Viral Video: ಮರಿಗಳೊಂದಿಗೆ ಮದ್ವೆ ರಿಸೆಪ್ಶನ್​ಗೆ ಬಂದ ಕರಡಿ

ಮೂರು 'ಆಹ್ವಾನಿಸದ' ಅತಿಥಿಗಳು, ಒಂದು ಕರಡಿ ಮತ್ತು ಅದರ ಎರಡು ಮರಿಗಳು ಮದುವೆಯ ರಿಸೆಪ್ಶನ್ ಪಾರ್ಟಿಗೆ ಬಂದು ಸೇರಿಕೊಂಡಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ

ಕರಡಿ

ಕರಡಿ

  • Share this:
ಕಾಡಿನ ಪ್ರಾಣಿಗಳು (Wild Animals) ಆಗೊಮ್ಮೆ ಈಗೊಮ್ಮೆ ನಾಡಿಗಿಳಿದು ಬರೋದು ಹೊಸದೇನು ಅಲ್ಲ. ಇನ್ನು ಕಾಡಿನ ಸಮೀಪದ ಹಳ್ಳಿಗಳಾದರೆ (Villages) ಮುಗಿಯಿತು. ಕಾಡು ಪ್ರಾಣಿಗಳು ಊರಿಗೆ ಲಗ್ಗೆ ಇಡೋದು ತುಂಬಾ ಕಾಮನ್. ಹಂದಿ, ಕಾಡುಕೋಣಗಳು ಆಗಾಗ ಆಹಾರ (Food) ಅರಸುತ್ತಾ ಕಾಡಿನಿಂದ ಹೊರಬಂದು ಹೊಲಗಳಿಗೆ ನುಗ್ಗುತ್ತವೆ. ಇನ್ನು ಚಿರತೆ, ಹುಲಿಗಳ ಕಾಟವೂ ಬಹಳಷ್ಟು ಕಳೆಗಳಲ್ಲಿವೆ. ಆದರೆ ಕರಡಿಯಂತ ಪ್ರಾಣಿ ಕಾಡನ್ನು (Forest) ಬಿಟ್ಟು ನಾಡಿಗಿಳಿಯುವುದು ಭಾರೀ ಅಪರೂಪ. ಆದರೆ ಆಹಾರ ಬೇಕೆಂದಾಗ ಎಂಥಹಾ ಪ್ರಾಣಿಯಾದರೂ ಅಪಾಯವನ್ನು ಲೆಕ್ಕಿಸದೆ ರಿಸ್ಕ್ ತೆಗೆದುಕೊಳ್ಳುತ್ತದೆ. ಆಹಾರ ನೀರು ಹುಡುಕಿಕೊಂಡು ಅವುಗಳು ಊರಿನತ್ತ ಹೆಜ್ಜೆ ಹಾಕುತ್ತವೆ. ಇದರಿಂದ ಬಹಳಷ್ಟು ಸಲ ರೈತರ ಬೆಳೆ ನಾಶವಾಗುತ್ತದೆ. ಗದ್ದೆ, ಹೊಲಗಳಿಗೆ ಕಾಡು ಪ್ರಾಣಿಗಳು ದಾಳಿ ಇಟ್ಟರೆ ಅಷ್ಟೇ ಕಥೆ.

ಮೂರು 'ಆಹ್ವಾನಿಸದ' ಅತಿಥಿಗಳು, ಒಂದು ಕರಡಿ ಮತ್ತು ಅದರ ಎರಡು ಮರಿಗಳು ಮದುವೆಯ ರಿಸೆಪ್ಶನ್ ಪಾರ್ಟಿಗೆ ಬಂದು ಸೇರಿಕೊಂಡಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral) ಆಗಿದೆ. ದಕ್ಷಿಣ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ವಿವಾಹದ ಆರತಕ್ಷತೆಯ (Wedding Reception) ಪಾರ್ಟಿಯ ನಂತರ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.

ತಾಯಿ ಕರಡಿ ಜೊತೆ ಮಕ್ಕಳು

ತಾಯಿ ಕರಡಿ (Mama Bear) ತನ್ನ ಬೆನ್ನಿನ ಮೇಲೆ ಸವಾರಿ ಮಾಡುತ್ತಾ, ವಧು ಮತ್ತು ವರನಿಗೆ ಕುರ್ಚಿಗಳನ್ನು ಹಾಕಲಾಗಿದ್ದ ವೇದಿಕೆಯ ಕಡೆಗೆ ಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದುದಾಗಿದೆ. ಒಂದು ಕ್ಷಣ ತಡೆದು ಸುತ್ತಲೂ ನೋಡುತ್ತಾ ಮದುವೆಯ ವೇದಿಕೆಯನ್ನು (Reception Stage) ಮೂಸಿ ನೋಡುತ್ತಾಳೆ ಈ ಅಮ್ಮ ಕರಡಿ.

ಅದೃಷ್ಟವಶಾತ್, ಮದುವೆಯ ಆರತಕ್ಷತೆ ಮುಗಿದಿದ್ದರಿಂದ ಮತ್ತು ಕರಡಿಗಳು ಒಳಗೆ ಪ್ರವೇಶಿಸಿದಾಗ ಅತಿಥಿಗಳು (Guests) ಇಲ್ಲದ ಕಾರಣ ಯಾರಿಗೂ ಹಾನಿಯಾಗಲಿಲ್ಲ. ಹಾಗೆಯೇ ಕರಡಿಗೂ ತೊಂದರೆಯಾಗಲಿಲ್ಲ.

ವಿಡಿಯೋ ರೆಕಾರ್ಡ್

ಈ ಕ್ಲಿಪ್ ಅನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ಅವರು ತಮ್ಮ ಜೊತೆಗಿದ್ದ ವ್ಯಕ್ತಿಯಲ್ಲಿ ವಿಡಿಯೋ ಮಾಡುತ್ತಾ ಸಂಭಾಷಣೆ ನಡೆಸುತ್ತಿದ್ದರು, ಇದು ನಮ್ಮ ಮೇಲೆ ದಾಳಿ ಮಾಡಬಹುದೇ ? ದಾಳಿ ಮಾಡಬಹುದೆಂದು ನಿಮಗೆ ಅನಿಸುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಭಾರತೀಯ ಅರಣ್ಯ ಇಲಾಖೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್, ಅವರಿಗೆ ಈ ವ್ಯವಸ್ಥೆಯಿಂದ ಸಂತೋಷವಾಗಿಲ್ಲ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಇದನ್ನೂ ಓದಿ: ಆನೇಕಲ್: ಮುಂದುವರಿದ ಕರಡಿ ಅಟ್ಟಹಾಸ, ಬೇಗೂರಿನ ಓರ್ವ ವ್ಯಕ್ತಿ ಮೇಲೆ ದಾಳಿ, ಮುಂದುವರೆದ ಶೋಧ

ವೈರಲ್ ವೀಡಿಯೊವನ್ನು (Viral Video) 20,000 ಕ್ಕೂ ಹೆಚ್ಚು ಬಾರಿ ಸ್ಟ್ರೀಮ್ ಮಾಡಲಾಗಿದೆ. ಫೆಬ್ರವರಿ 16 ರಂದು ಬಿಡುಗಡೆಯಾದಾಗಿನಿಂದ ಇನ್ನೂ ಲೈಕ್ಸ್ & ಶೇರ್ ಪಡೆಯುತ್ತಲೇ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ವೀಡಿಯೊವನ್ನು ಉಲ್ಲಾಸದಿಂದ ಆಸ್ವಾದಿಸಿದ್ದಾರೆ.

8 ಜಾತಿಯ ಕರಡಿಗಳು

ಕರಡಿಗಳು ಮಾಂಸಾಹಾರಿ ಸಸ್ತನಿಗಳಾಗಿವೆ. ಅವುಗಳನ್ನು ಕ್ಯಾನಿಫಾರ್ಮ್‌ಗಳು ಅಥವಾ ನಾಯಿಯಂತಹ ಮಾಂಸಾಹಾರಿಗಳು ಎಂದು ವರ್ಗೀಕರಿಸಲಾಗಿದೆ. ಕೇವಲ ಎಂಟು ಜಾತಿಯ ಕರಡಿಗಳು ಇರುವುದಾಗಿದ್ದರೂ, ಅವುಗಳು ವ್ಯಾಪಕವಾಗಿ ಹರಡಿವೆ. ಉತ್ತರ ಗೋಳಾರ್ಧದಾದ್ಯಂತ ಮತ್ತು ಭಾಗಶಃ ದಕ್ಷಿಣ ಗೋಳಾರ್ಧದಲ್ಲಿ ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: ಮೃಗಾಲಯದಲ್ಲಿ ಮಗುವನ್ನು ಕರಡಿ ಬಳಿಗೆ ಎಸೆದ ತಾಯಿ! ಮುಂದೆ ಆಗಿದ್ದೇನು?

ಕರಡಿಗಳು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಕಂಡುಬರುತ್ತವೆ. ಆಧುನಿಕ ಕರಡಿಗಳ ಸಾಮಾನ್ಯ ಗುಣಲಕ್ಷಣಗಳನ್ನು ನೋಡಿದರೆ ಸ್ಥೂಲವಾದ ಕಾಲುಗಳನ್ನು ಹೊಂದಿರುವ ದೊಡ್ಡ ದೇಹಗಳು, ಉದ್ದವಾದ ಮೂತಿಗಳು, ಸಣ್ಣ ದುಂಡಗಿನ ಕಿವಿಗಳು, ಶಾಗ್ಗಿ ಕೂದಲು, ಪ್ಲಾಂಟಿಗ್ರೇಡ್ ಪಂಜಗಳು, ಐದು ಹಿಂತೆಗೆದುಕೊಳ್ಳದ ಉಗುರುಗಳನ್ನು ಒಳಗೊಂಡಿವೆ.
Published by:Divya D
First published: