ಅದೃಷ್ಟ ಅಂದ್ರೆ ಇದು: ಮಹಾರಾಷ್ಟ್ರದ ನೌಕಾಪಡೆ ಸಿಬ್ಬಂದಿಗೆ ಹೊಡೆದ 1 ಮಿಲಿಯನ್ ಡಾಲರ್ ಲಾಟರಿ..!

ಇವರು ಕಳೆದ 2 ವರ್ಷಗಳ ಹಿಂದೆ ಮಿಲೇನಿಯಮ್ ಮಿಲಿಯನೇರ್ ಲಾಟರಿಯನ್ನು ಖರೀದಿಸಿದ್ದರು. ಹಣ ಬಂದಿರುವ ಸುದ್ದಿ ಕೇಳಿದ ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ

ಡಾಲರ್​​

ಡಾಲರ್​​

  • Share this:

ಅದೃಷ್ಟ ಎನ್ನುವುದು ಯಾವಾಗ, ಎಲ್ಲಿಂದ ಬರುತ್ತದೆ. ಆ ಅದೃಷ್ಟವಂತರು ಯಾರಾಗುತ್ತಾರೆ ಎಂದು ಯಾರು ಊಹಿಸಿರುವುದಿಲ್ಲ. ಆದರೆ ಬಂದರೆ ಮಾತ್ರ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈ ಹಿನ್ನೆಲೆ ಕೆಲವೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಈ ಹಿನ್ನೆಲೆ ಕೆಲವರು ಲಾಟರಿ ಖರೀದಿಸುತ್ತಾರೆ. ಇನ್ನು ಕೆಲವರು ಷೇರಿನಲ್ಲಿ ಹಾಕುತ್ತಾರೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇದರಲ್ಲಿ ಹಲವರು ಯಶಸ್ವಿಯಾಗಿ ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳು ಆಗಿರುವುದುಂಟು. ತೆಲಂಗಾಣದ ವ್ಯಕ್ತಿಗೂ ಲಾಟರಿ ಹೊಡೆದು ಅವರ ಬದುಕೇ ಬದಲಾಯಿತು. ಈಗ ಇದೇ ರೀತಿಯ ಅನರೀಕ್ಷಿತ ಹಾಗೂ ಆಶ್ಚರ್ಯದ ಪರಿಸ್ಥಿತಿಗೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಒಳಪಟ್ಟಿದ್ದಾರೆ. ನಿಜ ಯುಎಇಯಲ್ಲಿನ ಮಹಾರಾಷ್ಟ್ರದ ನೌಕಾಪಡೆ ಸಿಬ್ಬಂದಿಗೆ ಅಚ್ಚರಿಯ ರೀತಿಯಲ್ಲಿ ಅದೃಷ್ಟ ಖುಲಾಯಿಸಿದೆ. ದುಬೈನಲ್ಲಿ ಲಾಟರಿಯಲ್ಲಿ 7,46,10,500 ರೂ. ($1 ಮಿಲಿಯನ್) ಗೆದ್ದ 181ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.


36 ವರ್ಷದ ಗಣೇಶ ಶಿಂಧೆ ಎಂಬ ವ್ಯಕ್ತಿಯೇ ಲಾಟರಿ ಗೆದ್ದ ಅದೃಷ್ಟವಂತ. ಥಾಣೆ ಮೂಲದ ನೌಕಾಪಡೆ ಸಿಬ್ಬಂದಿಯಾದ ಶಿಂಧೆ, ಜೂನ್ 16 ರಂದು ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ವೆಬ್‍ಸೈಟ್‍ನಿಂದ ಜಾಕ್‍ಪಾಟ್ ಟಿಕೆಟ್ ಖರೀದಿಸಿದ್ದಾರೆ. ಶಿಂಧೆ ಬ್ರೆಜಿಲ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ನೌಕಾ ಸಿಬ್ಬಂದಿ.


ಶಿಂಧೆ ಮಹಾರಾಷ್ಟ್ರದಿಂದ ಮರಳುವ ಹೊತ್ತಿಗೆ ಅವರಿಗೊಂದು ಗುಡ್‍ನ್ಯೂಸ್ ಕಾದಿತ್ತು. ಅವರು ಖರೀದಿಸಿದ ಲಾಟರಿ ಅವರ ಅದೃಷ್ಟದ ಬಾಗಿಲನ್ನೇ ತೆರೆದಿತ್ತು. ಒಂದು ಮಿಲಿಯನ್ ಹಣದ ಒಡೆಯರಾಗಿದ್ದರು.


ಇವರು ಕಳೆದ 2 ವರ್ಷಗಳ ಹಿಂದೆ ಮಿಲೇನಿಯಮ್ ಮಿಲಿಯನೇರ್ ಲಾಟರಿಯನ್ನು ಖರೀದಿಸಿದ್ದರು. ಹಣ ಬಂದಿರುವ ಸುದ್ದಿ ಕೇಳಿದ ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.


ಈ ಬಗ್ಗೆ ಗಲ್ಫ್ ನ್ಯೂಸ್ ವರದಿ ಮಾಡಿದ್ದು, ಇದು ನಂಬಲು ಅಸಾಧ್ಯ. ನಾನು ಸಹ ಅಚ್ಚರಿಗೊಳಗಾಗಿದ್ದೆ. ನಿಜಾವಾಗಿಯೂ ಒಂದೊಳ್ಳೆಯ ಅವಕಾಶ. ನನಗೆ ತುಂಬಾ ಸಂತೋಷವಾಗಿದ್ದು, ಲಾಟರಿ ಹಣ ನೀಡಿದ ದುಬೈ ಡ್ಯೂಟಿ-ಫ್ರೀ ಸಂಸ್ಥೆಗೆ ಧನ್ಯವಾದಗಳು. ನಾನು ದುಬೈ ನಗರವನ್ನು ತುಂಬಾ ಪ್ರೀತಿಸುತ್ತೇನೆ. ನಾನು ಖಂಡಿತಾ ಬೇಗ ಬರುತ್ತೇನೆ ಎಂದು ಹೇಳಿದ್ದರು.


ಇದನ್ನು ಓದಿ: ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ಭೇಟಿಯಾದ ಶರದ್​ ಪವಾರ್

ದುಬೈ ಡ್ಯೂಟಿ-ಫ್ರೀ ಲಕ್ಕಿ ಡ್ರಾ ಸಂಸ್ಥೆ ಆರಂಭವಾಗಿದ್ದು 1999ರಲ್ಲಿ. ಇದುವರೆಗೆ 181 ಭಾರತೀಯರು ಇಲ್ಲಿನ ಟಿಕೇಟ್ ಖರೀದಿಸಿ 7,46,10,500 ರೂ. ಹಣ ಪಡೆದುಕೊಂಡಿದ್ದಾರೆ. ಇಲ್ಲಿ ಶಿಂಧೆ ಈ ಅದೃಷ್ಟಕ್ಕೆ ಒಳಪಟ್ಟ 181 ಭಾರತೀಯ ಎಂದೆನಿಸಿಕೊಂಡಿದ್ದಾರೆ.


ಒಂದು ಮಿಲಿಯನ್ ಡಾಲರ್ ಹಣವನ್ನು ಏನು ಮಾಡುತ್ತೀರಾ ಎಂದು ಪ್ರಶ್ನಿಸಿದಾಗ, ಶಿಂಧೆ ನನಗೆ ಹೊಸ ಕಾರು ಖರೀದಿಸುವ ಆಸೆ ಇದೆ, ಹೊಸ ಅಪಾರ್ಟ್‍ಮೆಂಟ್ ತೆಗೆದುಕೊಳ್ಳಬೇಕೆಂದುಕೊಂಡಿದ್ದೇನೆ. ನನ್ನ ಮಗುವಿನ ಶಿಕ್ಷಣಕ್ಕಾಗಿ ಹಣವನ್ನು ಉಳಿತಾಯ ಮಾಡಬೇಕಿದೆ. ನನ್ನಲ್ಲಿ ಬಹಳಷ್ಟು ಉದ್ದದ ಪಟ್ಟಿ ಇದೆ. ಈ ಎಲ್ಲಾ ಉದ್ದೇಶಗಳಿಗಾಗಿ ನಾನು ಹಣವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: