ಪೇಟಿಎಂ (Paytm) ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಮತ್ತು ನಟಿ ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೆನೆ ಇಬ್ಬರೂ ಭೇಟಿಯಾಗಿ, ಸ್ವಾತಿ ಸ್ನ್ಯಾಕ್ಸ್‌ನಲ್ಲಿ ವಡಾಪಾವ್ ಸವಿದಿದ್ದಾರೆ. ಮುಂಬೈ ಮಂದಿಗೆ ವಡಾಪಾವ್ ಎಂದರೆ ಊಟ ಇದ್ದ ಹಾಗೆ. ಅದು ಅಲ್ಲಿನ ಜನಪ್ರಿಯ ಖಾದ್ಯ. ಯಾರೇ ಇಲ್ಲಿಗೆ ಬಂದರು ಇದರ ರುಚಿಯನ್ನು ತಪ್ಪದೇ ನೋಡಿ ಹೋಗುತ್ತಾರೆ. ಮೊನ್ನೆ ಮೊನ್ನೆ ಡಾ.ಶ್ರೀರಾಮ್ ನೆನೆ ಪತ್ನಿ ಮತ್ತು ಬಾಲಿವುಡ್ (Bollywood) ನಟಿ ಮಾಧುರಿ ದೀಕ್ಷಿತ್ (Madhuri Dixit Nene) ಅವರು ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿ ಮಾಡಿ ಅವರ ಜೊತೆ ವಡಾಪಾವ್ ಸವಿದಿದ್ದರು.
ಆಪಲ್ ಸಿಇಒ ಭಾರತಕ್ಕೆ ಬಂದು ಒಂದಿಷ್ಟು ದಿನ ಭಾರತದ ಕೆಲ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದರು. ತಮ್ಮ ಎರಡು ಔಟ್‌ಲೆಟ್‌ಗಳನ್ನು ಆರಂಭಿಸುವ ವೇಳೆಯಲ್ಲಿ ಟಿಮ್ ಕುಕ್ ಪ್ರಧಾನಿ ಮಂತ್ರಿ ಸೇರಿ ಪ್ರಮುಖ ವ್ಯಕ್ತಿಗಳನ್ನು ಸಹ ಭೇಟಿ ಮಾಡಿದರು. ಇನ್ನೂ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಸಹ ಭೇಟಿಯಾಗಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ಟಿಮ್ ಕುಕ್‌ಗೆ ವಡಾಪಾವ್ ಪರಿಚಯಿಸಿದರು.
ಅದೇ ಸ್ನ್ಯಾಕ್ಸ್ ಪಾಯಿಂಟ್‌ನಲ್ಲಿ ವಡಾಪಾವ್ ಸವಿದ ಮಾಧುರಿ ಪತಿ ಮತ್ತು ಪೇಟಿಎಂ ಸಂಸ್ಥಾಪಕ
ಈಗ ಇದರ ಬೆನ್ನಲ್ಲೇ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಭಾನುವಾರ ಶ್ರೀರಾಮ್ ನೆನೆ ಅವರನ್ನು ಭೇಟಿ ಮಾಡಿ ಟಿಮ್ ಕುಕ್ ವಡಾಪಾವ್ ಸವಿದ ಅದೇ ಜಾಗದಲ್ಲಿ ವಡಾಪಾವ್ ಸವಿದರು.
Our Vada Pav moment at #swatisnacks @vssx @vishygo. The company was what made the experience. ❤️ pic.twitter.com/SUX8c3knjR
— Dr. Shriram Nene (@DoctorNene) April 30, 2023
ಈ ಫೋಟೋವನ್ನು ಟ್ವಿಟರ್‌ನಲ್ಲಿ ಡಾ.ನೆನೆ ಶರ್ಮಾ ಹಂಚಿಕೊಂಡಿದ್ದಾರೆ. ನಂತರ ಇದೇ ಫೋಟೋವನ್ನು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಹಂಚಿಕೊಂಡಿದ್ದು, "'ಬಡವರ' ವಡಾಪಾವ್ ಕ್ಷಣ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇರಳ ಭೀಕರ ದುರಂತ, ಬೋಟ್ ಮುಳುಗಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆ!
ಮುಖೇಶ್ ಅಂಬಾನಿಗೂ ಇಷ್ಟ ಸ್ವಾತಿ ಸ್ನ್ಯಾಕ್ಸ್
ಸ್ವಾತಿ ಸ್ನ್ಯಾಕ್ಸ್ ದಕ್ಷಿಣ ಮುಂಬೈನ ಟಾರ್ಡಿಯೊ ಬಳಿ ಇರುವ ಒಂದು ಸಾಂಪ್ರದಾಯಿಕ ಸಸ್ಯಾಹಾರಿ ಶಾಖೆಯಾಗಿದೆ. ಇಲ್ಲಿನ ಜನಪ್ರಿಯ ಸ್ನ್ಯಾಕ್ಸ್ ಪಾಯಿಂಟ್ ಇದಾಗಿದ್ದು, ಹಲವು ಗ್ರಾಹಕರು ಇಲ್ಲಿಗೆ ಭೇಟಿ ಮಾಡುತ್ತಾರೆ. ಮುಖೇಶ್ ಅಂಬಾನಿ ಕೂಡ ಈ ಸ್ವಾತಿ ಸ್ನ್ಯಾಕ್ಸ್ ಪಾಯಿಂಟ್ ಅನ್ನು ಮೆಚ್ಚಿಕೊಂಡಿದ್ದು, ವಾರಕೊಮ್ಮೆಯಾದರೂ ಇಲ್ಲಿ ಬಂದು ಸ್ನ್ಯಾಕ್ಸ್ ಸವಿಯಬೇಕು ಅಂತಾ ಹೇಳಿದ್ದರು.
ಟೀಮ್ ಕುಕ್‌ಗೆ ಇಷ್ಟವಾದ ಮುಂಬೈನ ವಡಾಪಾವ್
ಏಪ್ರಿಲ್‌ನಲ್ಲಿ ಭಾರತದಲ್ಲಿ ಮೊದಲ ಕಂಪನಿಯ ಮಾಲೀಕತ್ವದ ಮಳಿಗೆಯನ್ನು ಉದ್ಘಾಟಿಸಲು ಮುಂಬೈಗೆ ಬಂದಿದ್ದ ಆಪಲ್ ಸಿಇಒಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ವಡಾಪಾವ್ ರುಚಿ ತೋರಿಸಿದ್ದರು.
ಟಿಮ್ ಕುಕ್ ಕೂಡ ಇದು ರುಚಿಯಾಗಿದೆ ಎಂದು ವಡಾಪಾವ್ ಅನ್ನು ಮೆಚ್ಚಿಕೊಂಡಿದ್ದರು. ಇದೇ ಮೊದಲ ಬಾರಿಗೆ ನನಗೆ ವಡಾಪಾವ್ ಅನ್ನು ಪರಿಚಯಿಸಿದ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದಗಳು, ಖಾದ್ಯ ರುಚಿಯಾಗಿತ್ತು ಎಂದು ಕುಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ತನ್ನ ಪಾಲಿಗೆ, ಆ್ಯಪಲ್ ಸಿಇಒ ಅವರನ್ನು ಮುಂಬೈಗೆ ಸ್ವಾಗತಿಸಲು ಉತ್ತಮ ಮಾರ್ಗವನ್ನು ಯೋಚಿಸಲು ಇದಕ್ಕಿಂತ ಬೇರೆ ಮಾರ್ಗ ಸಾಧ್ಯವಿಲ್ಲ ಎಂದು ಮಾಧುರಿ ದೀಕ್ಷಿತ್ ಬರೆದುಕೊಂಡಿದ್ದರು.
ಮುಂಬೈನಲ್ಲಿರುವ ತನ್ನ ಸ್ಟೋರ್ ಆ್ಯಪಲ್ ಬಿಕೆಸಿ ಹಾಗೂ ದೆಹಲಿಯಲ್ಲಿರುವ ಆ್ಯಪಲ್ ಸಾಕೇತ್ ಆರಂಭಕ್ಕೆ ಟಿಮ್ ಕುಕ್ ಬಂದಿದ್ದರು. ಈ ವೇಳೆ ಸೈನಾ ನೆಹ್ವಾಲ್, ಶ್ರೀಕಾಂತ್ ಕಿಡಂಬಿ ಮುಂತಾದ ಭಾರತೀಯ ಬ್ಯಾಡ್ಮಿಂಟನ್ ಆಟಗಾರರನ್ನು ಸಹ ಭೇಟಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ