Singer Death: ಹಾಡುತ್ತಲೇ ಬದುಕು ಮುಗಿಸಿದ ಹಿರಿಯ ಗಾಯಕ! ಅಭಿಮಾನಿಗಳ ಮುಂದೆ ವೇದಿಕೆ ಮೇಲೆೆಯೇ ಕೊನೆಯುಸಿರು

ಪ್ರಸಿದ್ಧ ಗಾಯಕರೊಬ್ಬರು ಹಾಡುತ್ತಲೇ ತಮ್ಮ ಜೀವನದ ಹಾಡು ಮುಗಿಸಿದ್ದಾರೆ. ಸಮಾರಂಭದಲ್ಲಿ ವೇದಿಕೆ ಮೇಲೆ ಹಾಡುತ್ತಲೇ ಕುಸಿದು ಬಿದ್ದಿದ್ದಾರೆ. ಅಭಿಮಾನಿಗಳ ಎದುರಲ್ಲೇ ಆ ಗಾಯಕನ ಪ್ರಾಣ ಪಕ್ಷಿ ಹಾರಿಹೋಗಿದೆ.

ಮಲಯಾಳಂ ಗಾಯಕ ಎಡವ ಬಶೀರ್

ಮಲಯಾಳಂ ಗಾಯಕ ಎಡವ ಬಶೀರ್

  • Share this:
ಕೇರಳ: ಮಲಯಾಳಂ ಸಿನಿಮಾಗಳ (Malayalam Cinema) ಗಾಯಕನಾಗಿಯೂ ಹೆಸರು ಪಡೆದಿದ್ದ ಕೇರಳದ (Kerala) ಆಕ್ರೆಸ್ಟ್ರಾಗಳ (Orchestra) ಪ್ರಸಿದ್ಧ ಗಾಯಕ (Singer) ಎಡವ ಬಶೀರ್ (Edava Basheer) ಕೊನೆಯುಸಿರೆಳೆದಿದ್ದಾರೆ. ಸಂಗೀತ ಕಚೇರಿ ನೀಡುವಾಗ, ವೇದಿಕೆಯ (Stage) ಮೇಲೆ ಹಾಡುತ್ತಾ ಹಾಡುತ್ತಲೇ ಎಡವ ಬಶೀರ್ ಕುಸಿದು ಬಿದ್ದಿದ್ದಾರೆ. ಅಭಿಮಾನಿಗಳ (Fans) ಮುಂದೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ (Hindi Movie) ಟೂಟ್ ಟಾಯ್ಸ್‍ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ (Jesudas) ಅವರ ಮಾನ ಹೋ ತುಮ್ ಬೇಹದ್ ಹಸೀನ್ ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದು ಬಿದ್ದಿದ್ದಾರೆ. ಹಿರಿಯ ಗಾಯಕನ ನಿಧನಕ್ಕೆ ಸಿಎಂ ಪಿಣರಾಯಿ ವಿಜಯನ್ (CM Pinaraya Vijayan) ಸೇರಿದಂತೆ ಹಲವು ಖ್ಯಾತನಾಮರು ಕಂಬನಿ ಮಿಡಿದ್ದಾರೆ.

ವೇದಿಕೆ ಮೇಲೆಯೇ ಕುಸಿದು ಬಿದ್ದ ಗಾಯಕ

ನಿನ್ನೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಜೇಸುದಾಸ್ ಅವರ ಹಾಡು ಹಾಡುತ್ತಿದ್ದ ಎಡವ ಬಶೀರ್, ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಹಾಡು ಅರ್ಧ ಆಗುತ್ತಿದ್ದಂತೆ ಏಕಿ ಏಕಿ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ.ಅಭಿಮಾನಿಗಳ ಮುಂದೆಯೇ ಹಾರಿಹೋಯ್ತು ಪ್ರಾಣಪಕ್ಷಿ

ಹಾಡು ಹಾಡುತ್ತಿರುವಾಗಲೇ ಎಡವ ಬಶೀರ್ ಅವರಿಗೆ ಸುಸ್ತಾದಂತೆ ಆಗಿದೆ. ಹೀಗಾಗಿ ಹಾಡು ಹಾಡುತ್ತಾ ವೇದಿಕೆ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ ಅವರು ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರ ಕೈಯಲ್ಲಿದ್ದ ಮೈಕ್ ಕೂಡ ಕೆಳಗೆ ಬಿದ್ದಿದೆ. ನಂತರ ಕೂಡಲೇ ವೇದಿಕೆಯತ್ತ ಜನರು ಆಗಮಿಸಿ, ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Tirupati: 48 ಗಂಟೆ ನಿಂತರೂ ಸಿಗುವುದಿಲ್ಲ ತಿಮ್ಮಪ್ಪನ ದರ್ಶನ! ಇನ್ನೂ 2-3 ದಿನ ಈ ಕಡೆ ಬಂದ್ರೆ ಗೋವಿಂದಾ ಗೋವಿಂದ

ಗಾಯಕ ಎಡವ ಬಶೀರ್ ಯಾರು?

ಎಡವ ಬಶೀರ್ ಮಲಯಾಳಂನ ಹಿರಿಯ ಹಾಗೂ ಪ್ರಸಿದ್ಧ ಆರ್ಕೆಸ್ಟ್ರಾಗಳ ಗಾಯಕ. ಕೆಲ ಮಲಯಾಳಂ ಚಲನಚಿತ್ರಗಳಲ್ಲೂ ಹಾಡು ಹಾಡಿ, ಅಭಿಮಾನಿಗಳನ್ನು ರಂಜಿಸಿದ್ದಾರೆ. ಬಶೀರ್ ತಮ್ಮ ಶಾಲಾ ದಿನಗಳಿಂದಲೇ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಸಂಗೀತ ಸಾಧನೆಗಾಗಿ ಅವರು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ‘ರಹಮತ್ತುಗಳ ನೀರಂಜೋರು’, ‘ಮಂಜನಿಂಜಿಮನೆ’, ‘ಮರುಭೂಮಿಯಮೀ’ ಮುಂತಾದ ಕೆಲವು ಜನಪ್ರಿಯ ಹಾಡುಗಳಿಗೆ ಅವರು ಧ್ವನಿಯಾಗಿದ್ದರು.

ದೇವರ ನಾಮಗಳನ್ನು ಹಾಡುವುದರಲ್ಲೂ ಎತ್ತಿದ ಕೈ

ಕೇರಳ ದೇವಸ್ಥಾನದ ಬಹುತೇಕ ಕಾರ್ಯಕ್ರಮಗಳಲ್ಲಿ ಎಡವ ಬಶೀರ್ ಹಾಡುತ್ತಿದ್ದರು. ಆಕಾಶರೂಪಿಣಿ, ಅನ್ನಪೂರ್ಣೇಶ್ವರಿ ಎಂಬ ಹಾಡನ್ನು ಪ್ರತಿ ದೇಗುಲದ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು, ಅಮೆರಿಕ, ಲಂಡನ್, ಯೂರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಕೊನೆಯವರೆಗೂ ಹಾಡುತ್ತಲೇ ಬಂದ ಗಾಯಕ

ಬಶೀರ್ ತಮ್ಮ ಶಾಲಾ ದಿನಗಳಿಂದಲೇ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಬಶೀರ್​ ಅವರು ಸ್ವಾತಿ ತಿರುನಾಳ್ ಮ್ಯೂಸಿಕ್ ಅಕಾಡೆಮಿಯಿಂದ ಗಾನಬೂಷಣಂ ಎಂಬ ಸಂಗೀತದ ಶೈಕ್ಷಣಿಕ ಪದವಿ ಪಡೆದರು. 1972 ರಲ್ಲಿ ಅವರು ಕೊಲ್ಲಂ ಸಂಗೀತಾಲಯ ಗಾನಮೇಳ ತಂಡವನ್ನು ರಚಿಸಿದ್ದರು. ಅಲ್ಲಿಂದ ಅವರ ವೇದಿಕೆ ಕಾರ್ಯಕ್ರಮಗಳು ಪ್ರಾರಂಭವಾಗಿ ತಮ್ಮ 78ನೇ ವಯಸ್ಸಿನವರೆಗೂ ಹಾಡುತ್ತಾ ಬಂದಿದ್ದರು. ಹಾಡುತ್ತಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Punjabi Singer Sidhu Moose Wala: ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸೆ ವಾಲಾಗೆ ಗುಂಡಿಕ್ಕಿ ಭೀಕರವಾಗಿ ಹತ್ಯೆ

ಖ್ಯಾತ ಗಾಯಕನ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಕಂಬನಿ

ಎಡವ ಬಶೀರ್ ನಿಧನಕ್ಕೆ ಕೇರಳದ ಜನರು, ಸಂಗೀತ ಪ್ರೇಮಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಮೊದಲಾದ ಗಣ್ಯರು ಕಂಬನಿ ಮಿಡಿದಿದ್ದಾರೆ. ಟ್ವಿಟರ್‌ ನಲ್ಲಿ ಅಭಿಮಾನಿಗಳೂ ಕೂಡ ಎಡವ ಬಶೀರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Published by:Annappa Achari
First published: