ಮಹಿಳೆಯರು ಬಾಹ್ಯ ರಕ್ಷಣೆಗಾಗಿ ಸ್ಯಾನಿಟರಿ ಪ್ಯಾಡ್ಗಳನ್ನು (Sanitary pads) ಧರಿಸುತ್ತಾರೆ. ಮಾರುಕಟ್ಟೆಯಲ್ಲಿ (Market) ನಾನಾ ಕಂಪನಿಗಳು (Company) ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ತಯಾರಿಸಿ ಮಾರುತ್ತಿವೆ. ಕೆಲವೊಂದು ಸ್ಯಾನಿಟರಿ ಪ್ಯಾಡ್ ಬ್ರಾಂಡ್ಗಳು (Brand) ಜನಪ್ರಿಯವಾಗಿದ್ದು, ಹೆಚ್ಚಾಗಿ ಮಹಿಳೆಯರು ಸೂಕ್ತವೆನಿಸುವುದನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಾರೆ. ಅಂದಹಾಗೆಯೇ ಸ್ಯಾನಿಟರಿ ಪ್ಯಾಡ್ ಅಥವಾ ನ್ಯಾಪ್ಕಿನ್ಗಳನ್ನು ಮಹಿಳೆಯರು ಬಾಹ್ಯವಾಗಿ ಧರಿಸುತ್ತಾರೆ. ಇದು ಮಹಿಳೆಯರಿಗೆ ನೈರ್ಮಲ್ಯ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಂದಹಾಗೆಯೇ, ಕಸದಿಂದ ರಸ ಎಂಬ ಮಾತಿನಂತೆಯೇ ಇದೀಗ ಬಾಳೆಯ ನಾರಿನಿಂದಲೂ (Banana Fiber) ಸ್ಯಾನಿಟರಿ ಪ್ಯಾಡ್ ಸಿದ್ಧಗೊಳ್ಳುತ್ತಿದೆ. ಕೇರಳದಲ್ಲಿ (Kerala) ಇಂತಹದೊಂದು ಪ್ರಯೋಗ ನಡೆಸಿ, ತಯಾರಿಸಲಾಗುತ್ತಿದೆ. ಇದರ ಬಳಕೆ ಮತ್ತು ಇದರಿಂದ ಸಿಗುವ ಪ್ರಯೋಜನದ ಬಗೆಗಿನ ವಿಡಿಯೋ (Video) ವೈರಲ್ ಆಗಿದೆ.
ಹೌದು. ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಬಾಳೆಯ ನಾರನ್ನು ಬಳಸಿಕೊಂಡು ಈ ಸ್ಯಾನಿಟರಿ ಪ್ಯಾಡ್ ಅನ್ನು ತಯಾರಿಸಲಾಗುತ್ತದೆ. ಅಂಗಡಿ, ಮಳಿಗೆಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್ಗಿಂತ ಇದು ನೈಸರ್ಗಿಕವಾಗಿ ತಯಾರಿಸದ್ದಾಗಿದೆ.
ಅಂದಹಾಗೆಯೇ ಬಾಳೆ ಗಿಡದಿಂದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ಬಾಳಿ ಗಿಡ, ಬಾಳೆ ಕಾಯಿ, ಬಾಳೆ ಹಣ್ಣು ನೀಡುವುದು ಮಾತ್ರವಲ್ಲದೆ, ಬಾಳೆ ದಂಟಿನಿಂದ ಪಲ್ಯ, ಬಾಳಿ ಕಾಯಿ ಪೋಡಿ, ಚಿಪ್ಸ್ ಹೀಗೆ ಕರಿದ ತಿಂಡಿಯನ್ನು ತಯಾರಿಸಲು ಸಾಧ್ಯವಾಗುತ್ತದೆ. ಬಾಳೆ ಗಿಡ ಒಂದು ಬಾರಿ ಫಸಲು ನೀಡಿದ ನಂತರ ಅದನ್ನು ಕಡಿದು ಆ ಜಾಗದಲ್ಲಿ ಬೇರೆ ಗಿಡವನ್ನು ನೆಡುತ್ತಾರೆ. ಆದರೀಗ ಬಾಳೆ ಗಿಡದ ನಾರನ್ನು ಬಳಸಿಕೊಂಡು ಅದರಿಂದ ಈ ಸ್ಯಾನಿಟರಿ ಪ್ಯಾಡ್ ತಯಾರಿಸಲಾಗುತ್ತದೆ.
ವೆರೈಟಿ ಮೀಡಿಯಾ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಳೆ ಗಿಡದ ನಾರಿನಿಂದ ತಯಾರಿಸುವ ಸ್ಯಾನಿಟರಿ ಪ್ಯಾಡ್ ವಿಡಿಯೋ ವೈರಲ್ ಆಗಿದೆ. ಅಂದಹಾಗೆಯೇ ಅಂಗಡಿಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್ ಅಲ್ಪ ಸಮಯದವರೆಗೆ ಬಳಸಬಹುದಾಗಿದ್ದರೆ, ಈ ಬಾಳೆ ನಾರಿನಿಂದ ತಯಾರಾದ ಸ್ಯಾನಿಟರಿ ಪ್ಯಾಡ್ ಅನ್ನು 5 ವರ್ಷಗಳ ಕಾಲ ಬಳಸಬಹುದಾಗಿದೆ.
ಇದನ್ನೂ ಓದಿ: IPhone: ಅಕ್ಟೋಬರ್ 24 ರಿಂದ ಈ ಐಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸೋದಿಲ್ಲ!
ಮಾತಾ ಅಮೃತಂದಮಹಿ ಮಠ ಸಹಯೋಗದಿಂದ ಕೇರಳದ ಸೌಕ್ಯಂ ಎಂಬ ರಿಸರ್ಚ್ ಪ್ರಾಜೆಕ್ಟ್ ಈ ಸ್ಯಾನಿಟರಿ ಪ್ಯಾಡ್ ಅನ್ನು ತಯಾರಿಸುತ್ತಿದ್ದಾರೆ. ಮಹಿಳೆಯರಿಗೆ ಇರುವ ಕೆಲವು ಹೇಳಲಾರದ ತೊಂದರೆಗಳ ಬಗ್ಗೆ ಚಿಂತಿಸಿ ಕೊನೆಗೆ ಬಾಳೆಯ ನಾರಿನಿಂದ ಸ್ಯಾನಿಟರಿ ಪ್ಯಾಡ್ ತಯಾರಿಸಲು ಪ್ರಾರಂಭಿಸಲಾಯಿತು. ಅಂದಹಾಗೆಯೇ ಇದನ್ನು ಮರಳಿ ಬಳಸಬಹುದಾಗಿದೆ. 5 ವರ್ಷಗಳ ಕಾಲ ಬಳಸಲು ಯೋಗ್ಯವಾಗಿದೆ.
View this post on Instagram
ಇದನ್ನೂ ಓದಿ: Internet: ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ಸಿಗಲಿದೆ ಇಂಟರ್ನೆಟ್
ನಂತರ ಸ್ವಚ್ಛಗೊಂಡ ನಾರನ್ನು ಸ್ಯಾನಿಟರಿ ಪ್ಯಾಡ್ನಂತೆಯೇ ಸರಿಯಾದ ಆಕೃತಿಗೆ ಬರುವ ಯಂತ್ರಕ್ಕೆ ಹಾಕುತ್ತಾರೆ. ಬಳಿಕ ಅದನ್ನು ಸಮವಾಗಿ ಬಟ್ಟೆಯ ಮೇಲೆ ಇಟ್ಟು ಹೊಲಿಯುತ್ತಾರೆ. 2 ಪದರ ಬಟ್ಟೆಯಿಟ್ಟು ಹೊಲಿಯಲಾಗುತ್ತದೆ. ನಂತರ ಇದನ್ನು ಪ್ಯಾಕ್ ಮಾಡಲಾಗುತ್ತದೆ. ಅಂದಹಾಗೆಯೇ ಇದರಲ್ಲಿ ಎರಡು ಬೇಸಿಕ್, 3 ಇನ್ಸರ್ಟ್ ಮತ್ತು 1 ರಾತ್ರಿ ವೇಳೆ ಧರಿಸುವ ಸ್ಯಾನಿಟರಿ ಪ್ಯಾಡ್ ಅನ್ನು ನೀಡಲಾಗಿದೆ. ಇದರ ಬೆಲೆ 530 ರೂಪಾಯಿ ಆಗಿದೆ.
ಮಹಿಳೆಯರಿಗೆ ಮಾತ್ರವಲ್ಲ, ಹುಡುಗಿಯರಿಗೂ ಸ್ಯಾನಿಟರಿ ಪ್ಯಾಡ್ ಅನ್ನು ತಯಾರಿಸಲಾಗುತ್ತಿದೆ. ಈ 6 ಪ್ಯಾಡ್ ಹೊಂದಿರುವ ಸ್ಯಾನಿಟರಿ ಪ್ಯಾಡ್ ಅನ್ನು ನೀಡುತ್ತದೆ. ಅಂದಹಾಗೆಯೆ ಮಹಿಳೆಯರು ಅಥವಾ ಹುಡುಗಿಯರು ಇದನ್ನು https://www.saukhyampads.org/ ಮೂಲಕ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ