ವೈರಲ್​ ಆಯಿತು ಮಹೇಂದ್ರ ಸಿಂಗ್​ ಧೋನಿಯ ಫ್ಯಾಮಿಲಿ ವಿಡಿಯೋ

news18
Updated:March 14, 2018, 4:59 PM IST
ವೈರಲ್​ ಆಯಿತು ಮಹೇಂದ್ರ ಸಿಂಗ್​ ಧೋನಿಯ ಫ್ಯಾಮಿಲಿ ವಿಡಿಯೋ
news18
Updated: March 14, 2018, 4:59 PM IST
ನ್ಯೂಸ್ 18 ಕನ್ನಡ

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ  ಸದ್ಯ ಶ್ರೀಲಂಕಾ ವಿರುದ್ಧದ ಟಿ-ಟ್ವೆಂಟಿ ಪಂದ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮಧ್ಯೆ ಧೋನಿ  ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಧೋನಿ  ಕುಟುಂಬದ ಜತೆ ಸಂತೋಷದಿಂದ ಸಮಯ ಕಳೆಯುತ್ತಿರುವ ವಿಡಿಯೋ ಪ್ರಕಟಿಸಿದ್ದು, ಈಗ ಅದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಧೋನಿ , ಪತ್ನಿ ಸಾಕ್ಷಿ ಹಾಗೂ ಮಗಳು ಮತ್ತು ನಾಯಿಯ ಜತೆ ಇರುವುದು ಸಖತ್ ಕ್ಯೂಟ್ ಆಗಿದೆ.

ಈ ವಿಡಿಯೋ  ಪ್ರಕಟಿಸಿದ 6 ಗಂಟೆಗಳಲ್ಲೇ ಹತ್ತು ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆ ಧೋನಿ ವಿವಾಹವಾದ ಹೊಸತರಲ್ಲಿ ಸಾಕ್ಷಿ ಜತೆ ತೆಗೆಸಿಕೊಂಡಿದ್ದ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.

 


Loading...


Fun time with the family


A post shared by @ mahi7781 on
First published:March 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ