Viral News: ಮಾಡೋದಕ್ಕೆ ಕೆಲಸ ಇಲ್ಲ: 30 ದಿನ ನಿದ್ದೆ ಮಾಡಿದ್ರೆ ಕೈ ತುಂಬ ಸಿಗುತ್ತೆ ಐದಂಕಿಯ ಸಂಬಳ

ಮಲಗುವ ಕೋಣೆ ಎಸಿ ವ್ಯವಸ್ಥೆಯನ್ನು ಹೊಂದಿರಲಿದೆ. ಸರಿಯಾದ ಸಮಯಕ್ಕೆಊಟ, ತಿಂಡಿ, ಫಲಾಹಾರ, ಜ್ಯೂಸ್ ನಿಮ್ಮ ಕೋಣೆಗೆ ಬರಲಿದೆ. ಸದ್ಯ ಈ ಆಫರ್ ಪೋಸ್ಟರ್ ವೈರಲ್ ಆಗಿದ್ದು, ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ನಿದ್ದೆ ಮಾಡುವ ಉದ್ಯೋಗ

ನಿದ್ದೆ ಮಾಡುವ ಉದ್ಯೋಗ

  • Share this:
ನಿದ್ದೆ (Sleep) ಮಾಡೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಲಾರಂ (Alarm) ಇಟ್ಟು ಪ್ರತಿನಿತ್ಯ ಏಳುವವರಿಗೆ ಕೇಳಿದ್ರೆ ನಿಮಗೆ ನಿದ್ದೆಯ ಮಹತ್ವ ತಿಳಿಯುತ್ತದೆ. ರಾತ್ರಿ ಮಲಗಿದ ಮನುಷ್ಯ ತಾನನಾಗಿಯೇ ಎಚ್ಚರಗೊಂಡ್ರೆ ಆತನ ನಿದ್ದೆ ಪೂರ್ಣವಾಗಿರುತ್ತದೆ. ದೀರ್ಘ ಆಯಾಸದ ಬಳಿಕ ಜನರು ಕೇಳುವುದು ನಿದ್ದೆಯನ್ನು. ಒಂದೆರಡು ಗಂಟೆ ನಿದ್ದೆ ಮಾಡಿದ್ರೆ ರಿಫ್ರೆಶ್ (Refresh) ಆಗುತ್ತೆ ಅಂತ ಹಲವರು ಹೇಳುವುದನ್ನು ನೀವೂ ಕೇಳಿರಬಹುದು. ಒಂದು ಉತ್ತಮ ನಿದ್ರೆ ಎಲ್ಲ ಆಯಾಸವನ್ನು ಪರಿಹರಿಸುತ್ತದೆ. ಒಳ್ಳೆಯ ನಿದ್ದೆ ವ್ಯಕ್ತಿಯನ್ನ ಒಂದು ರೀತಿ ರೀಚಾರ್ಜ್ ಮಾಡುತ್ತೆ ಅಂತಾನೇ ಹೇಳಬಹುದು. ಚೆನ್ನಾಗಿ ನಿದ್ದೆ ಮಾಡಿದ್ರೆ ದೇಹದಲ್ಲಿ ಶಕ್ತಿ ವರ್ದನೆಯೂ ಸಹ ಹೆಚ್ಚಾಗುತ್ತದೆ. ಇಲ್ಲೊಂದು ಕಂಪನಿ (Company) ನಿದ್ದೆ ಮಾಡೋದಕ್ಕಾಗಿಯೇ ಸಂಬಳ (Salary) ನೀಡುತ್ತಿದೆ. ಇಲ್ಲಿ ನೀವು ಯಾವುದೇ ಕೆಲಸ ಮಾಡಬೇಕಾಗಿಲ್ಲ. ನಿಮಗೆ ಇಲ್ಲಿ ಊಟ (Food) ಸಹ ಇದೇ ಕಂಪನಿ ನೀಡುತ್ತದೆ.

ಮಲೇಷ್ಯಾದ ಕಂಪನಿಯೊಂದು ಈ ರೀತಿಯ ಜಾಹೀರಾತು ನೀಡಿದೆ. ಸದ್ಯ ಜಾಹೀರಾತಿನ ಪೋಸ್ಟ್ಗರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮಗೆ ನಿದ್ದೆಯ ಬದಲಾಗಿ ಕಂಪನಿ ಸಂಬಳ ನೀಡುತ್ತದೆ. 30 ದಿನ ನಿದ್ದೆ ಮಾಡಿದ್ರೆ ನಿಮಗೆ 25 ಸಾವಿರ ರೂಪಾಯಿ ಸಿಗಲಿದೆ.

ನಿಮ್ಮ ನಿದ್ದೆಯನ್ನು ಅಧ್ಯಯನ ಮಾಡುತ್ತೆ ಸಂಶೋಧಕರ ತಂಡ

ಮಲೇಷ್ಯಾ ವಿಶ್ವವಿದ್ಯಾಲಯದ ಕೆಲವು ಸಂಶೋಧಕರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಶೋಧಕರು ತಮಗಾಗಿ ಮಲಗುವ ಜನರನ್ನು ಹುಡುಕುತ್ತಿದ್ದಾರೆ. ಇಲ್ಲಿ ನಿದ್ದೆ ಮಾಡುವ ಉದ್ಯೋಗಿ ಬೇರೆ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಸಂಶೋಧಕರ ತಂಡವೇ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.

ಸತತ ಒಂದು ತಿಂಗಳು ನೌಕರನ ನಿದ್ರೆಯ ಮಾದರಿಯನ್ನು ಸಂಶೋಧಕರ ತಂಡ ಗಮನಿಸಲಿದೆ. ಈ ನಿದ್ದೆಯ ಕುರಿತು ಸಂಶೋಧಕರ ತಂಡ ಅಧ್ಯಯನದಲ್ಲಿ ತೊಡಗಿಕೊಳ್ಳಲಿದೆ.

ಇದನ್ನೂ ಓದಿ:  Plane Crash: ವಿಡಿಯೋ ಮಾಡೋ ಕ್ರೇಜ್ ಎಷ್ಟಿದೆ ನೋಡಿ, ತನ್ನದೇ ವಿಮಾನ ಕ್ರ್ಯಾಶ್ ಮಾಡಿದ!

ಸ್ಲೀಪ್ ಹೋಮ್ ಪ್ರವೇಶಕ್ಕೆ ಈ ಅರ್ಹತೆಗಳು ಇರಬೇಕು!

ಈ ಕೆಲಸಕ್ಕಾಗಿ ಜಾಹೀರಾತು ನೀಡಿರುವ ಕಂಪನಿ ಎಲ್ಲ ಮಾಹಿತಿಯನ್ನು ಪೋಸ್ಟರ್ ನಲ್ಲಿ ನೀಡಿದೆ. ಆರೋಗ್ಯವಂತ 20 ರಿಂದ 40 ವರ್ಷದೊಳಗಿನ ಜನರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗಿಗಳ ತೂಕ ಅವರ ವಯಸ್ಸು ಮತ್ತು ಎತ್ತರಕ್ಕೆ ತಕ್ಕಂತೆ ಸಮತೋಲನವಾಗಿರಬೇಕು. ಈ ಎಲ್ಲ ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು ಸ್ಲೀಪ್ ಹೋಮ್ ಪ್ರವೇಶಿಸಬಹುದಾಗಿದೆ.

ನಿಮ್ಮಲ್ಲಿ ನಿದ್ರಾಹೀನತೆ ಕಂಡು ಬಂದ್ರೆ ಔಟ್!

ಈ ಜನರು ಒಂದು ತಿಂಗಳ ಕಾಲ ಸ್ಲೀಪ್ ಹೋಮ್‌ನಲ್ಲಿ ಇರಬೇಕಾಗುತ್ತದೆ. ಅಲ್ಲಿ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಅರ್ಜಿದಾರರಲ್ಲಿ ಯಾವುದೇ ರೀತಿಯ ನಿದ್ರಾಹೀನತೆ ಕಂಡುಬಂದರೆ, ನಂತರ ಅವರನ್ನು ಹೊರಗೆ ಕಳುಹಿಸಲಾಗುತ್ತದೆ.

malaysian company offering 25 thousand-rupees-to-people-just-for-sleeping
ಜಾಹೀರಾತು


ಸ್ಲೀಪ್ ಪ್ರವೇಶಕ್ಕೂ ಮುನ್ನ ಎಲ್ಲರಿಗೂ ಸ್ಕ್ರೀನಿಂಗ್, ಆರೋಗ್ಯದ ಮಾಹಿತಿ ಸಂಗ್ರಹ

ಈ ಯೋಜನೆಯಲ್ಲಿ ಭಾಗವಹಿಸುವವರು ಮಲಗುವ ಮನೆಗೆ ಹೋಗುವ ಮೊದಲು ಸ್ಕ್ರೀನಿಂಗ್ಗೆ ಒಳಗಾಗಬೇಕಾಗುತ್ತದೆ ಎಂದು ಸಂಶೋಧಕರ ತಂಡ ಹೇಳುತ್ತದೆ. ಈ ಸ್ಕ್ರೀನಿಂಗ್ ನಲ್ಲಿ ಅರ್ಜಿದಾರನ ಎಲ್ಲ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲಾಗುತ್ತದೆ. ಈ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಬಂದ್ರೆ ಮಾತ್ರ ಸ್ಲೀಪ್ ಹೋಮ್ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಮನೆ ಪ್ರವೇಶಿಸಿದ ದಿನದಿಂದ ಒಂದು ತಿಂಗಳು ಕಾಲ ಮಲಗಬೇಕು.

ಇದನ್ನೂ ಓದಿ:  First Day: ಶಾಲೆಯಲ್ಲಿ ಮೊದಲ ದಿನ, ಅಬ್ಬಾ ಈ ಪುಟ್ಟ ಪೋರಿಯ ತಯಾರಿ ಸ್ವಲ್ಪ ನೋಡಿ!

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವೈರಲ್

ಮಲಗುವ ಕೋಣೆ ಎಸಿ ವ್ಯವಸ್ಥೆಯನ್ನು ಹೊಂದಿರಲಿದೆ. ಸರಿಯಾದ ಸಮಯಕ್ಕೆಊಟ, ತಿಂಡಿ, ಫಲಾಹಾರ, ಜ್ಯೂಸ್ ನಿಮ್ಮ ಕೋಣೆಗೆ ಬರಲಿದೆ. ಸದ್ಯ ಈ ಆಫರ್ ಪೋಸ್ಟರ್ ವೈರಲ್ ಆಗಿದ್ದು, ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
Published by:Mahmadrafik K
First published: