Viral News: ಕೊನೆ ಕ್ಷಣದಲ್ಲಿ ‘ಕಬೂಲ್’ ಇಲ್ಲ ಎಂದ ವಧು: ವರನನ್ನ ನೋಡ್ತಿದ್ದಂತೆ ಯುವತಿಯ ನಿರ್ಧಾರ

ವರ ಮತ್ತು ಆತನ ಕುಟುಂಬಸ್ಥರು ಮದ್ಯ ಸೇವನೆ ಮಾಡಿರುವ ವಿಷಯ ವಧು ಮುಸ್ಕಾನ್ ಶೇಖ್ ಗೂ ಸಹ ತಲುಪಿದೆ. ಮುಸ್ಕಾನ್ ಮರೆಯಲ್ಲಿ ಯುವಕನನ್ನು ನೋಡಿ, ಮದುವೆ ಆಗದಿರಲು ನಿರ್ಧರಿಸಿದ್ದಾಳೆ. ವಧು ಮುಸ್ಕಾನ್ ತೀರ್ಮಾನಕ್ಕೆ ಕುಟುಂಬಸ್ಥರು ಸಹ ಒಪ್ಪಿಗೆ ನೀಡಿದ್ದಾರೆ.

ವಧು

ವಧು

  • Share this:
ಮದುವೆ ಜೀವನದ (Life) ಪ್ರಮುಖ ಘಟ್ಟ, ಹಾಗಾಗಿ ಮದುವೆ (Marriage) ಆಗುವ ಮುಂಚೆಯೇ ಸಂಗಾತಿಯೇ (Partner Choice) ಆಯ್ಕೆ ಬಗ್ಗೆ ಜನರು ತಲೆ ಕೆಡಿಸಿಕೊಳ್ತಾರೆ. ಕೆಲವೊಮ್ಮೆ ಎಷ್ಟೇ ಪ್ಲಾನ್ ಮಾಡಿಕೊಂಡಿದ್ರೂ ಮದುವೆ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಆಗಿರುತ್ತವೆ. ಕೆಲವು ಬಾರಿ ಯುವಕ, ಮತ್ತೆ ಕೆಲವು ಬಾರಿ ಯುವತಿ ಕೊನೆ ಕ್ಷಣದಲ್ಲಿ ಮದುವೆ ಆಗಲ್ಲ ಎಂದು ಮಂಟಪದಿಂದ ಹೊರ ನಡೆದಿರುವ ಉದಾಹರಣೆಗಳು ನಮ್ಮ ಮುಂದಿವೆ. ಮೊದಲಿಗೆ ವರದಕ್ಷಿಣೆ (Dowry), ವರೋಪಚಾರದಂತಹ ವಿಷಯಗಳಿಗೆ ಮದುವೆಗಳು ರದ್ದು ಆಗುತ್ತಿದ್ದವು, ಇದೀಗ ಕಾಲ ಬದಲಾಗಿದೆ. ಎಲ್ಲರಿಗೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವತಂತ್ರರು ಆಗಿರುತ್ತಾರೆ. ಇದೀಗ ಅದೇ ರೀತಿ ವಧು, ಕಲ್ಯಾಣ ಮಂಟಪದಲ್ಲಿ ವರನನ್ನು ನೋಡುತ್ತಿದ್ದಂತೆ ಮದುವೆ ಬೇಡ ಅಂತ ಹೇಳಿದ್ದಾಳೆ. ಅಷ್ಟಕ್ಕೂ ಮದುವೆ ಕ್ಯಾನ್ಸಲ್ (Marriage Cancel) ಮಾಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ನವೆಂಬರ್ 7ರಂದು ಮಧ್ಯ ಪ್ರದೇಶದ ರಾಯಗಢ ಜಿಲ್ಲೆಯ ಸುಥಲಿಯಾದಲ್ಲಿ ಮದುವೆ ನಡೆಯುತ್ತಿತ್ತು. ಯುವತಿ ಸಹ ವಧುವಿನ ಡ್ರೆಸ್ ತೊಟ್ಟು ಸಿದ್ಧವಾಗಿದ್ದಳು. ಮದುವೆಗೆ ಅತಿಥಿಗಳು ಸಹ ಆಗಮಿಸುತ್ತಿದ್ದರು. ಮತ್ತೊಂದು ಕಡೆ ಬಗೆ ಬಗೆಯ ಪಕ್ವಾನ್ನ ಸಿಧ್ದಗೊಳ್ಳುತ್ತಿತ್ತು. ವರ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಇಡೀ ಮದುವೆ ಸಂಭ್ರಮವೇ ಮಾಯವಾಯ್ತು.

ಮದುವೆ ದಿನವೇ ವರ ಮದ್ಯಪಾನ

ಮದುವೆ ಮನೆಗೆ ವರ ಮತ್ತು ಆತನ ಕುಟುಂಬಸ್ಥರು ಬರುವಾಗಲೇ ಮದ್ಯ ಸೇವನೆ ಮಾಡಿ ಬಂದಿದ್ದರು, ಜೊತೆಗೆ ಆತನ ಆಪ್ತ ಗೆಳೆಯರು ಸಹ ಮದ್ಯ ಸೇವನೆ ಮಾಡಿದ್ದರು. ಅದರಲ್ಲಿ ನಶೆಯಲ್ಲಿದ್ದ ವರನಿಗೆ ನಿಂತುಕೊಳ್ಳಲು ಸಹ ಆಗುತ್ತಿರಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:  Viral News: ದೇಹದ ಒಂದು ಅಂಗಕ್ಕೆ ರೂಪದರ್ಶಿಯ 13 ಕೋಟಿ ವಿಮೆ

ವರ ಮತ್ತು ಆತನ ಕುಟುಂಬಸ್ಥರು ಮದ್ಯ ಸೇವನೆ ಮಾಡಿರುವ ವಿಷಯ ವಧು ಮುಸ್ಕಾನ್ ಶೇಖ್ ಗೂ ಸಹ ತಲುಪಿದೆ. ಮುಸ್ಕಾನ್ ಮರೆಯಲ್ಲಿ ಯುವಕನನ್ನು ನೋಡಿ, ಮದುವೆ ಆಗದಿರಲು ನಿರ್ಧರಿಸಿದ್ದಾಳೆ. ವಧು ಮುಸ್ಕಾನ್ ತೀರ್ಮಾನಕ್ಕೆ ಕುಟುಂಬಸ್ಥರು ಸಹ ಒಪ್ಪಿಗೆ ನೀಡಿದ್ದಾರೆ.

ಮದುವೆ ಕಬೂಲ್ ನಹೀ ಅಂದ ವಧು

ವರ ಪಾನಮತ್ತನಾಗಿರುವ ವಿಚಾರ ತಿಳಿದ ವಧು ಮುಸ್ಕಾನ್ ನಿಖಾ ಸ್ಥಳಕ್ಕೆ ಬರಲು ಹಿಂದೇಟು ಹಾಕಿದ್ದಾಳೆ. ನಂತರ ಕುಟುಂಬಸ್ಥರು ಹಾಗೂ ಧರ್ಮಗುರುಗಳ ಮುಂದೆ ಯುವಕ ಮದ್ಯ ವ್ಯಸನಿಯಾಗಿದ್ದು, ಮದುವೆಗೆ ಕಬೂಲ್ ಇಲ್ಲ ಅಂತ ಒತ್ತಿ ಹೇಳಿದ್ದಾನೆ. ಕೊನೆಗೆ ವಧುವಿನ ಇಚ್ಛೆಯಂತೆಯೇ ಮದುವೆ ರದ್ದುಗೊಳಿಸಿ, ವರ ಮತ್ತು ಆತನ ಸಂಬಂಧಿಕರಿಗೆ ಹಿಂದಿರುಗುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಮಟನ್ ಊಟ ಹಾಕಿಸದ್ದಕ್ಕೆ ಬೇರೆ ಯುವತಿ ಜೊತೆ ಮದುವೆ

ಮದುವೆ ಸಮಾರಂಭದಲ್ಲಿ ಭಾಗವಹಿಸುವ ನೆಂಟರಿಷ್ಟರಿಗೆ ವರ ಅಥವಾ ವಧುವಿನ ಕಡೆಯವರು ಭರ್ಜರಿ ಬಾಡೂಟವನ್ನು ಉಣಬಡಿಸುತ್ತಾರೆ. ಆಡು, ಕುರಿ, ಕೋಳಿ, ಮೀನು​ ಹೀಗೆ ಮಾಂಸದೂಟವನ್ನು ನೀಡುತ್ತಾರೆ. ಆದರೆ ಇಲ್ಲೊಂದು ವಿವಾಹ ಸಮಾರಂಭದಲ್ಲಿ ವರ ಮಟನ್​ ಊಟ ಇಲ್ಲವೆಂದು ಮದುವೆ ಕ್ಯಾನ್ಸಲ್​ ಮಾಡಿ ಮದುಮಗಳ ಬದಲು ಬೇರೊಬ್ಬಳಿಗೆ ತಾಳಿಕಟ್ಟಿದ್ದಾನೆ.

ಇದನ್ನೂ ಓದಿ:  Viral News: ಮದ್ವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು: ಪ್ರತಿ ಪ್ಲೇಟ್ ಹಣ ಕೇಳಿ ಗೆಸ್ಟ್ ಶಾಕ್

ಒಡಿಶಾದ ಮನತಿರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಮಕಾಂತ್​ ಎಂಬ ವರ ಊಟದ ಸಮಯದಲ್ಲಿ ಮಟನ್​ ಇಲ್ಲದ್ದನ್ನು ಕಂಡು ಮಧು ಬೇಡ ಎಂದು ಹೇಳಿದ್ದಾನೆ. ಹುಡುಗಿಯ ಮನೆಯವರು ಎಷ್ಟೇ ವಿನಂತಿ ಮಾಡಿದರು ಮದುವೆ ಆಗಲು ಸಾಧ್ಯವೇ ಇಲ್ಲ ಎಂದು ವರ ಹೇಳಿದ್ದನು.

ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ವರ ಈ ಕೂಟಕ್ಕೆ ಮಟನ್​ ಊಟ ರೆಡಿ ಮಾಡುವಂತೆ ಮೊದಲೇ ಹೇಳಿದ್ದನಂತೆ. ಆದರೆ ಮಧುವಿನ ಮನೆಯವರಿಗೆ ಅದು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ್ದೇ ತಡ ವರನು ನನಗೆ ಈ ವಧು ಬೇಡಾ ಮದುವೆ ಸಾಧ್ಯವೇ ಇಲ್ಲ ಎಂದು ಹೇಳಿದ್ದನು.
Published by:Mahmadrafik K
First published: