ಬ್ಯಾಚುಲರ್ ಮಂದಿಯ ಸುಲಭ ಪಾಕ ಮ್ಯಾಗಿ (Maggi noodles). 5 ರಿಂದ 10 ನಿಮಿಷದಲ್ಲಿ ತಯಾರಾಗುವ ಮ್ಯಾಗಿಗೆ ಲಕ್ಷಗಟ್ಟಲೇ ಅಭಿಮಾನಿಗಳಿದ್ದಾರೆ. ಹೌದು ತುಂಬಾ ಹಸಿವಾದರೆ ತುಂಬಾ ಮಂದಿಗೆ ನೆನಪಾಗುವುದೇ ಮ್ಯಾಗಿ. ಮಕ್ಕಳಿಂದ ಹಿಡಿದು ದೊಡ್ಡವರಿಗೆ ಬಲು ಇಷ್ಟದ ಈ ಮ್ಯಾಗಿ ಮಾಡುವುದು ಸುಲಭ. ಎರಡು ನಿಮಿಷ ಮ್ಯಾಗಿಯಲ್ಲಿ ಅನೇಕ ಪ್ರಯೋಗಗಳು ನಡೆದಿದೆ. ಕೆಲವರು ಇದನ್ನು ಸೂಪ್ ರೀತಿಯಲ್ಲಿ ಮಾಡಿ ಸವಿದರೆ, ಇನ್ನು ಕೆಲವರು ಇದಕ್ಕೆ ಎಲ್ಲಾ ರೀತಿಯ ತರಕಾರಿಗಳನ್ನು ಹಾಕಿ ಮಾಡಿದ ಮೇಲೋಗರದಂತೆ ಇಷ್ಟಪಡುತ್ತಾರೆ. ಮತ್ತೊಂದಷ್ಟು ಜನ ಚೀಸಿ ಮ್ಯಾಗಿ ಮಾಡಿ ಬಾಯಿ ಚಪ್ಪರಿಸುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಮ್ಯಾಗಿ ತಯಾರಿಸಿ ತಿನ್ನುತ್ತಾರೆ. ಇದೀಗ ಈ ಮ್ಯಾಗಿ ಮೊದಲ ಬಾರಿ ಮಿಲ್ಕ್ ಶೇಕ್ ರೂಪ ಪಡೆದಿದೆ. ಅಚ್ಚರಿ ಆದರೂ ಹೌದು. ಮ್ಯಾಗಿ ಸೂಪ್ ಬದಲಾಗಿ ಮಿಲ್ಕ್ ಶೇಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಮ್ಯಾಗಿ ಮಿಲ್ಕ್ ಶೇಕಾ... ವಾವ್ ಕೇಳುವುದಕ್ಕೆ ವಿಭಿನ್ನವಾಗಿದೆ ಎನಿಸುವುದು ಸಹಜ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಿಲ್ಕ್ ಶೇಕ್ ತುಂಬಿದ ಗ್ಲಾಸಿನ ಮೇಲೆ ಮ್ಯಾಗಿ ಇರಿಸಿದ ಫೋಟೋ ಹರಿದಾಡುತ್ತಿದೆ. ಕೆಲವರು ಇದನ್ನು ನೋಡಿ ಇದೇನಿದು ಹೀಗೆ ಎಂದು ಆಶ್ಚರ್ಯಪಟ್ಟರೆ, ಇನ್ನು ಕೆಲವರು ಇದನ್ನು ನೋಡಿ ಅಸಹ್ಯಪಟ್ಟುಕೊಂಡಿದ್ದಾರೆ.
Some idiot share this with me...
Maggie Milk-shake.... Jinda pakadna hai in banane waalo ko... 🤢🤢🤢 pic.twitter.com/m0BV8m7zyI
— Mayur Sejpal | मयूर सेजपाल 🇮🇳 (@mayursejpal) September 11, 2021
ಓರಿಯೋ ಬಿಸ್ಕೆಟ್, ಮ್ಯಾಗಿ, ಚಾಕೋಲೇಟ್ ಐಸ್‍ಕ್ರೀಂ ಈ ಮೂರು ಮಿಶ್ರಣ ಜೂನ್ ತಿಂಗಳಲ್ಲಿ ವೈರಲ್ ಆಗಿತ್ತು. ಇದನ್ನು ಚಹತ್ ಆನಂದ್ ಎಂಬುವವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹೇಗೆ ಮಾಡುವುದು ಎಂಬುದನ್ನು ಶೇರ್ ಮಾಡಿದ್ದರು. ಇದನ್ನು 19 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. 15 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ , 2 ಸಾವಿರಕ್ಕೂ ಹೆಚ್ಚು ಮಂದಿ ಕೆಂಗಣ್ಣು ಬೀರಿದ್ದಾರೆ. ಇದನ್ನು ನೋಡಿದ ಬಳಕೆದಾರರು ನೀವು ಮ್ಯಾಗಿ ಪ್ರಿಯರಾಗಿದ್ದರೆ ದಯವಿಟ್ಟು ಇವರನ್ನು ಫಾಲೋ ಮಾಡಬೇಡಿ ಎಂದು ನೇರವಾಗಿಯೇ ಹೇಳಿದ್ದರು.
ಇದೀಗ ಮ್ಯಾಗಿ ಮಿಲ್ಕ್ ಶೇಖ್ ಸರದಿ
ನಿಜ ಇದು ಮ್ಯಾಗಿ ಮಿಲ್ಕ್ ಶೇಖ್. ಪ್ರತಿದಿನ ಇದನ್ನು ತಿಂದರೆ ದೇವರಿಂದ ದೂರ ಸರಿಯುತ್ತೇವೆ ಎಂಬ ಶೀರ್ಷಿಕೆಯಡಿ ವೈರಲ್ ಆಗಿದೆ. ಈ ಫೋಟೋ ಎಲ್ಲೋ ಒಂದು ಅಂಗಡಿಯಿಂದ ಬಂದಿದೆ. ಸಾಮಾಜಿಕ ಮಾಧ್ಯಮವು ಈ ಫೋಟೋ ಸೃಷ್ಟಿಸಿದ ವ್ಯಕ್ತಿಯ ಹುಡುಕಾಟದಲ್ಲಿದೆ. ನೆಟಿಜನ್‍ಗಳು ಖಾದ್ಯದ ಬಗ್ಗೆ ಅಸಹ್ಯ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ ಇದರ ಜೊತೆಗೆ ವಿಚಿತ್ರವಾದ ಆಹಾರ ಸಂಯೋಜನೆಯ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಒಬ್ಬರು ಕಮೆಂಟ್ ಮಾಡಿ ಕೆಲವು ಮೂರ್ಖರು ಇದನ್ನು ಹಂಚಿಕೊಂಡಿದ್ದಾರೆ. ಇದನ್ನು ಮಾಡಿದವರನ್ನು ಜೀವಂತವಾಗಿ ಹಿಡಿಯಬೇಕು ಎಂದು ಹೇಳಿದ್ದಾರೆ. ಏನಿದು, ಜನ ಯಾಕೆ ಹೀಗೆ ಮಾಡುತ್ತಾರೆ. ಮತ್ತೊಬ್ಬರು ಇದನ್ನು ಹೇಗೆ ನೋಡುವುದು ಎಂದಿದ್ದಾರೆ. ತೇಜಸ್ ಎಂಬುವವರು ಪಾರ್ಲೆಜಿ ಮತ್ತು ಬೆಂಡೆ ಕಾಯಿ ಪಲ್ಯ ಫೋಟೋವನ್ನು ಅಂದರೆ ಪಾರ್ಲೆಜಿ ಬಿಸ್ಕೆಟ್ ಮೇಲೆ ಬೆಂಡೇಕಾಯಿ ಪಲ್ಯವನ್ನು ಇಟ್ಟು ಪಾರ್ಲೆ ಬಿಂಡಿ ಸ್ಯಾಂಡ್‍ವಿಚ್ ಎಂದು ಫೋಟೋ ಶೇರ್ ಮಾಡಿದ್ದರು.
Parle bhindi sandwich 🤣 pic.twitter.com/KOrutA3Xt1
— Teja's Twit🇮🇳 (@TejasTwit1) September 12, 2021
ಮತ್ತೊಬ್ಬರು ಎಲ್ಲರ ಶನಿವಾರ ಹಾಳಾಗಿ ಹೋಯಿತು ಎಂದು ಹೇಳಿದ್ದಾರೆ. ಮಯೂರ್ ಸೇಜ್‍ಪಾಲ್ ಎಂಬುವವರು ಒಂದು ಫೋಟೋ ಹಾಕಿ ಚೀಜ್ ಪ್ಯಾನ್ ಎಂದು ಕಮೆಂಟ್ ಮಾಡಿದ್ದಾರೆ.
— Mayur Sejpal | मयूर सेजपाल 🇮🇳 (@mayursejpal) September 11, 2021
ಮತ್ತೊಬ್ಬರು ಯಾರೋ ಇದು, ಎಲ್ಲಿಂದ ಬರ್ತಾರೋ ಇವರೆಲ್ಲಾ ಎಂದಿದ್ದಾರೆ. ಹೀಗೆ ಈ ಫೋಟೋಗೆ ಸಕಾರಾತ್ಮಕ ಕಮೆಂಟ್‍ಗಿಂತ ನಕಾರಾತ್ಮಕ ಕಮೆಂಟ್‍ಗಳೇ ಬಂದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ