Sunday Special Recipe: ಹೆಚ್ಚು ಮಸಾಲೆ ಇಲ್ಲದ ಟೇಸ್ಟಿ ಚಿಕನ್ ರೆಸಿಪಿ ಹೇಳಿಕೊಟ್ಟಿದ್ದಾರೆ ಸೂಪರ್​ಸ್ಟಾರ್ Mohanlal, ನೀವೂ ಟ್ರೈ ಮಾಡಿ !

ಸಾಮಾನ್ಯವಾಗಿ Chicken Recipe ಅಂದ್ರೆ ಅದರಲ್ಲಿ ಹತ್ತಾರು ಬಗೆಯ ಮಸಾಲೆಗಳನ್ನು ಬಳಕೆ ಮಾಡುತ್ತಾರೆ. ಆದ್ರೆ Mohanlal ಬಹಳ ಸರಳವಾಗಿ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು, ಉಪ್ಪು, ಅರಿಶಿನ, ಚಿಲ್ಲಿ ಫ್ಲೇಕ್ಸ್ ಮತ್ತು ಸುಟ್ಟ ತೆಂಗಿನಕಾಯಿ.. ಇಂಥಾ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಇರುವ ವಸ್ತುಗಳನ್ನೇ ಬಳಸಿ ಚಿಕನ್ ರೆಸಿಪಿ ಮಾಡಿದ್ದಾರೆ.

ಸ್ಪೆಷಲ್ ಚಿಕನ್ ರೆಸಿಪಿ ಮಾಡುತ್ತಿರೋ ಮೋಹನ್​ಲಾಲ್

ಸ್ಪೆಷಲ್ ಚಿಕನ್ ರೆಸಿಪಿ ಮಾಡುತ್ತಿರೋ ಮೋಹನ್​ಲಾಲ್

 • Share this:
  Mohanlal: ಮಲಯಾಳಂ ಸ್ವಾರ್ ನಟ ಮೋಹನ್​ಲಾಲ್ ತಮ್ಮ ಚಿತ್ರಗಳ ಬಗ್ಗೆ ಮಾತ್ರವಲ್ಲದೆ ಬದುಕಿನ ಬಗ್ಗೆ, ತಮ್ಮ ಆಸಕ್ತಿಯ ವಿಚಾರಗಳ ಬಗ್ಗೆ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೊಸದಾಗಿ ನಿನ್ನೆಯಷ್ಟೇ ಸರಳವಾದ, ಕೆಲವೇ ಕೆಲವು ವಸ್ತುಗಳನ್ನು ಬಳಸಿ ಮಾಡುವ ಚಿಕನ್ ರೆಸಿಪಿಯೊಂದನ್ನು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ಮೋಹನ್​ ಲಾಲ್ ಮಾಡಿದ ಈ ಅಡುಗೆಗೆ ಅವರ ಹೆಂಡತಿ ಸುಚಿತ್ರಾ ಥಮ್ಸ್ ಅಪ್ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಲಾಲೆಟ್ಟಾ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಮೋಹನ್​ಲಾಲ್ ಹೇಳಿಕೊಟ್ಟಿರೋ ಈ ಚಿಕನ್ ರೆಸಿಪಿಯನ್ನು ಯಾರು ಬೇಕಿದ್ರೂ ಟ್ರೈ ಮಾಡಬಹುದು. ಅದಕ್ಕೆ ಬೇಕಾಗಿರೋ ವಸ್ತುಗಳಿಂದ ಹಿಡಿದು, ಹೇಗೆ ಮಾಡಬೇಕು ಎಂದು ವಿವರವಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.

  ಸಾಮಾನ್ಯವಾಗಿ ಚಿಕನ್ ರೆಸಿಪಿ ಅಂದ್ರೆ ಅದರಲ್ಲಿ ಹತ್ತಾರು ಬಗೆಯ ಮಸಾಲೆಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಮೋಹನ್​ಲಾಲ್ ಬಹಳ ಸರಳವಾಗಿ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು, ಉಪ್ಪು, ಅರಿಶಿನ, ಚಿಲ್ಲಿ ಫ್ಲೇಕ್ಸ್ ಮತ್ತು ಸುಟ್ಟ ತೆಂಗಿನಕಾಯಿ.. ಇಂಥಾ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಇರುವ ವಸ್ತುಗಳನ್ನೇ ಬಳಸಿ ಚಿಕನ್ ರೆಸಿಪಿ ಮಾಡಿದ್ದಾರೆ. ಅದೆಷ್ಟು ನೀಟಾಗಿ ಈ ಅಡುಗೆಯನ್ನು ಹೇಳಿಕೊಟ್ಟಿದ್ದಾರೆ ಅಂದ್ರೆ ವಿಡಿಯೋ ನೋಡಿದ ಯಾರಿಗೂ ಇದರ ಬಗ್ಗೆ ಏನೂ ಅನುಮಾನ ಬರೋದಕ್ಕೆ ಸಾಧ್ಯವೇ ಇಲ್ಲ. ಈ ವಿಡಿಯೋ ನೀವೂ ಒಂದು ಸಲ ನೋಡಿ.. ಭಾನುವಾರದ ಚಿಕನ್ ಸ್ಪೆಷಲ್​ಗೆ ಈ ರೆಸಿಪಿಯನ್ನೇ ಮಾಡಬಹುದು.


  View this post on Instagram


  A post shared by Mohanlal (@mohanlal)


  ಈ ವಿಡಿಯೋ ಜೊತೆಗೆ ಮೋಹನ್​ಲಾಲ್ ಮನೆಯ ಅಡುಗೆಮನೆ ಕೂಡಾ ಸಾಕಷ್ಟು ಚರ್ಚೆಯಾಗ್ತಿದೆ. ವಿಡಿಯೋ ನೋಡಿದ ಹೆಣ್ಣುಮಕ್ಕಳೆಲ್ಲಾ ರೆಸಿಪಿಗಿಂತ ಲಾಲೆಟ್ಟಾ ಅಡುಗೆ ಮನೆ ಎಷ್ಟು ಚೆನ್ನಾಗಿದೆ ಎಂದು ಮಾತಾಡಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದರದ್ದೇ ಚರ್ಚೆ. ಬಿಳಿ ಬಣ್ಣದ ಹಿನ್ನೆಲೆ ಇರುವ ಅವರ ಕಿಚನ್ ಬಹಳ ಸ್ವಚ್ಛವಾಗಿದೆ. ಅಲ್ಲದೆ ಅಡುಗೆ ಮಾಡುವಾಗಲೂ ಮೋಹನ್​ ಲಾಲ್ ಅಡುಗೆಮನೆಯನ್ನು ಹೆಚ್ಚು ಗಲೀಜು ಮಾಡಿಲ್ಲ. ನೀಟಾಗಿ ಅಡುಗೆ ಮಾಡಿ ಮುಗಿಸಿದ್ದಾರೆ. ಗೃಹಿಣಿಯರ ಹದ್ದಿನ ಕಣ್ಣಿಗೆ ಈ ಎಲ್ಲಾ ಡೀಟೆಲ್ಸ್ ಸೂಕ್ಷ್ಮವಾಗಿ ಬಿದ್ದಿದೆ. ಒಟ್ಟಿನಲ್ಲಿ ಭಾನುವಾರಕ್ಕೆ ಸರಿಯಾಗಿ ಬಂದ ಈ ರೆಸಿಪಿ ಮಾತ್ರ ಅನೇಕ ಮನೆಗಳಲ್ಲಿ ರೆಡಿಯಾಗ್ತಿರೋದಂತೂ ಸತ್ಯ.

  ಇದನ್ನೂ ಓದಿ: Find the eye: ಈಕೆಯ ಕೆನ್ನೆಯ ಮೇಲೆ ಕಣ್ಣಿದೆ, ಹಣೆಯಲ್ಲಿ ಮೂಗಿದೆ.. ಏನಿದು ವಿಚಿತ್ರ? ನಿಜವಾದ ಕಣ್ಣು-ಕಿವಿ ಹುಡುಕಿ ನೋಡೋಣ !

  ಸಿನಿಮಾ ವಿಚಾರವಾಗಿ ಮೋಹನ್​ಲಾಲ್​ ದೃಶ್ಯಂ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದ 12th ಮ್ಯಾನ್ ಚಿತ್ರದ ಜೊತೆಗೆ ಆರಟ್ಟು ಚಿತ್ರದಲ್ಲಿ ನೇಯಟ್ಟಿಕಾರ ಗೋಪನ್ ಪಾತ್ರದಲ್ಲೂ ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಎರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: