ಟೈರ್, ಡ್ರಮ್ ಮರುಬಳಸಿ Furniture ಮಾಡಿ 1 ಕೋಟಿ ಗಳಿಸ್ತಿದ್ದಾನೆ.. ಎಲ್ಲಾ YouTube ಮಾಯೆ!

Furniture: 2017ರಲ್ಲಿ ಅವರು ಚೀನಾಗೆ ಒಂದು ವ್ಯಾಪಾರ ಪ್ರವಾಸಕ್ಕೆ ಹೋದಾಗ, ಅವರ ಬದುಕಿನ ದಿಕ್ಕೇ ಬದಲಾಯಿತು. ಚೀನಾದಲ್ಲಿ, ಬಳಸಿದ ಡ್ರಮ್ ಮತ್ತು ಟೈರ್‌ಗಳನ್ನು ಮರುಬಳಸಿ, ಅದರಿಂದ ಆಕರ್ಷಕ ಪೀಠೋಪಕರಣಗಳನ್ನು ತಯಾರಿಸುವ ಕೆಲವು ಉದ್ದಿಮೆಗಳನ್ನು ಕಂಡರು.

ಪ್ರಮೋದ್ ತಯಾರಿಸಿದ ಪಿಠೋಪಕರಣ

ಪ್ರಮೋದ್ ತಯಾರಿಸಿದ ಪಿಠೋಪಕರಣ

  • Share this:

ಕಸದಿಂದ ರಸ ಎನ್ನುತ್ತಾ ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನು ರಚಿಸಿ ಖುಷಿ ಪಡುವವರು ಕೆಲವರಾದರೆ, ಬಳಸಿದ ವಸ್ತುಗಳನ್ನು ಮರು ಬಳಕೆ ಮಾಡಿ, ಕೇವಲ ಅದರಿಂದ ಸಂತೋಷ ಮಾತ್ರವಲ್ಲ ಉದ್ಯೋಗವನ್ನೇ ಸೃಷ್ಟಿಸಿಕೊಳ್ಳುವವರು ಇನ್ನು ಕೆಲವರು. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಮಹಾರಾಷ್ಟ್ರದ (Maharastra) ಅಹ್ಮದ್‌ ನಗರದ ಪ್ರಮೋದ್ ಸುಸಾರೆ ಕೂಡ ಒಬ್ಬರು. 2015ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ಅವರು ಪುಣೆಯ (Pune) ಬಹುರಾಷ್ಟ್ರೀಯ ಕಂಪೆನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಸಿಗುತ್ತಿದ್ದ 12,000 ರೂ. ಸಂಬಳದಲ್ಲಿ ಕುಟುಂಬ ಸಾಕುವುದು ಕಷ್ಟವಾಗಿತ್ತು, ಇನ್ನು ಉಳಿತಾಯವಂತೂ ಅವರ ಪಾಲಿಗೆ ಕೇವಲ ಕನಸಾಗಿತ್ತು.


ಆದರೆ, 2017ರಲ್ಲಿ ಅವರು ಚೀನಾಗೆ (China) ಒಂದು ವ್ಯಾಪಾರ ಪ್ರವಾಸಕ್ಕೆ ಹೋದಾಗ, ಅವರ ಬದುಕಿನ ದಿಕ್ಕೇ ಬದಲಾಯಿತು. ಚೀನಾದಲ್ಲಿ, ಬಳಸಿದ ಡ್ರಮ್ ಮತ್ತು ಟೈರ್‌ಗಳನ್ನು ಮರುಬಳಸಿ, ಅದರಿಂದ ಆಕರ್ಷಕ ಪೀಠೋಪಕರಣಗಳನ್ನು ತಯಾರಿಸುವ ಕೆಲವು ಉದ್ದಿಮೆಗಳನ್ನು ಕಂಡರು.


“ಅದನ್ನು ಭಾರತದಲ್ಲೂ ಮಾಡಬಹುದು ಮತ್ತು ಅದಕ್ಕೆ ಒಂದು ಸಂಭಾವ್ಯ ಮಾರುಕಟ್ಟೆ ಇರಬಹುದು ಎಂಬುದನ್ನು ನಾನು ಅರಿತುಕೊಂಡೆ. ಮನೆಗೆ ಹಿಂತಿರುಗಿದ ಬಳಿಕ ನಾನು ಆ ಬಗ್ಗೆ ಸಂಶೋಧನೆ ಆರಂಭಿಸಿದೆ ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧಿಗಳು ಇಲ್ಲ ಎಂಬುದನ್ನು ತಿಳಿದುಕೊಂಡೆ” ಎನ್ನುತ್ತಾರೆ ಪ್ರಮೋದ್.


ಈಗ ಪ್ರಮೋದ್, ಬಳಸಿದ ವಸ್ತುಗಳಿಂದ ಪೀಠೋಪಕರಣ ತಯಾರಿಸುವ ತಮ್ಮ P2S ಅಂತಾರಾಷ್ಟ್ರೀಯ ಉದ್ದಿಮೆಯಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.


Read Also ⇒ OnlyFans | ಶಿಕ್ಷಕ ವೃತ್ತಿಗೆ ಗುಡ್​ಬಾಯ್​ ಹೇಳಿ ಓನ್ಲಿಫ್ಯಾನ್ಸ್​ನಲ್ಲಿ ಖಾತೆ ತೆರೆದಳು; ಈಗ ತಿಂಗಳ ಸಂಬಳ ಎಣಿಸೋಕೆ ಆಗುತ್ತಿಲ್ಲವಂತೆ!

ಡ್ರಮ್‍ಗಳು ಮತ್ತು ಕಬ್ಬಿನ ಬಂಡಿಗಳು


ಡ್ರಮ್ ಮತ್ತು ಟೈರ್‌ಗಳಿಂದ ಪೀಠೋಪಕರಣ ತಯಾರಿಸಿ, ಅವುಗಳಿಗೆ ಹೇಗೆ ವಾಣಿಜ್ಯ ಮೌಲ್ಯ ಕೊಡಬಹುದು ಎಂಬ ಬಗ್ಗೆ ತಿಳಿಯಲು ಸಾಕಷ್ಟು ಸಂಶೋಧನೆ ಮಾಡಿದರು, ಬಹಳಷ್ಟು ಸಮಯ ವ್ಯಯಿಸಿ ಯೂಟ್ಯೂಬ್‍ನಿಂದಲೂ ಮಾಹಿತಿಗಳನ್ನು ಕಲೆ ಹಾಕಿದರು.


ಅವರಿಗೆ ಅತ್ಯುತ್ತಮ ಉಪಾಯ ಹೊಳೆದದ್ದು, ಅವರ ಬೈಕ್‍ನ ಟೈರ್ ಪಂಕ್ಚರ್ ಆದಾಗ. “ನಾನು ಟೈರ್ ಅಂಗಡಿಯಲ್ಲಿ ಕಾಯುತ್ತಿದ್ದಾಗ, ಅಲ್ಲಿ ಬೇಡವಾಗಿ ಬಿದ್ದಿದ್ದ ಟೈರ್‌ಗಳ ಬೆಲೆ ವಿಚಾರಿಸಿದೆ. ಅದಕ್ಕೆ ಪ್ರತಿ ಕಿಲೋಗೆ 8 ರೂ. ಬೆಲೆ ಇತ್ತು. ನಾನು ನಂತರ ರಿಪೇರಿ , ಕಾರ್ಮಿಕ ವೆಚ್ಚವನ್ನು ಅದಕ್ಕೆ ಸೇರಿಸಿ ಲೆಕ್ಕ ಹಾಕಿದೆ ಹಾಗೂ ಅದರ ಮೇಲೆ ಶೇಕಡಾ 30 ರಷ್ಟು ಲಾಭಾಂಶ ಸೇರಿಸಿ ನೋಡಿದೆ” ಎನ್ನುತ್ತಾರೆ 27 ವರ್ಷದ ಪ್ರಮೋದ್.
ಪ್ರಮೋದ್

ತಮ್ಮ ವಿಭಿನ್ನ ವ್ಯಾಪಾರ ಯೋಜನೆಯ ಮೇಲೆ ವಿಶ್ವಾಸವಿಟ್ಟು, ಮರುಬಳಕೆಯ ಟೈರ್‌ಗಳಿಂದ ಟೇಬಲ್, ಕುರ್ಚಿಗಳನ್ನು ಮಾಡಲು ಕೆಲವು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಅವರು 2018ರ ಸೆಪ್ಟೆಂಬರ್‌ನಲ್ಲಿ ತಮ್ಮ ಉದ್ದಿಮೆ ಆರಂಭಿಸಿದರು.


ಆದರೆ ಡಿಸೆಂಬರ್‌ವರೆಗೆ ಯಾವುದೇ ಗ್ರಾಹಕರು ಸಿಗಲಿಲ್ಲ. ತಮ್ಮ ಉತ್ಪನ್ನಗಳನ್ನು ಜನರ ಕಣ್ಣಿಗೆ ಬೀಳುವಂತೆ ಮಾಡಲು, ಅವರು ಅದನ್ನು ಬೀದಿ ಬದಿ ಕಬ್ಬಿನ ಹಾಲಿನ ಅಂಗಡಿ ಮತ್ತು ಫುಡ್ ಜಾಯಿಂಟ್‍ಗಳ ಬಳಿ ಪ್ರದರ್ಶನಕ್ಕೆ ಇಟ್ಟರು.
ಪ್ರಮೋದ್ ಕೈಚಳಕದಲ್ಲಿ ಮೂಡಿಬಂದ ಫರ್ನೀಚರ್

“ಜನವರಿ 2019ರಲ್ಲಿ ನನ್ನ ಉತ್ಪನ್ನಗಳನ್ನು ನೋಡಿದ ಪುಣೆಯ ಕೆಫೆಯೊಂದರಿಂದ ಆರ್ಡರ್ ಸಿಕ್ಕಿತು, ಅದರಿಂದ 50,000 ರೂ. ಗಳಿಸಿದೆ. ಅದೃಷ್ಟವಶಾತ್ ಆ ಕೆಫೆ ಸೆಲೆಬ್ರಿಟಿಗಳಿಂದ ಮತ್ತು ಉದ್ಯಮಿಗಳಿಂದ ಉದ್ಘಾಟಿಸಲ್ಪಟ್ಟಿತು, ಅವರಲ್ಲಿ ಕೆಲವರು ನನ್ನ ಉತ್ಪನ್ನಗಳನ್ನು ನೋಡಿ ಪ್ರಶಂಸಿಸಿದರು. 2019ರಲ್ಲಿ ಥಾಣೆಯಿಂದ ಮತ್ತೊಂದು ಪ್ರಾಜೆಕ್ಟ್ ಸಿಕ್ಕಿತು, ಅದರಿಂದ 5.5 ಲಕ್ಷ ರೂ. ಗಳಿಸಿದೆ” ಎಂದು ತಮ್ಮ ಉದ್ದಿಮೆಯ ಆರಂಭದ ಆದಾಯದ ಕುರಿತು ನೆನಪಿಸಿಕೊಳ್ಳುತ್ತಾರೆ ಪ್ರಮೋದ್.


Read Also ⇒ Tanya Fear: ಕಾಣೆಯಾಗಿದ್ದ ಖ್ಯಾತ ನಟಿ ಪತ್ತೆ! ಎಲ್ಲಿದ್ದರು ಇಲ್ಲಿ ತನಕ?


ತಾವು ಮಾಡುತ್ತಿದ್ದ ಉದ್ಯೋಗದಿಂದ ಸಿಗುವುದಕ್ಕಿಂದ ದುಪ್ಪಟ್ಟು ಆದಾಯ ಈ ಉದ್ದಿಮೆ ನೀಡುತ್ತದೆ ಎಂದು ಅರಿತದ್ದೇ ತಡ, ಪ್ರಮೋದ್ ಉದ್ಯೋಗ ತೊರೆದು ಪೂರ್ಣ ಪ್ರಮಾಣದಲ್ಲಿ ತಮ್ಮ ಹೊಸ ಉದ್ದಿಮೆಯಲ್ಲಿ ತೊಡಗಿಕೊಂಡರು. ಅವರ ಉದ್ದಿಮೆ ಕೋಟಿ ರೂ. ಲಾಭ ಗಳಿಸಿದ್ದು, ಈಗ ಅವರ ಬಳಿ 14 ಮಂದಿ ಕುಶಲ ಕರ್ಮಿಗಳು ಮತ್ತು ಸಿಬ್ಬಂದಿ ಇದ್ದಾರೆ. ಹರಿಯಾಣ, ಪಂಜಾಬ್, ಬೆಂಗಳೂರು, ಗೋವಾ ಮತ್ತು ಚೆನ್ನೈ ಮುಂತಾದ ಪ್ರದೇಶಗಳಿಂದ ಅವರಿಗೆ ಆರ್ಡರ್‌ಗಳು ಸಿಗುತ್ತಿವೆ. ಕೋವಿಡ್ ಸಮಯದಲ್ಲೂ ಸ್ಯಾನಿಟೈಸರ್ ಡಿಸ್ಪೆನ್ಸರ್ಸ್ ಮತ್ತು ಆಸ್ಪತ್ರೆಗಳಿಗೆ ಬೆಡ್‍ಗಳನ್ನು ಮಾಡಿಕೊಡುವ ಮೂಲಕ ಲಾಭ ಗಳಿಸಿದ್ದಾರೆ.


ವೃತ್ತಿಯಿಂದ ಕಲಿಕೆ


ಮರು ಬಳಕೆಯ ವಸ್ತುಗಳಿಂದ ಉತ್ಪನ್ನಗಳನ್ನು ತಯಾರಿಸುವಾಗ ಕಚ್ಚಾ ವಸ್ತುಗಳ ಆಯ್ಕೆ ನಿರ್ಣಾಯಕವಾಗಿರುತ್ತದೆ ಎಂದು ತಮ್ಮ ಉದ್ಯಮದ ಸವಾಲುಗಳ ಬಗ್ಗೆ ತಿಳಿಸುತ್ತಾರೆ ಅವರು. ತಾನು ಬೇರೆ ಬೇರೆ ಹಂತಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ ಅದರಿಂದ ಹೊರ ಬರುವ ವಿಶ್ವಾಸ ಹೊಂದಿದ್ದೇನೆ ಎನ್ನುತ್ತಾರೆ ಅವರು. ಉತ್ತರ ಮತ್ತು ದಕ್ಷಿಣ ಭಾರತದಿಂದಲೂ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿರುವದರಿಂದ, ಆಯಾ ಪ್ರದೇಶಗಳಲ್ಲೇ ವರ್ಕ್‍ಶಾಪ್ ತೆರೆಯುವ ಯೋಜನೆ ಅವರಿಗಿದೆ.
ಪ್ರಮೋದ್ ಕೈಚಳಕದಲ್ಲಿ ಮೂಡಿಬಂದ ಫರ್ನೀಚರ್

ಉದ್ಯೋಗಿಯಾಗಿ ಕೆಲಸ ಮಾಡುವ ಬದಲು, ಉದ್ದಿಮೆಗೆ ಧುಮುಕುವಂತೆ ಉದಯೋನ್ಮುಖ ಉದ್ದಿಮೆದಾರರಿಗೆ ಸಲಹೆ ನೀಡುತ್ತಾರೆ ಪ್ರಮೋದ್. ಉದ್ಯೋಗಿ ಆಗುವುದಕ್ಕಿಂತ ಉದ್ಯಮಿ ಆಗುವುದು ಹೆಚ್ಚು ಲಾಭದಾಯಕ ಮತ್ತು ತೃಪ್ತಿಕರ ಎಂಬ ಅಭಿಪ್ರಾಯ ಅವರದ್ದು.

First published: