Video Viral: ಹುಡುಗಿಯರ ಒಳಉಡುಪೇ ಈತನ ಟಾರ್ಗೆಟ್! ಕಳ್ಳ ಕದ್ದಿರುವ ಅಂಡರ್​ವೇರ್ ಸಂಖ್ಯೆ ತಿಳಿದರೆ ಬೆಚ್ಚಿ ಬಿಳೋದು ಪಕ್ಕಾ!

Under wear Chore: ಜಪಾನ್​ನಲ್ಲಿ (Japan) ಈ ಘಟನೆ ನಡೆದಿದೆ. 56 ವರ್ಷದ ಟೆಟ್ಸುವೋ ಉರಾಟಾ ವ್ಯಕ್ತಿ ಹುಡುಗಿಯರ ಉಳಉಡುಪು ಕದ್ದು ಸಿಕ್ಕಿಬಿದ್ದಿದ್ದಾನೆ. ಈತ ಕದ್ದಿರುವ ಒಳಉಡುಪಿನ ಸಂಖ್ಯೆ ಕೇಳಿ ಪೊಲೀಸರೇ  ಶಾಕ್​ ಆಗಿದ್ದಾರೆ.

ಒಳಉಡುಪು

ಒಳಉಡುಪು

 • Share this:
  ಹಣ, ಚಿನ್ನ, ಬೆಳ್ಳಿ, ವಾಹನ, ಮೊಬೈಲ್​ ಹೀಗೆ ಬೆಲೆಬಾಳುವ ವಸ್ತುಗಳನ್ನು ಕದ್ದು ಸಿಕ್ಕಿ ಬಿದ್ದಿರುವ ಕಳ್ಳರ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಹುಡುಗಿಯರ ಒಳಉಡುಪು ಕದ್ದು ಬಂಧಿತನಾಗಿದ್ದಾನೆ. ಅಚ್ಚರಿಯ ವಿಚಾರವೆಂದರೆ ಆತ ಒಂದೆರಡು ಒಳ ಉಡುಪು (Underwear) ಕದ್ದಿದ್ದರೆ ಇಷ್ಟೇಲ್ಲಾ ಸುದ್ದಿಯಾಗುತ್ತಿರಲಿಲ್ಲ. ಆತ ಕದ್ದಿದ್ದು ಬರೋಬ್ಬರಿ 700ಕ್ಕೂ ಅಧಿಕ ಒಳಉಡುಪು!

  ಜಪಾನ್​ನಲ್ಲಿ (Japan) ಈ ಘಟನೆ ನಡೆದಿದೆ. 56 ವರ್ಷದ ಟೆಟ್ಸುವೋ ಉರಾಟಾ ವ್ಯಕ್ತಿ ಮಹಿಳೆಯರ ಉಳಉಡುಪು ಕದ್ದು ಸಿಕ್ಕಿಬಿದ್ದಿದ್ದಾನೆ. ಈತ ಕದ್ದಿರುವ ಒಳಉಡುಪಿನ ಸಂಖ್ಯೆ ಕೇಳಿ ಪೊಲೀಸರೇ  ಶಾಕ್​ ಆಗಿದ್ದಾರೆ.

  ಟೆಟ್ಸುವೋ ಉರಾಟಾ ದಕ್ಷಿಣ ಜಪಾನ್​​ನ ಬೆಪ್ಪು ನಗರದ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದು, ಮನೆಯಲ್ಲಿ ಹುಡುಗಿಯರ ಒಳಉಡುಪನ್ನು ಕದ್ದ್ದು ಸಂಗ್ರಹಿಸಿಟ್ಟಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದ ಎಂದು ತಿಳಿದುಬರಬೇಕಿದೆ.

  ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

  21 ವರ್ಷದ ಕಾಲೇಜು ವಿದ್ಯಾರ್ಥಿ ಆಗಸ್ಟ್​ 24 ರಂದು ಸಾರ್ವಜನಿಕ ಬಟ್ಟೆತೊಳೆಯುವ ಯಂತ್ರ ಮೂಲಕ (laundromat) ಬಟ್ಟೆ ಒಗೆದಿದ್ದಳು. ಆದರೆ ಅಂದು ಆಕೆಯ ಆರು ಜೊತೆ ಒಳಉಡುಪುಗಳು ಕಳುವಾಗಿದೆ. ಈ ಕಾರಣಕ್ಕೆ ಆಕೆ ಪೊಲೀಸರಿಗೆ ದೂರು ನೀಡುತ್ತಾಳೆ. ಅಷ್ಟೇ ಅಲ್ಲದೆ ಉರಾಟಾ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಳು.

  ವಿದ್ಯಾರ್ಥಿ ಮಾತ್ರವಲ್ಲದೆ, ಆಕೆಯಂತೆಯೇ ಒಳಉಡುಪು ಕಳೆದುಕೊಂಡ ಮೂರ್ನಾಲ್ಕು ಹುಡುಗಿಯರು ದೂರು ನೀಡಿದ್ದಾರೆ. ಈ ವಿಚಿತ್ರ ಪ್ರಕರಣದತ್ತ ಭೇದಿಸಲು ಹೊರಟ ಪೊಲೀಸರಿಗೆ ಕೊನೆಗೆ ಉರಾಟಾ ಕದ್ದಿರುವುದು ಎಂದು ತಿಳಿದುಬಂದಿದೆ.  ಆತನ ಅಪಾರ್ಟ್​ಮೆಂಟ್​ಗೆ ಹೋಗಿ ನೋದಿದಾಗ 730 ಒಳಉಡುಪುಗಳು ಸಿಕ್ಕಿದೆ.  ಉರಾಟಾ ತಾನು ಒಳಉಡುಪುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಆತ ಕದ್ದಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಇದಕ್ಕೂ ಮೊದಲು ಮಾರ್ಚ್​ ತಿಂಗಳಿನಲ್ಲಿ ಜಪಾನ್​ನ ಸಾಗಾ ನಗರದ ಎಲೆಕ್ಟ್ರಿಷಿಯನ್​ ಒಳಉಡುಪುಗಳನ್ನು ಕದ್ದು ಸಿಕ್ಕಿಬಿದ್ದಿದ್ದ. ಆತನ ಬಳಿ ಸುಮಾರು 400ಕ್ಕೂ ಹೆಚ್ಚು ಒಳಉಡುಪು ಸಿಕ್ಕಿತ್ತು. ಜೊತೆಗೆ ಈಜುಡೆಗೆಯನ್ನು ಕದ್ದಿದ್ದ.
  Published by:Harshith AS
  First published: