Viral Video| ತಾಯಿ ಕರಡಿ ತನ್ನ ಮರಿಗೆ ಏನು ಕಲಿಸುತ್ತಿದೆ ನೋಡಿ..! ವಿಡಿಯೋ ನೋಡಿದರೆ ಖುಷಿ ಆಗುವುದಂತೂ ಗ್ಯಾರಂಟಿ..!

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನೇಕರನ್ನು ಆಶ್ಚರ್ಯಚಕಿತಗೊಳಿಸಿದೆ ಮತ್ತು ರಂಜಿಸಿದೆ. ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ಐಸಾಕ್ ಡಿಕ್ಸನ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಬೆಟ್ಸಿ ಸ್ಟಾಕ್ಸ್ಲಾಗರ್‌ ಈ ಮುದ್ದಾದ ಘಟನೆಯನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ತಾಯಿ ಕರಡಿ ತನ್ನ ಮರಿಗೆ ಏನು ಕಲಿಸುತ್ತಿದೆ ನೋಡಿ.

ತಾಯಿ ಕರಡಿ ತನ್ನ ಮರಿಗೆ ಏನು ಕಲಿಸುತ್ತಿದೆ ನೋಡಿ.

  • Share this:
ತಾಯಿ ತಂದೆ ತಮ್ಮ ಮಕ್ಕಳನ್ನು ತಮ್ಮ ಮನೆಯ ಹತ್ತಿರದಲ್ಲಿರುವಂತಹ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ಚಿಕ್ಕ ಮಕ್ಕಳಿಗೆ ಆಟ ಆಡಲೆಂದೇ ಹಾಕಿರುವಂತಹ ಸ್ಲೈಡ್ ಮೇಲೆ ಹತ್ತಿ ಹೇಗೆ ಕೆಳಗೆ ಜಾರುವುದು ಎಂದು ಅವರ ಮಕ್ಕಳಿಗೆ ಹೇಳಿಕೊಡುವು ದನ್ನು ನೋಡಿರುತ್ತೇವೆ.ಚಿಕ್ಕ ಮಕ್ಕಳಿಗೆ ಅಲ್ಲಿರುವ ಸ್ಲೈಡ್ ಹತ್ತಿ ಮೇಲಿಂದ ಕೆಳಗೆ ಹಾಗೆ ಜಾರಿಕೊಂಡು ಬರುವುದನ್ನು ಪೋಷಕರು ಹೇಳಿಕೊಟ್ಟ ಮೇಲೆ ಆ ಮಕ್ಕಳು ಅದನ್ನು ಬಿಡುವುದೇ ಇಲ್ಲ.ಆದರೆ ಮನುಷ್ಯರಿಗೂ ಪ್ರಾಣಿಗಳಿಗೂ ಅನೇಕ ವ್ಯತ್ಯಾಸಗಳಿದ್ದರೂ ಸಹ ಒಬ್ಬ ತಾಯಿ ತನ್ನ ಮಕ್ಕಳಿಗೆ ಒಂದು ಆಟ ಹೇಳಿಕೊಡುವ ರೀತಿ ಮಾತ್ರ ಒಂದೇ ಆಗಿರುತ್ತದೆ ಎಂದು ಇಲ್ಲಿರುವ ವಿಡಿಯೋ ನೋಡಿದರೆ ಯಾರಿಗಾದರೂ ಅನ್ನಿಸದೆ ಇರದು. ನಾವು ಕರಡಿಗಳ ಮುದ್ದಾದ ವಿಡಿಯೋಗಳನ್ನು ತುಂಬಾನೇ ನೋಡಿರುತ್ತೇವೆ, ಆದರೆ ಇದು ಕೊಂಚ ವಿಭಿನ್ನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋದಲ್ಲಿ ತಾಯಿ ಕರಡಿ ಶಾಲೆಯ ಆಟದ ಮೈದಾನದಲ್ಲಿ ಇರುವಂತಹ ಸ್ಲೈಡ್ ಹೇಗೆ ಬಳಸಬೇಕೆಂದು ತನ್ನ ಮರಿ ಕರಡಿಗೆ ಹೇಗೆ ಕಲಿಸುತ್ತಿದೆ ನೋಡಿ.

1 ನಿಮಿಷ 11 ಸೆಕೆಂಡುಗಳ ವಿಡಿಯೋದಲ್ಲಿ ತಾಯಿ ಕರಡಿ ಮೊದಲು ಸ್ಲೈಡ್ ಹತ್ತುತ್ತದೆ. ಅದನ್ನು ನೋಡುತ್ತಾ ಮರಿ ಕರಡಿ ಅಲ್ಲೇ ಕೆಳಗೆ ಅಡ್ಡಾಡುತ್ತಿರುತ್ತದೆ. ನಂತರ ತಾಯಿ ಕರಡಿ ಸ್ಲೈಡ್‌ನಿಂದ ಕೆಳಗೆ ಜಾರುತ್ತದೆ. ಇದನ್ನು ನೋಡಿದ ಮರಿ ಕರಡಿ ಅಲ್ಲಿಂದಲೇ ನೋಡುತ್ತದೆ, ಆಗ ತಾಯಿ ಕರಡಿ ಇನ್ನೊಂದು ಸ್ಲೈಡ್‌ನ ಕೆಳಗೆ ಬಂದು ನಿಲ್ಲುತ್ತದೆ.

ಅದನ್ನು ನೋಡಿದ ಮರಿ ಕರಡಿ ಹಾಗೆ ಜಾರುತ್ತಾ ಕೆಳಗೆ ಬಂದು ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತದೆ. ಆನಂತರ ತಾಯಿ ಮತ್ತು ಮರಿ ಕರಡಿ ಎರಡು ಅಲ್ಲೇ ನೆಲದ ಮೇಲೆ ಹೊರಳಾಡುತ್ತವೆ. ಇದನ್ನು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನೇಕರನ್ನು ಆಶ್ಚರ್ಯಚಕಿತ ಗೊಳಿಸಿದೆ ಮತ್ತು ರಂಜಿಸಿದೆ. ಅಮೆರಿಕದ ಉತ್ತರ ಕೆರೊಲಿನಾದಲ್ಲಿರುವ ಐಸಾಕ್ ಡಿಕ್ಸನ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಬೆಟ್ಸಿ ಸ್ಟಾಕ್ಸ್ಲಾಗರ್‌ ಈ ಮುದ್ದಾದ ಘಟನೆಯನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಹಂಚಿಕೊಂಡಾಗಿನಿಂದ ಇದುವರೆಗೂ 3.3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಇದನ್ನು ಅನೇಕ ಜನರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಮರು ಹಂಚಿಕೊಂಡಿದ್ದಾರೆ.

"ಶಾಲೆಯಲ್ಲಿ ಆಟದ ಮೈದಾನದಲ್ಲಿ ಈ ದೃಶ್ಯ ಕಣ್ಣಾರೆ ಕಂಡಿದ್ದು ನನಗೆ ತುಂಬಾ ಸಂತೋಷ ನೀಡಿದೆ. ತಾಯಿ ಕರಡಿಯು ದೊಡ್ಡ ಸ್ಲೈಡ್‌ನಿಂದ ಹೇಗೆ ಇಳಿದು ಮತ್ತು ಬೇಗನೆ ಸಣ್ಣ ಸ್ಲೈಡ್ ಕಡೆಗೆ ಓಡಿಹೋಗಿ ಮರಿ ಕರಡಿಯು ಕೆಳಗೆ ಬಂದ ತಕ್ಷಣ ಅದನ್ನು ತಬ್ಬಿಕೊಂಡಿರುವುದು ನಿಜಕ್ಕೂ ತುಂಬಾನೇ ಮುದ್ದಾಗಿದೆ" ಎಂದು ವಿಡಿಯೋ ಹಂಚಿಕೊಳ್ಳುವಾಗ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Viral Video| ನಾನು ಮನೆಯಲ್ಲಿರಲು ಹುಟ್ಟಿದವಳಲ್ಲ, ಶಾಲೆಗೆ ಹೋಗಬೇಕು; ಹಠ ಹಿಡಿದ ಅಫ್ಘನ್ ವಿದ್ಯಾರ್ಥಿನಿಯ ವಿಡಿಯೋ ವೈರಲ್

ಇದನ್ನು ನೋಡಿದಂತಹ ನೆಟ್ಟಿಗರು "ನಾನು ಕರಡಿಗಳನ್ನು ತುಂಬಾನೇ ಇಷ್ಟಪಡುತ್ತೇನೆ" ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು "ತಾಯಿ ಮತ್ತು ಮರಿ ಕರಡಿಗಳು ಒಟ್ಟಿಗೆ ತಮಾಷೆಯಾಗಿರುವುದನ್ನು ನೋಡಲು ನಿಜವಾಗಿಯೂ ಮುದ್ದಾಗಿದೆ" ಎಂದು ಬರೆದಿದ್ದಾರೆ.
Published by:MAshok Kumar
First published: