• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Good Friday ಶುಭಾಶಯ ಕೋರಿ ಪೇಚಿಗೆ ಸಿಲುಕಿದ ಮಾಧುರಿ ದೀಕ್ಷಿತ್ ಪತಿ, ಫುಲ್​ ಟ್ರೋಲ್​ ಮಾಡ್ತಾ ಇದ್ದಾರೆ ನೆಟ್ಟಿಗರು!

Good Friday ಶುಭಾಶಯ ಕೋರಿ ಪೇಚಿಗೆ ಸಿಲುಕಿದ ಮಾಧುರಿ ದೀಕ್ಷಿತ್ ಪತಿ, ಫುಲ್​ ಟ್ರೋಲ್​ ಮಾಡ್ತಾ ಇದ್ದಾರೆ ನೆಟ್ಟಿಗರು!

ವೈರಲ್​ ನ್ಯೂಸ್​

ವೈರಲ್​ ನ್ಯೂಸ್​

ಹಬ್ಬ ಹರಿದಿನಗಳಲ್ಲಿ ವಿಶ್​ ಮಾಡೋದು ಕಾಮನ್​. ಆದ್ರೆ ಇಲ್ಲೊಂದು ದೊಡ್ಡ ಪಜೀತಿನೇ ಆಗಿದೆ, ನೋಡಿ.

  • Share this:
  • published by :

ನಟಿ ಮಾಧುರಿ ದೀಕ್ಷಿತ್ (Madhuri Dixit)  ಅವರ ಪತಿ ಹಾಗೂ ಭಾರತೀಯ-ಅಮೆರಿಕನ್  (American) ಹೃದಯರಕ್ತನಾಳ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೆನೆ ಗುಡ್‌ಫ್ರೈಡೇಗೆ ಟ್ವಿಟರ್‌ನಲ್ಲಿ ಶುಭಾಶಯ ಕೋರುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ಕ್ರೈಸ್ತ ಬಂಧುಗಳಿಗೆ ಗುಡ್ ಫ್ರೈಡೇ (Good Friday) ಶುಭಾಶಯಗಳನ್ನು ತಿಳಿಸಿರುವ ವೈದ್ಯರಾದ ಶ್ರೀರಾಮ್ ನೆನೆ, ತಮ್ಮ ಶುಭಾಶಯ ವಿನಿಮಯ ತಾಣದಲ್ಲಿ ಇಷ್ಟೊಂದು ಟೀಕೆಗಳಿಗೆ ಒಳಗಾಗಲಿದೆ ಎಂಬ ಕಲ್ಪನೆಯನ್ನೇ ಮಾಡಿರಲಿಕ್ಕಿಲ್ಲ ಎಂಬುದಂತೂ ನಿಜ. ಕ್ಯಾಲ್ವರಿಯಲ್ಲಿ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿ ಹಾಗೂ ಮರಣದ ನೆನಪಿಗಾಗಿ ಗುಡ್‌ಪ್ರೈಡೇಯನ್ನು ಆಚರಿಸಲಾಗುತ್ತದೆ ಆದರೆ ನೆನೆಯವರು ಶುಭಾಶಯ ಹೇಳುವ ಆತುರದಲ್ಲಿ ಸಂದರ್ಭದ ಗಾಂಭೀರ್ಯವನ್ನು ಮಹತ್ವವನ್ನು ಅರಿತುಕೊಳ್ಳಲಿಲ್ಲ ಎಂಬುದೇ ಇಲ್ಲಿ ಮಹತ್ವದ ಅಂಶವಾಗಿದೆ. ಅವರು ಶುಭಾಶಯ ವಿನಿಮಯ ಮಾಡಿಕೊಂಡಿರುವುದು ಸದುದ್ದೇಶದಿಂದ ಕೂಡಿದ್ದರೂ ಸಾಮಾಜಿಕ ತಾಣದಲ್ಲಿ ಭರ್ಜರಿ ಟ್ರೋಲ್‌ಗಳಿಗೆ (Troll ) ವೈದ್ಯರು ಆಹಾರವಾಗಬೇಕಾಯಿತು.


ಗುಡ್‌ಫ್ರೈಡೇ ಶೋಕಾಚರಣೆಯ ದಿನ ತಿಳಿಹೇಳಿದ ನೆಟ್ಟಿಗರು


ಕೆಲವರು ಬೇರೆಯವರ ಶುಭಾಶಯದಲ್ಲಿ ಏನು ತಪ್ಪಾಗಿದೆ ಎಂಬುದನ್ನು ತಿಳಿಹೇಳುವ ಕೆಲಸವನ್ನು ಮಾಡಿದರೆ ಇನ್ನು ಕೆಲವರು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಗುಡ್ ಫ್ರೈಡೇ ಶೋಕಾಚರಣೆಯ ದಿನವಾಗಿದೆ ಇದು ಸಂಭ್ರಮದ ಆಚರಣೆಯಲ್ಲ. ಈ ದಿನದ ಮಹತ್ವವನ್ನು ಅರಿತುಕೊಂಡು ಸಂದರ್ಭವನ್ನು ಗಮನಿಸಿಕೊಂಡು ಸಂದೇಶಗಳನ್ನು ಪೋಸ್ಟ್ ಮಾಡುವ ಮೊದಲು ಅವರು ಸಾಂಸ್ಕೃತಿಕ ಸೂಕ್ಷ್ಮತೆಗಳ ಬಗ್ಗೆ ಅರಿತುಕೊಂಡಿರಬೇಕು ಎಂದು ಕೆಲವು ಬಳಕೆದಾರರು ಪಾಠ ಮಾಡಿದ್ದಾರೆ.


ಚುರುಕಾಗಿಯೇ ಬಿಸಿ ಮುಟ್ಟಿಸಿದ ನೆಟ್ಟಿಗರು


ತಾಣದಲ್ಲಿ ಕೆಲವರು ಹಾಸ್ಯಮಯ ಟೀಕೆಗಳನ್ನು ಮಾಡಿದರೆ ಇನ್ನು ಕೆಲವರು ಡಾಕ್ಟ್ರೇ ನಿಮ್ಮ ಆರೋಗ್ಯ ಸರಿ ಇದೆಯೇ ಎಂದು ಹಾಸ್ಯಮಯವಾಗಿ ಕೇಳಿದ್ದಾರೆ. ಇನ್ನು ಕೆಲವರು ಈ ದಿನ ಯಾರೂ ಗುಡ್ ಫ್ರೈಡೇ ಆಚರಣೆ ಮಾಡುವುದಿಲ್ಲ ಏಕೆಂದರೆ ಇಂದು ಶೋಕಾಚರಣೆಯ ದಿನವಾಗಿದೆ. ಹಾಗಾಗಿ ಟ್ವೀಟ್ ಮಾಡುವ ಮುನ್ನ ಕೆಲವೊಂದು ಅಂಶಗಳನ್ನು ಅರಿತುಕೊಳ್ಳಿ ಎಂದು ಇನ್ನು ಕೆಲವು ಬಳಕೆದಾರರು ಖಾರವಾಗಿ ಕಾಮೆಂಟ್ ಮಾಡಿದ್ದಾರೆ.



ಬಳಕೆದಾರರು ಕಾಮೆಂಟ್ ಹೇಗಿತ್ತು?


ಇನ್ನು ಕೆಲವರು ಡಾಕ್ಟರ್ ನೆನೆಯವರೇ ಈ ದಿನ ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾಗಿದೆ. ಹಾಗಾಗಿ ಈ ದಿನ ಆಚರಣೆ ಹೇಗೆ ಸಾಧ್ಯ? ಸ್ವಲ್ಪವಾದರೂ ಗಮನಿಸಿ ನಂತರ ಟ್ವೀಟ್ ಮಾಡಿ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: ಆಹಾ, ಬಾಯಲ್ಲಿ ನೀರೂರಿಸುತ್ತಂತೆ ಇರುವೆ ಚಟ್ನಿ! ತಿಂದು ಹೇಳಿದ್ದೇನು ಫುಡ್ ಬ್ಲಾಗರ್?


ನಿಮಗೆ ಈ ದಿನದ ಮಹತ್ವ ಗೊತ್ತಿಲ್ಲ ಎಂದರೆ ನಿಮಗೆ ವೈದ್ಯರ ಪದವಿಯನ್ನು ಯಾರು ನೀಡಿದರು ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ. ಸ್ವಲ್ಪವಾದರೂ ಜ್ಞಾನ ವೃದ್ಧಿಸಿಕೊಳ್ಳಿ ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ. ನೀವು ಬಾಲಿವುಡ್ ಚಲನಚಿತ್ರಗಳನ್ನು ನೋಡುತ್ತಿರಿ ಇಂತಹ ಶುಭಾಶಯಗಳನ್ನು ವಿನಿಮಯ ಮಾಡುವ ಗೋಜಿಗೇ ಹೋಗದಿರಿ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


Dr. Shriram Nene,Madhuri Dixit's husband,Shriram Nene,Indian-American Surgeon,Celebrity,Celebrity Couple,Celeb Trolling,Bollywood Trolling, kannada news, ಕನ್ನಡ ನ್ಯೂಸ್​, ಸೆಲೆಬ್ರಿಟಿ ಕಪಲ್​, ಮಾಧುರಿ ದೀಕ್ಷಿತ್​ ಗಂಡ , ಟ್ರೋಲ್​ಗಳು
ಟ್ರೋಲ್​


ಭಾವನೆಗಳಿಗೆ ಧಕ್ಕೆ ತರುವಂತಿರಬಾರದು


ಯಾವುದೇ ಸೆಲೆಬ್ರಿಟಿ ಅಥವಾ ರಾಜಕಾರಣಿಯೇ ಆಗಿರಲಿ ಒಳ್ಳೆಯ ಉದ್ದೇಶ ಹಾಗೂ ಸಕಾರಾತ್ಮಕ ಭಾವನೆಯಿಂದಲೇ ಶುಭ ಹಾರೈಕೆಗಳನ್ನು ತಾಣದಲ್ಲಿ ಮಾಡುತ್ತಾರೆ. ಆದರೆ ಇಂತಹ ಶುಭಾಶಯಗಳನ್ನು ಹಾರೈಸುವ ಮುನ್ನ ಕೊಂಚವಾದರೂ ಆ ವಿಷಯದ ಬಗ್ಗೆ ಜ್ಞಾನವನ್ನು ವೃದ್ಧಿಸಿಕೊಳ್ಳುವುದು ಮುಖ್ಯವಾಗಿರುತ್ತದೆ ಅಂತೆಯೇ ಅದು ಸಮಾಜದಲ್ಲಿರುವ ಬಂಧುಗಳ ಭಾವನೆಗಳಿಗೆ ಧಕ್ಕೆ ತರುವಂತಿರಬಾರದು.


ಇದನ್ನೂ ಓದಿ: ಮಾವಿನ ಹಣ್ಣಿಗೂ ಬಂತು EMI, ಮಾರಾಟ ಹೆಚ್ಚಿಸೋಕೆ ವ್ಯಾಪಾರಿಯ ಹೊಸ ಟ್ರಿಕ್ಸ್!


ಇಂತಹ ವಿವಾದಗಳಿಗೆ ಗುರಿಯಾಗಿರುವವರು ನೆನೆ ಮಾತ್ರವಲ್ಲ


ದುರಾದೃಷ್ಟದ ವಿಚಾರವೆಂದರೆ ಸಾಮಾಜಿಕ ತಾಣದಲ್ಲಿ ಇಂತಹ ಪ್ರಮಾದವೆಸಗಿರುವವರು ಶ್ರೀರಾಮ್ ನೆನೆ ಮಾತ್ರವಲ್ಲ. 2016 ರಲ್ಲಿ, ಆಗಿನ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ಇದೇ ರೀತಿಯ ಸಂದೇಶವನ್ನು ಟ್ವೀಟ್ ಮಾಡಿದ್ದರು, ಇದು ಅಪಹಾಸ್ಯ ಮತ್ತು ಟೀಕೆಗೆ ಗುರಿಯಾಯಿತು.




ಗುಡ್ ಫ್ರೈಡೇ ಹಿಂದಿನ ನಿಜವಾದ ಅರ್ಥವನ್ನು ಅನೇಕ ಜನರು ಇನ್ನೂ ಅರಿತುಕೊಂಡಿಲ್ಲ ಎಂಬ ಅಂಶವನ್ನು ಇದು ತೋರಿಸುತ್ತದೆ ಎಂಬುದು ಬಳಕೆದಾರರ ಮಾತಾಗಿದೆ.

First published: