Viral Photo: ಪೊದೆಗಳ ಮಧ್ಯೆ ಸಿಂಹ ನೋಡಿ ಹೌಹಾರಿದ ರೈತ, ಅನಂತರ ನಡೆದಿದ್ದು ಫನ್ನಿ

ಪೊದೆಗಳ ಮಧ್ಯೆ ಇದ್ದ ಸಿಂಹದ ಚಿತ್ರವಿರುವ ಬ್ಯಾಗು

ಪೊದೆಗಳ ಮಧ್ಯೆ ಇದ್ದ ಸಿಂಹದ ಚಿತ್ರವಿರುವ ಬ್ಯಾಗು

ಅನೇಕ ರೋಚಕ ಪ್ರಸಂಗಗಳು ಈಗಾಗಲೇ ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆಗಿರುವುದನ್ನು ನೋಡಿರುತ್ತೀರಿ. ಅಂತಹುದ್ದೇ ಒಂದು ಭಯಭೀತರಾಗುವಂತಹ ಘಟನೆ ಕಿನ್ಯಾ ದೇಶದ ಗ್ರಾಮವೊಂದರಲ್ಲಿ ನಡೆದಿದ್ದು ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪೋಸ್ಟ್ ಈಗ ಸಾಕಷ್ಟು ಹರಿದಾಡುತ್ತಿದೆ. ಅಸಲಿಗೆ, ಕಿನ್ಯಾದ ಮೌಂಟ್ ಕಿನ್ಯಾ ರಾಷ್ಟ್ರೀಯ ಉದ್ಯಾನದಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಗ್ರಾಮವೊಂದರ ಪೊದೆಗಳಲ್ಲಿ ಸಿಂಹವೊಂದು ಮಲಗಿರುವ ರೀತಿಯಲ್ಲಿ ಕಂಡುಬಂದಿದೆ.

ಮುಂದೆ ಓದಿ ...
  • Share this:

ಒಮ್ಮೊಮ್ಮೆ ಕೆಲ ಘಟನೆಗಳು ಮನುಷ್ಯ ಭಯಭೀತರಾಗುವಂತೆ ಮಾಡುತ್ತವೆ. ಸಮುದ್ರ (sea) ತಟಗಳಲ್ಲಿ ಚಿತ್ರ-ವಿಚಿತ್ರ ಜೀವಿಗಳು ಕಂಡು ಬರುವುದರಿಂದ ಹಿಡಿದು, ಯಾವುದೋ ದೊಡ್ಡದಾದ ಅಸ್ಥಿಪಿಂಜರಗಳು (skeleton) ಕಂಡುಬಂದಿದ್ದರವರೆಗೆ ಅನೇಕ ರೋಚಕ ಪ್ರಸಂಗಗಳು ಈಗಾಗಲೇ ನೀವು ಸಾಮಾಜಿಕ ಮಾಧ್ಯಮಗಳಲ್ಲಿ (social media) ಹರಿದಾಡಿ ವೈರಲ್ (viral) ಆಗಿರುವುದನ್ನು ನೋಡಿರುತ್ತೀರಿ. ಅಂತಹುದ್ದೇ ಒಂದು ಭಯಭೀತರಾಗುವಂತಹ ಘಟನೆ ಕಿನ್ಯಾ (Kenya) ದೇಶದ ಗ್ರಾಮವೊಂದರಲ್ಲಿ ನಡೆದಿದ್ದು ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪೋಸ್ಟ್ (Post) ಈಗ ಸಾಕಷ್ಟು ಹರಿದಾಡುತ್ತಿದೆ. ಅಸಲಿಗೆ, ಕಿನ್ಯಾದ ಮೌಂಟ್ ಕಿನ್ಯಾ ರಾಷ್ಟ್ರೀಯ ಉದ್ಯಾನದಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಗ್ರಾಮವೊಂದರ ಪೊದೆಗಳಲ್ಲಿ ಸಿಂಹವೊಂದು (Lion) ಮಲಗಿರುವ ರೀತಿಯಲ್ಲಿ ಕಂಡುಬಂದಿದೆ.


ಪೊದೆಯಲ್ಲಿ ಮಲಗಿದ ಸಿಂಹ
ಈ ದೃಶ್ಯವನ್ನು ನೋಡಿದ ಆ ಗ್ರಾಮದ ರೈತನೊಬ್ಬ ಸಿಂಹವೊಂದು ಬಂದಿದೆ ಎಂದು ಹೌಹಾರಿ ಭಯಭೀತನಾಗಿದ್ದಾನೆ. ತಕ್ಷಣ ಈ ಬಗ್ಗೆ ಆ ರೈತ ಕಿನ್ಯಾ ಅರಣ್ಯ ಸಂರಕ್ಷಣ ಅಧಿಕಾರಿಗೆಳಿಗೆ ಫೋನ್ ಮಾಡಿ ಈ ಸುದ್ದಿ ತಿಳಿಸಿದ್ದಾನೆ.


ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅವರು ಆ ಸಿಂಹವಿದ್ದ ಪೊದೆಗಳ ಜಾಗಕ್ಕೆ ಹೋಗಿ ಕುಲಂಕುಶವಾಗಿ ಪರೀಕ್ಷಿಸಿದಾಗ ಗೊತ್ತಾದ ವಿಷಯವೇ ಬೇರೆಯಾಗಿದೆ. ವಾಸ್ತವದಲ್ಲಿ ಅದೇ ಗ್ರಾಮದಲ್ಲಿದ್ದ ಇನ್ನೊಬ್ಬ ವ್ಯಕ್ತಿ ತಮ್ಮ ಬಳಿಯಿದ್ದ ಅವಕಾಡೋ ಬೀಜಗಳು ಸೂರ್ಯನ ನೇರ ಕಿರಣಗಳಿಂದ ಒಣಗಿ ಹಾಳಾಗದಂತೆ ಒಂದು ಬ್ಯಾಗಿನಲ್ಲಿ ಹಾಕಿ ಆ ಪೊದೆಗಳ ಮಧ್ಯೆ ಇರಿಸಿದ್ದಾರೆ. ಇಷ್ಟೆಲ್ಲ ರಂಪಾಟಕ್ಕೆ ಕಾರಣವಾಗಿದ್ದ ವಿಷಯವೆಂದರೆ ಆ ಬ್ಯಾಗು ಸಿಂಹದ ಮುಖದ ಚಿತ್ರದ ಮುದ್ರಣವನ್ನು ಹೊಂದಿದ್ದೆ ಎಂದು ತಿಳಿದುಬಂದಿದೆ.


ಸಿಂಹದ ಮುಖದ ಬ್ಯಾಗು
ಹೌದು, ಆ ಬ್ಯಾಗಿನಲ್ಲಿ ದೊಡ್ಡ ಸಿಂಹದ ಮುಖದ ಚಿತ್ರವಿದ್ದು ಆ ಬ್ಯಾಗನ್ನು ಪೊದೆಗಳ ಮಧ್ಯದಲ್ಲಿ ಇರಿಸಿದ್ದರಿಂದ ಸ್ವತಃ ಸಿಂಹವೊಂದು ಹಾಗೆ ಅಲ್ಲಿ ಕುಳಿತಿರುವ ಹಾಗೆ ಕಂಡುಬಂದಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ರೈತ ಸಿಂಹವೆಂದೇ ಭಯಭೀತನಾಗಿ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾನೆ. ವಾಸ್ತವ ತಿಳಿದ ಮೇಲೆ ಅರಣ್ಯ ಅಧಿಕಾರಿಗಳು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.


ಇದನ್ನೂ ಓದಿ: Viral Video: ಸ್ನಾನದ ವೇಳೆ ಖುಷಿಯಲ್ಲಿ ಪಲ್ಟಿ ಹೊಡೆಯೋ ಆನೆ! ಇದರ ಸರ್ಕಸ್ ನೋಡಿ ನೆಟ್ಟಿಗರು ಫಿದಾ


ಕಿನ್ಯನ್ ವೈಲ್ಡ್ ಲೈಫ್ ಸರ್ವಿಸಸ್ ಅವರು ಹಂಚಿಕೊಂಡ ಪೋಸ್ಟ್
ಕಿನ್ಯನ್ ವೈಲ್ಡ್ ಲೈಫ್ ಸರ್ವಿಸಸ್ ಅವರು ಹಂಚಿಕೊಂಡ ಪೋಸ್ಟ್ ನಲ್ಲಿ ಪೊದೆಗಳ ಮಧ್ಯದಲ್ಲಿ ಇರಿಸಲಾಗಿದ್ದ ಸಿಂಹದ ಚಿತ್ರದ ಬ್ಯಾಗಿನ ಚಿತ್ರ ಲಗತ್ತಿಸಿ ಈ ರೀತಿ ಬರೆದುಕೊಂಡಿದ್ದಾರೆ, "ಆಸಕ್ತಿಕರ ವಿದ್ಯಮಾನವೊಂದರಲ್ಲಿ ನಮಗೆ ಕಿಯಾಂಗುವಾ ಪ್ರದೇಶದ ಮೆರು ಕೌಂಟಿಯಿಂದ ಪೊದೆಗಳ ಮಧ್ಯದಲ್ಲಿ ಸಿಂಹ ಕಂಡಿರುವ ಬಗ್ಗೆ ಅನೇಕ ಮಾಹಿತಿಗಳು ಸಿಕ್ಕಿದ್ದವು, ತಕ್ಷಣ ಅರಣ್ಯ ಸಂರಕ್ಷಣಾಧಿಕಾರಿಗಳು ಉಂಟಾಗಬಹುದಾದ ಮನುಷ್ಯ-ಸಿಂಹ ಮುಖಾಮುಖಿಯ ಅನಾಹುತವನ್ನು ತಪ್ಪಿಸಲು ಸ್ಥಳಕ್ಕೆ ತ್ವರಿತವಾಗಿ ಧಾವಿಸಿದರು".


ರೈತನ ಸಮಯೋಚಿತ ನಡೆಯನ್ನು ಶ್ಲಾಘಿಸಿದ ಅಧಿಕಾರಿಗಳು
ತದನಂತರ ಅಧಿಕಾರಿಗಳಿಗೆ ಈ ವಿಷಯ ಗೊತ್ತಾದಾಗ ಅವರು ನಿಟ್ಟುಸಿರು ಬಿಟ್ಟಿರಾಹುದೆಂದಷ್ಟೇ ಹೇಳಬಹುದು. ಆದಾಗ್ಯೂ ಈ ಬಗ್ಗೆ ವಿರೋಧಾಭಾಸ ವ್ಯಕ್ತಪಡಿಸದ ಅಧಿಕಾರಿಗಳು ಬದಲಾಗಿ ಆ ರೈತನು ಆ ಕ್ಷಣದಲ್ಲಿ ತೋರಿದ ಸಮಯೋಚಿತ ನಡೆಯನ್ನು ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Viral Photo: ಚಂಡಮಾರುತಕ್ಕೆ ನಲುಗಿದ ಬೆಕ್ಕಿನ ಮರಿಗಳ ಆರೈಕೆ ಮಾಡಿದ ಕೋಳಿ! ಮಮತೆ ಅಂದ್ರೆ ಇದೇ ನೋಡಿ


ಅದಕ್ಕೂ ಮುಂಚೆ ಪ್ರಾಧಿಕಾರಕ್ಕೆ ಸಿಂಹ ಕಂಡುಬಂದ ಸುದ್ದು ತಿಳಿದಾಗ ರೈತನ ಉದ್ಯೋಗದಾತೆಯಾಗಿದ್ದ ಹಾಗೂ ಅವಕಾಡೋ ಬೀಜಗಳನ್ನು ಇರಿಸಿದ್ದ ಒಡತಿ ಮನೆಯಲ್ಲಿರಲಿಲ್ಲ. ತದನಂತರ ಅವಳು ಮನೆಗೆ ಬಂದಾಗ ಈ ಸುದ್ದಿ ತಿಳಿಸಲಾಯಿತು ಹಾಗೂ ಅವಳನ್ನು ಬೇರೆ ದ್ವಾರದ ಮೂಲಕ ಮನೆಯೊಳಗೆ ಪ್ರವೇಶಿಸಲು ಕೇಳಲಾಯಿತು. ಹೀಗಾಗಿ ಅವಳು ತನ್ನ ಬ್ಯಾಗಿನ ಬಗ್ಗೆ ವಿಷಯ ಹೇಳಲು ಯಾವುದೇ ಅವಕಾಶ ಸಿಗಲಿಲ್ಲ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಅದು ನಿಜವಾದ ಸಿಂಹವಾಗಿರದೆ ಇದ್ದದ್ದು ಅಲ್ಲಿನ ಗ್ರಾಮಸ್ಥರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

top videos
    First published: