Kerala Highcourt: ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗಿಲ್ಲ; ಕೇರಳ ಹೈಕೋರ್ಟ್

ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಮಾಲ್‌ಗೆ ಬರುವವರ ಬಳಿ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಮಾಲ್‌ಗೆ ಬರುವವರ ಬಳಿ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಮಾಲ್‌ಗೆ ಬರುವವರ ಬಳಿ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

  • Share this:
ದೊಡ್ಡ ದೊಡ್ಡ ನಗರಗಳಲ್ಲಿ ಪಾರ್ಕಿಂಗ್(Parking) ವ್ಯವಸ್ಥೆಯದ್ದೇ ದೊಡ್ಡ ಸಮಸ್ಯೆ. ತಮ್ಮ ತಮ್ಮ ವಾಹನಗಳನ್ನು(Vehicles) ಮನೆಯ ಮುಂದೇ ಕೂಡ ನಿಲ್ಲಿಸಲು ಜಾಗವಿಲ್ಲದೇ ರಸ್ತೆ ಬದಿ ಅಲ್ಲಿ ಇಲ್ಲಿ ನಿಲ್ಲಿಸುವ ಸ್ಥಿತಿ ಇದೆ. ಇನ್ನೂಹೊರಗಡೆ ಹೋದಾಗ ರಸ್ತೆ ಬದಿಗಳಲ್ಲಿ ನಿಲ್ಲಿಸಿದರೆ ಟೋಯಿಂಗ್ ನವರು ಬಂದು ನಮ್ಮ ಗಾಡಿ ಎತ್ತಾಕ್ಕೊಂಡು ಹೋಗುತ್ತಾರೆ. ಕೆಲವು ನಿರ್ದಿಷ್ಟಸ್ಥಳಗಳಲ್ಲಿ ವಾಹನ ನಿಲ್ಲಿಸಲು ಹಣ ಪಾವತಿಸಬೇಕು. ಇನ್ನೂ ಮಾಲ್ ಸೇರಿ ಬೇರೆ ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೆ ಹೋದರೆ ಅಲ್ಲಿ ಕೂಡ ಪಾರ್ಕಿಂಗ್‌ಗೆ ಹಣ ವಸೂಲಿ(Payment) ಮಾಡ್ತಾರೆ. ನಾವು ಎಷ್ಟು ಗಂಟೆ ಅಲ್ಲಿ ಕಾಲ ಕಳೆಯುತ್ತೇವೋ ಅಷ್ಟಕ್ಕೆ ಹಣ ನೀಡುವ ನಿಯಮ ಎಲ್ಲಾ ಕಡೆ ಇದೆ. ಆದರೆ ಈ ನಿಯಮದ ಬಗ್ಗೆ ಕೇರಳ ಹೈಕೋಟ್ (Kerala High Court) ವಿರೋಧ ವ್ಯಕ್ತಪಡಿಸಿದ್ದು ಈ ಧೋರಣೆ ಸರಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ವಿಚಾರಣೆ ಮುಂದೂಡಿಕೆ
ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಮಾಲ್‌ಗೆ ಬರುವವರ ಬಳಿ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಶುಕ್ರವಾರ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಈ ಸಂಬಂಧ ಹೈಕೋರ್ಟ್ ತನ್ನ ನಿಲುವನ್ನು ಹೇಳಿದೆ. ಮತ್ತು ಮುಂದಿನ ವಿಚಾರಣೆಯನ್ನು ಜನವರಿ 28 ಕ್ಕೆ ಮುಂದೂಡಿದೆ.

ಕಲಮಸ್ಸೆರಿ ಪುರಸಭೆ ಎರ್ನಾಕುಲಂನಲ್ಲಿರುವ ಲುಲು ಇಂಟರ್‌ನ್ಯಾಶನಲ್ ಶಾಪಿಂಗ್ ಮಾಲ್‌ಗೆ ಪರವಾನಗಿಯನ್ನು ನೀಡಿದೆಯೇ ಎಂದು ಪ್ರಶ್ನಿಸಿದೆ. ಮಾಲ್‌ಗಳು ಗ್ರಾಹಕರಿಂದ ಕಾನೂನುಬಾಹಿರವಾಗಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿದೆ ಎಂಬ ದೂರ ಬಂದಾಗ ಇದನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ ಕುಂಞಿಕೃಷ್ಣನ್, ಮಾಲ್‌ಗಳು ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಪ್ರಾಥಮಿಕ ತನಿಖೆಯಲ್ಲಿ ಹೇಳಲಿಲ್ಲ, ಆದರೆ ಮಾಲ್‌ಗಳ ಈ ನಡೆ ಅವರಿಗೇ ತೊಂದರೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ, ರಸ್ತೆ ಬಳಿ ಗಾಡಿ ಪಾರ್ಕಿಂಗ್​ಗೆ ಶುಲ್ಕ; ಜನರಿಗೆ ಹೊಸ ಪಾರ್ಕಿಂಗ್ ನೀತಿ ಶಾಕ್

ಕಟ್ಟಡದ ಭಾಗವಾಗಿರಬೇಕು
ಕಟ್ಟಡ ನಿಯಮದ ಪ್ರಕಾರ ಕಟ್ಟಡ ಕಟ್ಟುವಾಗಲೇ ವಾಹನ ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಮಾಡಿಕೊಡಬೇಕು, ಪಾರ್ಕಿಂಗ್ ಸ್ಥಳವು ಕಟ್ಟಡದ ಭಾಗವಾಗಿರಬೇಕು ಎಂಬ ನಿಯಮವಿದೆ. ಕಟ್ಟಡ ಕಟ್ಟುವಾಗಲೇ ಪಾರ್ಕಿಂಗ್ ಮಾಡಲು ಸ್ಥಳಾವಕಾಶವನ್ನು ಕಲ್ಪಿಸುವ ಷರತ್ತಿನ ಮೇಲೆ ಕಟ್ಟಡ ಪರವಾನಗಿಯನ್ನು ಮಾಲೀಕರು ಪಡೆದುಕೊಂಡಿರುತ್ತಾರೆ.

ಈ ಆಧಾರದ ಮೇಲೆ ಕಟ್ಟಡ ಕಟ್ಟಿದ ಮೇಲೆ ಮತ್ತೇಕೆ ಕಟ್ಟಡದ ಮಾಲೀಕರು ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಈ ಕ್ರಮ ಸರಿಯಾದುದ್ದಲ್ಲ ಎಂದು ಭಾವಿಸುವುದಾಗಿ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ವಾದ ಪ್ರತಿವಾದ
ಅನಗತ್ಯ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುವುದರ ಕುರಿತಾಗಿ ತನ್ನ ನಿಲುವಿನ ಬಗ್ಗೆ ಹೇಳಿಕೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪುರಸಭೆಯನ್ನು ಕೇಳಿದೆ. ಮತ್ತು ಮುಂದಿನ ವಿಚಾರಣೆಯನ್ನು ಜನವರಿ 28 ಕ್ಕೆ ಮುಂದೂಡಿ ಹೈಕೋರ್ಟ್ ನ್ಯಾಯಮೂರ್ತಿ ಆದೇಶ ನೀಡಿದ್ದಾರೆ.

ವಾಹನ ನಿಲುಗಡೆಗಾಗಿ ಕಟ್ಟಡ ಪರವಾನಿಗೆಯಲ್ಲಿ ನಿಗದಿಪಡಿಸಲಾದ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳವಕಾಶ ಮಾಡಲಾಗಿದೆ ಎಂದು ಲುಲು ಮಾಲ್ ಆಡಳಿತವೂ ಪ್ರತಿವಾದ ಮಾಡಿದೆ.

ಪಾರ್ಕಿಂಗ್ ಶುಲ್ಕದ ಹೆಚ್ಚಿನ ಸಂಗ್ರಹವು ರಿಟ್ ಅರ್ಜಿಯ ಅಂತಿಮ ನಿರ್ಧಾರದ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ. ನೀವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಬಯಸಿದರೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಬಹುದು, ಎಂದು ನ್ಯಾಯಾಲಯ ಆಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: No Parking: ಇಲ್ಲೊಬ್ಬ ಸ್ಕೂಟರ್​ಗೇ ಒಂದು ಸ್ಮಾರಕ ನಿರ್ಮಿಸಿದ್ದಾನೆ, ಟ್ರಾಫಿಕ್ ಪೊಲೀಸರಿಗೆ ಟಾಂಗ್ ಕೊಡೋಕೆ ಕ್ರಿಯೇಟಿವ್ ಐಡಿಯಾ!

ಮಾಲ್‌ಗಳ ಈ ಧೋರಣೆಯನ್ನು ಖಂಡಿಸಿ ದೂರು ನೀಡಿದ್ದ ಚಲನಚಿತ್ರ ನಿರ್ದೇಶಕ,ಅರ್ಜಿದಾರ ಪಾಲಿ ವಡಕ್ಕನ್ ಗ್ರಾಹಕರಿಗೆ ಉಚಿತ ಪಾರ್ಕಿಂಗ್ ಒದಗಿಸುವ ಹೊಣೆಗಾರಿಕೆ ಮಾಲ್ ಆಡಳಿತದ ಮೇಲಿದೆ ಎಂದು ಪ್ರತಿಪಾದಿಸಿದ್ದಾರೆ.ಕೇರಳ ಹೈಕೋರ್ಟ್ ಮಾಲ್ ಗಳು ಸಂಗ್ರಹಿಸುವ ಈ ಶುಲ್ಕದ ಬಗ್ಗೆ ಯಾವ ಆದೇಶ ನೀಡುತ್ತದೆ ಎಂಬುದನ್ನು ಜ.28ರವರೆಗೆ ಕಾದು ನೋಡಬೇಕು.
Published by:vanithasanjevani vanithasanjevani
First published: