ಒಬಾಮಾ ಮಗಳಿಗೆ ಡಕೋಟಾದ ಗಾಳಿಯಲ್ಲಿ ನಡೆಯಬೇಕಂತೆ !

news18
Updated:September 30, 2018, 11:55 AM IST
ಒಬಾಮಾ ಮಗಳಿಗೆ ಡಕೋಟಾದ ಗಾಳಿಯಲ್ಲಿ ನಡೆಯಬೇಕಂತೆ !
news18
Updated: September 30, 2018, 11:55 AM IST
-ನ್ಯೂಸ್ 18 ಕನ್ನಡ

ಅಮೆರಿಕ ಅಧ್ಯಕ್ಷಗಾದಿಯಿಂದ ಇಳಿದ ಮೇಲೆ ಬರಾಕ್ ಒಬಾಮಾ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದೇ ಅಪರೂಪ. ಇನ್ನು ಅವರ ಕುಟುಂಬವಂತೂ ವೈಟ್​ ಹೌಸ್​ನಿಂದ ನಿರ್ಗಮಿಸಿದ ಮೇಲೆ ಅಮೆರಿಕದ ಸಾಮಾನ್ಯ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಒಬಾಮಾ ಹೆಸರು ವಿಶ್ವದಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ಇದಕ್ಕೆ ಕಾರಣ ಒಬಾಮಾರ ಹಿರಿಯ ಪುತ್ರಿ ಮಲಿಯಾ ಒಬಾಮಾ.

ಮಲಿಯಾ ಒಬಾಮಾ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಾಣಿಸಿಕೊಂಡ ಹಾಡು ಸಖತ್ ವೈರಲ್ ಆಗಿದೆ. ಈ ಆಲ್ಬಂ ವಿಡಿಯೋ ಹೆಸರು ವಾಕಿಂಗ್ ಆನ್ ಏರ್. ರ‍್ಯಾಪ್ ಸ್ಟೈಲ್​ನಲ್ಲಿ ಮೂಡಿ ಬಂದಿರುವ ಈ ಗೀತೆಯಲ್ಲಿ ಮಲಿಯಾ ಕಾಣಿಸಿಕೊಂಡಿದ್ದಾರೆ


ಗಾಳಿಯಲ್ಲಿ ತೇಲಬೇಕೆಂಬ ಆಸೆಯನ್ನು ತಿಳಿಸುವ ಗೀತೆ ಸಾಹಿತ್ಯದಲ್ಲಿ ಫೀಲ್ಸ್ ಲೈಕ್ ಎ ವಾಕಿಂಗ್ ಆನ್ ಏರ್ ಹಾಡಿನಲ್ಲಿ ಮಲಿಯಾ ಅಭಿನಯಿಸಿದ್ದಾರೆ. ನ್ಯೂ ಡಕೋಟಾಸ್ ಹೊರ ತಂದಿರುವ ಈ ಹಾಡನ್ನು ರಚಿಸಿರುವುದು ಹಾವರ್ಡ್ ರಾಕ್​ಬ್ಯಾಂಡ್​ನ ಒಂದಷ್ಟು ಯುವ ಪ್ರತಿಭೆಗಳು. ಇಂಪಾದ ಸಂಗೀತ ಶೈಲಿಗೆ ರಾಕಿಂಗ್ ಟಚ್ ಕೊಟ್ಟಿರುವ ಈ ಗೀತೆಯು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಮಲಿಯಾ ಒಬಾಮಾ ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದರಿಂದ ಈ ಹಾಡಿನ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
First published:September 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...