೋಡಿ. ಸೆಲ್ಫಿ ತೆಗೆದುಕೊಳ್ಳುವ ಈ ವ್ಯಕ್ತಿ ಸೋಮವಾರ ರಾಜಮಂಡ್ರಿ ನಿಲ್ದಾಣದಲ್ಲಿ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ರೈಲನ್ನು ಹತ್ತಿದ್ದಾನೆ ಎಂದು ವರದಿಯಾಗಿದೆ.


ಆದರೆ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದಾಗ, ಅವನು ಒಳಗೆ ಲಾಕ್ ಆಗಿದ್ದಾನೆ. ಅವನು ರೈಲಿನಿಂದ ಇಳಿಯುವ ಮೊದಲು ಮುಂದಿನ ನಿಲ್ದಾಣಕ್ಕೆ ಆ ರೈಲು ಬಂದು ತಲುಪಿದೆ.


ಟ್ರೈನ್ ನಲ್ಲಿ ಲಾಕ್ ಆಗಿದ್ದಕ್ಕೆ ವಿಜಯವಾಡಕ್ಕೆ ಪ್ರಯಾಣಿಸಬೇಕಾಯ್ತು


ಈ ಘಟನೆಯ ವೀಡಿಯೋ ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಟಿಕೆಟ್ ಇಲ್ಲದೆ ರೈಲು ಹತ್ತಿದ್ದಕ್ಕಾಗಿ ರೈಲು ಟಿಕೆಟ್ ಪರೀಕ್ಷಕರು (ಟಿಟಿಇ) ವ್ಯಕ್ತಿಯನ್ನು ವಿಚಾರಿಸುತ್ತಿರುವ ದೃಶ್ಯಗಳನ್ನು ಇದು ತೋರಿಸುತ್ತದೆ.


ಟಿಟಿಇ ಆ ವ್ಯಕ್ತಿಗೆ ಮುಂದಿನ ನಿಲ್ದಾಣವಾದ ವಿಜಯವಾಡ ನಿಲ್ದಾಣದಲ್ಲಿ ಮಾತ್ರ ಇಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ವ್ಯಕ್ತಿಗೆ ದಂಡ ವಿಧಿಸಲಾಗಿಲ್ಲ. ಆದಾಗ್ಯೂ, ಅದೃಷ್ಟವಿಲ್ಲದ ಸೆಲ್ಫಿ ತೆಗೆದುಕೊಳ್ಳುವವನು ಇಳಿದು ರಾಜಮಂಡ್ರಿಗೆ ಹಿಂತಿರುಗುವ ರೈಲನ್ನು ತೆಗೆದುಕೊಳ್ಳುವ ಮೊದಲು ವಿಜಯವಾಡಕ್ಕೆ ಪ್ರಯಾಣಿಸಬೇಕಾಯಿತು.


ಸಿಕಂದ್ರಾಬಾದ್ ನಿಂದ ವಿಶಾಖಪಟ್ಟಣಂಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಜನವರಿ 15 ರಂದು ಪ್ರಾರಂಭಿಸಲಾಯಿತು. ಹಲವಾರು ಜನರು ರೈಲನ್ನು ನೋಡಲು ನಿಲ್ದಾಣವನ್ನು ತಲುಪಿದ್ದಾರೆ.



ಈ ಸಂದರ್ಭದಲ್ಲಿ ಟಿಕೆಟ್ ಇಲ್ಲದವರು ರೈಲಿನೊಳಗೆ ಹತ್ತದಂತೆ ರೈಲು ಅಧಿಕಾರಿಗಳು ವಿನಂತಿಸಿದ್ದರು. ಆದಾಗ್ಯೂ ಈ ವ್ಯಕ್ತಿ ಸೆಲ್ಫಿಗಾಗಿ ರೈಲಿನೊಳಗೆ ಹೋಗಿದ್ದನೆನ್ನಲಾಗಿದೆ


"ಸಮಾಲೋಚನೆಯ ನಂತರ ಈ ಪ್ರಯಾಣಿಕನನ್ನು ಬಿಡುಗಡೆ ಮಾಡಲಾಯಿತು ಮತ್ತು ಯಾವುದೇ ದಂಡ ವಿಧಿಸಲಾಗಿಲ್ಲ" ಎಂದು ವಾಲ್ತೇರ್ ಡಿಆರ್‌ಎಂ ಅನೂಪ್ ಸತ್ಪತಿ ಹೇಳಿದರು.




ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದು..


ಭಾರತೀಯ ರೈಲ್ವೆ ಪರಿಚಯಿಸಿರುವ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ತೆಲುಗು ಮಾತನಾಡುವ ಎರಡು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ ಮೊದಲ ರೈಲು ಇದಾಗಿದೆ. ಸುಮಾರು 700 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

First published: