ಮನೆ ಮೇಲೆ ಬಿದ್ದ ಕಲ್ಲಿನಿಂದ ದಿಢೀರ್​ ಶ್ರೀಮಂತನಾದ; ಅಷ್ಟಕ್ಕೂ ಯಾವ ಕಲ್ಲದು?

ಶವಪೆಟ್ಟಿಗೆ ತಯಾರಿಸುವ ಈತನ ಮನೆಯ ಚಾವಣಿ ಮೇಲೆ ಉಲ್ಕಾಶಿಲೆಯೊಂದು ಅಪ್ಪಳಿಸಿದೆ. ಇದು ಈತನ ಅದೃಷ್ಟವನ್ನು ಖುಲಾಯಿಸಿದ್ದು, ದಿಢೀರ್​ ಶ್ರೀಮಂತನನ್ನಾಗಿ ಮಾಡಿದೆ

news18-kannada
Updated:November 19, 2020, 7:32 PM IST
ಮನೆ ಮೇಲೆ ಬಿದ್ದ ಕಲ್ಲಿನಿಂದ ದಿಢೀರ್​ ಶ್ರೀಮಂತನಾದ; ಅಷ್ಟಕ್ಕೂ ಯಾವ ಕಲ್ಲದು?
ಕಲ್ಲಿನ ಚಿತ್ರಣ
  • Share this:
ಮನೆ ಮೇಲೆ ಬಿದ್ದ ಉಲ್ಕಾಶಿಲೆಯಿಂದಾ ರಾತ್ರೋರಾತ್ರಿ ವ್ಯಕ್ತಿಯೊಬ್ಬ ಕೋಟ್ಯಾಧೀಶನಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಜೋಸುವಾ ಹುಟಗಲುಂಗ್​. ಶವಪೆಟ್ಟಿಗೆ ತಯಾರಿಸುವ ಈತನ ಮನೆಯ ಚಾವಣಿ ಮೇಲೆ ಉಲ್ಕಾಶಿಲೆಯೊಂದು ಅಪ್ಪಳಿಸಿದೆ. ಇದು ಈತನ ಅದೃಷ್ಟವನ್ನು ಖುಲಾಯಿಸಿದ್ದು, ದಿಢೀರ್​ ಶ್ರೀಮಂತನನ್ನಾಗಿ ಮಾಡಿದೆ. ಕಳೆದ ಆಗಸ್ಟ್​ನಲ್ಲಿ ಮನೆ ಮುಂದೆ ಈತ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿಲೆಯೊಂದು ಬಿದ್ದಿದೆ. ದೊಡ್ಡ ಗಾತ್ರದ ಈ ಉಲ್ಕಾ ಶಿಲೆ ಬಿದ್ದಾಗ ಭೂಮಿಯ ಕೆಲ ಭಾಗದಲ್ಲಿ ನಡುಗಿದೆ. ಜೋರಾಗಿ ಶಬ್ದ ಬಂದಿದ್ದು, ಮೇಲ್ಛಾವಣಿ ಕೂಡ ಕಿತ್ತು ಹೋಗಿತ್ತು. ಮನೆಯ ಮೇಲೆ ಕಲ್ಲು ಬಿದ್ದಿತು ಎಂದು ನಾನು ಭಾವಿಸಿದೆ. ಆದರೆ, ಅದು ನನಗೆ ವರವಾಯಿತು ಎಂದು ಈತ ತಿಳಿಸಿದ್ದಾನೆ.


Tiba tiba batu hitam jatuh dari langit
Bikin kagettttt........
Tp apa pun itu mudah2an pertanda baik buat keluarga kami....

Posted by Josua Hutagalung on Saturday, 1 August 2020

ಮನೆ ಮೇಲೆ ಬಿದ್ದ ಕಲ್ಲನ್ನು ಎತ್ತಿಕೊಂಡಾಗ ಅದು ಬೆಚ್ಚಗೆ ಇತ್ತು. ಅದು ಏನೆಂದು ತಿಳಿಯಲಿಲ್ಲ ಎಂದಿದ್ದಾನೆ. ಈ ಕಲ್ಲಿನ ಮಹತ್ವ ತಿಳಿಯದೇ ಈತ ಇದನ್ನು ಅಮೆರಿಕದ ಜೇರೆಡ್​ ಕಾಲಿನ್ಸ್​ ಎಂಬ ರಾಕ್​ ಸ್ಪೆಷಾಲಿಸ್ಟ್​ಗೆ ಮಾರಾಟ ಮಾಡಿದ್ದ. ಈತ ಇದನ್ನು ಮತ್ತೆ ಜೇ ಪಿಯೆಟೆಕ್​​ ಎಂಬಾತನಿಗೆ ಮರು ಮರಾಟ ಮಾಡಿದ ಎಂದು ತಿಳಿದು ಬಂದಿದೆ.

ಈ ಕಲ್ಲು 21 ಕೆಜಿ ತೂಕ ಹೊಂದಿತ್ತು. ಈ ಉಲ್ಕಾ ಶಿಲೆ 4.5 ಬಿಲಿಯನ್​ ವರ್ಷಗಳಷ್ಟು ಹಳೆಯದಾದ ಕಾರ್ಬೊನೇಸಿಯಸ್​ ಕೊಂಡ್ರೈಟ್​ ಆಗಿದೆ. ಇದರ ಮೌಲ್ಯ ಸುಮಾರು 645 ಪೌಂಡ್​ ಅಂದರೆ, ಸರಿ ಸುಮಾರು 8 ರಿಂದ 9,5 ಕೋಟಿಗಳಾಗಿದೆ.

ಇನ್ನು ಈ ಬೆಲೆ ಬಾಳುವ ಶಿಲೆಯನ್ನು ಎಷ್ಟು ಮೊತ್ತಕ್ಕೆ ಮಾರಾಟ ಮಾಡಿದ ಎಂಬ ಬಗ್ಗೆ ಹುಟಗಲುಂಗ್​ ಬಹಿರಂಗಪಡಿಸಿಲ್ಲ. ಸರಿ ಸುಮಾರು 1 ಮಿಲಿಯನ್​ ಪೌಂಡ್​ಗೂ ಹೆಚ್ಚು ಹಣ ಪಡೆದುದ್ದಾಗಿ ಹೇಳಿದ್ದಾನೆ. ಅಲ್ಲದೇ ತನ್ನ ಜೀವಮಾನದ 30 ವರ್ಷದ ವೇತನದ ಸಮವಾಗಿ ಹಣ ಪಡೆದುದ್ದಾಗಿ ಹೇಳಿದ್ದಾನೆ. ಈ ಹಣದಿಂದ ಈತ ಗ್ರಾಮದಲ್ಲಿ ಚರ್ಚ್​ ನಿರ್ಮಿಸಲು ಮುಂದಾಗಿದ್ದಾನೆ.
Published by: Seema R
First published: November 19, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading