Full Blood Moon 2021: ಚಂದ್ರ ಗ್ರಹಣವನ್ನು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಸಂಭವಿಸುವ ವಿದ್ಯಮಾನವೆಂದು ವಿಜ್ಞಾನಿಗಳು ವ್ಯಾಖ್ಯಾನಿಸುತ್ತಾರೆ. ಇದು ಚಂದ್ರನ ಮೇಲ್ಮೈಯಿಂದ ಪ್ರತಿಫಲಿಸುವ ಸೂರ್ಯನ ಬೆಳಕನ್ನು ತಡೆಯುತ್ತದೆ. ಜ್ಯೋತಿಷ್ಯದ ಪ್ರಕಾರ, ಚಂದ್ರ ಗ್ರಹಣವು ಮನುಷ್ಯರ ರಾಶಿಚಕ್ರ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ರಾಶಿಚಕ್ರದ ಸುತ್ತ ಯಾವಾಗಲೂ ಸುತ್ತುತ್ತಿರುವ ದೀರ್ಘವೃತ್ತದ ಮೂಲಕ ಚಂದ್ರನು ಹೊಳೆಯುತ್ತಿದ್ದಂತೆ, ಖಗೋಳದ ಕೌತುಕವು ಮನುಷ್ಯರ ಜಾತಕದಲ್ಲಿ ಚಂದ್ರನ ನೋಡ್ ಪ್ರಚೋದಿಸುತ್ತದೆ. ಈ ಕಕ್ಷೆಯ ಅತ್ಯುನ್ನತ ಮತ್ತು ಕಡಿಮೆ ಬಿಂದುಗಳು ಮನುಷ್ಯರ ಜಾತಕದಲ್ಲಿ ದಕ್ಷಿಣ ಮತ್ತು ಉತ್ತರ ನೋಡ್‌ಗಳಾಗಿ ಗೋಚರಿಸುವ ಚಂದ್ರನ ನೋಡ್‌ಗಳಿಗೆ ಅನುರೂಪವಾಗಿದೆ. ಫೇಟ್ ನೋಡ್ಸ್ ಎಂದೂ ಕರೆಯಲ್ಪಡುವ ಈ ಎರಡು ನೋಡ್‌ಗಳು ನಮ್ಮ ಇತಿಹಾಸ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತವೆ.
ಮೇ 26, 2021 ರ ಬುಧವಾರ, ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಮಧ್ಯಾಹ್ನ 2.17 ಕ್ಕೆ ಆರಂಭವಾಗುವ ಗ್ರಹಣವು ಸಂಜೆ 7. 19 ಕ್ಕೆ ಮುಕ್ತಾಯವಾಗುತ್ತದೆ. ಭಾರತದ ಕೆಲವು ಪ್ರದೇಶಗಳು ಸೇರಿದಂತೆ ವಿಶ್ವದ ಹಲವೆಡೆ ಗ್ರಹಣ ಗೋಚರವಿದೆ. ಈ ನಿಟ್ಟಿನಲ್ಲಿ ಚಂದ್ರಗ್ರಹಣವು ಮನುಷ್ಯರ ರಾಶಿ, ನಕ್ಷತ್ರಗಳ ಮೇಲೆ ಹೇಗೆ ಸಂಭವನೀಯ ಪ್ರಭಾವ ಬೀರಬಹುದು ಎನ್ನುವುದನ್ನು ಜ್ಯೋತಿಷ್ಯ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಅದು ಈ ರೀತಿ ಇದೆ.
ಮೇಷ (ಮಾರ್ಚ್ 21- ಏಪ್ರಿಲ್ 19)
ಈ ಸಮಯದಲ್ಲಿ ನೀವು ಬಲವಾದ ಮತ್ತು ತೀವ್ರವಾದ ಭಾವನೆಗಳನ್ನು ಹೊಂದಿರಬಹುದು, ಆದರೆ ಸ್ನೇಹಿತರು ಮತ್ತು ಕುಟುಂಬದ ಬೆಂಬಲದೊಂದಿಗೆ, ಇದನ್ನು ಸುಧಾರಿಸಬಹುದು. ಕೆಲವು ಉತ್ತಮ ಆರ್ಥಿಕ ಸುದ್ದಿಗಳು ಬರುವ ಮೂಲಕ ಹಣದ ಸಮಸ್ಯೆ ನಿವಾರಣೆಯಾಗಬಹುದು.
ವೃಷಭ (ಏಪ್ರಿಲ್ 20 - ಮೇ 20)
ಮೇಲ್ಮೈನಲ್ಲಿ ಗಮನಿಸಿದರೆ ಹೆಚ್ಚು ಪರಿಣಾಮ ಕಂಡುಬರುವುದಿಲ್ಲ. ಆಂತರಿಕವಾಗಿ, ನಿಮ್ಮ ಮಹತ್ವಾಕಾಂಕ್ಷೆಗಳು ಮತ್ತು ರಹಸ್ಯಗಳು ನಿಮ್ಮನ್ನು ಹೆಚ್ಚು ತಿಳಿಯಲು ಅವಕಾಶ ನೀಡಬಹುದು. ನೀವು ಯೋಚಿಸುತ್ತಿರುವ ನಿಮ್ಮ ಚಿಂತೆಗಳನ್ನು ಪ್ರತಿಬಿಂಬಿಸಲು ಮತ್ತು ಎದುರಿಸಲು ಇದು ಒಂದು ಉತ್ತಮ ಕ್ಷಣವಾಗಿದೆ.
ಮಿಥುನ (ಮೇ 21 - 20 ಜೂನ್)
ಈ ಚಂದ್ರ ಗ್ರಹಣವು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ನಿರ್ಣಾಯಕ ತಿರುವನ್ನು ಸಮೀಪಿಸುತ್ತಿದ್ದಂತೆ, ನೀವು ಕೆಲವು ಗಣನೀಯ ನಿರ್ಧಾರಗಳು ಅಥವಾ ಬದಲಾವಣೆಗಳಿಗೆ ಒಳಪಡಬಹುದು. ನೀವು ಮತ್ತು ನಿಮ್ಮ ಸಂಗಾತಿಯು ನಿಮ್ಮ ಸಂಬಂಧವನ್ನು ಹೊಸ ಮಟ್ಟದ ಬದ್ಧತೆಗೆ ಕೊಂಡೊಯ್ಯುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತಿದೆ.ಇಲ್ಲವೇ ಸಂಪರ್ಕವು ಅಂತ್ಯಗೊಳ್ಳುತ್ತಿದೆ ಎಂದು ಇದು ಸೂಚಿಸುತ್ತದೆ.
ಕಟಕ (ಜೂನ್ 21 - ಜುಲೈ 22)
ಈ ಚಂದ್ರಗ್ರಹಣದ ಪರಿಣಾಮವಾಗಿ ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಎದುರಿಸಬಹುದು. ಕೆಲಸದ ಒತ್ತಡ ನಿರ್ವಹಣೆಗೆ ಹೊಸ ಮಾರ್ಗವನ್ನು ಈ ಸಂದರ್ಭದಲ್ಲಿ ಕಂಡುಕೊಳ್ಳಬಹುದು.
ಸಿಂಹ (ಜುಲೈ 23- ಆಗಸ್ಟ್ 23)
ಈ ಚಂದ್ರಗ್ರಹಣವು ನಿಮ್ಮ ಆರ್ಥಿಕ ಸ್ಥಿತಿ ಗತಿ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ ಕಾರಣ ನಿಮ್ಮ ಖರ್ಚು ಮತ್ತು ವೆಚ್ಚದ ಬಗ್ಗೆ ನಿಗಾ ವಹಿಸಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಮನಸ್ಸಿಗೆ ನೆಮ್ಮದಿ ತರಬಹುದು.
ಕನ್ಯಾ (ಆಗಸ್ಟ್ 23 - ಸೆಪ್ಟೆಂಬರ್ 22)
ಈ ಸಂದರ್ಭದಲ್ಲಿ ಕೆಲವು ಹಳೆಯ ನೆನಪುಗಳ ಮೆಲುಕು ಬರಬಹುದು. ಈ ನಿಟ್ಟಿನಲ್ಲಿ ಭಾವನಾತ್ಮಕ ಸನ್ನಿವೇಶಗಳಿಂದ ದೂರವಿರಿ. ಸಾಧ್ಯವಾದಷ್ಟು ತಾರ್ಕಿಕ ವಿಮರ್ಶೆ ಮಾಡಿಕೊಳ್ಳುವ ಮೂಲಕ ಮನಸ್ಸನ್ನು ಕೇಂದ್ರಿಕರಿಸಿ. ಈ ಸಮಯದಲ್ಲಿ ನಿಮ್ಮ ಮನಸ್ಸಿನ ನೋವುಗಳನ್ನು ಗುಣ ಮಾಡಿಕೊಳ್ಳುವ ಕಡೆಗೆ ಸಕಾರಾತ್ಮಕವಾಗಿ ನೋಡಬೇಕು. ಜೊತೆಗೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆ ಇರಲಿ.
ತುಲಾ (ಸೆಪ್ಟೆಂಬರ್ 23- ಅಕ್ಟೋಬರ್ 22)
ನಿಮ್ಮ ಭಾವನಾತ್ಮಕ ಪ್ರಮಾಣವು ಸಾಕಷ್ಟು ಸಮತೋಲನದಲ್ಲಿದೆ. ಈ ಚಂದ್ರಗ್ರಹಣ ನಿಮ್ಮನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ಕೆಲಸ ಮತ್ತು ಸಾಧನೆ ಬಗ್ಗೆ ಒಲವಿರುವವರಿಗೆ ಇದು ಸುಸಮಯ.
ವೃಶ್ಚಿಕ (ಅಕ್ಟೋಬರ್ 23- ನವೆಂಬರ್ 21)
ಈ ಸಮಯದಲ್ಲಿ ನಿಮ್ಮ ಭಾವನೆಗಳ ಮೇಲ ಹಿಡಿತ ಸಾಧಿಸಲು ಸ್ವಲ್ಪ ಕಷ್ಟವಾಗಬಹುದು. ನಿಮ್ಮ ಜೊತೆಗೆ ನಿಮ್ಮ ಆತ್ಮೀಯ ಸಂಗಾತಿ ಮತ್ತು ಕುಟುಂಬ ಸದಸ್ಯರಿದ್ದಾರೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.
ಧನಸ್ಸು ( ನವೆಂಬರ್ 22 - ಡಿಸೆಂಬರ್ 21)
ನೀವು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದೀರಿ. ಬದಲಾವಣೆನ್ನು ಸ್ವೀಕರಿಸಿ. ಈ ಬದಲಾವಣೆಗಳನ್ನು ನಿಯಂತ್ರಿಸಬೇಡಿ. ಇದು ನಿಮ್ಮನ್ನು ಹೊಸ ವ್ಯಕ್ತಿಯನ್ನಾಗಿಸಲಿದೆ.
ಮಕರ (ಡಿಸೆಂಬರ್ 22 - ಜನವರಿ 19)
ನಿಮ್ಮ ಆಧ್ಯಾತ್ಮಿಕ ಪ್ರಗತಿಗೆ ಒಳ್ಳೆಯ ಸಮಯ. ಈ ಪ್ರಪಂಚದ ವಿಸ್ಮಯಗಳನ್ನು ಕಾಣಬಹುದಾಗಿದೆ. ಧ್ಯಾನ ಮತ್ತು ಸ್ವಯಂ ಅನ್ವೇಷಣೆ ನಿಮ್ಮೊಟ್ಟಿಗಿರಲಿದೆ.
ಕುಂಭ (ಜನವರಿ 20- ಫೆಬ್ರವರಿ 18)
ನಿಮ್ಮ ಪ್ರೀತಿಯ ಜೀವನದಲ್ಲಿ ಒಂದಷ್ಟು ಆಸಕ್ತಿಕರ ಘಟನೆಗಳು ನಡೆಯಲಿವೆ. ಅದಕ್ಕೆ ಮುಕ್ತವಾಗಿ ತೆರೆದುಕೊಳ್ಳಿ.
ಮೀನಾ (ಫ್ರೆಬ್ರವರಿ 19 - ಮಾರ್ಚ್ 20)
ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆ ಗಮನಿಸಬಹುದು. ಜನರು ನಿಮ್ಮ ಬಗ್ಗೆ ಏನೆಂದುಕೊಳ್ಳುವರು ಎನ್ನುವುದರ ಕಡೆಗೆ ನಿಮ್ಮ ಗಮನವಿರಲಿದೆ. ಇಮೇಜ್ ಬಿಲ್ಡಿಂಗ್ ಮತ್ತು ನಿಮ್ಮ ಪ್ರಭಾವದ ಅನುಕೂಲಗಳ ಬಳಕೆ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ