Arrest: ಮದುವೆ ಸಮಾರಂಭಗಳಲ್ಲಿ ಕ್ಯಾಮೆರಾ ಕದಿಯುತ್ತಿದ್ದ ಕಳ್ಳ! ಈತ ಎಷ್ಟು ಮೌಲ್ಯದ ಕ್ಯಾಮೆರಾ ಕದ್ದಿದ್ದಾನೆ ಗೊತ್ತಾ?

51 ವರ್ಷದ ವ್ಯಕ್ತಿಯೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ 6 ವರ್ಷಗಳಿಂದ ಹೀಗೆ ಮದುವೆ ನಡೆಯುವ ಮನೆಗಳಿಗೆ ಅತಿಥಿ ರೀತಿಯಲ್ಲಿ ಹೋಗುವುದು ಮತ್ತು ಆ ಮದುವೆಯಲ್ಲಿ ಫೋಟೋಗಳನ್ನು ತೆಗೆಯಲು ಬಂದಿರುವ ಫೋಟೋಗ್ರಾಫರ್ ಬಳಿ ನಿಲ್ಲುವುದು ಮತ್ತು ಅವರು ಅಲ್ಲಿಯೇ ಅವರ ಕ್ಯಾಮೆರಾವನ್ನು ಇಟ್ಟು ಸ್ವಲ್ಪ ಬೇರೆ ಕಡೆ ಹೋದರೆ ಸಾಕು, ಈ ವ್ಯಕ್ತಿ ಅಲ್ಲಿಂದ ಆ ಕ್ಯಾಮೆರಾ ಮತ್ತು ಅವುಗಳ ಲೆನ್ಸ್‌ಗಳನ್ನು ಕಳುವು ಮಾಡಿಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದನು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮದುವೆ ಮನೆಗಳಲ್ಲಿ (Wedding) ಈ ಬಂಗಾರದ ಒಡವೆಗಳು (Gold), ದುಡ್ಡು (Money), ಹೊಸ ಬಟ್ಟೆ (Dress), ಮೊಬೈಲ್ ಫೋನ್‌ಗಳು (Mobile Phone) ಹೀಗೆ ಅನೇಕ ರೀತಿಯ ವಸ್ತುಗಳನ್ನು ಕದಿಯಲು (Stolen) ಕೆಲವು ಜನರು ಹೊಂಚು ಹಾಕಿ ಕಾಯುತ್ತಿರುತ್ತಾರೆ. ಏಕೆಂದರೆ ಮದುವೆಯ ಸಂದರ್ಭದಲ್ಲಿ ಮನೆಯಲ್ಲಿಟ್ಟಂತಹ ವಸ್ತುಗಳ ಬಗ್ಗೆ ಮನೆಯವರಿಗೆ ಅಷ್ಟೊಂದು ಗಮನ ಇರುವುದಿಲ್ಲ.

  ತುಂಬಾ ಕೆಲಸಗಳನ್ನು ನೋಡಿಕೊಳ್ಳುತ್ತಾ ಯಾವುದನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವುದನ್ನೇ ಮರೆತು ಬಿಡುತ್ತಾರೆ ನಮ್ಮ ಜನರು. ಈ ಸಮಯ ನೋಡಿಕೊಂಡು ಕಳ್ಳರು ಮೆಲ್ಲಗೆ ಮನೆಗೆ ಬಂದು ತಮ್ಮ ಕೈಗೆ ಸಿಕ್ಕಿದ್ದೆಲ್ಲವನ್ನೂ ಎತ್ತಿಕೊಂಡು ಹೋಗುತ್ತಾರೆ. ಇಲ್ಲಿಯೂ ಸಹ ಅದೇ ರೀತಿಯ ಘಟನೆ ನಡೆದಿದೆ ನೋಡಿ.

  ಆದರೆ ಈ ಮದುವೆ ನಡೆಯುವ ಮನೆಯಲ್ಲಿ ವ್ಯಕ್ತಿಯೊಬ್ಬ ಕಳುವು ಮಾಡಿದ್ದು ಬೆಲೆಬಾಳುವ ಚಿನ್ನವನ್ನಲ್ಲ ಮತ್ತು ನಗದು ಹಣವಂತೂ ಅಲ್ಲವೇ ಅಲ್ಲ. ಹಾಗಾದರೆ ಈ ವ್ಯಕ್ತಿ ಮದುವೆ ನಡೆಯುವ ಮನೆಯಲ್ಲಿ ಕದ್ದಿದ್ದು ಏನು ಅಂತ ತಿಳಿದುಕೊಳ್ಳಲು ನಿಮಗೆ ತುಂಬಾನೇ ಕುತೂಹಲ ಇರಬೇಕಲ್ಲವೇ?

  51 ವರ್ಷದ ವ್ಯಕ್ತಿಯೊಬ್ಬ ಒಂದಲ್ಲ, ಎರಡಲ್ಲ ಬರೋಬ್ಬರಿ 6 ವರ್ಷಗಳಿಂದ ಹೀಗೆ ಮದುವೆ ನಡೆಯುವ ಮನೆಗಳಿಗೆ ಅತಿಥಿ ರೀತಿಯಲ್ಲಿ ಹೋಗುವುದು ಮತ್ತು ಆ ಮದುವೆಯಲ್ಲಿ ಫೋಟೋಗಳನ್ನು ತೆಗೆಯಲು ಬಂದಿರುವ ಫೋಟೋಗ್ರಾಫರ್ ಬಳಿ ನಿಲ್ಲುವುದು ಮತ್ತು ಅವರು ಅಲ್ಲಿಯೇ ಅವರ ಕ್ಯಾಮೆರಾವನ್ನು ಇಟ್ಟು ಸ್ವಲ್ಪ ಬೇರೆ ಕಡೆ ಹೋದರೆ ಸಾಕು, ಈ ವ್ಯಕ್ತಿ ಅಲ್ಲಿಂದ ಆ ಕ್ಯಾಮೆರಾ ಮತ್ತು ಅವುಗಳ ಲೆನ್ಸ್‌ಗಳನ್ನು ಕಳುವು ಮಾಡಿಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದನು.

  ಹೀಗೆ 6 ವರ್ಷಗಳಿಂದ ಈ ವ್ಯಕ್ತಿ ಕದ್ದಿದ್ದು 25 ಲಕ್ಷ ರೂಪಾಯಿ ಮೊತ್ತದ ಕ್ಯಾಮೆರಾ ಮತ್ತು ಅವುಗಳ ಲೆನ್ಸ್‌ಗಳೆಂದು ಹೇಳಲಾಗುತ್ತಿದೆ. ಈ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಆತನು ಚೆನ್ನೈನಲ್ಲಿರುವ ಭಾರತಿ ನಗರದ ವಿಲ್ಲಿವಕ್ಕಮ್ ಎಂಬ ಏರಿಯಾದ ನಿವಾಸಿಯಾಗಿದ್ದು, ಈತನ ಹೆಸರು ಸಂಶುದ್ದೀನ್ ಎಂದು ಹೇಳಲಾಗುತ್ತಿದೆ.

  ಚೆನ್ನೈ ನಗರದ ಪೊಲೀಸ್ ಆಯುಕ್ತರಾದ ಶಂಕರ್ ಜೀವಾಲ್ ಅವರಿಗೆ ಸಿಕ್ಕ ಮಾಹಿತಿಯ ಪ್ರಕಾರ ಅವರು ಪೊಲೀಸರ ತಂಡಗಳನ್ನು ಮಾಡಿ ಇದರ ಬಗ್ಗೆ ತನಿಖೆ ಮಾಡಿ ಆ ವ್ಯಕ್ತಿಯನ್ನು ಬಂಧಿಸಲು ಹೇಳಿದ್ದರು. ಅದೇ ರೀತಿಯಾಗಿ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.

  ವಿಚಾರಣೆಯ ಸಮಯದಲ್ಲಿ ಈ ವ್ಯಕ್ತಿ ತಾನು ಈ ಮದುವೆ ನಡೆಯುತ್ತಿರುವ ಸ್ಥಳಗಳಲ್ಲಿ ಸೈಕಲ್ ಮೇಲೆ ತಿರುಗಾಡುವುದರ ಮೂಲಕ ಎಲ್ಲವನ್ನೂ ಗಮನಿಸುತ್ತಿದ್ದನು ಎಂದು ಹೇಳಿದನು. ಸೈಕಲ್‌ಗೆ ಯಾವುದೇ ಸಂಖ್ಯೆ ಇರದ ಕಾರಣ ಮತ್ತು ಸೈಕಲ್ ಮೇಲೆ ತಿರುಗಾಡುವುದರಿಂದ ಅಲ್ಲಿನ ಸ್ಥಳೀಯರನ್ನು ಮಾತಾಡಿಸಿಕೊಂಡು ಅಲ್ಲಿಯೇ ಎಲ್ಲವನ್ನೂ ತಿಳಿದುಕೊಳ್ಳಬಹುದು ಎಂಬುದು ಇವನ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನು ಓದಿ: Car Tyre: ಕಾರು ಚಲಾಯಿಸುವಾಗ ಈ ತಪ್ಪು ಮಾಡಬೇಡಿ.. ಟೈರ್ ಬೇಗನೆ ಸವೆಯುತ್ತದೆ!

  ಮದುವೆ ಮನೆಗಳಲ್ಲಿ ಈ ಫೋಟೋಗ್ರಾಫರ್‌ಗಳು ಊಟಕ್ಕೆ ಹೋಗುವ ಸಮಯ ನೋಡಿಕೊಂಡು ಅವರ ಕ್ಯಾಮೆರಾಗಳನ್ನು ಕಳುವು ಮಾಡುತ್ತಿದ್ದನು ಎಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾನೆ.

  ಹೀಗೆ ಒಂದೆರಡು ಮದುವೆಯ ಮನೆಗಳ ಹೊರಗೆ ಸೈಕಲ್ ಮೇಲೆ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿದ ಪೊಲೀಸರು ಇವನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆ ಕದ್ದ ಕ್ಯಾಮೆರಾಗಳನ್ನು ದಲ್ಲಾಳಿಗಳ ಹತ್ತಿರ ಮಾರಿ ಹಣ ಪಡೆದುಕೊಂಡು ಆ ಹಣವನ್ನು ಸಾರಾಯಿ ಕುಡಿಯುವುದಕ್ಕೆ ಖರ್ಚು ಮಾಡುತ್ತಿದ್ದ ಎನ್ನಲಾಗುತ್ತಿದೆ. ಹೀಗೆ ಒಂದು ಮದುವೆ ಮನೆಯಲ್ಲಿ ಕಳುವು ಮಾಡಲೆಂದು ಒಳಗಡೆ ಹೋಗುವಾಗ ಪೊಲೀಸರು ಇವನನ್ನು ಬಂಧಿಸಿದ್ದಾರೆ.

  ಇದನ್ನು ಓದಿ: Magic spray: ನಿದ್ದೆ ಮಾಡದ ಮಕ್ಕಳಿಗಾಗಿ ಬಂದಿದೆ ಮ್ಯಾಜಿಕ್ ಸ್ಪ್ರೇ! ಸಿಂಪಡಿಸಿದರೆ ಸಾಕು ನಿಮಿಷಾರ್ಧದಲ್ಲೇ ನಿದ್ದೆ ಬರುತ್ತಂತೆ!

  ಕೆಲವು ದಿನಗಳ ಹಿಂದೆ ಸ್ಥಳೀಯ ಫೋಟೋಗ್ರಾಫರ್ ಅಶ್ವಿನ್ ಎಂಬುವವರು ತಮ್ಮ 1,50,000 ರೂಪಾಯಿ ಬೆಲೆಯ ಕ್ಯಾಮೆರಾವೊಂದು ಕಳುವಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಮದುವೆ ಮನೆಗಳ ಮೇಲೆ ವಿಶೇಷವಾದ ನಿಗಾ ಇರಿಸಿದ್ದು, ಈ ಕಳ್ಳನನ್ನು ಬಂಧಿಸಿದ್ದಾರೆ.

  ಇಷ್ಟೇ ಅಲ್ಲದೆ ಅಶ್ವಿನ್ ತಮ್ಮ ಕ್ಯಾಮೆರಾ ಕಳುವಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನೇಕ ಫೋಟೋಗ್ರಾಫರ್‌ಗಳು ತಮ್ಮ ಕ್ಯಾಮೆರಾ ಸಹ ಇದೇ ರೀತಿಯಾಗಿ ಕಳುವಾಗಿದೆ ಎಂದಾಗ ಪೊಲೀಸರಿಗೆ ಅನುಮಾನ ಬಲವಾಗಿದೆ ಎಂದು ಹೇಳಲಾಗುತ್ತಿದೆ.
  Published by:Harshith AS
  First published: